ಸದಸ್ಯ:K B RUTHVIK/ನನ್ನ ಪ್ರಯೋಗಪುಟ

ನನ್ನ ಪರಿಚಯ:

ಬದಲಾಯಿಸಿ

ನನ್ನ ಹೆಸರು ಕೆ ಬಿ ಋತ್ವಿಕ್. ನನ್ನ ವಯಸ್ಸು ೧೮ ವರ್ಷ, ನಾನು ದಿನಾಂಕ ೦೭/೦೪/೨೦೦೪ರಂದು ತುಮಕೂರಿನ ಪ್ರಗತಿ ಹಾಸ್ಪಿಟಲ್ನಲ್ಲಿ ಜನಿಸಿರುತ್ತೇನೆ. ನನ್ನ ತಂದೆಯ ಹೆಸರು ಬಾಲಾಜಿ, ತಾಯಿಯ ಹೆಸರು ಶ್ರೀಲಕ್ಷ್ಮೀ. ನನ್ನ ತಮ್ಮನ ಹೆಸರು ಧೀಮಂತ್.

ವಿದ್ಯಾಭ್ಯಾಸ:

ಬದಲಾಯಿಸಿ

ನಾನು ಚಿಕ್ಕಂದಿನಲ್ಲಿ ನರ್ಸರಿಯಿಂದ ೫ನೆ ತರಗತಿವರೆಗೆ ತುಮಕೂರಿನಲ್ಲಿರುವ ಯುರೋಕೀಡ್ಸ್ ಶಾಲೆಯಲಿ ವಿದ್ಯಾಭ್ಯಾಸವನ್ನು ಮಾಡಿರುತ್ತೇನೆ. ನಂತರ ನಾನು ಶ್ರೀ ಚೈತನ್ಯ ಶಾಲೆಯಲ್ಲಿ ೫ನೆ ತರಗತಿಯಿಂದ ೧೦ನೆ ತರಗತಿವರೆಗೆ ವಿದ್ಯಾಭ್ಯಾಸ ಮಾಡಿರುತ್ತೇನೆ.

ನಾನು ೫ನೆ ತರಗತಿಯಲ್ಲಿರುವಾಗಲೇ ರಾಷ್ಟ್ರೀಯ ಮಟ್ಟದ ಅಬಾಕಸ್ ನಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ ಆಗಿ ವಿಜೇತನಾಗಿರುತ್ತೇನೆ. ನಂತರ ಶ್ರೀ ಚೈತನ್ಯ ಶಾಲೆಯಲ್ಲಿ ೬ನೆ ತರಗತಿಯಿಂದ ೧೦ನೆ ತರಗತಿವರೆಗೆ ವ್ಯಾಸಂಗವನ್ನು ಮಾಡಿ ಸಿ.ಬಿ.ಎಸ್ ಈ ಬೋರ್ಡ್ನಲ್ಲಿ ೮೨% ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣನಾಗಿರುತ್ತೇನೆ. ಮತ್ತು ನಾನು ೭ನೆ ತರಗತಿಯಲ್ಲಿ ನಾಸ / ನ್ಯಾಷನಲ್ ಸ್ಪೇಸ್ ಸೊಸೈಟಿಯವರು ನಡೆಸುವ ಶಾಲಾಮಟ್ಟದ ಸ್ಪೇಸ್ ಸ್ಟೇಷನ್ನಲ್ಲಿ ಭಾಗವಹಿಸಿರುತ್ತೇನೆ. ಆದರೆ ಆಗ ನಾನು ಆಯ್ಕೆಯಾಗಿರುವುದಿಲ್ಲ. ಆದರೆ ನಾನು ಅಷ್ಟಕ್ಕೇ ಸುಮ್ಮನಾಗಿರುವುದಿಲ್ಲ,. ನಂತರ ಮತ್ತೆ ೮ನೆ ತರಗತಿಯಲ್ಲಿ ಅದೇ ಕಾಂಪಿಟೇಷನ್ನಲ್ಲಿ ಭಾಗವಹಿಸಿ, ನನ್ನದೇ ಮುಂದಾಳತ್ವದಲ್ಲಿ ನಿರ್ವಹಿಸಿದ ಪ್ರಾಜೆಕ್ಟ್ ಆಯ್ಕೆ ಆಗಿದ್ದರಿಂದಾಗಿ ನನ್ನನ್ನು ಇಂಟರ್ನ್ಯಾಷನಲ್ ಸ್ಪೇಸ್ ಡೇವಲಪಮೆಂಟ್ ಕಾನ್ಪರೆನ್ಸ್ನಲ್ಲಿ ಭಾಗವಹಿಸಲು ಲಾಸ್ ಎಂಜಲೀಸ್ನಲಿರುವ ವಿಜ್ಞಾನಿಗಳನ್ನು ಭೇಟಿಯಾಗಲು ಅವರೊಂದಿಗೆ ಚರ್ಚಿಸಲು ನನ್ನನ್ನು ಕರೆಯಲಾಗುತ್ತದೆ. ಆದರೆ ನನಗೆ ವೀಸಾ ಬರಲು ತಡವಾದ್ದರಿಂದ ನಾನು ಆ ಕಾನ್ಪರೆನ್ಸ್ ನಲ್ಲಿ ಭಾಗವಹಿಸಲು ಸಾಧ್ಯವಾಗಿರುವುದಿಲ್ಲ. ನಾನು ಅಲ್ಲಿಗೆ ಹೋಗಿದ್ದರೆ ಸ್ಪೇಸ್ ಶಟಲ್ ಮತ್ತು ರಿಸರ್ಚ್ ಮತ್ತು ಡೆವಲಪಮೆಂಟ್ ಸೆಂಟರನ್ನು ನೋಡಲು ಹಾಗು ನನ್ನಂತೆಯೇ ಬೇರೆ ದೇಶಗಳಿಂದ ಬಂದಿರುವ ವಿದ್ಯಾರ್ಥಿಗಳನ್ನು ನೋಡಲು ನನಗೆ ಅವಕಾಶ ಸಿಗುತ್ತಿತ್ತು. ಆದರೆ ನನಗೆ ವೀಸಾ ದೊರೆಯದ ಕಾರಣ ನಾನು ಹೋಗಲಾಗಲಿಲ್ಲ.

