ಸದಸ್ಯ:Jojythomas/ನನ್ನ ಪ್ರಯೋಗಪುಟ
ಇಂಟರ್ನೆಟ್ ಆಫ್ ಥಿಂಗ್ಸ್
ಬದಲಾಯಿಸಿಪ್ರಸ್ತಾವನೆ
ಬದಲಾಯಿಸಿದೈಹಿಕ ಸಾಧನಗಳದ ವಾಹನಗಳು,ಕಟ್ಟಡಗಳು ಹಾಗು ಇತರ ವಸ್ತುಗಳನ್ನು ಎಲೆಕ್ಟ್ರಾನಿಕ್ಸ್, ತಂತ್ರಾಂಶ, ಸಂವೇದಕಗಳು, ಮತ್ತು ನೆಟ್ವರ್ಕ್ ಸಂಪರ್ಕವನ್ನು ಸೇರ್ಪಡಿಸಿ ಇವುಗಳ ಮೂಲಕ ವಸ್ತುಗಳನ್ನು ಸಂಗ್ರಹಿಸಲು ಹಾಗು ವಿನಿಮಯ ಮಾಡಲು ಉಪಯೋಗಿಸುವದನ್ನು ಇಂಟರ್ನೆಟ್ ಆಫ್ ಥಿಂಗ್ಸ್ ಎಂದು ಹೇಳುತ್ತಾರೆ.ಅಂತರಜಾಲದ ವ್ಯಾಪ್ತಿ ಅಂಕೆಗೂ ಮೀರಿ ವಿಸ್ತರಿಸುತ್ತಿದೆ. ಎಲ್ಲವೂ ಅಂತರಜಾಲ ಮಯವಾಗುತ್ತಿವೆ. ಡಿಜಿಟಲ್ ಜಗತ್ತಿನಲ್ಲಿ ಇದನ್ನು ‘ಇಂಟರ್ನೆಟ್ ಆಫ್ ಥಿಂಗ್ಸ್’ (ಐಒಟಿ) ಪರಿಕಲ್ಪನೆ ಹುಟ್ಟುಹಾಕಿದೆ. ಟಿ.ವಿ, ಫ್ರಿಜ್, ಎ.ಸಿ ಹೀಗೆ ಮನೆಯಲ್ಲಿರುವ ಎಲ್ಲಾ ಉಪಕರಣಗಳನ್ನೂ ಅಂತರಜಾಲದ ವ್ಯಾಪ್ತಿಗೆ ತರುವುದೇ ಇಂಟರ್ನೆಟ್ ಆಫ್ ಥಿಂಗ್ಸ್ ಅಥವಾ 'ಇಂಟರ್ನೆಟ್ ಆಫ್ ಎವ್ರಿಥಿಂಗ್'.ಕಾರು ನಿಲ್ಲಿಸಲು ಎಲ್ಲೆಲ್ಲಿ ಪಾರ್ಕಿಂಗ್ ಸೌಲಭ್ಯವಿದೆ ಎನ್ನುವುದನ್ನು ಗೂಗಲ್ನಲ್ಲಿ ನಾವು ಸುಲಭವಾಗಿ ತಿಳಿದುಕೊಳ್ಳಬಹುದು. ಆದರೆ ಅಲ್ಲಿ ನಮ್ಮ ಕಾರು ನಿಲ್ಲಿಸಲು ಜಾಗವಿದೆಯೇ ಎಂಬುದನ್ನು ತಿಳಿಯಲಾಗದು. ಆದರೆ, ಇಂಟರ್ನೆಟ್ ಆಫ್ ಥಿಂಗ್ಸ್ನಿಂದ ಇದೂ ಸಾಧ್ಯವಾಗಲಿದೆ. ಮನೆಯಿಂದ ಹೊರಗೆ ಹೊರಡುವಾಗ ಸ್ಮಾರ್ಟ್ಫೋನಿನಲ್ಲಿ ‘ಹೊರಗೆ ಹೋಗು’ ಎಂಬ ಸಂದೇಶ ಟೈಪ್ ಮಾಡಿದ ತಕ್ಷಣ ಎಲ್ಲಾ ದೀಪಗಳು ಆರಿ ಆಗುವಂತಿ ದ್ದರೆ? ವಾಹನ ನಿಲ್ಲಿಸಲು ಎಲ್ಲಿ ಸೂಕ್ತ ಸ್ಥಳವಿದೆ ಎಂಬುದು ಮೊದಲೇ ಗೊತ್ತಾದರೆ? ಯಾವ ರಸ್ತೆಯಲ್ಲಿ ಟ್ರಾಫಿಕ್ ಕಮ್ಮಿ ಇದೆ ಎಂದು ತಿಳಿಯುವಂತಾದರೆ? ಇಂತಹ ಉದ್ದೇಶಗಳನ್ನಿಟ್ಟುಕೊಂಡೇ ಸ್ಯಾಮ್ಸಂಗ್ ‘ಸ್ಮಾರ್ಟ್ ಹೋಮ್ ಆ್ಯಪ್’ ಪರಿಚಯಿಸಿದೆ. ಇದರಿಂದ ಮನೆಯಲ್ಲಿ ಇಲ್ಲದಿದ್ದರು ಸಹ, ದೀಪಗಳು ಆಫ್/ಆನ್ ಮಾಡುವುದು, ಡೋರ್ ಕೀಲಿ ಹಾಕುವುದು. ಹೀಗೆ ಮನೆಯ ಸಂಪೂರ್ಣ ನಿಯಂತ್ರಣ ಮತ್ತು ಮೇಲ್ವಿಚಾರಣೆ ಮಾಡಬಹುದು. ಇಂಟೆಲ್, ಸ್ಯಾಮ್ಸಂಗ್, ಸಿಸ್ಕಾ ಒಳಗೊಂಡು ಪ್ರಮುಖ ಕಂಪೆನಿಗಳೆಲ್ಲವೂ ಈಗ 'ಇಂಟರ್ನೆಟ್ ಆಫ್್ ಥಿಂಗ್ಸ್' ಕಡೆಗೆ ಹೆಚ್ಚಿನ ಗಮನ ನೀಡಲಾರಂಭಿಸಿವೆ.ಅಂತರಜಾಲ ಬಳಕೆ ಪ್ರಭಾವ: ಸ್ಮಾರ್ಟ್ಫೋನ್ ಸೇರಿದಂತೆ ಡಿಜಿಟಲ್ ಸಾಧನಗಳ ಬಳಕೆ ಹೆಚ್ಚುತ್ತಿವೆ. ಅಂತೆಯೇ ಅಂತರಜಾಲ ಸಂಪರ್ಕ ಪಡೆಯುವವರ ಸಂಖ್ಯೆಯೂ ಏರುತ್ತಿದೆ. ಅದರಲ್ಲೂ ಮೊಬೈಲ್ ಅಂತರಜಾಲ ಬಳಕೆ ಹೆಚ್ಚುತ್ತಿರುವುದು ‘ಐಒಟಿ’ ಪರಿಕಲ್ಪನೆಗೆ ಹೆಚ್ಚು ಅವಕಾಶ ಕಲ್ಪಿಸುತ್ತಿದೆ. ದೇಶದಲ್ಲಿ ಮೊಬೈಲ್ ಅಂತರಜಾಲ ಬಳಕೆದಾರರ ಸಂಖ್ಯೆ ಜೂನ್ಗೆ ೨೧.೩೦ ಕೋಟಿಗೆ ತಲುಪಲಿದೆ ಎಂದು ಭಾರ ತೀಯ ಅಂತರಜಾಲ ಮತ್ತು ಮೊಬೈಲ್ ಸಂಸ್ಥೆ (ಐಎಎಂಎಐ) ಹೇಳಿದೆ.೨೦೧೪ರ ಡಿಸೆಂಬರ್ ವೇಳೆಗಾಗಲೇ ೭.೩೦ ಕೋಟಿಗೆ ತಲುಪಿತ್ತು.
