ಪ್ರಾಥಮಿಕ ಪರಿಚಯ

ಬದಲಾಯಿಸಿ
 
ವಿಧಾನ್ ಸೌಧ , ಕರ್ನಾಟಕ ರಾಜ್ಯಧ ಐತಿಹಾಸಿಕ ಕಟ್ಟಡ

ನನ್ನ ಹೆಸರು ಕೆ . ಎಮ್. ಮನೋಜ್ ಕುಮಾರ್. ನಾನು ಬೆಂಗಳೂರು ನಗರದಲ್ಲಿ ಜನಿಸಿದೆ . ಬೆಂಗಳೂರು ನಗರ ಕರ್ನಾಟಕ ರಾಜ್ಯದ ರಾಜಧಾನಿ . ಸೇಂಟ್ ಜೋಸೆಫ಼್ಸ್ ಶಾಲೆಯಲ್ಲಿ ನನ್ನ ವಿದ್ಯಾಭ್ಯಾಸ ಪ್ರಾರಂಭವಾಯಿತು. ಶಾಲೆಯಲ್ಲಿ ನಾನು ಒಳ್ಳೆಯ ವಿದ್ಯಾರ್ಥಿಯಾಗಿದ್ದೆ. ಚೆಸ್ ಮತ್ತು ಫುಟ್ಬಾಲ್ ಎಂದರೆ ನನಗೆ ಚಿಕ್ಕಂದಿನಿಂದಲೂ ಬಹಳ ಇಷ್ಟ. ನಾನು ಹತ್ತನೇಯ ತರಗತಿಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದು ನನ್ನ ಕಾಲೇಜು ಶಿಕ್ಷಣವನ್ನು ಪುನಃ ಸೇಂಟ್ ಜೋಸೆಫ಼್ಸ್ ಪ್ರಿ ಯೂನಿವರ್ಸಿಟಿ ಕಾಲೇಜಿನಲ್ಲಿ ಆರಂಭಿಸಿದೆ .

==ನನ್ನ ವಿಸ್ತಾರ==

ಬದಲಾಯಿಸಿ
 
ಕ್ರಿಸ್ತ ವಿಶ್ವವಿದ್ಯಾನಿಲಯ

ನಾನು ಪಿ.ಸಿ.ಎಂ.ಬಿ(PCMB) ವಿಷಯಗಳನ್ನು ಆಯ್ದುಕೊಂಡೆ. ಕಾಲೇಜು ಜೇವನದ ಎರಡು ವರ್ಷಗಳು ನನ್ನನ್ನೂ ಸಂಪೂರ್ಣವಾಗಿ ಬದಲಾಯಿಸಿತು. ನಾನು ಈಗ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ(Christ University) ಭೌತಶಾಸ್ತ್ರ , ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ ಬಿಎಸ್ಸಿಯನ್ನು ಓದುತ್ತಿದ್ದೇನೆ.ನನ್ನ ನನ್ನ ದಿನ ನಿತ್ಯ ಕಾರ್ಯಗಳು ವಿಶ್ವವಿದ್ಯಾಲಯಗೆ ಹೊಗುವುದು , ಟಿವಿ ನೊಡುವುದು , ಚೆಸ್ ಆಡುವುದು ಮತ್ತು ದೇವರಿನ ಧ್ಯಾನದಲ್ಲಿ ಇರುವುದು . ನಾನು ನನ್ನ ಶಾಲೆಯಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದೇನೆ . ಆದ್ದರಿ೦ದ ನನ್ನ ಶಾಲೆಯವರು ನನ್ನ ಮು೦ದಿನ ವಿದ್ಯಾಭ್ಯಾಸಗಳಿಗೆ ಮತ್ತು ಪರೀಕ್ಷೆಗಳಿಗೆ ಹಲುವು ವಿದ್ಯಾರ್ಥಿವೇತನಗಳನ್ನು ನೀಡಿದರು . ನಾನು ಶಾಲೆಯಲ್ಲಿ ರೋಬೋಟಿಕ್ಸ್ ಕ್ಲಬ್ನಲ್ಲಿ ಒಬ್ಬ ಸದಸ್ಯನಾಗಿದ್ದೆ . ಅದರಿಂದ ನನಗೆ ಬಹಳ ಜ್ಞಾನ ದೊರಕಿತು.

