Likitha N S
ಕುಟುಂಬ
ನನ್ನ ಹೆಸರು ಲಿಕಿತ.ಎನ್.ಎಸ್.ನಾನು ಹುಟ್ಟಿದ್ದು ಬೆಂಗಳೂರಿನ ಸಂತ್ ಮಾರ್ತಾಸ್ ಆಸ್ಪತ್ರೆಯಲ್ಲಿ. ನಾನು ಬೆಳೆದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರುನಲ್ಲಿ , ನಾನು ಚಿಕ್ಕಂದಿನಿಂದಲು ಬಹಳ ಚೂಟಿಯ ಹುಡುಗಿ ಆಗಿದ್ದೆ. ನನಗೆ ನನ್ನ ತಾಯಿ ಅಂದರೆ ಬಹಳ ಇಷ್ಟ ಯಾರಾದರೂ ನಿನ್ನ ಆತ್ಮಿಯ ಗೆಳತಿ ಯಾರೆಂದು ಕೇಳಿದರೆ ಅದು ನನ್ನ ತಾಯಿ ಎಂದು ಹೇಳುತ್ತೇನೆ.ಏನೇ ಕಷ್ಟಬಂದರೂ ಸುಖ ಬಂದರೂ ಅಮ್ಮನ ಬಳಿ ಚರ್ಚೆಸುತ್ತೇನೆ.
ವಿದ್ಯಾಭ್ಯಾಸ
ನಾನು ಗೌರಿಬಿದನೂರನಲ್ಲಿ ೧ನೇ ತರಗತಿಯಿಂದ ೧೦ನೇ ತರಗತಿಯವರೆಗು ಸಂತ್ ಆನ್ಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ್ದೇನೆ. ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿಯನ್ನು ಬಾಲಗಂಗಾಧರನಾಥ ಸ್ವಾಮೀಜಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದೇನೆ. ಪ್ರಸ್ತುತ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿಕಾಂ ಸಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನಮ್ಮದು ಒಂದು ಚಿಕ್ಕ ಕುಟುಂಬ. ಅಪ್ಪ , ಅಮ್ಮ, ತಮ್ಮ ಮತ್ತು ನಾನು ಇರುತ್ತೇವೆ. ಈಗ ವಿದ್ಯಾಭ್ಯಾಸದ ಕಾರಣ ನಾನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದೆನೆ. ಅಪ್ಪ ನಮ್ಮ ಊರಿನಲ್ಲಿ ವ್ಯಾಪಾರ ಮಾಡುತ್ತಾರೆ. ನನ್ನ ಸ್ನೇಹಿತರು ಕಷ್ಟದ ಸಂದರ್ಭದಲ್ಲಿ ಸಿಲುಕಿದಾಗ ನಾನು ಅವರಿಗೆ ಸಹಾಯ ಮಾಡುತ್ತೇನೆ.
ಸತತ ಎರಡು ಸಾರಿ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿಯ ಪರೀಕ್ಷಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಮೊದಲನೆಯ ಸ್ಥಾನವನ್ನು ಪಡೆದು ನನ್ನ ತಂದೆ – ತಾಯಿಗೆ ಒಳ್ಳೆಯ ಹೆಸರನ್ನು ನೀಡಿದ್ದೇನೆ.
ಹವ್ಯಾಸಗಳು
ನನಗೆ ಯಕ್ಷಗಾನ ನೃತ್ಯ ಮತ್ತು ಹಾಡುವುದು ಅಚ್ಚುಮೆಚ್ಚು. ನಾನು ಶಾಲೆಯಲ್ಲಿ ಇದ್ದಾಗ ಪ್ರತಿಯೊಂದು ನೃತ್ಯದಲ್ಲಿ ಭಾಗವಹಿಸಿ ಕೆಲವೊಂದು ಕಾರ್ಯಕ್ರಮಗಳಲ್ಲಿ ಪ್ರಶಸ್ತಿಯನ್ನು ಗಳಿಸಿದ್ದೇನೆ.
ನನಗೆ ಸಹನೆ ಬಹಳ ಹೆಚ್ಚು. ಆದರೆ ಆ ಸಹನೆಯನ್ನು ಯಾರಾದರು ಭಂಗಿ ಪಡಿಸಲು ಬಂದರೆ ಪರಿಣಾಮ ಸರಿ ಇರುವುದಿಲ್ಲ. ನನಗೆ ನನ್ನ ಮಿತ್ರರನ್ನು ಕಂಡರೆ ಬಹಳ ಪ್ರೀತಿ ಮತ್ತು ಎಚ್ಚು ಮಿತ್ರರನ್ನು ಸಂಪಾದಿಸಲು ಇಚ್ಚಿಸುತ್ತೇನೆ. ಅವರಿಗೆ ನೋವು ಆದರೆ ನನಗೆ ನೋವಾಗಿದೆ ಅನ್ನುವಷ್ಟರ ಪ್ರೀತಿ ಇದೆ. ನನ್ನ ಮತ್ತೆ ನನ್ನ ಸ್ನೇಹಿತರ ಮಧ್ಯೆ ಜಗಳ ಬಂದರೆ ಅದು ಯಾರದೆ ತಪ್ಪಿದ್ದರು ನಾನು ಕ್ಷಮೆ ಕೋರುತ್ತೇನೆ. ಆ ಜಗಳವನ್ನುಮರೆಯಲು ಪ್ರಯತ್ನಿಸುತ್ತೇನೆ. ನನ್ನಲ್ಲಿರುವ ವಿಶೇಷವಾದ ಗುಣ ಕ್ಷಮೆ. ಎಷ್ಟೋ ಜನರಿಗೆ ಕ್ಷಮೆಯ ಮಹತ್ವ ಮತ್ತು ಅರ್ಥ ತಿಳಿದಿರುವುದಿಲ್ಲ. ಅದನ್ನು ಅರಿಯದೆ ದ್ವೇಷ, ಶತ್ರುತ್ವವನ್ನು ಬೆಳೆಸಿಕೊಳ್ಳತ್ತಾರೆ.ಅದು ಅವರ ಜೀವನವನ್ನು ಯಾವ ಮಟ್ಟಕ್ಕೆ ತಂದು ನಿಲ್ಲಿಸುತ್ತದೆ ಎಂಬ ಅರಿವು ಸಹ ಇರುವುದಿಲ್ಲ.
