ಮೂಲತಃ ಹಾಸನ ಜಿಲ್ಲೆಯವರಾದ, ದಿವಂಗತ ಕೆ. ನಾಗಪ್ಪ ಮತ್ತು ಬಾಲಮ್ಮ ದಂಪತಿಗಳ ೫ನೇ ಸುಪುತ್ರರಾದ ಮಂಜುನಾಥ್.ಎನ್ ರವರು ೧೯೯೧ ಡಿಸೆಂಬರ್ ೨೪ ರಂದು ಜನಿಸಿದರು.ತಂದೆಯವರ ಉದ್ಯೋಗ ವ್ಯವಸಾಯ, ತಾಯಿ ಗೃಹಿಣಿ, ಮದ್ಯಮ ಹಾಗೂ ರೈತ ಕುಟುಂಬದಿಂದ ಬಂದವರು. ಚಿಕ್ಕಂದಿನಿಂದಲೇ ರೈತರ ಕಷ್ಟಗಳನ್ನು ಅರಿತು, ರೈತರಿಗೆ ನೇರವಾಗಬೇಕೆಂಬ ಹಂಬಲ ಹೊಂದಿದ್ದರು. ನಾಯಕತ್ವದ ಗುಣ ಚಿಕ್ಕಂದಿನಿಂದಲೇ ರೂಡಿಸಿಕೊಂಡಿದ್ದರು, ತಮ್ಮ ೬ನೇ ತರಗತಿಯಲ್ಲಿರುವಾಗ ಶಾಲೆಯ ನಾಯಕನಾಗಬೇಕೆಂಬ ಹಠದಿಂದ ಶಾಲೆಯ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಶಾಲೆಯ ನಾಯಕರಾದವರು. ಶಾಲಾ ಹಾಗೂ ಕಾಲೇಜಗಳ ವಿದ್ಯಾಭ್ಯಾಸವನ್ನು ಹಾಸನ ಜಿಲ್ಲೆಯಲ್ಲಿ ಮುಗಿಸಿ ಕೆಲಸಕ್ಕಾಗಿ ಬೆಂಗಳೂರಿಗೆ ೨೦೦೫ ರಲ್ಲಿ ಬಂದರು. ಅವರ ವೃತ್ತಿ ಜೀವನದ ಆರಂಭದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡರು. ಕಾಲಕ್ರಮೇಣ ವೃತ್ತಿಯಲ್ಲಿ ಶಿಸ್ತು, ಸಂಯಮ, ಕ್ರಮಶಿಕ್ಷಣ, ರೂಡಿಸಿಕೊಂಡು ೨೦೧೧ ರಲ್ಲಿ ರಿಯಲ್ ಎಸ್ಟೇಟ್ ಕಂಪನಿ ಸ್ಪೂರ್ತಿ ಪ್ರಾಪರ್ಟಿಸ್ ಅನ್ನುವ ಕಂಪನಿಯನ್ನು ಕಟ್ಟುವುದರಲ್ಲಿ ಯಶಸ್ವಿಯಾದರು.ಕಂಪನಿ ಶುರುವಾದ ಆರಂಭದಲ್ಲಿ ಸ್ವಲ್ಪ ಮಟ್ಟಿಗೆ ವ್ಯಾಪಾರ ಮಾಡಿ. ಮುಂದೆ ಸಾಗುತ್ತಾ ಸಾಗುತ್ತಾ ಇಂದು ಬೆಂಗಳೂರಿನಲ್ಲಿ ಬೃಹತ್ ಕಂಪನಿಯಾಗಿ ಬೆಳೆದು ನಿಂತಿದೆ.ಸಮಾಜ ಸೇವೆಯಲ್ಲಿ ಮೊದಲಿಂದಲೂ ಆಸಕ್ತಿ ಹೊಂದಿದ ಮಂಜುನಾಥ.ಎನ್ ರವರು ರಾಜಕೀಯ ಪ್ರವೇಶ ೨೦೧೮ ರಲ್ಲಿ ಹಾಗುತ್ತದೆ. ನಂತರದ ದಿನಗಳಲ್ಲಿ ಉದ್ಯಮಿ ಸ್ನೇಹಿತರೆಲ್ಲ ಕೂಡಿ ಒಂದು ರಾಜಕೀಯ ಪಕ್ಷವನ್ನು ಕಟ್ಟುತ್ತಾರೆ. ಪಕ್ಷದ ಹೆಸರು "ಸ್ವಯಂ ಕೃಷಿ ಪಾರ್ಟಿ ಎಂದು, ನಂತರ ಪಕ್ಷವನ್ನು ಭಾರತ ಚುನಾವಣಾ ಆಯೋಗದ ಕಡೆಯಿಂದ ನೊಂದಣಿ ಪಡೆದು ಪಕ್ಷದ ಕಾರ್ಯಕ್ರಮಗಳನ್ನು ರೂಪಿಸುತ್ತ ಬಂದಿದ್ದಾರೆ. ಕರ್ನಾಟಕ ರಾಜ್ಯದ ಒಟ್ಟು ಜಿಲ್ಲೆಗಳ ಪೈಕಿ ೧೬ ಜಿಲ್ಲೆಗಳಲ್ಲಿ ಜಿಲ್ಲಾ ಘಟಕಗಳನ್ನು ರಚಿಸಿದ್ದಾರೆ.ರಾಜ್ಯಾಧ್ಯಂತ ಸಂಚರಿಸಿ ಯುವಕರಿಗೆ ರಾಜಕೀಯದಲ್ಲಿ ಹೆಚ್ಚು ಹೆಚ್ಚು ಅವಕಾಶ ಕಲ್ಪಿಬೇಕೆಂಬ ಉದ್ದೇಶವಿದೆ.ಮುಂಬರುವ ವಿಧಾನಸಭ ಚುನಾವಣೆಯಲ್ಲಿ ಪಕ್ಷವು ಸುಮಾರು ೫೪ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಲಿದೆ.ಯುವಕರಿಗೆ,ಕನ್ನಡಿಗರಿಗೆ,ಪಕ್ಷದಲ್ಲಿ ಮೊದಲ ಆದ್ಯತೆ ನೀಡುವುದು.ನಮ್ಮ ನಾಡು, ನಮ್ಮ ನುಡಿ, ನಮ್ಮ ಭಾಷೆಗೆ ಮೊದಲ ಆದ್ಯತೆ. ಜೈ ಕರ್ನಾಟಕ, ಜೈ ಎಸ್.ಕೆ.ಪಿ.