ವಿವರಣೆ
ಬದಲಾಯಿಸಿಧರಿಸಬಹುದಾದ ಸಾಧನ: ಗೂಗಲ್ ಗ್ಲಾಸ್, ಸ್ಮಾರ್ಟ್ವಾಚ್, ಹೆಡ್ ಬ್ಯಾಂಡ್, ರಿಸ್ಟ್ ಬ್ಯಾಂಡ್, ಇ–ಟ್ಯಾಟೂ ಕೂಡ ‘ಐಒಟಿ’ ಭಾಗವೇ ಆಗಿದೆ. ಧರಿಸಬಹುದಾದ ಸಾಧನಗಳೇ ಮುಂದಿನ ನಾಲ್ಕೈದು ವರ್ಷಗಳಲ್ಲಿ ೧೨೩೭ ಕೋಟಿಯಷ್ಟು ಮಾರುಕಟ್ಟೆಯನ್ನು ಸೃಷ್ಟಿಸಲಿದೆ ಎಂದು ಸಮೀಕ್ಷೆಯೊಂದು ಅಂದಾಜು ಮಾಡಿದೆ. ಇಂಟರ್ನೆಟ್ ಆಫ್ ಥಿಂಗ್ಸ್ ತಂತ್ರಜ್ಞಾನ ಮತ್ತು ಸೇವೆಗಳು ೨೦೨೦ರ ವೇಳೆಗೆ ೧೮.೫೮ ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎನ್ನುತ್ತದೆ ಗಾರ್ಟ್ನರ್ ವರದಿ. ಇಂಟರ್ನೆಟ್ ಆಫ್ ಥಿಂಗ್ಸ್ ನಮ್ಮ ಒಟ್ಟೂ ಜೀವನದ ಮೇಲೆ ಬಹಳ ದೊಡ್ಡ ಮಟ್ಟದಲ್ಲಿ ಬದಲಾವಣೆ ತರಲು ಹೊರಟಿದೆ ಎನ್ನಬಹುದು. ಹೀಗಿದ್ದರೂ, ಎಲ್ಲವೂ ಅಂತರಜಾಲದ ವ್ಯಾಪ್ತಿಗೆ ಬರುವುದರಿಂದ ಸೈಬರ್ ದಾಳಿಗೆ ಹೊಸ ಆಯುಧವಾಗುವ ಅಪಾಯವನ್ನೂ ಅಲ್ಲಗಳೆಯುವಂತಿಲ್ಲ. ಡಿಜಿಟಲ್ ಸ್ಥಳಾವಕಾಶವು ಕಳೆದ ಕೆಲ ವರ್ಷಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಹಾಗೂ ವರ್ಗಾವಣೆಗಳಿಗೆ ಸಾಕ್ಷಿಯಾಗಿದೆ. ಕೈಗಾರಿಕಾ ವಲಯದ ತಜ್ಞರ ಪ್ರಕಾರ ಈ ಪ್ರಕ್ರಿಯೆ ಇನ್ನೂ ಮುಂದುವರಿಯುವ ಸಾಧ್ಯತೆ ಇದೆ. ಈ ಕ್ಷೇತ್ರದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಪರಿಕಲ್ಪನೆ ಎಂದರೆ ಇಂಟರ್ನೆಟ್ ಆಫ್ ಥಿಂಗ್ಸ್.ಅಮೆರಿಕ, ದಕ್ಷಿಣ ಕೊರಿಯಾ, ಚೀನಾ ಹಾಗೂ ಇತರ ಹಲವು ದೇಶಗಳು, ಇಂಟರ್ನೆಟ್ ಆಫ್ ಥಿಂಗ್ಸ್ನ ಪ್ರಯೋಜನ ಪಡೆಯಲು ಅಗತ್ಯವಾದ ಎಲ್ಲ ಸೌಕರ್ಯಗಳನ್ನು ಕಲ್ಪಿಸಿಕೊಂಡಿವೆ. ಆದರೆ ಈ ವರ್ಗಾವಣೆಯು ಕೇವಲ ಶ್ರೀಮಂತ ದೇಶಗಳಿಗೆ ಮಾತ್ರ ಸೀಮಿತವಲ್ಲ ಎನ್ನುವುದು ಗಮನಾರ್ಹ. ಭಾರತದಲ್ಲಿ ಕೂಡಾ ಖಾಸಗಿ ವಲಯ ಮತ್ತು ಸರ್ಕಾರಿ ವಲಯದ ಸಂಘ ಸಂಸ್ಥೆಗಳು, ಇಂಟರ್ನೆಟ್ ಆಫ್ ಥಿಂಗ್ಸ್ ಸೌಲಭ್ಯವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಬಗ್ಗೆ ಸಜ್ಜಾಗುತ್ತಿವೆ. ಈ ಮೂಲಕ ಆಡಳಿತಾತ್ಮಕ ವಿಧಾನಗಳು ಹಾಗೂ ವಹಿವಾಟಿನ ಪ್ರಕ್ರಿಯೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಹಾಗೂ ದಕ್ಷವಾಗಿ ನಿರ್ವಹಿಸಲು ಅವಕಾಶವಾಗಲಿದೆ.ಇದು ತಡೆರಹಿತ ಅಥವಾ ಯಾವುದೇ ತೊಂದರೆಯಿಲ್ಲದೇ ಸರಾಗವಾಗಿ ನೆಟ್ವರ್ಕ್ ಸಿಸ್ಟಂ ಸಂಪರ್ಕಿಸುವ ತಂತ್ರಜ್ಞಾನವಾಗಿದೆ. ಇದು ಗುರುತಿನ ಮೂಲದ ಸಹಿತವಾಗಿ ವಸ್ತುಗಳು ಹಾಗೂ ಸಾಧನಗಳನ್ನು ಸಂಪರ್ಕಿಸುವ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯಲ್ಲಿ ಮನುಷ್ಯರ ನಡುವಿನ ಸಂವಾದವನ್ನು ಅಥವಾ ಸಂವಹನವನ್ನು ಯಾವುದೇ ಹಸ್ತಕ್ಷೇಪ ಇಲ್ಲದೇ ನಿರ್ವಹಿಸಲು ಅವಕಾಶವಾಗುತ್ತದೆ. ನಿಗದಿತ ಗುಂಟ್ಟದ ಹಾಗೂ ಪರಸ್ಪರ ಸಂವಹನ ಶಿಷ್ಟಾಚಾರವನ್ನು ಹೊಂದಿರುತ್ತದೆ. ಈ ತಂತ್ರಜ್ಞಾನದ ಮೂಲಕ, ರೆಫ್ರಿಜರೇಟರ್, ಕಾರು ಹಾಗೂ ಹಲ್ಲುಜ್ಜುವ ಬ್ರೆಷ್ನಿಂದ ಹಿಡಿದು ನಾವು ನಿಜ ಜೀವನದಲ್ಲಿ ಬಳಸುವ ಪ್ರತಿಯೊಂದು ವಸ್ತು ಹಾಗೂ ಸಾಧನಗಳನ್ನು ಇಂಟೆಲಿಜೆಂಟ್ ಹಾಗೂ ಸ್ಮಾರ್ಟ್ ಆಗಿ ರೂಪಿಸುವ ಅವಕಾಶ ಇರುತ್ತದೆ. ಸಾಧನಕ್ಕೆ ನಿರ್ದಿಷ್ಟವಾದ ಕಾರ್ಯಾಚರಣೆ ವ್ಯವಸ್ಥೆ ಹಾಗೂ ಇಂಟರ್ನೆಟ್ ಸಂಪರ್ಕದ ಮೂಲಕ ಇದನ್ನು ನಿರ್ವಹಿಸಬಹುದಾಗಿದೆ. ಇದರಲ್ಲಿ ಅಂತರ್ಗತವಾಗಿರುವ ಸೆನ್ಸಾರ್ ಸಹಾಯದಿಂದ ದೊಡ್ಡ ಪ್ರಮಾಣದ ಮಾಹಿತಿಗಳನ್ನು ಕಲೆ ಹಾಕಲು ಸಾಧ್ಯವಿದೆ. ಗ್ರಾಮೀಣ ಪ್ರದೇಶದ ಮಂದಿಗೆ ಸಂಪರ್ಕವನ್ನು ಇಂಟರ್ನೆಟ್ ಓವರ್ ಕ್ಲೌಡ್ ವ್ಯವಸ್ಥೆ ಮೂಲಕ ನೀಡಲಾಗುತ್ತದೆ. ಈ ಮಾಹಿತಿಗಳನ್ನು ವಿವಿಧ ಸಂಘ ಸಂಸ್ಥೆಗಳು, ವ್ಯಾಪಾರ ಹಾಗೂ ಸರ್ಕಾರಿ ಸಂಘ ಸಂಸ್ಥೆಗಳು ಇದನ್ನು ನಿರ್ಧಾರ ಕೈಗೊಳ್ಳಲು