ಲಾಸ್ಯ ಸಂತ ಅಲೋಶಿಯಸ್ ಕಾಲೇಜು ವಿಜ್ಞಾನ ಪದವಿ ವಿದ್ಯಾರ್ಥಿನಿ. ನನ್ನ ಹೆಸರು ಲಾಸ್ಯ ಶೆಟ್ಟಿ. ನನ್ನ ಊರು ಮಂಗಳೂರು. ನಾನು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ವಾಸಿಸುತ್ತಿದ್ದೇನೆ. ಶ್ರೀ ರಾಮಕೃಷ್ಣ ಶಾಲೆಯಲ್ಲಿ ನನ್ನ ಶಾಲಾ ಶಿಕ್ಷಣವನ್ನು ಪೂರೈಸಿರುವ ನಾನು ಶಾರದಾ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪೂರೈಸಿದ್ದೇನೆ. ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತೀಯ ಬಿ.ಎಸ್ಸಿ. ವ್ಯಾಸಂಗ ಮಾಡುತ್ತಿದೇನೆ. ನನ್ನ ತಂದೆಯ ಹೆಸರು ಜಗದೀಶ್ ಶೆಟ್ಟಿ. ನನ್ನ ತಾಯಿಯ ಹೆಸರು ವಿಶಾಲಾಕ್ಷಿ ಶೆಟ್ಟಿ. ನನ್ನ ಸಹೋದರನ ಹೆಸರು ಶ್ರೇಯಸ್ ಶೆಟ್ಟಿ. ಪುಸ್ತಕ ಓದುವುದು, ಹಾಡುವುದು, ಅಡುಗೆ ಮಾಡುವುದು, ನಾಟಕದಲ್ಲಿ ಭಾಗವಹಿಸುವುದು ನನ್ನ ಹವ್ಯಾಸಗಳು. ಬಿ.ಎಸ್ಸಿ ಮುಗಿಸಿ ಎಂ.ಎಸ್ಸಿ. ಮಾಡಬೇಕೆಂಬ ಆಸೆಯಿದೆ. ಉನ್ನತ ವ್ಯಾಸಂಗ ಪೂರೈಸಿದ ನಂತರ ಶೈಕ್ಷಣಿಕ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬ ಕನಸಿದೆ. ನನ್ನ ಮಾತೃ ಭಾಷೆ ತುಳು. ಹಾಗಾಗಿ ತುಳು ಭಾಷೆಗಾಗಿ ಏನಾದರೂ ಮಾಡಬೇಕೆಂಬ ಹಂಬಲವಿದೆ.