ನಾನು ೯ನೆ ತರಗತಿಯಲ್ಲಿ ಮಲೇಷಿಯಾ ಮತ್ತು ಸಿಂಗಾಪುರ್ಗೆ ಎಜುಕೇಷನಲ್ ಪ್ರವಾಸಕ್ಕೆ ಹೋಗಿರುತ್ತೇನೆ. ಆಗ ನಾನು ಮಲೇಷಿಯಾದಲ್ಲಿ ಟ್ವಿನ್ ಟವರ್, ಬಾಟುಕೇವ್, ಪೆನ್ನಾಂಗಿಲ್ಸ್ ಹಾಗು ಸಿಂಗಾಪುರಿನಲ್ಲಿ ಮರೀನಾ ಬೆಸ್ಟ್ಯಾಂಡ್ಸ್, ಯುನಿವರ್ಸಲ್ ಸ್ಟುಡಿಯೋ ಸ್ಥಳಗಳನ್ನು ವೀಕ್ಷಿಸಿರುತ್ತೇನೆ.

ಪದವಿಪೂರ್ವ ಶಿಕ್ಷಣ ಮತ್ತು ಪ್ರಶಂಸೆ:

ಬದಲಾಯಿಸಿ
ಪಿ,ಯು.ಸಿ ಮತ್ತು ದ್ವಿತೀಯ ಪಿ.ಯು.ಸಿಯನ್ನು ತುಮಕೂರಿನಲ್ಲಿರುವ ವಿದ್ಯಾನಿಧಿ ಕಾಲೇಜಿನಲ್ಲಿ ಸ್ಟೇಟ್ ಬೋರ್ಡ್ನಲ್ಲಿ ವ್ಯಾಸಂಗ ಮಾಡಿ ಶೇಕಡಾ ೯೭ ಅಂಕಗಳನ್ನು ಪಡೆದು ಉತ್ತೀರ್ಣನಾಗಿರುತ್ತೇನೆ. ನಾನು ದ್ವಿತೀಯ ಪಿ.ಯು.ಸಿಯಲಿ ಸ್ಟ್ಯಾಟಿಸ್ಟಿಕ್ಸ್, ಎಕನಾಮಿಕ್ಸ್, ಬಿಸಿನೆಸ್ ಸ್ಟಡಿಸ್, ಅಕೌಂಟ್ಸ್, ಈ ವಿಷಯಗಲ್ಲಿ ೧೦೦ ಕ್ಕೆ ೧೦೦ ಅಂಕಗನ್ನು ಪಡೆದು ಉತ್ತೀರ್ಣನಾಗಿದ್ದರಿಂದ ನನ್ನನ್ನು ಕರ್ನಾಟಕ ಆರ್ಯ ವೈಶ್ಯ ಮಹಾಸಾಬಾ, ತುಮಕೂರು ಡಿಸ್ಟ್ರಿಕ್ಟ್, ಎಕನಾಮಿಕ್ಸ್ ಡಿಪಾರ್ಟ್ಮೆಂಟ್, ವೈಶ್ಯ ಕೋ ಆಪರೇಟಿವ್ ಬ್ಯಾಂಕ್ ಇವುಗಲ್ಲಿ ನನ್ನನ್ನು ಕರೆದು ಪ್ರತಿಭಾ ಪುರಸ್ಕಾರವನ್ನು ಮಾಡಿ ಸನ್ಮಾನವನ್ನು ಮಾಡಿರುತ್ತಾರೆ. 

