ಸದಸ್ಯ:Kavya.S.M/ಪೌಲೋಮಿ ಘಟಕ್
ವೈಯುಕ್ತಿಕ ಮಾಹಿತಿ | ||||||||||||||
---|---|---|---|---|---|---|---|---|---|---|---|---|---|---|
ಜನನ | ೩ ಜನವರಿ ೧೯೮೩ ಕೋಲ್ಕತ್ತ, ಪಶ್ಚಿಮ ಬಂಗಾಳ | |||||||||||||
ಪತ್ನಿ(ಯರು) | ಸೌಮ್ಯದೀಪ್ ರಾಯ್ | |||||||||||||
ಪದಕ ದಾಖಲೆ
|
ಪೌಲೋಮಿ ಘಾಟಕ್ ( ಬೆಂಗಾಲಿ : পৌলমী ঘটক; ಜನನ ಜನವರಿ ೩, ೧೯೮೩)ಇವರು ಭಾರತದ ಪಶ್ಚಿಮ ಬಂಗಾಳದ ಟೇಬಲ್ ಟೆನ್ನಿಸ್ ಆಟಗಾರ್ತಿ. ಇವರು ಮೂರು ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳನ್ನು (೧೯೯೬, ೧೯೯೮ ಮತ್ತು ೧೯೯೯) ಮತ್ತು ೧೯೯೮ ಮತ್ತು ೨೦೧೬ ರ ನಡುವೆ ಏಳು ಹಿರಿಯ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳನ್ನು ಗೆದ್ದರು. ೧೯೯೮ ರಲ್ಲಿ ಇವರು ಹಿರಿಯ ರಾಷ್ಟ್ರೀಯ ಮತ್ತು ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳನ್ನು ಗೆದ್ದರು. ಪೌಲೋಮಿ ಅವರು ೨೦೦೬ ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮತ್ತು ೨೦೦೦ ಮತ್ತು ೨೦೦೮ ರ ನಡುವಿನ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇವರು ೧೬ ವರ್ಷದವಳಿದ್ದಾಗ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಆಡಿದ್ದರು. ೨೦೦೭ರಲ್ಲಿ ಇಂಡಿಯನ್ ಓಪನ್ ಫೈನಲ್‌ನಲ್ಲಿಯೂ ಆಡಿದ್ದರು. ಇವರು ೧೯೯೨ ರಲ್ಲಿ ಆಡಲು ಪ್ರಾರಂಭಿಸಿದರು ಮತ್ತು ನಂತರ ಯಶಸ್ವಿ ಕಲಿಕೆಯ ರೇಖೆಯನ್ನು ಪಡೆದರು.
ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾದ ೨೦೧೮ ರ ಶ್ರೇಯಾಂಕಗಳ ಪ್ರಕಾರ ಪೌಲೋಮಿ ಭಾರತದಲ್ಲಿನ ಮಹಿಳಾ ಆಟಗಾರರಲ್ಲಿ #೨೨ನೇ ಸ್ಥಾನ ಪಡೆದಿದ್ದಾರೆ. [೧]
ವೈಯಕ್ತಿಕ ಜೀವನ
ಬದಲಾಯಿಸಿಪೌಲೋಮಿ ಘಟಕ್ ಅವರು ಭಾರತದ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಜನವರಿ ೩,೧೯೮೩ ರಂದು ಜನಿಸಿದರು. [೨] ಇವರು ಶುಭಾಷ್ ಚಂದ್ರ ಘಟಕ್ ಅವರ ಮಗಳು, ಇವರು ತಮ್ಮ ಜೀವನದುದ್ದಕ್ಕೂ ನಿರಂತರ ಬೆಂಬಲವನ್ನು ಹೊಂದಿದ್ದಾರೆ. [೨] ಟೇಬಲ್ ಟೆನಿಸ್ ಆಡುವುದರ ಜೊತೆಗೆ ಚಿತ್ರಕಲೆಯಲ್ಲಿಯೂ ಈಕೆಗೆ ಕೌಶಲ್ಯವಿದೆ. ಇವಳು ತನ್ನ ೯ ನೇ ವಯಸ್ಸಿನಲ್ಲಿ ತನ್ನ ಟೇಬಲ್ ಟೆನ್ನಿಸ್ ವೃತ್ತಿಜೀವನವನ್ನು ಪ್ರಾರಂಭಿಸಿದಳು.
