Clouded leopard
A clouded leopard at the Cincinnati Zoo and Botanical Garden
Conservation status
Scientific classification e
Unrecognized taxon (fix): Neofelis
ಪ್ರಜಾತಿ:
N. nebulosa[]
Binomial name
Neofelis nebulosa[]
(Griffith, 1821)
Clouded leopard range
Synonyms

Felis macrocelis
Felis marmota

ಮೋಡದ ಚಿರತೆ

ಬದಲಾಯಿಸಿ

ಮೋಡದ ಚಿರತೆ(clouded leopard, Neofelis nebulosa) ಹಿಮಾಲಯದ ತಪ್ಪಲು, ಆಗ್ನೇಯ ಏಶಿಯದಿಂದ ಚೀನಾದವರೆಗು ಕಾಣಸಿಗುವ ಕಾಡು ಬೆಕ್ಕು. ೨೦೦೮ ರಿಂದ IUCN ಕೆಂಪು ಪಟ್ಟಿ, Vulnarable ಎಂದು ಪರಿಗಣಿಸಲಾಗಿದೆ. ಇದರ ಒಟ್ಟು ಸಂಖ್ಯೆಯು ೧೦೦೦೦ ಕ್ಕಿಂತ ಕಮ್ಮಿಯಿದ್ದು, ಇವುಗಳ ಸಂಖ್ಯೆ ಇನ್ನೂ ಕ್ಷೀಣಿಸುತ್ತಿದೆ. ಮೋಡದ ಚಿರತೆ, ಮೇಘಾಲಯದ ರಾಜ್ಯ ಪ್ರಾಣಿಯಾಗಿದೆ.

ಜೀವ ವರ್ಗೀಕರಣ

ಬದಲಾಯಿಸಿ

ಮೋಡದ ಚಿರತೆಯ ವೈಜ್ಞಾನಿಕ ಹೆಸರು Neofelis nebulosa. ಇದು Neofelis ಕುಲಕ್ಕೆ ಸೇರಿದ್ದು, Felidae ಕುಟುಂಬದಲ್ಲಿ ವರ್ಗೀಕರಿಸಲಾಗಿದೆ. ಇದನ್ನು ೧೮೨೧ ರಲ್ಲಿ ಮೊದಲು ವರ್ಣಿಸಿದ್ದು ಬ್ರಿಟನ್ನಿನ ಪ್ರಾಣಿಶಾಸ್ತ್ರಜ್ಞ ಎಡ್ವರ್ಡ್ ಗ್ರಿಫಿತ್. ಇದರ ಕುಲದ ಇನ್ನೊಂದು ಪ್ರಭೇದ ಸುಂಡ ಮೋಡದ ಚಿರತೆ(sunda clouded leopard, N.diardi). ೨೦೦೬ ವರೆಗೂ ಇದನ್ನು ಮೋಡ ಚಿರತೆಯ ಉಪವರ್ಗವೆಂದೇ ಪರಿಗಣಿಸಲಾಗುತ್ತಿತ್ತು. ಮೋಡದ ಚಿರತೆಯನ್ನು ದೊಡ್ಡ ಕಾಡು ಬೆಕ್ಕುಗಳ ಮತ್ತು ಸಣ್ಣ ಕಾಡು ಬೆಕ್ಕುಗಳ ನಡುವಿನ ವಿಕಸನೀಯ ಕೊಂಡಿ ಎಂದೆ ಪರಿಗಣಿಸಲಾಗುತ್ತದೆ. ಸಣ್ಣ ಬೆಕ್ಕುಗಳ ವರ್ಗದಲ್ಲೆ ಇದು ಅತಿದೊಡ್ಡ ಬೆಕ್ಕಾಗಿದ್ದು, ಇದರ ಹೆಸರ ಹೊರತಾಗಿಯು, ಇದಕ್ಕೂ ಚಿರತೆಗೂ ಹತ್ತಿರದ ಸಂಬಂಧವಿಲ್ಲ.