ನನ್ನ ಹೆತ್ತವರು ನನ್ನ ಉನ್ನತಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಹಗಲಿರುಳು ನನ್ನ ವಿದ್ಯಾಭ್ಯಾಸಕ್ಕಾಗಿ ಕಷ್ಟಪಟ್ಟು ದುಡಿದು ನನಗೆ ಅವಶ್ಯಕವಿದ್ದಾಗಲೆಲ್ಲಾ ಹಣದ ಸಹಾಯವನ್ನು ಮಾಡುತ್ತಾ ನನಗೆ ಪ್ರೋತ್ಸಾಹ ನೀಡಿದರು.

ನನಗೆ ನನ್ನ ಕುಟುಂಬವೇ ಆಧಾರವಾಗಿರುತ್ತದೆ. ನಾನು ನನ್ನ ಕುಟುಂಭಕ್ಕೆ ಅಭಾರಿಯಾಗಿರುತ್ತೇನೆ. ಪ್ರಮುಖವಾಗಿ ನನ್ನ ತಂದೆ ತಾಯಿಯವರಿಗೆ ಹಾಗು ನನ್ನ ಸೋದರನಿಗೆ. ಏಕೆಂದರೆ ಈ ದಿನ ನಾನು ನನ್ನ ಜೀವನದಲ್ಲಿ ಏನೇ ಸಾಧಿಸಿದರು ಅದಕ್ಕೆ ಕಾರಣ ನನ್ನ ಕುಟುಂಬ ನನ್ನ ಬಗ್ಗೆ ತೋರಿದ ಕಾಳಜಿ ಮತ್ತು ಪ್ರೀತಿ.

ನಾನು ನನ್ನ ಸ್ನೇಹಿತರಿಂದ ಮಾತ್ರವಲ್ಲದೆ ದಿನನಿತ್ಯ ಸಿಗುವ ಅಪರಿಚಿತ ವ್ಯಕ್ತಿಗಳಿಂದಲೂ ಸಾಕಷ್ಟು ಕಲಿಯುತ್ತಿದ್ದೇನೆ. ನನಗೆ ನನ್ನ ಹೆತ್ತವರು ಸದಾ ಸತ್ಯವನ್ನೇ ನುಡಿಯಬೇಕೆಂದು, ಯಾರಿಗೂ ಯಾವುದೇ ರೀತಿಯಿಂದ ಮನಸ್ಸಿಗೆ ನೋವು ಮಾಡಬಾರದೆಂದು ಹಾಗು ಅವಮಾನಗಳನ್ನು ಮಾಡುವಂಥ ಮಾತುಗಳನ್ನಾಗಲಿ, ಕೆಲಸವನ್ನಾಗಲಿ ಮಾಡಬಾರದೆಂದು ತಿಳಿಸುತ್ತಾ ಬಂದಿರುತ್ತಾರೆ. ಸದಾ ಕಾಲ ಸತ್ಯವನ್ನೇ ನುಡಿ, ಅದರಿಂದ ನಿನಗೆ ತೊಂದರೆಯಾದರೂ ಸಹ ನೀನು ಅಸತ್ಯವನ್ನು ನುಡಿಯಬೇಡ. ಬೇರೆಯವರಿಗೆ ತೊಂದರೆಯನ್ನು ಕೊಡಬೇಡ ಎಂದು ನನಗೆ ತಿಳಿಸುತ್ತಾ ಬಂದಿರುತ್ತಾರೆ. ನಾನು ಸುಳ್ಳನ್ನು ಹೇಳಲು ಇಷ್ಟಪಡುವುದಿಲ್ಲ. ಏಕೆಂದರೆ, ಸುಳ್ಳನ್ನು ಹೇಳುವ ಮನುಷ್ಯ ಹಲವಾರು ತೊಂದರೆ, ತಾಪತ್ರೆಯಗಳಿಗೆ ಸಿಲುಕುತ್ತಾನೆ. ಅವನು ಸುಳ್ಳು ಹೇಳುತ್ತಾನೆ ಎಂದು ತಿಳಿದರೆ ಜನರು ಅವನಿಗೆ ಯಾವುದೇ ರೀತಿಯ ಗೌರವವನ್ನಾಗಲಿ ಬೆಳೆಯನ್ನಾಗಲಿ ಕೊಡುವುದಿಲ್ಲ.