ಪೌಲೋಮಿ ನವ ನಳಂದ ಪ್ರೌಢಶಾಲೆಯಲ್ಲಿ ಮತ್ತು ನಂತರ ಕಲ್ಕತ್ತಾ ವಿಶ್ವವಿದ್ಯಾನಿಲಯದ ಜೋಗಮಯ ದೇವಿ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. [೩] ೨೦೧೦ ರ ಕಾಮನ್‌ವೆಲ್ತ್ ಕ್ರೀಡಾಕೂಟದ ನಂತರ, ಅವರು ವೃತ್ತಿಪರ ಟೇಬಲ್ ಟೆನ್ನಿಸ್ ಆಟಗಾರರಾದ ಸೌಮ್ಯದೀಪ್ ರಾಯ್ ಅವರನ್ನು ವಿವಾಹವಾದರು. [೪]
ವೃತ್ತಿ
ಬದಲಾಯಿಸಿಇವಳು ಒಂಬತ್ತು ವರ್ಷದವಳಿದ್ದಾಗ ೧೯೯೨ ರಲ್ಲಿ ತನ್ನ ಟೇಬಲ್ ಟೆನ್ನಿಸ್ ವೃತ್ತಿಜೀವನವನ್ನು ಪ್ರಾರಂಭಿಸಿದಳು. ಇವಳು ಟೋಲಿಗಂಜ್ ಬೈಸಾಖಿ ಸಂಘದಲ್ಲಿ ನಿಯಮಿತವಾಗಿ ಅಭ್ಯಾಸ ಮಾಡುತ್ತಿದ್ದಳು. [೫] ಇವರು ೧೬ ನೇ ವಯಸ್ಸಿನಲ್ಲಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದರು. [೬] ಇವರು ಶರತ್ ಕಮಲ್ ಮತ್ತು ಅಂಕಿತಾ ದಾಸ್ ಅವರೊಂದಿಗೆ ವಿವಿಧ ಪಂದ್ಯಗಳನ್ನು ಆಡಿದರು. ಮಹಿಳಾ ಹಿರಿಯ ಟೇಬಲ್ ಟೆನಿಸ್ ಆಟಗಾರ್ತಿಯರಲ್ಲಿ ಇವರು ಟಾಪ್ ೨ ಶ್ರೇಣಿಯನ್ನು ಪಡೆದರು.[ಸಾಕ್ಷ್ಯಾಧಾರ ಬೇಕಾಗಿದೆ]
ಇವರು ಕೊರಿಯಾದ ಏಷ್ಯನ್ ಟೇಬಲ್ ಟೆನ್ನಿಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದರು.ರಷ್ಯಾ ಓಪನ್ ನಲ್ಲಿ ,ಜಪಾನ್ನಲ್ಲಿ ಟೊಯೋಟಾ ಕಪ್; ಜರ್ಮನ್ ಮತ್ತು ಪೋಲಿಷ್ ಓಪನ್ , ೨೦೦೬ ರಲ್ಲಿ ದೋಹಾ ಮತ್ತು ಚಿಲಿ ಓಪನ್‌ನಲ್ಲಿ ೧೫ ನೇ ಏಷ್ಯನ್ ಗೇಮ್ಸ್,,೨೦೦೭ ರಲ್ಲಿ, ಇವರು ಕ್ರೋಸಿಯಾದಲ್ಲಿ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಆಡಿದರು. ಗೋಲ್ಡನ್ ರಾಕೆಟ್ ಚಾಂಪಿಯನ್‌ಶಿಪ್, ವಿಯೆಟ್ನಾಂ ಮತ್ತು ಇಂಡೋನೇಷ್ಯಾದಲ್ಲಿ ಅಂತರಾಷ್ಟ್ರೀಯ ಓಪನ್ ಟೂರ್ನಮೆಂಟ್ನಲ್ಲಿ ಭಾಗವಹಿಸಿದರು. ಅದೇ ವರ್ಷದಲ್ಲಿ ಇವರು ಆಸ್ಟ್ರಿಯಾ, ಫ್ರಾನ್ಸ್ ಮತ್ತು ಜರ್ಮನ್ ಓಪನ್‌ನಲ್ಲಿ ದೇಶವನ್ನು ಪ್ರತಿನಿಧಿಸಿದರು. [೭] ಇವರು ಕಾಮನ್ ವೆಲ್ತ್ ಗೇಮ್ಸ್ ೨೦೧೦ ರಲ್ಲಿ ಬೆಳ್ಳಿ ಪದಕ ವಿಜೇತರಾದರು. [೮] ಇವಳು ೨೦೧೨ ರ ಏಷ್ಯನ್ ಗೇಮ್ಸ್‌ನಲ್ಲಿ ಟೇಬಲ್ ಟೆನಿಸ್ ಕ್ವಾರ್ಟರ್‌ಫೈನಲ್‌ಗೆ ಬಂದಿದ್ದಳು. [೯] ೨೦೧೨ ರ ಒಲಂಪಿಕ್ಸ್‌ನ ಸಂಭಾವ್ಯರ ಪೈಕಿ ಇವಳು ಕೂಡ ಇದ್ದಳು.
