ಸದಸ್ಯ:K.R Roshith/ನನ್ನ ಪ್ರಯೋಗಪುಟ/2
ಪಾಲಿಮರ್ಗಳ ವರ್ಗೀಕರಣ
ಬದಲಾಯಿಸಿಮೂಲ ಆಧಾರಿತ ವರ್ಗೀಕರಣ.
ಬದಲಾಯಿಸಿ೧. ನೈಸರ್ಗಿಕ ಪಾಲಿಮರ್ಗಳು.
ಇವು ಸಸ್ಯ ಮತ್ತು ಪ್ರಾಣಿಗಳಲ್ಲಿ ಕಂಡುಬರುವ ಪಾಲಿಮರ್ಗಳಾಗಿವೆ.
ಉದಾ: ಪ್ರೊಟೀನ್, ಸೆಲ್ಲೂಲೋಸ್, ರೆಸಿನ್ನ್, ಮತ್ತು ರಬ್ಬರ್.
೨. ಅರ್ಧ ಸಂಶ್ಲೇಷಿತ ಪಾಲಿಮರ್ಗಳು.
ಇವು ನೈಸರ್ಗಿಕ ಪಾಲಿಮರ್ಗಳಿಂದ ಉತ್ಪದಿಸುವ ಪಾಲಿಮರ್ಗಳಾಗಿವೆ.
ಉದಾ: ಸೆಲ್ಲೂಲೋಸ್ ಅಸಿಟೇಟ್, ಸೆಲ್ಲೂಲೋಸ್ ನೈಟ್ರೇಟ್.
೩. ಸಂಶ್ಲೇಷಿತ ಪಾಲಿಮರ್ಗಳು.
ಇವು ಮನುಷ್ಯ ಆವಿಷ್ಕಾರಿಸಿದ ಪಾಲಿಮರ್ಗಳಾಗಿವೆ.
ಉದಾ: ಪಾಲಿಥೀನ್, ನೈಲಾನ್, ಸಂಶ್ಲೇಷಿತ ರಬ್ಬರ್.
ರಚನೆ ಆಧಾರಿತ ವರ್ಗೀಕರಣ.
ಬದಲಾಯಿಸಿ೧. ರೇಖೀಯ ಪಾಲಿಮರ್ಗಳು.
ಇವು ನೇರ ಹಾಗು ಉದ್ದವಾದ ಸರಣಿಗಳನ್ನು ಒಳಗೊಂಡಿರುವ ಪಾಲಿಮರ್ಗಳಾಗಿವೆ. [೧] [೨]
ಉದಾ: ಪಾಲಿವಿನೈಲ್ ಕ್ಲೋರೈಡ್, ಹೆಚ್ಚಿನ ಸಾಂದ್ರತೆಯುಳ್ಳ ಪಾಲಿಥೀನ್.
೨. ರೆಂಬೆಯಾಕಾರದ ಪಾಲಿಮರ್ಗಗಳು.
ಇವು ನೇರ ಹಾಗು ಉದ್ದವಾದ ಸರಣಿಗಳಿಗೆ ರೆಂಬೆಗಳನ್ನು ಒಳಗೊಂಡಿರುವ ಪಾಲಿಮರ್ಗಳಾಗಿವೆ.
ಉದಾ: ಕಡಿಮೆ ಸಾಂದ್ರತೆಯುಳ್ಳ ಪಾಲಿಥೀನ್.
೩. ಎಣಿಬಲೆಯಾಕಾರದ ಪಾಲಿಮರ್ಗಳು.
ಇವು ದ್ವಿ-ಕ್ರಿಯಾತ್ಮಕ ಅಥವಾ ತ್ರಿ-ಕ್ರಿಯಾತ್ಮಕ ಮೊನೊಮರ್ಗಳು ಬಲವಾದ ಕೋವೆಲೆಂಟ್ ಬಂಧನದಿಂದ ರೂಪುಗೊಂಡ ಪಾಲಿಮರ್ಗಳಾಗಿವೆ.
ಉದಾ: ಬೇಕೆಲೈಟ್, ಮೆಲಮೈನ್.
ಪಾಲಿಮರೀಕರಣ ಕ್ರಮಗಳ ಆಧಾರಿತ ವರ್ಗೀಕರಣ.
ಬದಲಾಯಿಸಿ೧. ಸಂಕಲನ ಪಾಲಿಮರ್ಗಳು.
ಇವು ಮೊನೊಮರ್ಗಳ ಪುನರಾವರ್ತಿತ ಸಂಕಲನ ಕ್ರಿಯೆಯಿಂದ ರೂಪುಗೊಂಡ ಪಾಲಿಮರ್ಗಳಾಗಿವೆ.
ಉದಾ: ಎಥೆನ್ನಿಂದ ರೂಪುಗೊಂಡ ಪಾಲಿಥೀನ್. ಪ್ರೋಪೀನಿಂದ ರೂಪುಗೊಂಡ ಪಾಲಿಪ್ರೋಪೀನ್.
೨. ಸಾಂದ್ರೀಕೃತ ಪಾಲಿಮರ್ಗಳು.
ಇವು ದ್ವಿ-ಕ್ರಿಯಾತ್ಮಕ ಅಥವಾ ತ್ರಿ-ಕ್ರಿಯಾತ್ಮಕ ಮೊನೊಮರ್ಗಳ ನಡುವೆ ಪುನರಾವರ್ತಿತ ಸಾಂದ್ರೀಕರಣ ಕ್ರಿಯೆಯಿಂದ ರೂಪುಗೊಂಡ ಪಾಲಿಮರ್ಗಳಾಗಿವೆ.
ಉದಾ: ನೈಲಾನ್ ೬,೬.
ಅಣ್ವಿಕ ಶಕ್ತಿಯ ಆಧಾರಿತ ವರ್ಗೀಕರಣ.
ಬದಲಾಯಿಸಿ೧. ಎಲಾಸ್ಟೊಮರ್.
ಎಲಾಸ್ಟಿಕ್ ಗುಣ ಹೊಂದಿರುವ ಪಾಲಿಮರ್ಗಳು.
ಉದಾ: ರಬ್ಬರ್
೨. ಫ಼ೈಬರ್.
ಹೆಚ್ಚಿನ ಕರ್ಷಕ ಶಕ್ತಿಯನ್ನು ಹೊಂದಿರುವ ಪಾಲಿಮರ್ಗಳು.
ಉದಾ: ನೈಲಾನ್ ೬,೬.
೩. ಥರ್ಮೋಪ್ಲಾಸ್ಟಿಕ್ ಪಾಲಿಮರ್.
ಶಾಕನೀಡಿದಾಗ ಮೃದುವಾಗುವ ಹಾಗು ತಣಿಸಿದಾಗ ಗಟ್ಟಿಯಾಗುವ , ಸ್ಥಿತಿಸ್ಥಾಪಕ ಗುಣ ಹೊಂದಿರುವ ಪಾಲಿಮರ್ಗಳು.
ಉದಾ: ಪಾಲಿಥೀನ್.
೪. ಥರ್ಮೋಸೆಟ್ಟಿಂಗ್ ಪಾಲಿಮರ್.
ಶಾಕನೀಡಿದಾಗ ಮೃದುವಾಗಿ ಸ್ಥಿತಿಗೆಡುವ ಗುಣ ಹೊಂದಿರುವ ಪಾಲಿಮರ್ಗಳು.
ಉದಾ: ಬೇಕಲೈಟ್.