[][] [] []

ಕೆಎಫ್ಸಿ

ಬದಲಾಯಿಸಿ
            1991, ರವರೆಗೆ ಕೆಎಫ್ಸಿ  ಕೆಂಟುಕಿ ಫ್ರೈಡ್ ಚಿಕನ್ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ,  ಇದು ಅಮೇರಿಕನ್ ಫಾಸ್ಟ್ ಫುಡ್ ರೆಸ್ಟೊರೆಂಟ್ ಚೈನ್ ಅಗಿದು, ಫ್ರೈಡ್ ಚಿಕನ್ನಲ್ಲಿ ಪರಿಣತಿ ಪಡೆದಿದೆ. ಇದರ ಪ್ರಧಾನ ಕಚೇರಿಯನ್ನು  ಕೆಂಟುಕಿಯ ಲೂಯಿಸ್ವಿಲ್ಲೆನಲ್ಲಿ ಹೊಂದಿದೆ,  ಕೆಎಫ್ಸಿ  ಮೆಕ್ಡೊನಾಲ್ಡ್ಸ್ನ ನಂತರ ಪ್ರಪಂಚದ ಎರಡನೆಯ ಅತಿದೊಡ್ಡ ರೆಸ್ಟೋರೆಂಟ್ ಚೈನ್ ಅಗಿದು (ಮಾರಾಟದ ಮೂಲಕ ಅಂದಾಜಿಸಲಾಗಿದೆ)  ಜಗತ್ತಿನಾದ್ಯಂತ ಸುಮಾರು 20,000 ಸ್ಥಳಗಳು 123 ದೇಶಗಳಲ್ಲಿ ಮತ್ತು ಪ್ರದೇಶಗಳಲ್ಲಿ ಹೊಂದಿದೆ ,ಡಿಸೆಂಬರ್ 2015 ಪ್ರಕರ.ಈ ಚೈನ್ ಯಂ ಬ್ರಾಂಡಸಿನ ಅಂಗಸಂಸ್ಥೆಯಾಗಿದೆ, ಇದು ಪಿಜ್ಜಾ ಹಟ್ ಮತ್ತು ಟ್ಯಾಕೋ ಬೆಲ್ ಚೈನ್ಸ ಅನ್ನು ಹೊಂದಿದ್ದ ಒಂದು ರೆಸ್ಟೊರೆಂಟ್ ಕಂಪೆನಿಯಾಗಿದೆ.
           ಕೆಎಫ್ಸಿಯನ್ನು ಸ್ಥಾಪಿಸಿದ ಕರ್ನಲ್ ಹಾರ್ಲ್ಯಾಂಡ್ ಸ್ಯಾಂಡರ್ಸ್ ಎಂಬ ಉದ್ಯಮಿ, ಗ್ರೇಟ್ ಡಿಪ್ರೆಶನ್ನ ಸಮಯದಲ್ಲಿ ಕೆಂಟುಕಿಯ ,ಕಾರ್ಬಿನ್ನಲ್ಲಿರುವ ರಸ್ತೆಬದಿಯ ರೆಸ್ಟಾರೆಂಟ್ನಿಂದ ಫ್ರೈಡ್ ಚಿಕನ್ ಅನ್ನು ಮಾರಾಟ ಮಾಡಲು ಪ್ರಾರಂಭಿಸಿದರು . ಸ್ಯಾಂಡರ್ಸ ಅವರು ರೆಸ್ಟೋರೆಂಟ್ ಫ್ರಾಂಚೈಸಿಂಗ್ ಪರಿಕಲ್ಪನೆಯ ಸಂಭಾವ್ಯತೆಯನ್ನು ಗುರುತಿಸಿದರು ಮತ್ತು 1952 ರಲ್ಲಿ ಮೊದಲ "ಕೆಂಟುಕಿ ಫ್ರೈಡ್ ಚಿಕನ್" ಫ್ರ್ಯಾಂಚೈಸಿಯನ್ನು ಉತಾಹ್ ದಲ್ಲಿ  ತೆರೆಯಲಾಯಿತು. ಕೆಎಫ್ಸಿ  ಚಿಕ್ಕನ್ ಅನ್ನು ಫಾಸ್ಟ್ ಪುಡ್ ಉದ್ಯಮದಲ್ಲಿ ಜನಪ್ರಿಯವಾಗಿಸಿತು,ಹ್ಯಾಂಬರ್ಗರ್ನ ಸ್ಥಾಪಿತ ಪ್ರಾಬಲ್ಯವನ್ನು ಸವಾಲು ಮಾಡುವ ಮೂಲಕ ಮಾರುಕಟ್ಟೆಯನ್ನು ವೈವಿಧ್ಯೀಕರಣಗೊಲ್ಲಿಸಿತು.ಸ್ವತಃ "ಕರ್ನಲ್ ಸ್ಯಾಂಡರ್ಸ್" ಎಂದು ಬ್ರಾಂಡಿಂಗ್ ಮಾಡುವ ಮೂಲಕ, ಹಾರ್ಲ್ಯಾಂಡ್ ಅಮೆರಿಕನ್ ಸಾಂಸ್ಕೃತಿಕ ಇತಿಹಾಸದ ಪ್ರಮುಖ ವ್ಯಕ್ತಿಯಾಗಿದ್ದರು,ಮತ್ತು ಅವರ ಚಿತ್ರಣವನ್ನು ಕೆಎಫ್ಸಿ ಜಾಹೀರಾತಿನಲ್ಲಿ ವ್ಯಾಪಕವಾಗಿ ಬಳಸಲಾಗಿದೆ. ಆದಾಗ್ಯೂ ಕಂಪೆನಿಯ ತ್ವರಿತ ಬೆಳವಣಿಗೆಯು ಎಜಿಂಗ್ ಸ್ಯಾಂಡರ್ಸ್ನ ಮೇಲೆ ಪ್ರಭಾವ ಬೀರಿತು,ಮತ್ತು 1964 ರಲ್ಲಿ ಜಾನ್ ವೈ. ಬ್ರೌನ್ ಜೆರ್ ಮತ್ತು ಜ್ಯಾಕ್ ಸಿ ಮ್ಯಾಸ್ಸೆ ನೇತೃತ್ವದ ಹೂಡಿಕೆದಾರರ ಗುಂಪಿಗೆ ಅದನ್ನು ಮಾರಿದರು.