ನಾನು ಸದಾ ಕಾಲ "ರಾಜ ಮಾರ್ಗ"ದಲ್ಲೇ ನಡೆಯಲು ಇಚ್ಚಿಸುತ್ತೇನೆ.

ನಾನೀಗ ಪ್ರಥಮ ವರ್ಷದ ಬಿ.ಕಾಮ್, ಸ್ಟ್ರಾಟಿಜಿಕ್ ಫಿನಾನ್ಸ್ ಹಾನರ್ಸ್ ಪದವಿಯನ್ನು ಕ್ರೈಸ್ಟ್ ಡೀಮ್ಡ್ ಟು ಬಿ ಯುನಿವರ್ಸಿಟಿಯಲ್ಲಿ ಮಾಡುತ್ತಿದ್ದೇನೆ.

ನಮ್ಮ ಕಾಲೇಜಿನಿಂದ ಬೇರೆ ಶಾಲೆಗಳಿಗೆ ಕರೆದುಕೊಂಡು ಹೋಗಿ ನಮ್ಮ ಪರಿಚಯವನ್ನು ಅವರಿಗೆ ಮಾಡಿಸಿ ಅವರಿಗೆ ನಮ್ಮಿಂದ ಯಾವುದಾದರು ಉಪಯೋಗ ಆಗುವುದನ್ನು ಪರಿಚಯಮಾಡಿಸುತ್ತಾರೆ. ಹಾಗೆಯೇ ಅವರಿಂದಲೂ ಸಹ ನನಗೆ ಸಾಕಷ್ಟು ತಿಳಿಯಲು ಅನುಕೂಲವಾಗುತ್ತದೆ.

ನನ್ನ ತಂದೆ ತಾಯಿಯವರು ರೈಸ್ ಇಂಡಸ್ಟ್ರಿಯಲಿಸ್ಟ್ ಆಗಿ ಯಾರ ಸಹಾಯವು ಇಲ್ಲದೆ ಬರಿಗೈಯಲ್ಲಿ ವೃತ್ತಿಯನ್ನು ಪ್ರಾಂಭಿಸಿರುತ್ತಾರೆ. ಅವರ ಕಠಿಣ ಪರಿಶ್ರಮದಿಂದ ನಮಗೆ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸಿದ್ದು, ನಾವು ಸಮಾಜದಲ್ಲಿ ಗುರುತಿಸಿಕೊಳ್ಳಲು ನೆರವಾಗಿರುತ್ತಾರೆ.

ನನ್ನ ತಾತನವರು ಅಂದರೆ ತಂದೆಯ ತಂದೆ ತಿಪಟೂರಿನ ಬಳಿ ಇರುವ ಕಡಬ ಗ್ರಾಮದಲ್ಲಿ ರೈತರಾಗಿರುತ್ತಾರೆ. ಹಾಗು ಅವರು ಒಂದು ಸಣ್ಣ ದಿನಸಿ ಅಂಗಡಿಯನ್ನು ಸಹ ನಡೆಸಿಕೊಂಡು ಬಂದಿರುತ್ತಾರೆ. ಅವರಿಗೆ ರೈಸ್ನ ಇಂಡಸ್ಟ್ರಿಯನ್ನು ನಡೆಸುವ ಅಸೆ ಇದ್ದು, ಅದನ್ನು ನನ್ನ ತಂದೆ, ನನ್ನ ಚಿಕ್ಕಪ್ಪ ಹಾಗು ನನ್ನ ತಾತನವರು ಸೇರಿ ಪ್ರಾಂಭಿಸಿರುತ್ತಾರೆ. ಹಾಗು ಅದರಲ್ಲಿ ಯಶಸ್ವಿಯಾಗಿರುತ್ತಾರೆ. ಹಾಗು ಹೆಚ್ಚಿನ ಅಭಿವೃದ್ಧಿಗಾಗಿ ನನ್ನ ಕುಟುಂಬದವರು ತುಮಕೂರಿಗೆ ಬಂದು ನೆಲಸಿರುತ್ತಾರೆ.

ನನಗೆ ಚಲನಚಿತ್ರಗಳನ್ನು ನೋಡುವುದು, ಕಬಡ್ಡಿ ಆಡುವುದು, ಬ್ಯಾಡ್ಮಿಟನ್ ಆಡುವುದು, ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವುದು ನನ್ನ ಅಭ್ಯಾಸವಾಗಿರುತ್ತದೆ. ನನಗೆ ಗನ್ ಶೂಟಿಂಗ್ ಕಲಿಯಬೇಕೆಂಬ ಅಸೆ ಇದೆ.

ನನ್ನ ತಂದೆಯವರು ತುಮಕೂರಿನಲ್ಲಿಯೇ ಇದ್ದು ನಾನು ಮಾತ್ರ ಬೆಂಗಳೂರಿಗೆ ಬಂದು ಪಿ.ಜಿಯಲಿ ಉಳಿದುಕೊಂಡು ನನ್ನ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದೇನೆ. ನನ್ನ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಮುಂದೆ ನಾನು ನನ್ನ ಹೆತ್ತವರು ನಡೆಸುತ್ತಿರುವ ರೈಸ್ ಇಂಡಸ್ಟ್ರಿರ್ಯನ್ನು ನಡೆಸುತ್ತಾ ಅದರಲ್ಲಿ ರಾಷ್ಟೀಯ ಮತ್ತು ಅಂತರ ರಾಷ್ಟೀಯ ಮಟ್ಟದಲ್ಲಿ ಅಭಿವೃದ್ಧಿಯನ್ನು ಸಾಧಿಸಬೇಕೆಂಬ ಆಸೆಯನ್ನು ಹೊಂದಿದ್ದೇನೆ. ನನ್ನ ಈ ಆವಿಷ್ಕಾರದಿಂದ ನನ್ನ ದೇಶದಲ್ಲಿರುವ ನಿರುದ್ಯೋಗಿಗಳೆಲ್ಲರಿಗೂ ಉದ್ಯೋಗ ದೊರಕಿ ಅವರ ಜೀವನಕ್ಕೆ ಒಂದು ಆಧಾರವನ್ನು ಕಲ್ಪಿಸಿಕೊಡಬೇಕೆಂದು ನನ್ನ ಜೀವನದ ಬಹು ದೊಡ್ಡ ಆಶಯವಾಗಿರುತ್ತದೆ.

ದೈಹಿಕ ದೃಢತೆಯ ಬಗ್ಗೆ:

ಬದಲಾಯಿಸಿ

ನಾನು ಸಸ್ಯಾಹಾರಿಯಾಗಿದ್ದು, ಪ್ರತಿ ನಿತ್ಯ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುತ್ತೇನೆ. ಮುಂಜಾನೆ ಎದ್ದು ನಡಿಗೆಯೊಂದಿಗೆ ನನ್ನ ದಿನವನ್ನು ಪ್ರಾರಂಭಿಸತ್ತೇನೆ. ನಿತ್ಯ ನಾನು ಸುಮಾರು ೨ ಕಿಲೋ ಮೀಟರ್ ನಡೆಯುತ್ತೇನೆ. ಹಾಲನ್ನು ಸೇವಿಸಿದ ನಂತರ ಗಿಟಾರ್ ತರಗತಿಗೆ ಹೋಗುತ್ತೇನೆ. ನಂತರ ಕಾಲೇಜಿಗೆ ಹೋಗುತ್ತೇನೆ. ಕಾಲೇಜಿನಲ್ಲಿ ನಡೆಯುವ ಪ್ರತಿಯೊಂದು ಆಟೋಟಗಳಲ್ಲಿ ನಾನು ತಪ್ಪದೆ ಭಾಗವಹಿಸುತ್ತೇನೆ. ಪ್ರತಿನಿತ್ಯವೂ ಕಾಲೇಜಿನಲ್ಲಿ ನಡೆಯುವ ಅಂದಿನ ಪಾಠವನ್ನು ಅಂದೆ ಓದಿ ಮುಗಿಸುತ್ತೇನೆ. ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುತ್ತೇನೆ.

ಸಮಯಕ್ಕೆ ಸರಿಯಾಗಿ ಊಟ ಮತ್ತು ನಿದ್ರೆಯನ್ನು ಮಾಡುತ್ತೇನೆ.ಇದು ನಾನು ಸದಾ ಲವಲವಿಕೆಯಿಂದ ಇರಲು ಕಾರಣವಾಗುತ್ತದೆ. ಏಕೆಂದರೆ ಒಳ್ಳೆಯ ಊಟ, ಒಳ್ಳೆಯ ಯೋಚನೆ ಮತ್ತು  ವಿಶ್ರಾಂತಿ ಮನುಷ್ಯನ ಉನ್ನತಿಗೆ ಕಾರಣವಾಗುತ್ತದೆ. 

ಹವ್ಯಾಸ:

ಬದಲಾಯಿಸಿ

ನಾನು ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆಯನ್ನು ಮಾಡುತ್ತೇನೆ. ಆದರೆ ಈ ಮೊದಲು ನಾನು ಇದರ ಬಗ್ಗೆ ಹೆಚ್ಚಲಾಗಿ ತಿಳಿದಿರಲಿಲ್ಲ. ಈಗ ಸ್ಟಾಕ್ ಮಾರ್ಕೆಟ್ ನ ಬಗ್ಗೆ ಸುಮಾರು ಮೂರೂ ತಿಂಗಳ ಕೋರ್ಸನ್ನು ಮಾಡಿರುತ್ತೇನೆ. ಈಗ ಸ್ವಲ್ಪ ಮಟ್ಟಿಗೆ ನನಗೆ ಸ್ಟಾಕ್ ಮಾರ್ಕೆಟ್ ಬಗ್ಗೆ ತಿಳಿದಿದ್ದು, ಅದರಲ್ಲಿ ಹೂಡಿಕೆಯನ್ನು ಮಾಡುವ ಮೊದಲು ಯೋಚನೆಯನ್ನು ಮಾಡುತ್ತೇನೆ. ಈ ಮೊದಲು ಸ್ಟಾಕ್ ಮಾರ್ಕೆಟ್ ಬಗ್ಗೆ ತಿಳಿಯದೆ ಹೂಡಿಕೆ ಮಾಡುವಾಗ ಕೆಲವೊಮ್ಮೆ ನಾನು ಹಣವನ್ನು ಕಳೆದುಕೊಳ್ಳುತ್ತಿದ್ದೆ. ಆಗ ನಾನು ಹೀಗೇಕೆ ಆಗುತ್ತಿದೆ ಎಂದು ಸಾಕಷ್ಟು ಯೋಚನೆಯನ್ನು ಮಾಡಿದಾಗ ನನಗ ಇದರ ಬಗ್ಗೆ ಏನು ಸೈರಿಯಾಗಿ ತಿಳಿದಿಲ್ಲ ಎನ್ನುವುದು ಮನವರಿಕೆ ಆಯಿತು. ನಂತರ ನಾನು ಇದರ ಬಗ್ಗೆ ಹೆಚ್ಚು ಕಲಿಯಲು, ತಿಳಿಯಲು ಪ್ರಾಂಭಿಸಿದೆ. ಆಗ ನನಗೆ ನನ್ನ ತಪ್ಪಿನ ಅರಿವಾಯಿತು. ಹೀಗೆ ನಾವು ಪ್ರತಿ ಬಾರಿಯೂ ಸೋತಾಗ ಅದಕ್ಕೆ ಕಾರಣವನ್ನು ಸಮಾಧಾನದಿಂದ ಯೋಚಿಸಿದಾಗ ತಿಳಿಯುತ್ತದೆ. ಮತ್ತು ನಮಗೆ ನಮ್ಮ ಮುಂದಿನ ದಾರಿ ಸುಗಮವಾಗುತ್ತದೆ.

ನನಗೆ ಸ್ಟಾಕ್ ಮಾರ್ಕೆಟ್ ನಿಂದ ಬರುವ ಲಾಭದಲ್ಲಿ ಸ್ವಲ್ಪ ಭಾಗವನ್ನು ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡುತ್ತೇನೆ. ಹಾಗು ಇದರಿಂದಾಗಿಯೂ ನಾನು ಸ್ವಲ್ಪ ಲಾಭವನ್ನು ಕಂಡಿರುತ್ತೇನೆ. ಈ ರೀತಿ ಬರುವ ಹಣವನ್ನು ನಾನು ವಿದ್ಯಾಭ್ಯಾಸಕ್ಕೆ ಉಪಯೋಗಿಸುತ್ತೇನೆ.

