ಸದಸ್ಯ:Muhammadsafwanthurkalike/ನನ್ನ ಪ್ರಯೋಗಪುಟ6
ಶ್ರೀ ಶಾಂತಿನಾಥ ಸ್ವಾಮಿಯ ಹಿರೇ ಅಮ್ಮನವರ ಬಸದಿ
ಸ್ಥಳ
ಬದಲಾಯಿಸಿಮೂಡಬಿದರೆಯ ಪ್ರಸಿದ್ಧ ಹಿರೆ ಅಮ್ಮನವರ ಬಸದಿಯಲ್ಲಿ ಪೂಜಿಸಲ್ಪಡುವ ಮೂಲ ನಾಯಕ 16ನೇ ತೀಥರ್ಂಕರರಾದ ಶ್ರೀ ಶಾಂತಿನಾಥ ಸ್ವಾಮಿ ಬಸದಿಯು ಮಂಗಳೂರು ತಾಲೂಕಿನ ಮೂಡುಬಿದಿರೆಯ ಪ್ರಾಂತ್ಯ ಗ್ರಾಮದಲ್ಲಿದೆ. ಬಸದಿಗೆ ಹತ್ತಿರದಲ್ಲಿ ಸಾವಿರಕಂಬ ಬಸದಿ ದಕ್ಷಿಣ ದಿಕ್ಕಿನಲ್ಲಿ ಧವಳಾ ಕಾಲೇಜು, ಆಗ್ನೇಯದಲ್ಲಿ ಶೆಟ್ಟರ ಅಥವಾ ವರ್ಧಮಾನ ಬಸದಿ. ಶಾಂತಿನಾಥ ಸ್ವಾಮಿಯ ಬಸದಿಯು ಒಳಗೆ ಶಿಲಾಮಯವಾಗಿ ತಾಮ್ರದ ಮಾಡಿನಿಂದ ಅಲಂಕೃತಗೊಂಡಿದೆ.
ಆಡಳತ
ಬದಲಾಯಿಸಿಈ ಬಸದಿಯನ್ನು ಕಟ್ಟೆ ಮಾರು ಮನೆತನದವರು ನಡೆಸುತ್ತಿದ್ದಾರೆ. ವ್ಯವಸ್ಥಾಪಕ ಮಂಡಳಿ ಅಧ್ಯಕ್ಷರ ಎಂದು ಯಾರು ಇಲ್ಲ. ಆಡಳಿತದವರು ಇದನ್ನು ನಡೆಸುತ್ತಿದ್ದಾರೆ. ಶ್ರೀ ಜಯವರ್ಮ ಇಂದ್ರ ಬಸದಿಯ ಇಂದ್ರರ ಹೆಸರು. ಈ ಬಸದಿಯು ಸಾವಿರ ವರ್ಷಗಳ ಹಿಂದೆ ನಿರ್ಮಿಸಿದ್ದ ಆಗಿದೆ. ಆದರೆ ಅವರ ಹೆಸರು ಗೊತ್ತಿಲ್ಲ. ನಿರ್ಮಿಸಿದವರ ಮನೆಯವರು ಮಂಗಳೂರು ಹಳ್ಳಿಯ ಮಳಲಿ ಕಟ್ಟೆ ಮಾರು ಎಂಬಲ್ಲಿ ಇದ್ದಾರೆ. ಇದನ್ನು 2003 ರಲ್ಲಿ ಜೀರ್ಣೋದ್ದಾರ ಮಾಡಲಾಗಿದೆ.
