Kaushik Srinivasa Rachakonda
ಕುಟುಂಬ
ಬದಲಾಯಿಸಿನನ್ನ ಹೆಸರು ಕೌಶಿಕ್ ಎಸ್ ಆರ್. ನನ್ನ ಜನ್ಮದಿನ ಡಿಸೆಂಬರ್ ೫ ೨೦೦೦. ನಾನು ಕ್ರೈಸ್ಟ್ ವಿಶ್ವವಿದ್ಯಾನಿಲಯದ ಬಿಕಾಂ ಪದವಿಯ ವಿಧ್ಯಾರ್ಥಿ. ನನ್ನ ತಂದೆಯ ಹೆಸರು ಶ್ರೀನಿವಾಸ್ ಹಾಗು ನನ್ನ ತಾಯಿಯ ಹೆಸರು ರಾಜಶ್ರಿ. ನನ್ನ ತಂದೆ ಜರ್ಮನಿಯಲ್ಲಿ ಮೂಲಗೊಂಡ ಬಾಷ್ ಪ್ರೈ.ಲಿ. ಎಂಬ ಖಾಸಗಿ ಸಂಸ್ಥೆಯಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ, ಹಾಗು ನನ್ನ ತಾಯಿ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಉಪ ವಿಲೇಖನಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ನನಗೆ ಒಬ್ಬ ಅಣ್ಣ ಕೂಡ ಇದ್ದಾನೆ. ಅವನ ಹೆಸರು ಗೌತಮ್ . ಅವನು ವಯಸ್ಸಿನಲ್ಲಿ ನನಗಿಂತ ನಾಲ್ಕು ವರ್ಷ ದೊಡ್ಡವನು. ಅವನು ಹೆಚ್ಚಿನ ಅಧ್ಯಯನ ಪೂರ್ಣಗೊಳಿಸಿಕೊಳ್ಳಲು ಅಮೇರಿಕಾ ದೇಶದಲ್ಲಿರುವ ಯುನಿವರ್ಸಿಟಿ ಆಫ಼್ ಸದರ್ನ್ ಕಾಲಿಫ಼ೋರ್ನಿಯದಲ್ಲಿ ಎಮ್. ಎಸ್. ಮಾಡಲು ಹೋಗಿದ್ದಾನೆ. ನಾನು ಹುಟ್ಟಿ-ಬೆಳೆದದ್ದು ಬೆಂಗಳೂರಿನಲ್ಲೆ ಆದರು, ಸರಿಸುಮಾರು ೧೯೬೦-೬೫ರ ವೇಳೆಗೆ ನಮ್ಮ ತಾತ ಅವರ ಹುಟ್ಟೂರಾದ ರಾಜಮಂಡ್ರಿಯಿಂದ ಬೆಂಗಳೂರಿಗೆ ಬಂದುಬಿಟ್ಟರು.
ವಿದ್ಯಾಭ್ಯಾಸ
ಬದಲಾಯಿಸಿನಾನು ನನ್ನ ಮೂರನೆಯ ತರಗತಿಯ ವರೆಗೆ ಚಿನ್ಮಯ ವಿದ್ಯಾಲಯ ಎಂಬ ಶಾಲೆಯಲ್ಲಿ ಅಧ್ಯಯನ ಮಾಡಿದೆ. ಇಂದಿಗೂ ಈ ಶಾಲೆಯು ಚಿನ್ಮಯ ಮಿಷನ್ ಟ್ರಸ್ಟ್ ಕೆಳಗೆನ ನಡೆಸಲ್ಪಡುತ್ತಿದೆ. ನಂತರ ನಾಲ್ಕನೆಯ ತರಗತಿಯಿಂದ ಹತ್ತನೆಯ ತರಗತಿಯ ವರೆಗೆ ಡೆಕ್ಕನ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ನನ್ನ ಓದನ್ನು ಮುಂದುವರೆಸಿ ಪೂರ್ಣಗೊಳಿಸಿದೆ. ನನ್ನ ಶಾಲಾ ಜೀವನದ ಅತಿ ಹೆಚ್ಚು ಸಂತೋಷದ ಸಮಯವನ್ನ ಕಳೆದೆ, ಹಲವಾರು ವಿಷಯಗಲನ್ನ ಕಲೆತೆ. ಈ ಶಾಲೆಯನ್ನು ಸೇರಿದ ನಂತರ ನನ್ನ ಇಷ್ಟ ಕಷ್ಟಗಳನ್ನು ತಿಳಿದುಕೊಂದಡೆ. ಈ ಶಾಲೆಯ ಮೂಲಕ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದೆ, ಅನೇಕ ಬಾರಿ ಗೆದ್ದೆ-ಸೋತೆ, ಆದರೆ ಜೀವನದಲ್ಲಿ ಹಲವಾರು ವಿಷಯಗಳನ್ನು ಕಲೆತೆ.