ನಾನು ಒಂದುವೇಳೆ ಸ್ಟಾಕ್ ಮಾರ್ಕೆಟ್ನಲ್ಲಿ ನಷ್ಟವನ್ನು ಕಂಡರು ಡಿಜಿಟಲ್ ಗೋಲ್ಡ್ ನಿಂದ ಲಾಭವನ್ನು ಕಾಣುತ್ತೇನೆ. ಅಲ್ಲದೆ ನಾನು ನನಗೆ ಬಿಡುವಿದ್ದಾಗ ಬೇರೆಯವರಿಗೆ ಕಾರ್ಡ್ ಬೋರ್ಡ್ನಿಂದ ಅವರಿಗೆ ಬೇಕಾಗುವ ವಸ್ತುಗಳನ್ನು ಮಾಡಿಸಿಕೊಡುತ್ತೇನೆ. ಇದರಿಂದಾಗಿಯೂ ಸಹ ನನಗೆ ಲಾಭವಾಗುತ್ತದೆ.

ನಾನು ಈಗ ಯಾವುದೇ ಉದ್ಯೋಗವನ್ನು ಮಾಡಿದರು ನನ್ನ ವಿದ್ಯಬ್ಯಾಸವೆ ನನಗೆ ಮೊದಲ ಆದ್ಯತೆ. ನನ್ನ ಮುಂದಿನ ವಿದ್ಯಾಭ್ಯಾಸವನ್ನು ನಾನು ಎಂದಿಗೂ ಕಡೆಗಣಿಸುವುದಿಲ್ಲ. ನಾನೊಬ್ಬ ವಿದ್ಯಾವಂತನಾಗಿ ಬೆಳೆಯಬೇಕೆಂಬುದು ನನ್ನ ಹಾಗು ನನ್ನ ಕುಟುಂಬದವರ ಆಶಯವಾಗಿರುತ್ತದೆ.

ನಾನು ವಿದ್ಯೆಯಲ್ಲಿ ಉನ್ನತ ಮಟ್ಟವನ್ನು ಸಾಧಿಸಿ ನಾಲ್ಕು ಜನರಿಗೆ ಉಪಯೋಗವಾಗುವಂತೆ ಆದರ್ಶವಾಗಿ ಬಾಳಬೇಕೆಂಬುದು ನನ್ನ ಆಸೆಯಾಗಿರುತ್ತದೆ.

ನಾನು ನನ್ನ ಸ್ವಂತ ದುಡಿಮೆಯಿಂದ ಬೈಕ್, ಕಾರ್, ಹಾಗು ಮನೆಯನ್ನು ತೆಗೆದುಕೊಳ್ಳಬೇಕೆಂದು ಬಯಸಿರುತ್ತೇನೆ. ಮುಂದೆ ನನ್ನ ಹೆತ್ತವರು ನನ್ನ ತಮ್ಮ ಹಾಗು ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಹಂಬಲ ವಿರುತ್ತದೆ.

ನಾನು ಪಾಟೈಮ್ ಉದ್ಯೋಗವನ್ನು ಅಂದರೆ ಅಕೌಂಟ್ಸ್ ವಿಭಾಗದಲ್ಲಿ ಎಲ್ಲಾ ರೀತಿಯ ಬಿಲ್ ಗಳನ್ನೂ ತೆಗೆದುಕೊಡುತ್ತೇನೆ.

ಸೃಷ್ಟಿಕರ್ತನಾದ ದೇವರು ಪ್ರತಿಯೊಬ್ಬರನ್ನು ಪ್ರೀತಿಸುತ್ತಾನೆ. ಪ್ರತಿಯೊಬ್ಬರಿಗೂ ಬದುಕುವ ಬದುಕಲು ಬಿಡುವ ಅವಕಾಶವನ್ನು ಕೊಟ್ಟಿರುತ್ತಾನೆ. ಅದನ್ನು ನಾವು ಅರ್ಥ ಮಾಡಿಕೊಂಡು ನಡೆಯಬೇಕಷ್ಟೆ.