ರಥೋತ್ಸವ
ಬದಲಾಯಿಸಿಈ ಬಸದಿಯಲ್ಲಿ ಪ್ರತಿವರ್ಷವೂ ರಥೋತ್ಸವ ನಡೆಯುತ್ತದೆ. ಬಳಿಕ ಸಾವಿರ ಕಂಬದ ಬಸದಿ ಕನಕಶ್ರೀ ದೇವರ ಮೆರವಣಿಗೆ ಹೋಗಿ ಆನಂತರ ಅಲ್ಲಿಂದ ಬೆಟ್ಟ ಕೆರೆಗೆ ಹೋಗಿ ಸ್ವಸ್ಥಾನಕ್ಕೆ ಬರುತ್ತದೆ. ಶ್ರಾವಣ ಮಾಸದಲ್ಲಿ ಶುಕ್ರವಾರ ಪೂಜೆಗೆ ತುಂಬಾ ಜನರು ಬರುತ್ತಾರೆ.
ಮೂರ್ತಿ
ಬದಲಾಯಿಸಿಇಲ್ಲಿ 24 ತೀಥರ್ಂಕರರು, ಮೃತ್ತಿಕಾ ಮೂರ್ತಿಗಳ ರೂಪದಲ್ಲಿ ಸನ್ನಿಹಿತನಾಗಿರುವ ಶ್ರೀ ಸರಸ್ವತಿ ಅಮ್ಮ, ಶ್ರೀ ಪದ್ಮಾವತಿ ಅಮ್ಮ, ಮತ್ತು ಶ್ರೀ ಶಾಂತಿನಾಥ ತೀಥರ್ಂಕರ ಪೂಜೆ ನಡೆಯುತ್ತದೆ. ಇಷ್ಟು ಮಾತ್ರವಲ್ಲದೆ ಶ್ರೀ ಪಾಶ್ವನಾಥ ಸ್ವಾಮಿ, ಶ್ರೀ ಪದ್ಮಪ್ರಭ, ಕೂಷ್ಮಾಂಡಿನಿ, ಚಕ್ರೇಶ್ವರಿ ಯವರ ಮೂರ್ತಿಗಳಿವೆ. ಬ್ರಹ್ಮ ದೇವರ ಮೂರ್ತಿ ಕಂಬದಲ್ಲಿ. ಬಸದಿಗೆ ಮಾನಸ್ತಂಭ ಇದ್ದು ಇದು ಕಲ್ಲಿನ ಕಲ್ಲಿನದ್ದಾಗಿದೆ. ಪ್ರತ್ಯೇಕವಾಗಿ ತಾಮ್ರದ ದ್ವಜಸ್ತಂಭವಿದೆ. ಬಸದಿಯನ್ನು ಪ್ರವೇಶಿಸುವಾಗ ಸಿಗುವ ಎಡ ಬಲ ಬದಿಯ ಗೋಪುರವನ್ನು ಕುಳಿತುಕೊಳ್ಳಲು ಉಪಯೋಗಿಸುತ್ತಾರೆ. ಈ ಬಸದಿಯಲ್ಲಿ ಯಾವ ಕಾರ್ಯಾಲಯವು ಇಲ್ಲ ಮುನಿಗಳು ಬರಲಿಲ್ಲ. ಯಾವ ಮುನಿ ವಾಸ ಕೊನೆಯೂ ಇಲ್ಲ. ನೈವೇದ್ಯ ಕೋಣೆ ಮಾತ್ರ ಇದೆ. ಈ ಬಸದಿಯಲ್ಲಿ ಯಾರು ಕೂಡ ಚತುರ್ಮಾಸ ನಡೆಸಿಲ್ಲ. ಯಾವುದೇ ರೀತಿಯ ಶಿಲ್ಪಕಲಾಕೃತಿಗಳು ಕೂಡ ಕಂಬಗಳಲ್ಲಿ ಇರುವುದಿಲ್ಲ.