          ಕೆನಡಾ, ಯುನೈಟೆಡ್ ಕಿಂಗ್ಡಮ್, ಮೆಕ್ಸಿಕೊ, ಮತ್ತು ಜಮೈಕಾದಲ್ಲಿ 1960 ರ ದಶಕದ ಮಧ್ಯಭಾಗದಲ್ಲಿ ಅಂತರರಾಷ್ಟ್ರೀಯವಾಗಿ ವಿಸ್ತರಿಸಲು ಮೊದಲ ಅಮೆರಿಕನ್ ಫಾಸ್ಟ್ ಪುಡ್ ಸರಪಳಿಯಲ್ಲಿ ಕೆಎಫ್ಸಿ ಒಂದಾಗಿತ್ತು. 1970 ರ ದಶಕದ ಆರಂಭದಲ್ಲಿ, ಕೆಎಫ್ಸಿಯನ್ನು ಸ್ಪಿರಿಟ್ ವಿತರಕ ಹೆಬ್ಲಿನ್ಗೆ ಮಾರಲಾಯಿತು, ಅದನ್ನು ಆರ್.ಜೆ. ರೆನಾಲ್ಡ್ಸ್ ಆಹಾರ ಮತ್ತು ತಂಬಾಕು ಸಂಘಟಿತ ವ್ಯಾಪಾರಿ; ಆ ಕಂಪನಿಯು ಪೆಪ್ಸಿಕೋಗೆ ಸರಪಳಿಯನ್ನು ಮಾರಾಟ ಮಾಡಿತು.ಸರಪಳಿ ಸಾಗರೋತ್ತರವನ್ನು(ಒವರ್ ಸಿಸ್ಸ್) ವಿಸ್ತರಿಸಲು ಮುಂದುವರೆಸಿತು, ಮತ್ತು 1987 ರಲ್ಲಿ ಚೀನಾದಲ್ಲಿ ತೆರೆಯುವ ಮೊಟ್ಟಮೊದಲ ಪಾಶ್ಚಿಮಾತ್ಯ ರೆಸ್ಟಾರೆಂಟ್ ಸರಪಳಿಯಾಗಿದೆ,ಇದು ಈಗ ಕಂಪನಿಯ ಏಕೈಕ ದೊಡ್ಡ ಮಾರುಕಟ್ಟೆಯಾಗಿದೆ. ಕೆಎಫ್ಸಿಯ ಮೂಲ ಉತ್ಪನ್ನವು  ಪ್ರೆಸ್ಸರ್  ಫ್ರೈಡ್ ಚಿಕನ್ ತುಂಡುಗಳನ್ನು ಮಾರಿದರು ಮತ್ತು ಸ್ಯಾಂಡರ್ಸ್ನ 11 ಗಿಡಮೂಲಿಕೆಗಳು ಮತ್ತು ಮಸಾಲೆಗಳ ಪಾಕವಿಧಾನವನ್ನು ಹೊಂದಿರುವ ಮಸಾಲೆಯಾನ್ನು ತಯಾರಿಸಿದರು.ಪಾಕವಿಧಾನದ ಘಟಕಗಳು ಗಮನಾರ್ಹ ವ್ಯಾಪಾರ ರಹಸ್ಯವನ್ನು ಪ್ರತಿನಿಧಿಸುತ್ತವೆ. ಫ್ರೈಡ್ ಚಿಕನ್ನನನ್ನು ದೊಡ್ಡ ಭಾಗಗಳನಾಗಿ ಕಾರ್ಡ್ಬೋರ್ಡ್ "ಬಕೆಟ್" ನಲ್ಲಿ ನೀಡಲಾಗುತ್ತದೆ, ಇದು 1957 ರಲ್ಲಿ ಫ್ರಾಂಚೈಸಿ ಪೀಟ್ ಹರ್ಮನ್ ಪರಿಚಯಿಸಿದ ನಂತರ ಸರಪಳಿಯ ಪ್ರಸಿದ್ಧ ಲಕ್ಷಣವಾಗಿದೆ.1990 ರ ದಶಕದ ಆರಂಭದಿಂದಲೂ, ಕೆಎಫ್ಸಿ ಇತರ ಚಿಕನ್ ಉತ್ಪನ್ನಗಳನ್ನು ಚಿಕನ್ ಫಿಲೆಟ್ ಬರ್ಗರ್ಸ್ ಮತ್ತು ವ್ರಾಪ್ಸ್ ನೀಡಲು ತನ್ನ ಮೆನುವನ್ನು ವಿಸ್ತರಿಸಿತ್ತು,ಹಾಗೆಯೇ ಸಲಾಡ್ಗಳು ಮತ್ತು ಫ್ರೆಂಚ್ ಪ್ರೈಸ್ ಮತ್ತು ಕೋಲ್ಸಾಲಾ, ಡೆಸ್ರರ್ಟ್ ,ಸಾಫ್ಟ್ ಡ್ರಿಂಕ್ಸ್ , ನಂತರದವುಗಳು ಸಾಮಾನ್ಯವಾಗಿ ಪೆಪ್ಸಿಕೋದಿಂದ ಸರಬರಾಜು ಮಾಡಲ್ಪಡುತ್ತವೆ. ಕೆಎಫ್ಸಿ  "ಫಿಂಗರ್ ಲಿಕಿನ್ 'ಗುಡ್", "ಯಾರೂ  ಕೆಎಫ್ಸಿನಂತಹ ಚಿಕನ್  ಮಾಡುವುದಿಲ್ಲ",ಮತ್ತು "ಸೊ ಗೊಡ್" ಎಂಬ ಘೋಷಣೆಗಳಿಗೆ ಹೆಸರುವಾಸಿಯಾಗಿದೆ.

