ಸದಸ್ಯ:Nihar.d.fernandes/ನನ್ನ ಪ್ರಯೋಗಪುಟ
ಕದ್ರಿ ಎಂಬ ಸ್ಥಳವು ಮಂಗಳೂರಿನ ಮಹಾನಗರ ಪಾಲಿಕೆಯ ಸೀಮಿತದಲ್ಲಿದೆ. ಈ ಸ್ಥಳವು ಕದ್ರಿ ಕಂಬಳ ಎಂಬ ಎಮ್ಮೆಯ ಓಟಕ್ಕೆ ಪ್ರಸಿದ್ಧಿಯಾಗಿದೆ. ಇದರ ಪರಿಸರದ ಸ್ಥಳಗಳಾದ ದೆರೆಬೈಲ್ ಹಾಗೂ ಪ್ರಸಿದ್ಧವಾಗಿರುವ ಪಂಪುವೆಲ್ ಸರ್ಕಲ್ (ಈಗ: ಮಹಾವೀರ ಸರ್ಕಲ್) ಕೂಡ ಇತಿಹಾಸವನ್ನು ಹೊಂದಿದೆ. ಮಂಗಳೂರಿನ ಮಂಜುನಾಥ ದೇವಸ್ಥಾನವನ್ನು ಜೋಗಿ ಮತ್ಸೇಂದ್ರನಾಥ ಎಂಬ ನಾಥ ಪಂಥದ ವ್ಯಕ್ತಿಯು ನಿರ್ಮಿಸಿದ್ದರು.
ಇತಿಹಾಸ
ಬದಲಾಯಿಸಿಜೋಗಿ ಇವರು ಹಿಂದೂ ಧರ್ಮಕ್ಕೆ ಸೇರಿದ್ದು, ಇಲ್ಲಿ ಜೋಗಿಯವರ ಸಣ್ಣ ಗುಂಪು ದಕ್ಷಿಣ ಕನ್ನಡದಲ್ಲಿದೆ. ಸಂಸ್ಕೃತಿಯ ಪ್ರಕಾರ ಜೋಗಿ ಮಠ ಹಾಗೂ ಮಂಜುನಾಥ ದೇವಸ್ಥಾನದ ಹತ್ತಿರದ ಸ್ಥಳಗಳು ಜೋಗಿ ಪದ್ಧತಿಗಳನ್ನು ಹೊಂದಿದೆ. ಮತ್ಸೇಂದ್ರನಾಥ ಹಾಗೂ ಗೋರಕ್ಷನಾಥ ಇವರಿಬ್ಬರೂ ನೇಪಾಳ ಹಾಗೂ ಉತ್ತರ ಪ್ರದೇಶದ ಮೂಲದವರಾಗಿದ್ದು ಇಲ್ಲಿಯ ಮಠವನ್ನು ಸ್ಥಾಪಿಸಿದ್ದರು. ಕದಳಿ ಮಠವು ನಾಥ ಪಂಥದ ಸಾಧುಗಳು ಅಲ್ಲಿಯ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಇಲ್ಲಿ ಹಲವಾರು ಜಾತಿ-ಪಂಥದ ಜನರು ವಾಸಿಸುತ್ತಾರೆ.
ಪ್ರೇಕ್ಷಣೀಯ ಸ್ಥಳಗಳು
ಬದಲಾಯಿಸಿಕದ್ರಿ ಪಾರ್ಕ್, ಕದ್ರಿ ಹಿಲ್ ಜೋಗಿ ಮಠದ ಇನ್ನೊಂದು ಕಾಣಲು ಸಿಗುತ್ತದೆ. ಈ ಸ್ಥಳವು ಹಿಂದೆ ಬರಡಾಗಿದ್ದು ಈ ಸ್ಥಳೀಯ ಮಾರ್ಗ ಹಾಗೂ ನ್ಯಾಷನಲ್ ಹೈವೇಯಾಗಿ ಮಾರ್ಪಟ್ಟಿದೆ. ಇಲ್ಲಿಯ ಮಕ್ಕಳ ಉದ್ಯಾನವನವನ್ನು ಮಹಾನಗರ ಪಾಲಿಕೆಯವರು ನೋಡಿಕೊಳ್ಳುತ್ತಾರೆ. ಈ ಉದ್ಯಾನವನದ ನದುವೆ ನಡೆಯಲು ದಾರಿ (ವಾಕಿಂಗ್ ಟ್ರ್ಯಾಕ್) ಮಾಡಿದ್ದಾರೆ ಹಾಗೂ ಮಕ್ಕಳಿಗೆ ಆಡಲು ಪುಟಾಣಿ ರೈಲು ಸ್ಥಾಪಿಸಿಕೊಂಡಿದ್ದಾರೆ. ಮಂಗಳೂರು ಆಕಾಶ ಭವನವು ಈ ಉದ್ಯಾನವನದ ಪಕ್ಕದಲ್ಲಿಯೇ ಇದೆ. ಇಲ್ಲಿಯ ಸುದ್ಧಿ-ಸಮಾಚಾರಗಳನ್ನು ಆಕಾಶವಾಣಿಯಲ್ಲಿ ಕೇಳಿಸಬಹುದು. ಇಲ್ಲಿ ರೆಕಾರ್ಡಿಂಗ್ ರೂಮ್ ಹಾಗೂ ಟ್ರಾನ್ಸ್ಮಿಟಿಂಗ್ ರೀಲೇ ಸ್ಟೇಷನ್ ಇವೆ. ಇವರು ಹಲವಾರು ಕಲಾಕಾರರನ್ನು ಹಾಗೂ ಶಾಲೆಯ ವಿದ್ಯಾರ್ಥಿಗಳನ್ನು ವಿವಿಧ ಕಾರ್ಯಕ್ರಮಗಳನ್ನು ಕೊಡಲು ಆಮಂತ್ರಿಸುತ್ತಾರೆ. ಕೆ.ಪಿ.ಟಿ. ಸಂಸ್ಥೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಹುಡುಗರು ತರಬೇತಿಯನ್ನು ಪಡೆಯುತ್ತಾರೆ. ಇದು ಕರ್ನಾಟಕ ರಾಜ್ಯ ಸರ್ಕಾರ ವಹಿಸಿಕೊಂಡಿದೆ. ಹಿಂದೆ ಇದು ಹುಡುಗರಿಗೆ ಒಂದೇ ಪಾಲಿಟೆಕ್ನಿಕ್ ಸಂಸ್ಥೆಯಾಗಿತ್ತು, ಆದರೆ ಈಗ ಹಲವಾರು ಸಂಸ್ಥೆಗಳು ಬಂದಿವೆ. ಕೆ.ಪಿ.ಟಿ.ಯಿಂದ ಇನ್ನೂ ಸ್ವಲ್ಪ ಮುಂದೆ ಪೂರ್ವಕ್ಕೆ ನಡೆದರೆ ಪದ್ವ ಪ್ರೌಢಶಾಲೆ ಕಂಡು ಬರುತ್ತದೆ. ಇದು ಸ್ಥಾಪಿಸಿದ್ದು ಕ್ರಿ.ಶ. ೧೯೪೪ರಲ್ಲಿ. ಇಲ್ಲಿಂದ ಮುಂದೆ ದಕ್ಷಿಣಕ್ಕೆ ನಡೆದರೆ ಕದ್ರಿ ಮಾರುಕಟ್ಟೆ ಕಂಡು ಬರುತ್ತದೆ. ಈಗ ಇದನ್ನು ಸರ್ಕಾರದ ಹಲವು ಕಛೇರಿಗಳನ್ನಾಗಿ ಮಾರ್ಪಾಡಿಸಿದ್ದಾರೆ. ಈ ಮಾರುಕಟ್ಟೆಯನ್ನು ಹತ್ತಿರದಲ್ಲಿರುವ ಮಲ್ಲಿಕಟ್ಟೆ ಎಂಬ ಸ್ಥಳಕ್ಕೆ ವರ್ಗಹಿಸಿದ್ದಾರೆ. ಇಲ್ಲಿಯ ಸುತ್ತ-ಮುತ್ತಲು ಸ್ಥಳಗಳಾದ ಕಂಕನಾಡಿ, ಕದ್ರಿ ಹಾಗೂ ಬಂಟ್ಸ್ ಹೊಸ್ಟೆಲ್‍ಗಳಿಗೆ ಈ ಮಾರುಕಟ್ಟೆಯು ಬಹಳ ಪ್ರಯೋಜನಕಾರಿಯಾದ ಸ್ಥಳವಾಗಿದೆ.
ಉಲ್ಲೇಖಗಳು
ಬದಲಾಯಿಸಿ- ↑ https://web.archive.org/web/20060309162949/http://www.deccanherald.com/deccanherald/apr122005/spectrum833262005411.aspf
- ↑ https://books.google.co.in/books?id=sEhJBfbhTAAC&pg=PA250&dq=%22kadri%22+%22cave%22&hl=en&sa=X&ei=CLvOUYvMM8KmrAfv6oCoAQ&redir_esc=y#v=onepage&q=%22kadri%22%20%22cave%22&f=false