ಇತ್ತೀಚೆಗಷ್ಟೇ ೨೦೧೪ರಲ್ಲಿ ಪಾಕಿಸ್ತಾನದ ವಿರುದ್ಧ ಅಂಕಿತಾ ದಾಸ್ ಜತೆಗೂಡಿ ಏಷ್ಯನ್ ಗೇಮ್ಸ್‌ನಲ್ಲೂ ಆಡಿ ಗೆಲುವು ಸಾಧಿಸಿದ್ದರು. [೧೦] ಅದೇ ಸಮಾರಂಭದಲ್ಲಿ ಅವರು ಶರತ್ ಕಮಲ್ ಅವರೊಂದಿಗೆ ಮಿಶ್ರ ಡಬಲ್ಸ್ ಆಡಿದರು .ಆಕೆಯ ಪ್ರತಿಭೆಗೆ ಆಕೆಯ ಸಾಧನೆ ಅಪಾರ. [೧೦] ಅವರು ೧೯೯೮-೨೦೦೭ ರ ನಡುವೆ ಮೂರು ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್ ಮತ್ತು ಐದು ಹಿರಿಯ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳನ್ನು ಹೊಂದಿದ್ದಾರೆ.[ಸಾಕ್ಷ್ಯಾಧಾರ ಬೇಕಾಗಿದೆ]
ಪ್ರಸ್ತುತ, ಪೌಲೋಮಿ ಭಾರತ್ ಪೆಟ್ರೋಲಿಯಂನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್, ಸ್ಪೋರ್ಟ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ.ಇವಳು PSPB ಅನ್ನು ಪ್ರತಿನಿಧಿಸುತ್ತಾಳೆ. [೧೧] [೧೨]
ಸಾಧನೆಗಳು ಮತ್ತು ಗೌರವಗಳು
ಬದಲಾಯಿಸಿ- ಕಾಮನ್‌ವೆಲ್ತ್ ೨೦೦೬ (ಕಂಚಿನ ಪದಕ)
- ಮಹಿಳಾ ತಂಡ, SAF ಆಟಗಳು, ೨೦೦೬ (ಚಿನ್ನ)
- ಮಹಿಳೆಯರ ಡಬಲ್ಸ್, SAF ಗೇಮ್ಸ್, ೨೦೦೬ (ಚಿನ್ನ)
- ಮಹಿಳೆಯರ ಡಬಲ್ಸ್, US ಓಪನ್, ೨೦೦೬(ಬೆಳ್ಳಿ)
- ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್, ೨೦೦೭(ಕಂಚಿನ)
- ರಾಷ್ಟ್ರೀಯ ಚಾಂಪಿಯನ್‌ಶಿಪ್, ೨೦೦೫ (ಕಂಚಿನ)
- ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳು, ೨೦೦೬ (ಚಿನ್ನ)
- ಮಹಿಳಾ ಸಿಂಗಲ್ಸ್, ರಾಷ್ಟ್ರೀಯ ಚಾಂಪಿಯನ್‌ಶಿಪ್, ೨೦೦೬ (ಬೆಳ್ಳಿ)
- ರಾಷ್ಟ್ರೀಯ ಚಾಂಪಿಯನ್‌ಶಿಪ್, ೨೦೦೭ (ಚಿನ್ನ)
- ಮಹಿಳಾ ಸಿಂಗಲ್ಸ್, ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳು, ೨೦೦೭ (ಚಿನ್ನ)
- ಕಾಮನ್‌ವೆಲ್ತ್ ೨೦೧೦ (ಬೆಳ್ಳಿ)
ಸಹ ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "Table Tennis Federation of India 2018 Ranking" (PDF). Table Tennis Federation of India. 8 August 2018. Retrieved 27 August 2018.
- ↑ ೨.೦ ೨.೧ "Poulomi Ghatak". veethi.com. Retrieved 2017-05-13.
- ↑ History of the College
- ↑ "From TT court to grand courtship". The Telegraph. Retrieved 2017-05-13.
- ↑ "Poulomi Ghatak". veethi.com. Retrieved 2017-05-13."Poulomi Ghatak". veethi.com. Retrieved 13 May 2017.
- ↑ "Poulomi Ghatak". Olympedia. Retrieved 18 July 2020.
- ↑ "Poulomi Ghatak". veethi.com. Retrieved 2017-05-13."Poulomi Ghatak". veethi.com. Retrieved 13 May 2017.
- ↑ "Sharath Kamal, Ghatak among Olympic Table Tennis probables". Jagran Post. Retrieved 2017-05-13.
- ↑ "Poulomi leads India into Asian TT quarterfinals". Jagran Post. Retrieved 2017-05-13.
- ↑ ೧೦.೦ ೧೦.೧ "Mixed day for Indian Paddlers at Asian Games". Firstpost (in ಅಮೆರಿಕನ್ ಇಂಗ್ಲಿಷ್). 2014-09-29. Retrieved 2017-05-13.
- ↑ "The Telegraph - Calcutta (Kolkata) | Entertainment | MIXED DOUBLES". www.telegraphindia.com. Retrieved 2018-08-27.
- ↑ "TTFI Players". ttfi.org. Retrieved 2018-08-27.