ಇತಿಹಾಸ

ಬದಲಾಯಿಸಿ
     ಹರ್ಲ್ಯಾಂಡ್ ಸ್ಯಾಂಡರ್ಸ್ 1890 ರಲ್ಲಿ ಜನಿಸಿದರು ಮತ್ತು ಇಂಡಿಯಾನಾದ ಹೆನ್ರಿವಿಲ್ಲೆ (ಕೆಂಟುಕಿಯ ಲೂಯಿಸ್ವಿಲ್ಲೆ ಬಳಿ) ಹೊರಗೆ ಒಂದು ಫಾರ್ಮ್ನಲ್ಲಿ ಬೆಳೆದರು.  ಸ್ಯಾಂಡರ್ಸ್ ಐದು ವರ್ಷ ವಯಸ್ಸಿನವನಾಗಿದ್ದಾಗ, ಅವರ ತಂದೆ ನಿಧನರಾದರು,ಅದು ತನ್ನ ತಾಯಿ ಕ್ಯಾನಿಂಗ್ ಪ್ಲಂಟ್ ಕೆಲಸ ಮಾಡಲು ಒತ್ತಾಯಿಸಿತು. ಏಳು ವರ್ಷ ವಯಸ್ಸಿನ ಬಳಿಕ, ಅವನ ತಾಯಿ ಹೇಗೆ ಅಡುಗೆ ಮಾಡುವುದು ಎಂದು ಅವರಿಗೆ ಕಲಿಸಿದರು.13 ನೇ ವಯಸ್ಸಿನಲ್ಲಿಯೇ ಕುಟುಂಬದವರನ್ನು ತೊರೆದ ನಂತರ, ಸ್ಯಾಂಡರ್ಸ್ ಹಲವಾರು ವೃತ್ತಿಯ ಮೂಲಕ ಮಿಶ್ರ ಯಶಸ್ಸಿನೊಂದಿಗೆ