ಸಾಧನೆ
ನಾನು ದ್ವಿತೀಯ ಪಿ.ಯು.ಸಿನಲ್ಲಿ ಚಿಕ್ಕಬಳ್ಳಾಪುರದ ಬಿ.ಜಿ.ಎಸ್ ಕಾಲೇಜಿನಲ್ಲಿ ಏರ್ಪಡಿಸಿರುವ ಲೆಕ್ಕಿಗ ಸ್ಪರ್ಧೆಯಲ್ಲಿ ಭಾಗವಹಿಸಿ, ಸುಮಾರು ೨೦೦ ವಿದ್ಯಾರ್ಥಿಗಳ ಮಧ್ಯೆ ನಾನು ಪ್ರಪ್ರಥಮ ಬಾರಿಗೆ ಭಾಗವಹಿಸಿ ಮೊದಲನೆಯ ಸ್ಥಾನವನ್ನು ಪಡೆದು ಅದರ ಜೊತೆಗೆ ೩೦೦೦/- ಹಣವನ್ನು ಪಡೆದು ನಮ್ಮ ಗೌರಿಬಿದನೂರಿನ ಬಿ.ಜಿ.ಎಸ್ ಕಾಲೇಜು ಹಾಗು ಸಂಸ್ಥೆಗ ಒಳ್ಳೆ ಹೆಸರನ್ನು ನೀಡಿದ್ದೇನೆ.
ಹೀಗೆ ನನ್ನ ಜೀವನದಲ್ಲಿ ಯಶಸ್ವಿಗೊಳ್ಳುತ್ತ ಕೊನೆದಾಗಿ ದ್ವಿತೀಯ ಪಿ.ಯು.ಸಿನಲ್ಲಿ ೯೫ ಅಂಕಗಳನ್ನು ಪಡೆದು ನಮ್ಮ ಕಾಲೇಜಿನಲ್ಲಿ ಪ್ರಥಮ ಸ್ಥಾನದಲ್ಲಿ ನಿಂತು ನನ್ನ ಹಾಗು ನನ್ನ ತಂದೆ – ತಾಯಿಯ ಕನಸನ್ನು ನನಸಾಗಿಸಿದ್ದೆನೆ.
ಪ್ರವಾಸ
ನಾನು ನಮ್ಮ ಕುಟುಂಬದ ಜೊತೆ ಸಾಕಷ್ಟು ಸ್ಥಳಗಳಿಗೆ ಪ್ರವಾಸಕ್ಕೆ ಹೊಗಿದ್ದೇನೆ. ಹಂಪಿ,ಬಿಜಾಪುರ, ಮೈಸೂರು, ಧರ್ಮಸ್ಥಳ ಮತ್ತು ಮುಂತಾದವು.
ನನಗೆ ಪ್ರಥಮ ಪಿ.ಯು.ಸಿ ನಿಂದಲು ಕ್ರೈಸ್ಟ್ ಗೆ ಸೇರಬೇಕೆಂದು ನನ್ನ ಕನಸಾಗಿತ್ತು. ಆ ಕನಸನ್ನು ತಲುಪ್ಪಿದ್ದೇನೆ. ಈಗ ಚೆನ್ನಾಗಿ ಓದಿ ವಿದ್ಯಾಭ್ಯಾಸವನ್ನು ಮುಗಿಸಿ ಒಳ್ಳೆಯ ಕೆಲಸಕ್ಕೆ ಸೇರಿ ತಂದೆ-ತಾಯಿಗೆ ಒಳ್ಳೆಯ ಹೆಸರು ಗಳಿಸಬೇಕೆಂಬುದು ನನ್ನ ಮುಂದಿನ ಲಕ್ಷ್ಯ. ನಾನು ಬೇರೆಯವರಿಗೆ ಆದರ್ಶವಾಗಬೇಕು. ನನ್ನನ್ನು ಮಾರ್ಗದರ್ಶಿಯಾಗಿ ಸ್ವಿಕರಿಸಬೇಕು. ನನಗೆ ನನ್ನದೆಯಾದ ಕಂಪನಿ ಇಟ್ಟು ಅತಿ ಎತ್ತರವಾದ ಸ್ಥಾನಕ್ಕೆ ಬೆಳೆಯಬೇಕೆಂಬುದು ಚಿಕ್ಕಂದಿನಿಂದಲು ಆಸೆಯಿದೆ. ಈ ಎಲ್ಲಾ ಆಸೆಗಳನ್ನು ಕ್ರೈಸ್ಟ್ ನ ಮೂಲಕ ನನಸಾಗುತ್ತದೆ ಎಂದು ಭಾವಿಸುತ್ತೇನೆ.