ಪ್ರಾಂಗಣ
ಬದಲಾಯಿಸಿಬಸದಿಯ ಎದುರಿನ ಪ್ರಾರ್ಥನಾ ಮಂಟಪಕ್ಕೆ ಹತ್ತುವಲ್ಲಿ ಗೋಡೆಯ ಮೇಲೆ ದ್ವಾರಪಾಲಕರ ವರ್ಣ ಚಿತ್ರಗಳು ಇರುವುದಿಲ್ಲ. ಇಲ್ಲಿ ಯಾವುದೇ ರೀತಿಯ ಕಲ್ಲಿನ ಮೂರ್ತಿಗಳೂ ಮೇಲೆ ಯಾವುದೇ ರೀತಿಯ ಚಿತ್ರಗಳು ಇಲ್ಲ. ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬ ಇವೆ. ಜಯಘಂಟೆಗಳು ಇವೆ. ಇಲ್ಲಿ ಮಣ್ಣಿನ ಮೂರ್ತಿಗಳಿವೆ. ಗೋಡೆಯ ಮೇಲೆಈ ಬಸದಿಯಲ್ಲಿ ಮುಂದುವರಿದು ತೀಥರ್ಂಕರ ಸ್ವಾಮಿಯ ` ಬಳಿಗೆ ಹೋಗುವಾಗ ಸಿಗುವ ಮಂಟಪವನ್ನು ತೀರ್ಥ ಮಂಟಪ ಎಂದು ಕರೆಯುತ್ತಾರೆ.
ಪೂಜೆ
ಬದಲಾಯಿಸಿಇಲ್ಲಿಯ ಗಂಧಕುಟಿಯ ಬಳಿಯಲ್ಲಿ ಕಂಚಿನ ವಿಗ್ರಹಗಳಿವೆ. ಇವುಗಳಿಗೆ ಬೆಳಿಗ್ಗೆ ಮತ್ತು ಸಂಜೆ ಪೂಜೆ ನಡೆಯುತ್ತದೆ. ಇಲ್ಲಿ ಪದ್ಮಾವತಿ ದೇವಿಗೆ ಸೀರೆ ಉಡಿಸಿ ಅಲಂಕಾರ ಮಾಡುತ್ತಾರೆ. ಅಮ್ಮನವರು ಪೂರ್ವಕ್ಕೆ ಮುಖ ಮಾಡಿದ್ದಾರೆ. ಕಾಲಿನ ಬಳಿ ಬೆಳ್ಳಿಯ ಕುಕ್ಕುಟ ಸರ್ಪ ಇದೆ. ಈ ಬಸದಿಯಲ್ಲಿ ಹೊಂಬುಚ್ಚದಂತೆ ಅಮ್ಮನವರ ಎದುರು ಹೂ ಇದೆ. ಜನರು ಕಷ್ಟಕಾಲದಲ್ಲಿ ಬಂದು ಪ್ರಾರ್ಥನೆ ಮಾಡಿ ಪರಿಹಾರ ಮಾಡಿಕೊಳ್ಳುತ್ತಾರೆ. ಈ ಬಸದಿಯಲ್ಲಿರುವ ಜಿನಬಿಂಬಗಳ ಪೀಠದ ಮೇಲೆ ಬರವಣಿಗೆ ಇದೆ. ಆದರೆ ಅದು ಸ್ಪಷ್ಟವಾಗಿಲ್ಲ. ಮೂಲನಾಯಕ ಶ್ರೀ ಶಾಂತಿನಾಥ ಸ್ವಾಮಿಯ ಮೂರ್ತಿ ಕಪುಶಿಲೆಯದ್ದಾಗಿದೆ. ಎತ್ತರ 2.5 ಅಡಿ. ಸುತ್ತಲೂ ಮಕರ ತೋರಣದ ಕಂಚಿನ ಪ್ರಭಾವಳಿಯ ಅಲಂಕಾರವಿದೆ. ವಜ್ರಲೇಪನ ಮಾಡಲಾಗಿಲ್ಲ. ಈ ಬಸದಿಯಲ್ಲಿ ದಿನಕ್ಕೆ ಎರಡು ಬಾರಿ ಮಾತ್ರ ಪೂಜೆ ಇದೆ. ಇಲ್ಲಿ ಶ್ರಾವಣ ಮಾಸದ ಶುಕ್ರವಾರ, ದೀಪಾವಳಿಯ ಒಂದು ದಿನ ಆಚರಣೆ ಇದೆ. [೧]
