Marvin Ferrao
ಇತಿಹಾಸದ ಬಗ್ಗೆ ನನ್ನ ಲೇಖನ ಇತಿಹಾಸವು ಒಂದು ಮುಖ್ಯವಾದ ವಿಷಯವಾಗಿದೆ. ಇದರಲ್ಲಿ ನಾವು ಹಳೆಯ ಜಗತ್ತಿನ ಇತಿಹಾಸದ ಬಗ್ಗೆ ತಿಳಿಯಲು ಸಹಾಯಕವಾಗಿದೆ. ಇದರಲ್ಲಿ ನಾವು ಹಳೆಯ ಕಾಲದ ಸಂಸ್ಕ್ರತಿಗಳ ಬಗ್ಗೆ ತಿಳಿಯಬಹುದಾಗಿದೆ. ಅದಲ್ಲಾದೇ ಹಳೆಯ ಕಾಲದ ರಾಜರುಗಳ ಬಗ್ಗೆ ಮತ್ತು ಅವರ ಸಾಧನೆಗಳು ಮತ್ತು ಅವರು ಸಾಹಿತ್ಯಕ್ಕೆ ಕಲೆಗೆ ಮತ್ತು ಸಂಗೀತಕ್ಕೆ ಕೊಟ್ಟ ಪ್ರೋತ್ಸಾಹವನ್ನು ತಿಳಿದಿಕೊಳ್ಳಬಹುದಾಗಿದೆ. ಅದಲ್ಲಾದೇ ಇತಿಹಾಸದ ಹಳೆಯ ಕಾಲದಲ್ಲಿ ಇದ್ದ ದೇವಸ್ಧಾನಗಳು ಮತ್ತು ಅದರಲ್ಲಿ ಬಳಸುತ್ತಿದ್ದ ಕಲೆಗಳ ಬಗ್ಗೆ ತಿಳಿಯಬಹುದಾಗಿದೆ. ಅದಲ್ಲಾದೇ ನಾವು ಇತಿಹಾಸದಲ್ಲಿ ಹಳೆಯ ಕಾಲದಲ್ಲಿ ಆಳಿದ ರಾಜಮನೆತನದ ಬಗ್ಗೆ ಮತ್ತು ಅವರು ಯಾವ ಪ್ರದೇಶದಿಂದ ಬಂದರು ಮತ್ತು ಅವರು ಭಾರತದಲ್ಲಿ ಮಾಡಿದ ಸುಧಾರಣೆಗಳ ಬಗ್ಗೆ ತಿಳಿಯಬಹುದಾಗಿದೆ. ಮತ್ತು ಇದಕ್ಕೆಲ್ಲಾ ಆಧಾರಗಳೆಂಬಂತೆ ಹಲವಾರು ಶಾಸನಗಳು,ಲಿಪಿಗಳು ದೊರೆಕಿವೆ. ಉದಾರಣೆಗೆ ಹೇಳುವುದಾದರೆ ಅಶೋಕನ ಲಿಪಿಗಳು ಮತ್ತು ಇದಕ್ಕೆ ಇನ್ನಷ್ಟು ಪುಷ್ಟಿ ಕೋಡುವಂತೆ ಹಲವಾರು ಇತಿಹಾಸ ಶಾಸ್ತ್ರಜ್ಞರು ಇದರ ಬಗ್ಗೆ ಪುರಾವೆಗಳನ್ನು ನೀಡಿದ್ದಾರೆ. ಇತಿಹಾಸದಲ್ಲಿ ನಾವು ಮುಖ್ಯವಾಗಿ ಮಂಗೋಲರ ಬಗ್ಗೆ ತಿಳಿಯಬಹುದಾಗಿದೆ. ಅದಲ್ಲಾದೇ ಅವರ ಹವಾಳಿಗಳು ಮತ್ತು ಅವರಿಂದ ಆಗಿ ಬಂದ ಆಪತ್ತುಗಳನ್ನು ತಿಳಿದುಕೊಳ್ಳಬಹುದಾಗಿದೆ. ಇನ್ನು ಮುಖ್ಯವಾಗಿ ಹೇಳುವುದಾದರೆ ಮುಸ್ಲೀಮರ ದಾಳಿಗಳ ಬಗ್ಗೆ ಅವರು ಭಾರತಕ್ಕೆ ಬಂದ ಕಾರಣಗಳ ಬಗ್ಗೆ ಮತ್ತು ಅವರ ಕೊಡುಗೆಗಳ ಬಗ್ಗೆ ತಿಳಿಯಬದುದಾಗಿದೆ. ಅದಲ್ಲಾದೇ ಆವರು ಭಾರತಕ್ಕೆ ಬಂದ ಮೇಲೆ ಆದ ಬದಲಾವಣೆಗಳು ಮತ್ತು ಅವರು ನಿರ್ಮಾಣ ಮಾಡಿದ ಹಲಾವಾರು ಐತಿಹಾಸಿಕ ಕಟ್ಟಡಗಳ ಬಗ್ಗೆ ತಿಳಿಯಬಹುದಾಗಿದೆ. ಉದಾಹರಣೆಗೆ ಹೇಳುವುದದಾರೇ ಕುತುಬು ಮಿನಾರ್, ಕೆಂಪು ಕೋಟೆ, ತಾಜ್ ಮಹಲ್,ಮತ್ತು ಇವರ ಕಾಲದಲ್ಲಿ ಹಲವಾರು ವಿದ್ವಾಂಸರು, ಪಂಡಿತರನ್ನು ನಾವು ಕಾಣಬಹುದು. ಉದಾಹರಣೆಗೆ ಹೇಳುವುದಾದರೆ ಅಮೀರ್ ಕುಸ್ರೋ.ಇದರ ನಂತರ ಇತಿಹಾಸದಲ್ಲಿ ನಾವು ಯುರೋಪಿಯರನ್ನು ಕಾಣಬಹುದು. ಈ ಯುರೋಪಿಯನ್ನರಲ್ಲಿ ಬಂದ ಮುಖ್ಯದೇಶಗಳೆಂದರೆ ಪೋರ್ಚುಗೀಸರು, ಬ್ರಿಟಿಷರು, ಫ್ರೇಂಚರು ಇವರೆಲ್ಲಾ ಭಾರತಕ್ಕೆ ವ್ಯಾಪಾರಕ್ಕೆ ಬಂದು ಕೊನೆಗೆ ಭಾರತದಲ್ಲಿ ಅಧಿಕಾರನಡೆಸಲು ಯುದ್ಧವಾಗಿ ಕೊನೆಗೆ ಬ್ರಿಟಿಷರು ಭಾರತವನ್ನು ಆಳಿದರು. ಇವರ ಕಾಲದಲ್ಲಿ ದೇಶದಲ್ಲಿ ಶಾಂತಿ ಇತ್ತದರೂ ಇವರು ತಮ್ಮದೇ ಆದ ನಿಯಮಗಳನ್ನು ತಂದು ಭಾರತೀಯರನ್ನು ಹೇಗೆ ತಮ್ಮ ವಶದಲ್ಲಿ ನಡೆಸಿದರು ಎಂಬುದನ್ನು ನೋಡಬಹುದು.ಮತ್ತು ಇತಿಹಾಸದಲ್ಲಿ ಮುಖ್ಯವಾಗಿ ಕಾಣುವುದೆಂದರೆ ಭಾರತದ ಸ್ವಾತಂತ್ರ್ಯಕ್ಕಾಗಿ ದುಡಿದ ನಾಯಕರ ಬಗ್ಗೆ ಮತ್ತು ಅವರು ಮಾಡಿದ ಹೋರಾಟಗಳ ಬಗ್ಗೆ ನೋಡಬಹುದು.ಅದಲ್ಲಾದೇ ಈ ಸಮಯದಲ್ಲಿ ಸೃಷ್ಟಿ ಆದ ಕ್ರಾಂತಿಕಾರನ್ನು ನಾವು ನೋಡಬಹುದು. ಮತ್ತು ಗಾಂಧೀಜಿಯಂತಹ ವೀರನಾಯಕರನ್ನು ನೋಡಬಹುದು. ಕೊನೆಗೆಯದಾಗಿ ನಾವು ಭಾರತಕ್ಕೆ ಸ್ವಾತ್ರಂತ್ರ್ಯ ಸಿಕ್ಕಿದ ಬಗ್ಗೆ ತಿಳಿಯಬಹುದು.