ಹಾದುಹೋದರು.1930 ರಲ್ಲಿ ಅವರು ಉತ್ತರ ಕೊರ್ಬಿನ್, ಕೆಂಟುಕಿಯ ಹೊರಗಡೆ ಯು.ಎಸ್. ಮಾರ್ಗ 25 ದಲ್ಲಿ ಶೆಲ್ ಫಿಲ್ಲಿಂಗ್ ಸ್ಟೇಷನ್ ಅನ್ನು ತೆಗೆದುಕೊಂಡರು, ಅಪ್ಪಾಲಾಚಿಯನ್ ಪರ್ವತದ ತುದಿಯಲ್ಲಿರುವ ಒಂದು ಸಣ್ಣ ಪಟ್ಟಣ.ಅವರು ಅಲ್ಲಿ ಬಾಲ್ಯದಲ್ಲಿ ಕಲಿತ ಪಾಕವಿಧಾನಗಳನ್ನು ಪ್ರಯಾಣಿಕರಿಗೆ ಮೊದಲು ಸೇವೆ ಸಲ್ಲಿಸಿದ್ದರು:ಫ್ರೈಡ್ ಚಿಕನ್ ಮತ್ತು ಸ್ಟೀಕ್ಸ್ ಮತ್ತು ಕಂಟ್ರಿಹ್ಯಾಮ್ ಇತರ ಡಿಶ್ಸಾ.ತನ್ನ ಊಟದ ಕೊಠಡಿಯ ಮೇಜಿನಿಂದ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸ್ಯಾಂಡರ್ಸ್ ರಸ್ತೆಯ ಇನ್ನೊಂದು ಬದಿಯಲ್ಲಿ ದೊಡ್ಡ ಫಿಲ್ಲಿಂಗ್ ನಿಲ್ದಾಣವನ್ನು ಖರೀದಿಸಿದರು ಮತ್ತು ಆರು ಟೇಬಲ್ಸ ಅನ್ನು ವಿಸ್ತರಿಸಿದರು.1936 ರ ಹೊತ್ತಿಗೆ, ಸ್ಯಾಂಡರ್ಗೆ ಕೆಂಟುಕಿ ಕೋಲೋನ್ ಗೌರವಾರ್ಥ ಪ್ರಶಸ್ತಿಯನ್ನು ಗವರ್ನರ್ ರುಬಿ ಲಾಫೂನ್ ಅವರು ನೀಡಿದರು.1937 ರಲ್ಲಿ ಅವರು ತಮ್ಮ ರೆಸ್ಟಾರೆಂಟ್ನ್ನು 142 ಸೀಟುಗಳಿಗೆ ವಿಸ್ತರಿಸಿದರು, ಮತ್ತು ಸ್ಟ್ರೀಟ್ ಅಡ್ಡಲಾಗಿ ಖರೀದಿಸಿದ ಮೋಟೆಲ್ ಅನ್ನು ಸ್ಯಾಂಡರ್ಸ್ ಕೋರ್ಟ್ ಮತ್ತು ಕೆಫೆ ಎಂದು ಹೆಸರಿಸಿದರು.

ಕಾರ್ಯಾಚರಣೆ

ಬದಲಾಯಿಸಿ
   ಕೆಎಫ್ಸಿ ಯುಮ್ನ ಬ್ರಾಂಡ್ಸನಾ  ಒಂದು ಅಂಗಸಂಸ್ಥೆಯಾಗಿದೆ!  ವಿಶ್ವದ ಅತಿ ದೊಡ್ಡ ರೆಸ್ಟೋರೆಂಟ್ ಕಂಪನಿಗಳಲ್ಲಿ ಒಂದಾಗಿದೆ. 2013 ರಲ್ಲಿ ಕೆಎಫ್ಸಿ 23 ಬಿಲಿಯನ್ ಡಾಲರ್ಗಳ ಮಾರಾಟವನ್ನು ಹೊಂದಿತ್ತು.ಡಿಸೆಂಬರ್ 2013 ರ ಹೊತ್ತಿಗೆ, 118 ರಾಷ್ಟ್ರಗಳು ಮತ್ತು ವಿಶ್ವದಾದ್ಯಂತದ ಪ್ರದೇಶಗಳಲ್ಲಿ 18,875 ಕೆಎಫ್ಸಿ ಔಟ್ಲೆಟ್ಸಗಳಿದವು. ಚೀನಾದಲ್ಲಿ 4,563 ಔಟ್ಲೆಟ್ಸಗಳು, ಯುನೈಟೆಡ್ ಸ್ಟೇಟ್ಸ್ನಲ್ಲಿ 4,491 ಮತ್ತು ವಿಶ್ವದ ಉಳಿದ ಭಾಗಗಳಲ್ಲಿ 9,821  ಕೆಎಫ್ಸಿ ಔಟ್ಲೆಟ್ಸಗಳಿವೆ. ಔಟ್ಲೆಟ್ಗಳನ್ನು ಫ್ರಾಂಚೈಸಿಗಳು ಅಥವಾ ಕಂಪನಿಯು ನೇರವಾಗಿ ಸ್ವಾಧೀನಪಡಿಸಿಕೊಂಡಿರುತ್ತದೆ.