ಹಾಗೂ ಮಾಹಿತಿ ಕಲೆ ಹಾಕಲು ಬಳಸಬಹುದು. ಉದಾಹರಣೆಗೆ, ಒಂದು ಕಾರು ವಿಮಾ ಕಂಪನಿಯು ನಿರ್ದಿಷ್ಟ ವ್ಯಕ್ತಿಗಳ ಚಲನ ವಲನಗಳನ್ನು ಸೆನ್ಸಾರ್ ಮೂಲಕ ಪತ್ತೆ ಮಾಡಿ, ನಿರ್ದಿಷ್ಟ ಪ್ರದೇಶಕ್ಕೆ ಪ್ರವಾಸ ಕೈಗೊಳ್ಳದಂತೆ, ತಮ್ಮ ಗ್ರಾಹಕರಿಗೆ ಮಾಹಿತಿ ರವಾನಿಸಬಹುದಾಗಿದೆ. ಇಂಟರ್ನೆಟ್ ಆಫ್ ಥಿಂಗ್ಸ್ ಪ್ರಮುಖವಾಗಿ ಮೂರು ವಿಭಿನ್ನ ಹಂತಗಳನ್ನು ಒಳಗೊಂಡಿರುತ್ತದೆ. ದೂರಸಂವೇದಿ ಸಾಧನಗಳು ಮಾಹಿತಿಗಳನ್ನು ಕಲೆ ಹಾಕುವ ಕಾರ್ಯ ಮಾಡುತ್ತವೆ. ಇದರಲ್ಲಿ ಸೆನ್ಸಾರ್ನ ಅಥವಾ ಸಾಧನದ ಅಡ್ರೆಸಿಂಗ್ ಹಾಗೂ ಗುರುತನ್ನು ಕೂಡಾ ಪಡೆಯಬಹುದಾಗಿದೆ. ಈ ಅಂಕಿ ಅಂಶ ಹಾಗೂ ವಿಶ್ಲೇಷಣೆಯನ್ನು ಮತ್ತಷ್ಟು ಸಮಗ್ರಗೊಳಿಸುವ ಸಲುವಾಗಿ ಒಂದು ಅಪ್ಲಿಕೇಶನ್ ಅಭಿವೃದ್ದಿಪಡಿಸಲಾಗಿದೆ. ನಿರ್ಧಾರಗಳನ್ನು ಕೈಗೊಳ್ಳುವುದು ಹಾಗೂ ನಿರ್ಧಾರ ಕೈಗೊಳ್ಳುವ ಸರ್ವರ್ಗೆ ಮಾಹಿತಿಗಳನ್ನು ವರ್ಗಾಯಿಸುವುದು. ವಿಶ್ಲೇಷಣಾತ್ಮಕ ಎಂಜಿನ್, ವಾಸ್ತವವಾದಿಗಳು ಮತ್ತು ದೊಡ್ಡ ಮಾಹಿತಿಯನ್ನು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.ಇಂಟರ್ನೆಟ್ ಸಂಪರ್ಕಿತ ಸಾಧನಗಳ ಸಂಖ್ಯೆಯು ೧೨.೫ ಶತಕೋಟಿ ಇದ್ದು, ಇದು ಮನುಷ್ಯರ ಒಟ್ಟು ಸಂಖ್ಯೆಯಾದ ೭೦೦ ಕೋಟಿಯನ್ನು ಮೀರಿದೆ. ೨೦೧೧ರಲ್ಲೇ ಭೂಮಿಯಲ್ಲಿ ಈ ಸಾಧನೆ ಆಗಿದೆ.
ಬೆಳವಣಿಗೆ
ಬದಲಾಯಿಸಿ೨೦೨೦ರ ವೇಳೆಗೆ ಇಂಟರ್ನೆಟ್ ಸಂಪರ್ಕಿತ ಸಾಧನಗಳ ಸಂಖ್ಯೆ ೨೬ ಶತಕೋಟಿಯಿಂದ ೫೦ ಶತಕೋಟಿವರೆಗೆ ಜಾಗತಿಕ ಮಟ್ಟದಲ್ಲಿ ಬೆಳೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇಂಟರ್ನೆಟ್ ಆಫ್ ಥಿಂಗ್ಸ್, ಹೊಸ ಗ್ರಾಹಕರು ಹಾಗೂ ವ್ಯಾಪಾರಿ ನಡವಳಿಕೆಯ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಇದಕ್ಕೆ ಅತ್ಯಾಕರ್ಷಕ ಇಂಟೆಲಿಜೆಂಟ್ ