ಸಂಶ್ಲೇಷಿತ ವಸ್ತು
ಕೃತಕ ವಸ್ತುಗಳನ್ನು ಸಂಶ್ಲೇಷಿತ ವಸ್ತುಗಳು ಎಂದೂ ಕರೆಯುತ್ತೇವೆ. ಜನಸಂಖ್ಯೆ ಸ್ಪೋಟದಿಂದ ಮತ್ತು ಸ್ವಾಭಾವಿಕ ವಸ್ತುಗಳು ಮಿತವಾಗಿ ದೊರೆಯುವುದರಿಂದ ಸ್ವಾಭಾವಿಕ ವಸ್ತುಗಳಿಗೆ ಪರ್ಯಯ ವಸ್ತುಗಳು ಅವುಗಳು ನಮ್ಮ ನಿತ್ಯ ಜೀವನದಲ್ಲಿ ಒಂದು ಭಾಗವಾಗಿದ್ದು ಜೊತೆಗೆ ಅನುಕೂಲಕರವಾಗಿದೆ.
ಸಂಶ್ಲೇಷಿತ ವಸ್ತುಗಳ ವಿಧಗಳು
ಬದಲಾಯಿಸಿಹಿಂದೆ ನಾವು ನೀರನ್ನು ಕೊಂಡಯ್ಯಲು ಗಾಜಿನ ಸೀಸೆಗಳನ್ನು ಮತ್ತು ಲೋಹದ ಪಾತ್ರೆಗಳನ್ನು ಬಳಸುತ್ತಿದ್ದೆವು.
ಪ್ಲಾಸ್ಟಿಕ್ ವಸ್ತುಗಳು
ಬದಲಾಯಿಸಿ- ಪ್ಲಾಸ್ಟಿಕ್ ವಸ್ತುಗಳಲ್ಲಿ ಎರಡು ವಿಧಗಳು.
- ಥರ್ಮೋಪ್ಲಾಸ್ಟಿಕ್
- ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್
- ಥರ್ಮೋಪ್ಲಾಸ್ಟಿಕ್ ಪ್ಲಾಸ್ಟಿಕ್:
೧)ಇದನ್ನು ಸುಲಭವಾಗಿ ಕರಗಿಸಬಹುದು. ೨)ಯಾವ ಆಕಾರಕ್ಕೆ ಬೇಕಾದರೂ ಎಷ್ಟು ಬಾರಿಯಾದರೂ ಅಚ್ಚು ಹಾಕಬಹುದು. ೩)ಪದೇ ಪದೇ ಕರಗಿಸಿ ಬೇಕಾದ ಬಣ್ಣ ಹಾಕಿ,ಬೇಕಾದ ಆಕಾರಕ್ಕೆ ಅಚ್ಚು ಹಾಕಬಹುದು. ೪)ಇದನ್ನು ಪುರ್ನಬಳಕ್ಕೆ ಮಾಡಬಹುದು. ಉದಾ:ಪಾಲಿಥಿನ್,ಪಾಲಿಸ್ಟೈರಿನ್.
- ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್:
೧)ಇದನ್ನು ಸುಲಭವಾಗಿ ಕರಗಿಸಲು ಸಾಧ್ಯವಿಲ್ಲ. ೨)ಬೇಕಾದ ಆಕಾರಕ್ಕೆ ಒಂದು ಬಾರಿ ಮಾತ್ರ ಅಚ್ಚು ಹಾಕಬಹುದು. ೩)ಮೊದಲ ಬಾರಿಗೆ ಅಚ್ಚು ಹಾಕಿದ ನಂತರ ಅದನ್ನು ಪದೇ ಪದೇ,ಕರಗಿಸಿ ಬಣ್ಣಗಳನ್ನು ಬದಲಿಸಿ ಆಕಾರಗಳಿಗೆ ಅಚ್ಚು ಹಾಕಲು ಸಾಧ್ಯವಿಲ್ಲ. ಉದಾ:ಮೆಲಮೈನ್,ಬೇಕಲೈಟ್. ಅನುಕೂಲಗಳು:
- ಪ್ಲಾಸ್ಟಿಕ್ ನ ಬೆಲೆ ಲೋಹಗಳಿಗಿಂತ ಕಡಿಮೆ.
- ಇವುಗಳು ಗಟ್ಟಿಯಾಗಿರುತ್ತದೆ,ಬಾಳಿಕೆ ಬರುತ್ತದೆ,ತುಕ್ಕು ಹಿಡಿಯುವುದಿಲ್ಲ.
- ಇವುಗಳು ಅವಾಹಕ ವಸ್ತುಗಳು ಅಂದರೆ ಶಾಖ ಮತ್ತು ವಿದ್ಯುತ್ ವಾಹಕಗಳಲ್ಲ.
- ಇವುಗಳು ಸುಲಭವಾಗಿ ಪ್ರಭಾವಕ್ಕೆ ಒಳಗಾಗುತ್ತದೆ.
- ಇವುಗಳ ಕರಗುವ ಬಿಂದು ಬಹಳ ಕಡಿಮೆ.
ಅನಾನುಕೂಲಗಳು:
- ಪ್ಲಾಸ್ಟಿಕ್ಗಳನ್ನು ಉರಿಸುವುದರಿಂದ ವಾತವರಣಕ್ಕೆ ವಿಷಾನಿಲಗಳು ಸೇರ್ಪಡೆಯಾಗಿ ವಾಯುಮಾಲಿನ್ಯ ಉಂಟಾಗುತ್ತದೆ.
- ಪ್ಲಾಸ್ಟಿಕ್ ಬ್ಯಾಗ್ ಮತ್ತು ಕ್ಯಾನ್ಗಳಲ್ಲಿ ಆಹಾರ ಸಂಗ್ರಹಿಸುವುದು ಅಪಾಯಕಾರಿ.
- ಬೇಡಾವಾದ ಪ್ಲಾಸ್ಟಿಕ್ ಪದಾರ್ಥಗಳ ಸಂಗ್ರಹಣೆಯು ರೋಗಕಾರಕಗಳ ಬೆಳವಣಿಗೆಯನ್ನು ಹೆಚ್ಚಿಸುವುದು.
- ಪ್ಲಾಸ್ಟಿಕ್ ಮಣ್ಣಿನಲ್ಲಿ ನೀರಿನ ಒಸರುವಿಕೆಯನ್ನು ಕಡಿಮೆ ಮಾಡುತ್ತದೆ.
- ಪ್ಲಾಸ್ಟಿಕ್ ಗಳು ಮಣ್ಣಿನಲ್ಲಿ ವಿಭಾಜಿಸಲು ಹೆಚ್ಚು ಸಮಯವನ್ನು ತೆಗೆದುಕೊಳ್ಳತ್ತದೆ.
ಎಚ್ಚಾರಿಕಾ ಕ್ರಮಗಳು: ೧) ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸಿದ ನಂತರ ಎಲ್ಲೆಂದರಲ್ಲಿ ಎಸೆಯಬಾರದು. ೨) ಪ್ಲಾಸ್ಟಿಕ್ ವಸ್ತುಗಳನ್ನು ಸುಡಬಾರದು. ೩) ಶಾಪಿಂಗ್ ಸಮಯದಲ್ಲಿ ಬಟ್ಟೆ ಚೀಲಗಳನ್ನು ಬಳಸುವುದು ಉತ್ತಮ. ೪) ಜೈವಿಕ ವಿಘಟನೆಗೆ ಒಳಪಡುವ ಪ್ಲಾಸ್ಟಿಕ್ ಬಳಸುವುದು ಉತ್ತಮ.