ನಮಸ್ಕಾರ, ನನ್ನ ಹೆಸರು ನಿಕೊಲಾಸ್ ಶ್ಯಾಂಕ್ಸ್. ನಾನು ಇಂಗ್ಲೆಂಡ್‌ನವನು. ನಾನು ಹುಟ್ಟಿದ್ದು ೧ ಮೇ ೧೯೮೧ರಂದು ನಾಟಿಂಗ್‌ಹ್ಯಾಮ್‌ನ ಕ್ವೀನ್ಸ್ ಮೆಡಿಕಲ್ ಸೆಂಟರ್‌ನಲ್ಲಿ. ಅಪ್ಪ ಸ್ಕಾಟಿಶ್, ಅಮ್ಮ ಹಂಗೇರಿಯನ್. ೧೮ನೇ ವಯಸ್ಸಿನಲ್ಲಿ ಹ್ಯಾಟ್‌ಫೀಲ್ಡ್‌ನ ಹರ್ಟ್‌ಫೋರ್ಡ್‌ಶೈರ್ ವಿಶ್ವವಿದ್ಯಾಲಯಕ್ಕೆ ಆಸ್ಟ್ರೋಫಿಸಿಕ್ಸ್ (ನಕ್ಷತ್ರ ಭೌತಶಾಸ್ತ್ರ) ಓದಲು ತೆರಳುವವರೆಗೂ ನಾನು ಬೆಳೆದದ್ದು ಪಶ್ಚಿಮ ಬ್ರಿಡ್‍ಫೋರ್ಡ್‌ನಲ್ಲಿ.

ಈಗ Cognition Gamesನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ನಾನು Apple Macintoshಗೆ ತಂತ್ರಾಂಶಗಳನ್ನು ಬರೆಯುತ್ತೇನೆ, ಬಿಬಿಸಿ ಸುದ್ಧಿಯನ್ನು ಓದುತ್ತಾ ಸಮಯ ಹಾಳು ಮಾಡುತ್ತಿರುತ್ತೇನೆ ಹಾಗೂ ಭಾಷೆಗಳನ್ನು ಕಲೆಯುತ್ತಿರುತ್ತೇನೆ (Gàidhlig, Latina, 日本語, Русский et aliis). ನಕ್ಷತ್ರ ಭೌತಶಾಸ್ತ್ರ, ಗಣಕಶಾಸ್ತ್ರ, ಭಾಷಾಧ್ಯಯನ ಮಾತ್ರವಲ್ಲದೇ ನನ್ನ ಆಸಕ್ತಿ ಆರ್ಕಿಯಾಲಜಿ, ಪೇಲೆಂಟಾಲಜಿ, ಪಾಲಿಯೋಆನ್ಥ್ರೊಪಾಲಜಿ, ಮಾನವ ಹಾಗು ಕೃತಕ ಮಾನವ ಆಂತರಿಕ್ಷಯಾನ, ಟೆರ್ರಾಫಾರ್ಮಿಂಗ್, ಹುಡುಗಿಯರು, ಪರಿಸರ ವಿಕಲ್ಪಗಳು ಹಾಗೂ ಇನ್ನೂ ಹಲವಾರು ವಿಷಯಗಳಲ್ಲಿ ಹರಡಿದೆ. ನನ್ನ ಸಂಗೀತ ಪ್ರಿಯತೆ Bruce Springsteen, The Police, Die Prinzen, Chris Isaak, Jefferson Airplane, Peter Gabriel, The Steve Miller Band, U2 ಅಲ್ಲದೇ, ಮತ್ತಷ್ಟು ಹಲವು ಸಂಗೀತಕ್ಕೆ ಸೀಮಿತವಾಗಿದೆ.