ಹನ್ನೊಂದು ಪ್ರತಿಶತ ಔಟ್ಲೆಟ್ಸ ಕಂಪೆನಿಯ ಮಾಲೀಕತ್ವ ಹೊಂದಿವೆ, ಉಳಿದವು ಫ್ರ್ಯಾಂಚೈಸ್ ಹೊಂದಿರುವವರು ನಿರ್ವಹಿಸುತಿದರು.

   ಭಾರತದಲ್ಲಿ 350 ಕೆಎಫ್ಸಿ ಔಟ್ಲೆಟ್ಸಗಳಿವೆ.ಕಂಪನಿಯು ಭಾರತೀಯ ರುಚಿಗೆ  ಪ್ರಮಾಣಿತ ಕೆಎಫ್ಸಿ ಅರ್ಪಣೆಗಳನ್ನು ಅಳವಡಿಸಿಕೊಂಡಿದೆ ಮತ್ತು ಭಾರತದಲ್ಲಿ ಮೆನು ಆಯ್ಕೆಗಳನ್ನು ಹಾಟ್ ಮತ್ತು ಕ್ರಿಸ್ಪಿ ಚಿಕನ್ ಮತ್ತು ಫೀಯಿರಿ ಗ್ರಿಲ್ಡ್ ಬಕೆಟ್ ಆಯ್ಕೆಗಳು, ಚಿಕನ್ ಝಿಂಜರ್ ಬರ್ಗರ್, ರೈಸ್ ಬೌಲ್ಜ್, ಇತ್ತೀಚೆಗೆ ಬಿಡುಗಡೆಯಾದ 5-ಇನ್ 1 ಮೀಲ್ ಬಾಕ್ಸ್ ಮತ್ತು ಕ್ರೂಷರ್ಸ್ ಎಂದು ಕರೆಯಲ್ಪಡುವ ಒಂದು  ಶೇಕ್ಸ್ ಅನ್ನು ಮಾರುತಿವೆ.
   1976 ರ ಹೊತ್ತಿಗೆ ಕೆಎಫ್ಸಿ ಯುಎಸ್ನಲ್ಲಿ ಅತಿ ದೊಡ್ಡ ಜಾಹೀರಾತುದಾರರಲ್ಲಿ ಒಬ್ಬರಾದರು.ಟ್ರೇಡ್ಮಾರ್ಕ್ ಯುಎಸ್ನಲ್ಲಿ 2006 ರಲ್ಲಿ ಕೊನೆಗೊಂಡಿತು. ಮೊದಲ ಕೆಎಫ್ಸಿ ಲಾಂಛನವನ್ನು 1952 ರಲ್ಲಿ ಪರಿಚಯಿಸಲಾಯಿತು ಮತ್ತು "ಕೆಂಟುಕಿ ಫ್ರೈಡ್ ಚಿಕನ್" ಅಕ್ಷರಶೈಲಿಯನ್ನು ಮತ್ತು ಕರ್ನಲ್ನ ಲೋಗೊವನ್ನು ಒಳಗೊಂಡಿತ್ತು."ಫಿಂಗರ್ ಲಿಕಿನ್ 'ಉತ್ತಮ" ಘೋಷಣೆ 1956 ರಿಂದ ಬಳಸಲ್ಪಟ್ಟಿತು, ಮತ್ತು 20 ನೇ ಶತಮಾನದ ಸುಪರಿಚಿತ ಘೋಷಣೆಗಳಲ್ಲಿ ಒಂದಾಯಿತು.
  1. http://www.referenceforbusiness.com/history2/99/KFC-Corporation.html
  2. https://www.biography.com/people/colonel-harland-sanders-12353545
  3. https://www.snagajob.com/resources/the-inspiring-life-story-of-kfcs-colonel-sanders/
  4. https://successstory.com/companies/kentucky-fried-chicken