ಸದಸ್ಯ:Kiran1998
ಕಿರಣ್ ಬಿ ಎಂ | |
---|---|
Born | ೧೫-೦೨-೧೯೯೮ |
Nationality | ಭಾರತ |
Education | ಬಿ.ಕಾಂ ಪದವಿ,ಕ್ರೈಸ್ಟ್ ಯೂನಿವರ್ಸಿಟಿ |
Occupation | ವಿದ್ಯಾರ್ಥಿ |
Height | ೫.೫ ಅಡಿ |
Parent | ಮಲ್ಲಿಕಾರ್ಜುನ್ ಹಾಗು ವಿಶಾಲಾಕ್ಷಿ |
ಜನನ ಮತ್ತು ಊರು ಪರಿಚೆಯ
ಬದಲಾಯಿಸಿನನ್ನ ಹೆಸರು ಕಿರಣ್.ಬಿ.ಮ್. ನನ್ನ ಜನನ ೧೯೯೮ ಫೆಬ್ರವರಿ ೧೫ ರಂದು ಹಾವೇರಿಯಲ್ಲಿ, ಬೆಳೆದ್ದಿದು ದಾವಣಗೆರೆ ಜಿಲ್ಲೆಯ ಮಲೇಬೆನ್ನುರು ಗ್ರಾಮದಲ್ಲಿ. ನಮ್ಮ ಊರು ಭತ್ತ ಮತ್ತು ಅಕ್ಕಿಯ ಗಿರಣಿಗಳಿಗೆ ಹೆಸರ ವಾಸಿಯಾಗಿದೆ.ನಮ್ಮ ಊರಿನ ಸುತ್ತ ಮುತ್ತ ಹಸಿರು ಕಂಬಳಿ ಹೋದ್ದಿರುವಂತೆ ಭತ್ತದ ಹೊಲಗಳು ಕಾಣಬಹುದು ನನ್ನ ತಂದೆಯ ಹೆಸರು ಮಲ್ಲಿಕಾರ್ಜುನ್, ಅವರು ಅಕ್ಕಿ ವ್ಯಪಾರ ಮಾಡುತ್ತಾರೆ. ನನ್ನ ತಾಯಿಯ ಹೆಸರು ವಿಶಾಲಾಕ್ಷಿ , ಅವರು ಗೃಹಿಣಿ ಮತ್ತು ನನಗೆ ಒಬ್ಬ ಪ್ರೀತಿಯ ತಂಗಿ ಇದ್ದಾಳೆ , ಅವಳ ಹೆಸರು ಕೀರ್ತಿ, ಅವಳು ಪ್ರೌಡ ಶಿಕ್ಷಣ ಪಡೆಯುತಿದ್ದಾಳೆ. ನನ್ನ ಬಾಲ್ಯದ ನೆನಪುಗಳು ಕೇವಲ ವಿದ್ಯಾರ್ಥಿ ನಿಲಯದಲ್ಲಿ, ಎಕೆಂದರೆ ಹನ್ನೇರಡು ವರ್ಷಗಳು ವಿದ್ಯಾರ್ಥಿ ನಿಲಯಲ್ಲಿ ಕಳೆದಿರುವೆನು. ಈಗ ನಾನು ನನ್ನ ಬಿ.ಕಾಂ ಪದವಿಯನ್ನು ಬೆಂಗಳೂರಿನಲ್ಲಿ ಇರುವ ಬಹು ಪ್ರಸಿದ್ದವಾಗಿರುವ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಪಡೆಯುತಿರುವೆನು .
ಹವ್ಯಾಸಗಳು
ಬದಲಾಯಿಸಿನನ್ನ ಹವ್ಯಾಸಗಳು ಎನೆಂದರೆ ಪುಸ್ತಕ ಓದುವುದು, ಸೈಕಲ್,ದ್ವಿಚಕ್ರ ಮತ್ತು ಕಾರನ್ನು ಚಲಾಯಿಸುವುದು, ಚಿತ್ರ ಕಲೆ ಮತ್ತು ಬಣ್ಣ ಹಚ್ಚುವುದರಲ್ಲಿ ಬಹಳ ಅಸಕ್ತಿ ಇದೆ, ಚಲನಚಿತ್ರ ನೋಡುವುದು, ಮ್ಯಗಜಿನಗಳು ಮತ್ತು ಕೊಮಿಕ್ ಓದುವುದು, ಟಿ.ವಿ ನೋಡುವುದು ನನ್ನ ನೆಚ್ಚಿನ ಹವ್ಯಾಸಗಳು.
