ಸದಸ್ಯ:Navya1640148/ನನ್ನ ಪ್ರಯೋಗಪುಟ/2

ಎಲೆಕ್ಟ್ರೊಲಿಸಿಸ್

ವಿದ್ಯುದ್ವಿಭಜನೆ

ಬದಲಾಯಿಸಿ

ನಿರವಯವ ಆಮ್ಲೀಯ,ಪ್ರತ್ಯಾಮ್ಲೀಯ ಮತ್ತು ಲವಣಿಯ ಜಲಯುಕ್ತ ಅಥವಾ ಕರಗಿದ ದ್ರಾವಣಗಳ ಮೂಲಕ ವಿದ್ಯುತ್ ಪ್ರವಾಹವನ್ನು ಹಾಯಿಸಿದಾಗ,ವಿದ್ಯುಚ್ಛಕ್ತಿಯ ಪ್ರಸಾರವು ಯಾವಾಗಲೂ ದ್ರಾವಣಗಳ ರಸಾಯನಿಕ ವಿಭಜನೆಯೊಡನೆ ನಡೆಯುತ್ತದೆ.ಅಂತಹ ದ್ರಾವಣಗಳನ್ನು ವಿದ್ಯುದ್ವಿಭಾಜಕಗಳು ಎಂದು ಕರೆಯುತ್ತಾರೆ.ವಿದ್ಯುದ್ವಿಭಾಜಕಗಳ ಮೂಲಕ ವಿದ್ಯುಚ್ಛಕ್ತಿಯ ಪ್ರಸಾರ ಸಿದ್ದಾಂತವು ಮತ್ತು ರಸಾಯನಿಕ ವಿಭಜನೆಯು "ವಿದ್ಯುದ್ವಿಭಜನೆ" ಎಂದು ಕರೆಯಲ್ಪಡುತ್ತದೆ.

ವಿದ್ಯುತ್ ರಸಾಯನಿಕ ಕೋಶ

ಬದಲಾಯಿಸಿ

ರಸಾಯನಿಕ ಕ್ರಿಯೆಯಿಂದ ವಿದ್ಯುತ್ ಶಕ್ತಿಯನ್ನು ಉಂಟುಮಾಡುವ ಕೋಶಗಳನ್ನು "ವಿದ್ಯುತ್ ರಸಾಯನಿಕ ಕೋಶಗಳು" ಎಂದು ಕರೆಯುತ್ತಾರೆ.

ಪ್ರಾಥಮಿಕ ಮತ್ತು ಮಾಧ್ಯಮಿಕ ಕೋಶಗಳು

ಬದಲಾಯಿಸಿ

ಪ್ರಾಥಮಿಕ ಕೋಶಗಳು

ಬದಲಾಯಿಸಿ

ಅಪ್ರತಿಲೋಮ ರಸಾಯನಿಕ ಕ್ರಿಯೆಯಿಂದ ವಿದ್ಯುತ್ ಶಕ್ತಿಯನ್ನು ಉಂಟುಮಾಡುವ ಕೋಶಗಳನ್ನು "ಪ್ರಾಥಮಿಕ ಕೋಶಗಳು" ಎಂದು ಕರೆಯುತ್ತಾರೆ.ಒಂದು ಕೋಶದ ಘಟಕದಲ್ಲಿ ಎರಡು ವಿದ್ಯುದ್ವಾಹಕಗಳು ಮತ್ತು ಒಂದು ಸೂಕ್ತ ವಿದ್ಯುದ್ವಿಭಾಜಕವನ್ನು ಒಟ್ಟಿಗೆ ಜೋಡಿಸಿದಾಗ,ಪ್ರಾಥಮಿಕ ಕೋಶವು ಒಂದು ವಿದ್ಯುಚ್ಛಾಲಿತ ಬಲ(ಇ.ಎಮ್.ಎಫ಼್) ವನ್ನು ಉಂಟುಮಾಡುತ್ತದೆ.

