Neha662
ನನ್ನ ಪರಿಚಯ
ಬದಲಾಯಿಸಿನನ್ನ ಹೆಸರು ನೇಹ. ನನ್ನ ತ೦ದೆಯ ಹೆಸರು ಭಾಸ್ಕರ್ ರೆಡ್ದಿ , ತಾಯಿಯ ಹೆಸರು ಉಮ ದೇವಿ. ನಾನು ಹುಟ್ಟಿದ ಊರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲುಕು..ನನ್ನ ತ೦ದೆ ಆರ್.ಟಿ.ಟಿ. ಟ್ರಾವೆಲ್ಸಲ್ಲಿ ಕೆಲಸ ಮಾಡುತ್ಥಿದ್ದಾರೆ. ನನಗೆ ಒಬ್ಬ ಅಣ್ಣಇದ್ದಾರೆ.ಅವರೂಕೂಡ ಕೆಲಸ ಮಾಡುತ್ಥಿದಾ ರೆ.
ನನ್ನ ಶಿಕ್ಷಣ
ಬದಲಾಯಿಸಿನಾನು ಶ್ರೀ ರಾಮಕೃಷ್ಣ ಶಾಲೆಯಲ್ಲಿ ಓದಿದೆ ಹಾಗೂ ಸ೦ತ ಜೊಸೆಫರ ಇಂಡಿಯನ್ ಕಾಲೇಜಿನಲ್ಲಿ ನನ್ನ ಪಿಯುಸಿ ಮುಗಿಸಿದೆ.
ನನ್ನ ಹವ್ಯಾಸಗಳು
ಬದಲಾಯಿಸಿನನಗೆ ಕಬಡ್ಡಿ ಮತ್ತು ಷಟಲ್ ಬ್ಯಾಡ್ಮಿಂಟನ್,ತ್ರೋಬಾಲ್ , ಆಡಲು ಬಹಳ ಇಷ್ಟ ಹಾಗು ಸಂಗೀತ .ಕೇಳಲು
ನನ್ನ ಶಾಲ ನೆನಪುಗಳು
ಬದಲಾಯಿಸಿನನ್ನ ಜೀವನದಲ್ಲಿ ಒ೦ದು ಅಧ್ಬುತವಾದ ಘಟನೆ ನಡೆಯಿತು. ನಾನು ಶಾಲೆಯಲ್ಲಿ ಇರುವಾಗ ನನಗೆ ಒಬ್ಬ ಹೊಸ ಗೆಳತಿ ಪರಿಚಯವಾದಳು. ಅವಳ ಜೊತೆ ನಾನು ದಿನಾ ಪೂರ್ತಿ ಸಮಯ ಕಳೆಯುತ್ತಿದ್ದೆನು. ಒ೦ದು ದಿವಸ ಅವಳ ನನ್ನ ಮದ್ಯೆ ಏನೊ ಅಪಾರ್ತ ಬನ್ದ ಕಾರಣ ನಾವಿಬ್ಬರು ದೂರವಾದೆವು. ನಾನು ಇಷ್ಟ ಪಡುವ ಜನರು ನನ್ನನ್ನು ಬಿಟ್ಟು ಹೋಗುವರು. ನಾನು ಯಾವಾಗಲೂ ಆ ವ್ಯಕ್ತಿಯೊಂದಿಗೆ ಸಂತೋಷವಾಗಿರಲು ಬಯಸಿದ್ದೆ, ಕನಸುಗಳನ್ನು ಕ೦ಡೆ. ಆದರೆ ದುರದೃಷ್ಟವಶಾತ್ ನಾನು ಆ ವ್ಯಕ್ತಿಯನ್ನು ಕಳೆದುಕೊಂಡೆ. ಏಕೆ ಜೀವನವು ವಿಭಿನ್ನ ಪರಿಸ್ಥಿತಿಗೆ ಕಾರಣವಾಗುತ್ತದೆ? ನನ್ನ ಜೀವಿತಾವಧಿಯಲ್ಲಿ ಆ ವ್ಯಕ್ತಿಯೊಂದಿಗೆ ಸಂತೋಷವಾಗಿರಲು ನಾನು ಬಯಸಿದ್ದೆ. ಸಂತೋಷ ಮತ್ತು ಶಾಂತಿಯಿಂದ ತುಂಬಿರುವ ನನ್ನ ಜೀವನವನ್ನು ಸ್ವರ್ಗ ಎಂದು ಹೇಳಲಾಗುತ್ತಿತ್ತು. ಈಗ ಅದು ದುಃಖದಿಂದ ತುಂಬಿದೆ. ಆದರೂ ಆ ವ್ಯಕ್ತಿಯ ಶುಭವನ್ನು ಕೋರುವುದೊ೦ದೆ ನನ್ನ ಪ್ರಥಮ ಗುರಿಯಾಗಿದೆ. ಈಗಲೂ ನಾನು ಆ ವ್ಯಕ್ತಿಯೊಂದಿಗೆ ಮಾತನಾಡುತ್ತೇನೆ. ಅವರು ಮಾತನಾಡುವ ವಿಧಾನ ಬದಲಾಗಿದೆ. ದುಃಖ ಪಡುವ ಸ೦ಗತಿ ಏನೆ೦ದರೆ ಮು೦ಚೆ ಇದ್ದ ಹಾಗೆ ಈಗ ಇರದೆಇರುವುದು. ತು೦ಬಾ ನೋವು ಉ೦ಟಾಗುವ ವಿಷಯ ಆ ವ್ಯಕ್ತಿ ಯ ನಡವಳಿಕೆ. ನನ್ನ ಇತರ ಮಿತ್ರರು ನನಗೆ ಇದನ್ನು ಮರೆತುಹೋಗೆ೦ದು ಸಲಹೆ ನೀಡಿದರು. ನಾನು ಎಷ್ಟು ಮರೆಯುವುದಕ್ಕೆ ಪ್ರಯತ್ನಿಸಿದರೂ ನೆನಪಿಸಿಕೊಳ್ಳುತ್ತೇನೆ . ಆ ನೆನಪುಗಳು ಮರೆಯುವ೦ತಹ ನೆನಪುಗಳಲ್ಲ. ನನ್ನ ತನು ಮನದ ಎಲ್ಲಾ ಕೋನೆಯಲ್ಲೂ ಆ ನೆನಪುಗಳು ವಾಸಿಸುತ್ತಿವೆ. ನಾನು ಪ್ರಯತ್ನಿಸದ ವಿಧಾನಗಳೇ ಇಲ್ಲ. ಈ ನೆನಪುಗಳು ನನಗೆ ಬಲವಾಗುತ್ತವೆ ಮತ್ತು ಕೆಲವೊಮ್ಮೆ ನನಗೆ ದುರ್ಬಲವಾಗುತ್ತದೆ. ನಾನು ದುರ್ಬಲವಾಗಿದ್ದಾಗ ಆ ವ್ಯಕ್ತಿ ನೀಡಿದ ಕೆಲವು ಸ್ಮರಣೀಯ ಉಡುಗೊರೆಗಳನ್ನು ತೆಗೆದುಕೊಳ್ಳುತ್ತೇನೆ ಮತ್ತು ನಾನು ಕೊರಗುತೇನೆ. ನಾನು ತು೦ಬಾ ಭಾವನಾತ್ಮಕ ವ್ಯಕ್ತಿ. ನನಗೆ ಕ್ರೀಡೆಯಲ್ಲಿ ಹಲವಾರು ಬಹುಮಾನಗಳು ಲಭಿಸಿವೆ.
ನನ್ನ ಗೆಳತಿ
ಬದಲಾಯಿಸಿನಾನು ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ಸೇರುವೆನೆ೦ದು ಅ೦ದುಕೊ೦ಡಿರಲಿಲ್ಲ. ಇಲ್ಲಿ ಸೇರಿದನ೦ತರ ನನ್ನ ಒ೦ಟಿತನ ಸ್ವಲ್ಪ ಹೆಚ್ಚಾಗಿದೆ. ಆದರೆ ನನ್ನ ಆತ್ಮೀಯ ಗೆಳತಿಯೊಬ್ಬಳು ಆ ಒ೦ಟಿತನವನ್ನು ದೂರ ಮಾಡಿದ್ದಾಳೆ. ಅವಳೊಡನೆ ನಾನು ಹೆಚ್ಚು ಸಮಯ ಕಳೆಯುತ್ತಿದ್ದೇನೆ. ಈಗ ಸದ್ಯಕ್ಕೆ ನಾನು ಅವಳೊಡನೆ ಸಂತೋಷವಾಗಿದ್ದೇನೆ. ನನಗೆ ಗೊತ್ತು ಸಂತೋಷವು ನನ್ನ ಜೀವನದಲ್ಲಿ ತಾತ್ಕಾಲಿಕವಾಗಿದೆ. ಆ ವ್ಯಕ್ತಿಯು ಸಾಧ್ಯವಾದಷ್ಟು ಬೇಗ ನನ್ನ ಬಳಿಗೆ ಮರಳುತ್ತಾನೆ ಎಂದು ನಾನು ಭಾವಿಸುತ್ತೇನೆ.