ಹವ್ಯಾಸಗಳು
ಬದಲಾಯಿಸಿಇದಲ್ಲದೆ, ಕಾಲ್ಚೆಂಡು (ಫುಟ್ಬಾಲ್) ಆಟದೊಂದಿಗೆ ಪ್ರೀತಿಯಲ್ಲಿ ಬಿದ್ದೆ. ಹಿಂದೆಂದು ಆಡದೆ ಇದ್ದರು, ಈ ಶಾಲೆಗೆ ಸೇರಿದ ನಂತರ, ಈ ಆಟದ ಹುಚ್ಚು ನನಗೆ ಹಿಡಿದಿತ್ತು. ನಮ್ಮ ಶಾಲೆಯ ಫುಟ್ಬಾಲ್ ತಂಡದ ನಾಯಕತ್ವವನ್ನ ಪಡೆದೆ. ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ನನ್ನ ಸ್ನೇಹಿತರ ಸಹಾಯದೊಂದಿಗೆ ನಮ್ಮ ಶಾಲೆಯ ತಂಡಕ್ಕೆ ವಿಜಯವನ್ನು ನೀಡಿದೆ . ಇಂದಿಗೂ ಸಹ ಫ಼ುಟ್ಬಾಲ್ ನನ್ನ ಅಚ್ಚು-ಮೆಚ್ಛಿನ ಆಟ ಹಾಗು ಹವ್ಯಾಸವಾಗಿದೆ. ಸಮಯ ದೊರಕಿದಾಗೆಲ್ಲ ಸ್ನೇಹಿತರೊಂದಿಗೆ ಸೇರಿ ಫ಼ುಟ್ಬಾಲ್ ಆಡುತ್ತೇನೆ. ಹಾಗೆಯೆ, ಪ್ರವಾಸ ಮಾಡುವುದು ಎಂದರೆ ನನಗೆ ಬಹಳ ಇಷ್ಟ . ಇತ್ತೀಚಿಗಷ್ಟೇ ೨೦೧೭ರ ನವೆಂಬರ್ನಲ್ಲಿ ಬದ್ರಿ-ಕೇದಾರ್ ಯಾತ್ರೆಗೆ ಹೋಗಿ ಬಂದೆ.
ಕಾಲೇಜು ಜೀವನ
ಬದಲಾಯಿಸಿಹತ್ತನೆಯ ತರಗತಿಯ ನಂತರ ನಾನು ಪಿ.ಯು.ಸಿಯಲ್ಲಿ ಕಾಮರ್ಸ್ ತೆಗೆದುಕೊಳ್ಳಬೇಕೆಂದು ನಿರ್ಧಾರ ಮಾಡಿ ನನ್ನ ಪಿ.ಯು.ಸಿಯನ್ನು ಶ್ರೀ ಕುಮಾರನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದೆ. ಇಲ್ಲಿ ನಾನು ಲೆಕ್ಕ ಶಾಸ್ತ್ರ ಹಾಗು ಸಂಖ್ಯಾಶಾಸ್ತ್ರದಲ್ಲಿ ನನಗೆ ತಿಳಿಯದೆ ಆಸಕ್ತಿಯನ್ನು ಬೆಳೆಸಿಕೊಂಡು ಬಂದೆ. ಹೀಗೆ ಎರಡು ವರುಷ ಮರೆಯಲಾರದ ನೆನಪುಗಳನ್ನುಗಳಿಸಿ ೨೦೧೮ರಲ್ಲಿ ನಡೆದ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಉನ್ನತ ಫಲಿತಾಂಶವನ್ನ ಪಡೆದು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿಕಾಂ ಪದವಿಗೆ ಸೇರಿದೆ.ಇದು ಶೈಕ್ಷಣಿಕ ವಿಚಾರದ ಬಗ್ಗೆ.
ವೈಯ್ಯಕ್ತಿಕ ಜೀವನ
ಬದಲಾಯಿಸಿವಯ್ಯಕ್ತಿಕವಾಗಿ ನಾನು ಪರಿಚಯವಿಲ್ಲದವರೊಂದಿಗೆ ಹೆಚ್ಚು ಮಾತನಾಡುವುದಿಲ್ಲ, ಅಂತರ್ಮುಖಿ ಎಂದರೆ ತಪ್ಪಾಗುವುದಿಲ್ಲ. ಹಾಗೆಂದ ಮಾತ್ರಕ್ಕೆ ನಾನು ಮಾತಾಡುವುದಿಲ್ಲ ಎಂದಲ್ಲ, ಪರಿಚಯವಿದ್ದವರೊಡನೆ ಬಹಳಷ್ಟು ಮಾತನ್ನಾಡುತ್ತೇನೆ. ನಾನು ಕೀ-ಬೋರ್ಡ್ ನುಡಿಸಬಲ್ಲೆ. ಈ ವಿದ್ಯೆಯಲ್ಲಿ ಎರಡು ಹಂತದ ಪರೀಕ್ಷೆಯನ್ನು ತೀರ್ಗಡೆಸಿದ್ದೇನೆ. ಇದಲ್ಲದೆ ನಾನು ಶಾಲೆಯಲ್ಲಿದ್ದಾಗ ಕ್ರೀಡೆಯ ಕಡೆ ಹೆಚ್ಚು ಒಲವನ್ನು ತೋರಿದ ಕಾರಣದಿಂದಾಗಿ ಇಂದಿಗೂ ನಾನು ಒಬ್ಬ ಕ್ರೀಡಾ-ಪ್ರೇಮಿಯಾಗಿದ್ದೇನೆ. ಕ್ರಿಕೆಟ್, ಫ಼ುಟ್ಬಾಲ್ ಈ ಎರಡು ಆಟಗಳೆಂದರೆ ನನಗೆ ಬಹಳ ಇಷ್ಟ ಆದರೆ ಫ಼ುಟ್ಬಾಲ್ ಕಂಡರೆ ಒಲವು ಸ್ವಲ್ಪ ಹೆಚ್ಚು! ಇದೆಲ್ಲದರೊಂದಿಗೆ ನನಗೆ ವ್ಯಾಯಾಮ ಶಾಲೆಗೆ ಹೋಗಿ ಆರೋಗ್ಯವಾದ ದೇಹವನ್ನುಗಳಿಸಲು ಬಹಳ ಇಷ್ಟ!