ಲೆಕ್ಲಾಂಚಿ ಕೋಶ

ಬದಲಾಯಿಸಿ

ಒಂದು ಲೆಕ್ಲಾಂಚಿ ಕೋಶವು ಅಮೋನಿಯಂ ಕ್ಲೋರೈಡ್ ದ್ರಾವಣದಿಂದ ತುಂಬಲ್ಪಟ್ಟ ಒಂದು ಗಾಜಿನ ಪಾತ್ರೆಯಿಂದಾಗಿದೆ. ಅಮೋನಿಯಂ ಕ್ಲೋರೈಡ್ ದ್ರಾವಣವು ಒಂದು ವಿದ್ಯುದ್ವಿಭಾಜಕವಾಗಿ ಕ್ರಿಯೆ ನಡೆಸುತ್ತದೆ.ತನ್ನ ಸುತ್ತಲೂ ಮ್ಯಾಂಗನೀಸ್-ಡೈ-ಆಕ್ಸೈಡ್ ಮತ್ತು ಕಾರ್ಬನ್ ಪುಡಿಗಳಿಂದಾದ ಮಿಶ್ರಣವು ಭರ್ತಿಯಾಗಿರುವ ಒಂದು ಕಾರ್ಬನ್ ದಂಡವನ್ನು ಪಡೆದ ರಂಧ್ರಯುಕ್ತ ಕೊಳವೆ ಮತ್ತು ಒಂದು ಸತುವಿನ ದಂದಗಳು ಇದರೊಳಗೆ ಇರುತ್ತವೆ.ಆದರಿಂದ ಕಾರ್ಬನ್ ದಂದವು ಧನ ಧ್ರುವವಾಗಿಯೂ ಮತ್ತು ಸತುವಿನದಂದವಿ ಋಣ ಧ್ರುವವಾಗಿಯೂ ಕೆಲಸ ಮಾಡುತ್ತದೆ. ಸತುವಿನ ಸಲಾಕೆಯಲ್ಲಿ ಪರಮಾಣುಗಳು ಅಯಾನುಗಳಾಗಿ ಪರಿವರ್ತನೆ ಹೊಂದಿ Z++ ಅಯಾನುಗಳ ಮೂಲಕ ದ್ರಾವಣದೊಳಗೆ ಚಲಿಸಿ ಸತುವಿನ ಸಲಾಕೆಯೊಡನೆ ಎರಡು ಎಲೆಕ್ಟ್ರಾನುಗಳು ಋಣ ವಿದ್ಯುದಂಶ ಹೊಂದುತ್ತವೆ.ಅದೇ ಸಮಯದಲ್ಲಿ ಅಮೋನಿಯಂ ಕ್ಲೋರೈಡ್ ವಿಭಜನೆ ಹೊಂದಿ ಅಮೋನಿಯಂ ಅನಿಲವಾಗಿ ಎರಡು ಜಲಜನಕ(2H+),ಎರಡು ಕ್ಲೋರೈಡ್(2Cl-) ಅನಿಲಗಳಾಗುತ್ತವೆ. Zn++ ಅಯಾನು ಮತ್ತು 2Cl- ಅಯಾನುಗಳು ಸಂಯೋಜನೆಗೊಂಡು ಸತುವಿನ ಕ್ಲೋರೈಡ್ ಆಗುತ್ತದೆ.2H+ ಅಯಾನುಗಳು ಕಾರ್ಬನ್ ಅಯಾನಿನೊಡನೆ ಸೇರಿ ಧನ ವಿದ್ಯುದಂಶವನ್ನು ಉಂಟುಮಾಡುತ್ತದೆ.