ಶಿಲ್ಪಗಳು
ಬದಲಾಯಿಸಿಬಸದಿಯ ಬಲ ಮೂಲೆಯಲ್ಲಿ ತ್ರಿಶೂಲ ಮತ್ತು ನಾಗರಕಲ್ಲುಗಳು ಇವೆ. ಇವೆಲ್ಲವನ್ನೂ ಬೇರೆ ಬೇರೆಯಾಗಿ ಪ್ರತಿಷ್ಠಾಪಿಸಲಾಗಿದೆ. ಸುಮಾರು 60-70 ವರ್ಷಗಳ ಹಿಂದ ಕ್ಷೇತ್ರಪಾಲ ತನ್ನ ವಾಹನದ (ನಾಯಿ) ಮೆಲೆ ಕುಳಿತುಕೊಂಡು ಈ ಅಂಗಣದ ಸುತ್ತ ಬರುತ್ತಿದ್ದುದು ತಿಳಿದಿದೆ. ಬಸದಿಯ ಸುತ್ತಲೂ ಸರಿಯಾದ ಸ್ಥಳಗಳಲ್ಲಿ ಬಲಿಕಲ್ಲು ಅಷ್ಟದಿಕ್ಷಾಲಕರ ಕಲ್ಲುಗಳಿವೆ. ಅವರಿಗೂ ಪೂಜೆ ನಡೆಯುತ್ತದೆ. ಈ ಬಸದಿಯ ಸುತ್ತಲೂ ಪ್ರಾಕಾರಗೋಡೆ ಇದ್ದು ಅದು ಮುರಕಲ್ಲಿನಿಂದ ನಿರ್ಮಿಸಲ್ಪಟ್ಟಿದೆ. ಈ ಬಸದಿಯಲ್ಲಿ ಯಾವುದೇ ಆಫೀಸು ಇಲ್ಲ. ಯಾವ ತರಹದ ಹಾಲ್ ಕೂಡ ಇಲ್ಲ. ಸರಕಾರದ ಯಾವುದೇ ರೀತಿಯ ಧನ ಸಹಾಯ ಬಂದಿರುವುದಿಲ್ಲ.
ಬಿಂಬಗಳು
ಬದಲಾಯಿಸಿಶ್ರೀ ಶಾಂತಿನಾಥ ಸ್ವಾಮಿಯ ಬಸದಿಯ ಬದಿಯಲ್ಲಿರುವ ಇನ್ನೊಂದು ದೀರ್ಘ ಆಯತಾಕಾರದ ಬಸದಿಯ ಹರಿಪೀಠದಲ್ಲಿ ವರ್ತಮಾನ ಕಾಲದ 24 ತೀಥರ್ಂಕರರ ಲೆಪ್ಪದ (ಮೃಣ್ಮಯ) ಬಿಂಬಗಳಿವೆ. ಬಲಮೂಲೆಯಲ್ಲಿ ಶ್ರೀ ಸರಸ್ವತಿಯ ಹಾಗೂ ಕೆಲಕೊನೆಯಲ್ಲಿ ಶ್ರೀ ಪದ್ಮಾವತಿಯ ಬಿಂಬಗಳೂ ಇವೆ. ಇವೆಲ್ಲವುಗಳನ್ನು ವಿವಿಧ ವರ್ಣಗಳಿಂದ ಅಲಂಕರಿಸಲಾಗಿದೆ. ಇದನ್ನು ಪ್ರಾಚೀನ ಕಾಲದಲ್ಲಿ ದೀಪಣ್ಣ ಶೆಟ್ಟಿ ಎಂಬುವವರು ನಿರ್ಮಿಸಿದನೆಂದು ಹೇಳುತ್ತಾರೆ. ಇಲ್ಲಿಯೂ ವಿಶೇಷವಾಗಿ ಪೂಜೆ, ಸೇವಾದಿಗಳು ನಡೆಯುತ್ತವೆ.
ಉಲ್ಲೇಖಗಳು
ಬದಲಾಯಿಸಿ