==ಕನಸು - ನನಸು==

ಬದಲಾಯಿಸಿ

ನನಗೆ ವಿಜ್ಞಾನ ಪುಸ್ತಕಗಳನ್ನು ಓದುವುದು ಆಸಕ್ತಿದಾಯಕ . ನನಗೆ ಖಗೋಳ ವಿಜ್ಞಾನದಲ್ಲಿ ಬಹಳ ಆಸಕ್ತಿ. ಅದರಲ್ಲಿ ನಾನು ಬಹಳ ಸಂಶೋಧನೆಗಳನ್ನು ಮತ್ತು ಪುಸ್ತಕಗಳನ್ನು ಓದುವ ಮೂಲಕ ಬಹಳ ಹೆಚ್ಚು ಮಟ್ಟಿಗೆ ಜ್ಞಾನವನ್ನು ತಿಳಿದುಕೊ೦ಡಿದ್ದೇನೆ . ಆಮೇರಿಕದ ನಾಸ ಸಂಸ್ಥೆಯಲ್ಲಿ ಖಗೋಳವಿಜ್ಞಾನಿ ಪದವಿ ಪಡೆಯಲು ದಿನ ನಿತ್ಯ ಪರಿಶ್ರಮಿಸುತ್ತಿದೇನೆ . ನನ್ನ ಸಾಧನೆಗಳ ವಿಷಯಕ್ಕೆ ಬ೦ದರೆ ನಾನು ಚೆಸ್ನಲ್ಲಿ ಹೆಚ್ಚು ಪದಕಗಳನ್ನು ಸಾದಿಸಿದ್ದೇನೆ .

==ನನ್ನ ಸಾಧನೆ==

ಬದಲಾಯಿಸಿ

ನಾನು ವೇದ ಗಣಿತಗಳಲ್ಲಿ ಎಲ್ಲಾ ಹ೦ತಗಳನ್ನು ಪೂರ್ಣಿಸಿದ್ದೇನೆ .

ನಾನು ಅನೇಕ ದೇಶ ವಿದೇಶಗಳನ್ನು ನೋಡಿದ್ದೇನೆ . ಪ್ರಪಂಚದ ಮುಖ್ಯ ದೇಶಗಳು ಅಮೇರಿಕ , ಬ್ರಿಟನ್ , ಪ್ಯಾರಿಸ್ , ಹಾಂಗ್ ಕಾಂಗ್ ಮತ್ತು ಮು೦ತಾದವುಗಳಿಗೆ ಭೇಟಿ ನೀಡಿದೆ. ಅದರಿ೦ದ ಅವರ ಭಾಷೆ ಮತ್ತು ಸಂಸ್ಕೃತಿ ಅನುಸರಿಸಲು ಬಹಳ ಆಸಕ್ತಿದಾಯಕವಾಗಿ ಇರುತ್ತದೆ .

ಕೊನೆಯದಾಗಿ ನನ್ನ ಜೀವನದ ಗುರಿಗಳು ಅಥವ ಮಹತ್ವಾಕಾಂಕ್ಷೆಗಳ ವಿಷಯಕ್ಕೆ ಬ೦ದರೆ ನನಗೆ ಖಗೋಳವಿಜ್ಞಾನಿಯಾಗುವುದು ನನ್ನ ಗುರಿ . ನಾನು ನನ್ನ ಪರಿಶ್ರಮದಿ೦ದ ಆ ಪದವಿಯನ್ನು ಸಾಧಿಸಬೇಕು ಎನ್ನುವುದು ನನ್ನ ಸ್ವಪ್ನ . ಭಗವ೦ತನ ಮತ್ತು ತ೦ದೆ-ತಾಯಿಯರ ಆಶೀರ್ವಾದಗಳಿ೦ದ ನಾನು ನನ್ನ ಜೀವನದ ಗುರಿಗಳನ್ನು ಸಾಧಿಸುತ್ತೇನೆ .