ಮಾಧ್ಯಮಿಕ ಕೋಶಗಳು

ಬದಲಾಯಿಸಿ

ಮಾಧ್ಯಮಿಕ ಕೋಶದ ಅನುಕೂಲವೇನೆಂದರೆ,ಅವು ಪುನರ್ವಿದ್ಯುದಂಶೀಯವಾಗಬಲ್ಲವು.ಮಾಧ್ಯಮಿಕ ಕೋಶಗಳಲ್ಲಿ ನಡೆಯುವ ರಸಾಯನಿಕ ಕ್ರಿಯೆಗಳು ಪ್ರತಿಲೋಮವಾಗಬಲ್ಲವು.ಕೋಶವು ವಿದ್ಯುತ್ಪ್ರವಾಹವನ್ನು ಉಂಟುಮಾಡಿದಾಗ ಉಪಯೋಗಿಸಲ್ಪಡುವ ಪರಿಣಾಮಕಾರಿ ದ್ರವ್ಯಗಳನ್ನು ಕೋಶದ ಮೂಲಕ ವಿರುದ್ದ ದಿಕ್ಕಿನಲ್ಲಿ ವಿದ್ಯುತ್ ಪ್ರವಾಹವನ್ನು ಹಾಯಿಸುವುದರಿಂದ ಪುನರುತ್ಪತ್ತಿ ಮಾಡಬಹುದು.ಒಂದು ಮಾಧ್ಯಮಿಕ ಕೋಶದಿಂದ ವಿದ್ಯುತ್ಪ್ರವಾಹವನ್ನು ಪಡೆಯುವ ವಿಧಾನವು "ವಿದ್ಯುದಂಶ ಸ್ರಾವ" ಎಂದು ಕರೆಯುತ್ತೇವೆ.ಪರಿಣಾಮಕಾರಿ ದ್ರವ್ಯಗಳನ್ನು ಪುನರುತ್ಪತ್ತಿಸುವ ವಿಧಾನವನ್ನು "ವಿದ್ಯುದಂಶೀಯವಾಗಿಸುವಿಕೆ" ಎಂದು ಕರೆಯುತ್ತೇವೆ.ಬಹಳ ಸಾಮಾನ್ಯವಾಗಿ ಉಪಯೋಗಿಸಲ್ಪಡುವ ಒಂದು ಮಾಧ್ಯಮಿಕ ಕೋಶವು "ಸೀಸ ಆಮ್ಲ ಸಂಚಯಕ" ವಾಗಿದೆ.

 
ಹೈ ಟೆಂಪರೇಚರ್ ಎಲೆಕ್ಟ್ರೊಲಿಸಿಸ್

ಸೀಸ ಆಮ್ಲ ಸಂಚಯಕ

ಬದಲಾಯಿಸಿ

ಒಂದು ಸೀಸ ಆಮ್ಲ ಸಂಚಯಕದಲ್ಲಿ,ಆನೋಡ್ ಮತು ಕ್ಯಾಥೋಡ್ಗಳು ಕ್ರಮವಾಗಿ ಸೀಸದ-ಡೈ-ಆಕ್ಸೈಡ್ ಮತ್ತು ಸೀಸದಿಂದ ಮಾಡಲ್ಪಟ್ಟಿರುತ್ತದೆ.ವಿದ್ಯುದ್ವಿಭಾಜಕವು ದುರ್ಬಲ ಗಂಧಕಾಮ್ಲವಾಗುತ್ತದೆ.ಶಕ್ತಿಯು ಸಂಚಯಕದಿಂದ "ವಿದ್ಯುದಂಶ ಸ್ರಾವ"ವಾಗುವುದರಿಂದ ಆನೋಡ್ ಮತ್ತು ಕ್ಯಾಥೋಡ್ಗಳೆರಡು ಒಂದು ರಸಾಯನಿಕ ಕ್ರಿಯೆನಡೆಸಿ,ಮುಂದುವರಿದು ಅವನ್ನು ಸೀಸದ-ಡೈ-ಆಕ್ಸೈಡ್ ನ್ನು ಸೀಸವಾಗಿ ಬದಲಿಸುತ್ತದೆ.ಆನೋಡ್ ಮತ್ತು ಕ್ಯಾಥೋಡ್‍ಗಳು ತಂತಿಯಿಂದ ಜೋಡಿಸಲ್ಪಟ್ಟಾಗ,ವಿದ್ಯುತ್ ಪ್ರವಾಹವು ತಂತಿಯ ಮೂಲಕ ಕ್ಯಾಥೋಡಿನಿಂದ ಆನೋಡಿಗೆ ಪ್ರವಹಿಸುತ್ತದೆ.ಒಂದು ಸೀಸ-ಆಮ್ಲ ಸಂಚಯಕದಲ್ಲಿ ವಿದ್ಯುತ್ ಪ್ರವಾಹವನ್ನು ಹಾಯಿಸಿದಾಗ ವಿದ್ಯುತ್ ರಸಾಯನಿಕ ಕ್ರಿಯೆಯು ಪ್ರತಿಲೋಮವಾಗುತ್ತದೆ.ಇದು "ಸಂಚಯಕದ ಪುನರ್ವಿದ್ಯುದಂಶವಾಗುವಿಕೆ" ಎನ್ನಲ್ಪಡುತ್ತದೆ.ಹೊಸದಾಗಿ ವಿದ್ಯುದಂಶೀಯವಾದ ಕೋಶದ ಇ.ಎಮ್.ಎಫ಼್ ೨.೨V ಆಗುತ್ತದೆ. []

  1. https://en.wikipedia.org/wiki/Electrolysis