ನಾನು ಪ್ರತಿಯೊಬ್ಬರನ್ನು ಪ್ರೀತಿಸುತ್ತೇನೆ. ಕ್ರೂರ ಮೃಗಗಳನ್ನು ಸಹ, ಏಕೆಂದರೆ, ಅವುಗಳು ಸಹ ದೇವರ ಸೃಷ್ಟಿಯೇ ಆಗಿರುತ್ತದೆ. ನಾನೊಬ್ಬ ಮನುಶ್ಯನಾಗಿ ಸಾಕಷ್ಟು ಜೀವನ ಪಾಠಗಳನ್ನು ಈಗಾಗಲೇ ಕಲಿತಿದ್ದೇನೆ. ಹಾಗು ಪ್ರತಿ ನಿತ್ಯವೂ ಕಲಿಯುತ್ತಿದ್ದೇನೆ. ಜೀವನ ಎಂಬುದು ಮುಳ್ಳು ಹಾಗು ಹೂವುಗಳಿಂದ ಕೂಡಿರುವ ಹಾಸಿಗೆಯಾಗಿದೆ. ನಾವು ಜೀವನವನ್ನು ಹೇಗೆ ಅರ್ಥ ಮಾಡಿಕೊಂಡು ನಡೆಯುತ್ತೇವೆಯೋ ಹಾಗೆಯೆ ನಮ್ಮ ಬದುಕು ವಿಸ್ತಾರವಾಗುತ್ತಾ ಹೋಗುತ್ತದೆ,

ನಾನು ಸಮಯಕ್ಕೆ ತುಂಬಾ ಮಹತ್ವವನ್ನು ಕೊಡುತ್ತೇನೆ. ಸಮಯದ ಪ್ರಾಮುಖ್ಯತೆಯನ್ನು ಅರಿತುಕೊಂಡು ನಡೆದರೆ ಹಾಗು ಜೀವನದಲ್ಲಿ ಸತ್ಯ ಮತ್ತು ಪ್ರಾಮಾಣಿಕವಾಗಿ ನಡೆದರೆ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಬರುವುದಿಲ್ಲ. ಹಾಗು ಬರುವ ತಿರುವುಗಳನ್ನು ಧೈರ್ಯವಾಗಿ ಎದುರಿಸಿ ಜಯಶಾಲಿಗಳಾಗಬಹುದು. ನಾನು ಕಲಿತಿರುವ ವಿಷಯವೇನೆಂದರೆ ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ಗುರಿ ಇರಬೇಕು. ಆ ಗುರಿಯೆಡೆಗಿನ ಪ್ರೀತಿ, ಅದನ್ನು ಮುಟ್ಟುವ ಅಸೆ, ಛಲ, ಧೈರ್ಯ ಇದ್ದಲ್ಲಿ ಜೀವನದಲ್ಲಿ ಗೆಲುವನ್ನು ಸಾಧಿಸಬಹುದೆಂದು ನಾನು ಈ ಮೂಲಕ ತಿಳಿಸುತ್ತಿದ್ದೇನೆ.

ಜೀವನವೆಂಬ ಮೈದಾನವು ನಮ್ಮದೇ, ಅದರಲ್ಲಿ ಓಡುವ ಕುದುರೆಯು ನಮ್ಮದೆ ಅಂದರೆ ನಮ್ಮ ಜೀವನ ನಮ್ಮ ಕೈಯಲಿ ಅಲ್ಲವೇ. ಸ್ವಲ್ಪ ವಿವೇಕ, ತಾಳ್ಮೆ, ಮುನ್ನೆಚ್ಚರಿಕೆ ಇದ್ದರೆ ಗೆಲುವು ನಮ್ಮದೆ. ಸೃಷಿಕರ್ತನು ನಮಗೆ ಕೊಟ್ಟಿರುವ ಬದುಕಿಗೆ ಅನ್ಯಾಯವಾಗದಂತೆ ಬದುಕುವುದು ಮನುಷ್ಯರಾದ ನಮ್ಮ ಕರ್ತವ್ಯ.

ಧನ್ಯವಾದಗಳೊಂದಿಗೆ ನಾನು ನನ್ನ ಕಿರುಪರಿಚಯನ್ನು ಮುಗಿಸುತ್ತಿದ್ದೇನೆ.

ವಂದನೆಗಳೊಂದಿಗೆ,

ಕೆ.ಬಿ ಋತ್ವಿಕ್.