ಸದಸ್ಯ:Kotyan Pavithra/ನನ್ನ ಪ್ರಯೋಗಪುಟ

ತುಳುನಾಡು ಒಂದು ಸುಂದರ ನಾಡು.ಪರಶುರಾಮನ ಸೃಷ್ಟಿಯ ಈ ನಾಡು ಭೂತಕೋಲ,ನಾಗಾರಾಧನೆಯಂತಹ ಹಲವಾರು ಆಚರಣೆಗಳನ್ನೂ,ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನೂ,ಆಟಗಳನ್ನೂ ಒಳಗೊಂಡಿದೆ.ನಮ್ಮೀ ತುಳುನಾಡಿನಲ್ಲಿ ಬಹುತೇಕ ಊರುಗಳಿದ್ದು,ಪ್ರತಿಯೊಂದು ಊರಿಗೂ ತನ್ನದೇ ಆದ ಇತಿಹಾಸವಿದೆ.ಆದರೆ ವಿಪರ್ಯಾಸವೇನೆಂದರೆ ಹಲವಾರು ಊರಿನ ಇತಿಹಾಸವು ಹೊರ ಪ್ರಪಂಚಕ್ಕೆ ತಿಳಿದಿಲ್ಲ.ಹಲವಾರು ಇತಿಹಾಸವನ್ನುಹೊಂದಿರುವ ನನ್ನ ಊರು ಪೆರಾಡಿ.ಏನಿದು ಪೆರಾಡಿ?ಏನಿದರ ಇತಿಹಾಸವೆಂಬುದರ ಬಗೆಗೆ ಕುತೂಹಲವೇ?ಬನ್ನಿ...ನನ್ನ ಊರ ಇತಿಹಾಸವ ನಿಮಗೆ ಉಣಬಡಿಸುವೆ.. ಜೈನಕಾಶಿ ಮೂಡಬಿದಿರೆಯಿಂದ ಸುಮಾರು ಹದಿನೇಳು ಕಿ.ಮೀ ಹಾಗೂ ಬೆಳ್ತಂಗಡಿಯಿಂದ ಸುಮಾರು ಇಪ್ಪತ್ತು ಕಿ.ಮೀ ದೂರದಲ್ಲಿ ಇರುವ ಪೆರಾಡಿ