 
Close-up of face

ಗುಣಲಕ್ಷಣಗಳು

ಬದಲಾಯಿಸಿ

ಮೋಡದ ಚಿರತೆಯ ತುಪ್ಪಳ ಕಡು ಬೂದು ಅಥವಾ ನೆಲ ಕಂದು ಬಣ್ಣದ್ದಾಗಿರುತ್ತದೆ, ಈ ತುಪ್ಪಳವನ್ನು ಕಪ್ಪು ಮತ್ತು ಮಬ್ಬು-ಕಂದು ಬಣ್ಣದ ನಮೂನೆಗಳು ಹೆಚ್ಚು ಪ್ರಮಾಣದಲ್ಲಿ ಮುಚ್ಚಿರುತ್ತದೆ. ತಲೆಯ ಮೇಲೆ ಕಪ್ಪು ಚುಕ್ಕೆಗಳಿದ್ದು, ಕಿವಿ ಕಪ್ಪಗಿರುತ್ತದೆ. ಕಣ್ಣಿನನ ಮೇಲಿಂದ ಕೆನ್ನೆಯವರೆಗೂ, ಬಾಯಿಯ ಮೂಲೆಯಿಂದ ಕತ್ತಿನವರೆಗು, ನೆತ್ತಿಯಿಂದ ಭುಜದವರೆಗು ಪಟ್ಟೆಗಳಿರುತ್ತದೆ. ದೇಹದ ಎರಡು ಬದಿಯ ಪಕ್ಕೆಗಳಲ್ಲಿ ಬಿರುಕಳಿದ್ದು ಈ ಬಿರುಕುಗಳೆ ಪಟ್ಟೆಗಳಿಗೆ ಮೋಡದ ಆಕೃತಿಯನ್ನು ನೀಡುತ್ತದೆ, ಅದರ ತರುವಾಗಿಯೇ ಈ ಕಾಡು ಬೆಕ್ಕಿಗೆ ಮೋಡದ ಚಿರತೆ ಎಂದು ಹೆಸರು.


 
Clouded leopard at Aizawl, Mizoram, India

ಆವಾಸಸ್ಥಾನ

ಬದಲಾಯಿಸಿ

ಮೋಡದ ಚಿರತೆ ಹಿಮಾಲಯದ ತಪ್ಪಲಿನ ಪ್ರದೇಶಗಳಾದ ನೇಪಾಳ, ಭೂತಾನ್, ಭಾರತದಿಂದ ಮಯನ್ಮಾರಿನವರೆಗೆ, ಆಗ್ನೇಯ ಬಾಂಗ್ಲಾದೇಶ, ತಯ್ಲ್ಯಾಂಡ್, ದಕ್ಷಿಣ ಚೈನವರೆಗೂ ಕಾಣಸಿಗುತ್ತದೆ. ಸಿಂಗಾಪುರ ಮತ್ತು ತೈವಾನಿನಲ್ಲಿ ನಶಿಸಿಹೋಗಿದೆ. ಇದು ಮುಚ್ಚಿದ ಹಾಗು ತೆರೆದ ಕಾಡುಗಳನ್ನು ಅದರ ಆವಾಸಸ್ಥಾನವಾಗಿ ಆದ್ಯತೆ ನೀಡುತ್ತದೆ. ಭಾರತದಲ್ಲಿ ಇದು ಅಸ್ಸಾಮ್, ಸಿಕ್ಕಿಮ್, ಅರುಣಾಚಲ್ ಪ್ರದೇಶ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರ. ಸಿಕ್ಕಿಮ್ ಪ್ರದೇಶದಲ್ಲಿ, ಮೋಡದ ಚಿರತೆಯನ್ನು ಕ್ಯಾಮೆರ ಟ್ರ್ಯಾಪಿನ ಮೂಲಕ ೨೫೦೦-೩೭೦೦ ಮಿ. ಎತ್ತರದಲ್ಲಿ ದಾಖಲಿಸಲಾಗಿದೆ.

ಸಂಸ್ಕೃತಿಯಲ್ಲಿ

ಬದಲಾಯಿಸಿ

ತೈವಾನಿನ ರುಕೈ ಮಂದಿ ಮೋಡದ ಚಿರತೆಯನ್ನು ಕೊಲ್ಲುವುದನ್ನು ಬಹಿಷ್ಕರಿಸಿದ್ದಾರೆ. ೧೯೭೦ ರಲ್ಲಿ ರಾಮ ಸಮರವೀರ ಅವರ ಚಿತ್ರಕಲೆಗೆ ಅಮೇರಿಕಾದಲ್ಲಿ ಅತ್ಯುತ್ತಮ-ಮಾರಾಟ ಹೊಂದಿದೆ.

ಉಲ್ಲೇಖಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Wozencraft, W. C. (2005). "Order Carnivora". In Wilson, D. E.; Reeder, D. M (eds.). Mammal Species of the World (3rd ed.). Johns Hopkins University Press. p. 545–546. ISBN 978-0-8018-8221-0. OCLC 62265494. {{cite book}}: Invalid |ref=harv (help); no-break space character in |first= at position 3 (help)
  2. ಉಲ್ಲೇಖ ದೋಷ: Invalid <ref> tag; no text was provided for refs named iucn