ಶಿಕ್ಷಣ
ಬದಲಾಯಿಸಿನನ್ನ ವಿಧ್ಯಾಭ್ಯಾಸ ಬಗ್ಗೆ ಹೇಳಬೇಕೆಂದರೆ ನನ್ನ ಪ್ರೌಡ ಶಿಕ್ಷಣವನ್ನು ದಾವಣಗೆರೆಯಲ್ಲಿ ಇರುವ ಪಿ.ಎಸ್.ಎಸ್.ಇ.ಎಮ್.ರ್ ಶಾಲೆಯಲ್ಲಿ ಮುಗಿಸಿದೆ. ನಾನು ಎಸ್.ಎಸ್.ಲ್.ಸಿ.ಯಲ್ಲಿ ಶೇಕಡ ೯೨% ಅಂಕ ಪಡೆದು ಉತ್ತೀರ್ಣರಾದೆ. ನಂತರ ವಾಣಿಜ್ಯ ವಿಭಾಗಕ್ಕೆ ಸೇರಬೆಕೆಂದು ಬೆಂಗಳೂರಿನಲ್ಲಿ ಇರುವ ಕ್ರೈಸ್ಟ್ ಪಿ.ಯು.ವಸತಿಯುತ ಕಾಲೇಜಿಗೆ ಸೇರಿಕೊಂಡೆನು. ನಾನು ಪಿಯುಸಿಯಲ್ಲಿ ಶೇಕಡ ೯೨%ಅನ್ನು ಗಳಿಸಿ ಉತ್ತೀರ್ಣರಾದೆ. ನನ್ನ ಈ ಅಂಕವನ್ನು ನೋಡಿ ನನ್ನ ಮನೆಯಲ್ಲಿ ಎಲ್ಲಾರು ತುಂಬ ಸಂತೋಷವಾಗಿದ್ದರು. ನಾನು ೯೨% ಅಂಕಗಳಿಂದ ಉತ್ತಿರ್ಣರಾಗಿದರಿಂದ ನನಗೆ ಕರ್ನಾಟಕ ಸರಕಾರದಿಂದ ಆರು ಸಾವಿರ ರೂಗಳು ಮತ್ತು ಒಂದು ಪದಕವನ್ನು ನೀಡಿದ್ದರು. ಕ್ರೈಸ್ಟ್ ವಿಶ್ವವಿದ್ಯಾಲಯದ ಬಗ್ಗೆ ಹೇಳಬೇಕೆಂದರೆ ಇದು ಒಂದು ಅತ್ಯಂತ ಉತ್ತಮವಾದ,ಹೆಸರಾದಂತ ವಿಶ್ವವಿದ್ಯಾಲಯ, ಇಲ್ಲಿ ನಮಗೆ ಓದಿನ ಜೋತೆಗೆ ಇತರೆ ಶಿಕ್ಷಣಗಳನ್ನು ಕೊಡುವರು. ನಮಗೆ ಜೀವನದಲ್ಲಿ ಬೇಕಾದ ಬಹಳ ವಿಷಯಗಳನ್ನು ಇಲ್ಲಿ ಕಲಿಸುವರು. ಈ ವಿಶ್ವವಿದ್ಯಾಲಯದಿಂದ ನಾನು ನನ್ನ ಪದವಿ ಪಡೆಯ ಬೇಕೆಂದು ಆಸೆ ಇಟ್ಟಿಕೊಂಡಿದ್ದೆ.
ವಿಕಿಪೀಡಿಯ
ಬದಲಾಯಿಸಿವಿಕಿಪೀಡಿಯದ ಬಗ್ಗೆ ಹೇಳಬೇಕೆಂದರೆ ವಿಕಿನಿಂದ ನನಗೆ ಓದಿನಲ್ಲಿ ತುಂಬ ಸಹಾಯವಾಗುತ್ತಿದೆ. ಶಬ್ಡಗಳ ಅರ್ಥಗಳು ಸುಲಬವಾಗಿ ಸಿಗುತ್ತದೆ. ವಿಕಿಪೀಡಿಯದಲ್ಲಿ ಇರದ ವಿಷಯವೇ ಇಲ್ಲ ಎಂದು ಹೇಳುತ್ತೆನೆ. ನನಗೆ ಏನೇ ಮಾಹಿತಿ ಬೇಕಾದರು ಬೇಗ ಸಿಕ್ಕಿಬಿಡುತ್ತದೆ. ನನಗೆ ವಿಕಿಪೀಡಿಯದಿಂದ ಕನ್ನಡ ಟೈಪ್ ಮಾಡುವುದು ಕಲಿತೆ ಎಂದು ಹೆಳುತ್ತ ಇದನ್ನು ಮುಗಿಸುತ್ತಿದೆನೆ. ವಂದನೆಗಳು
This user is a member of WikiProject Education in India |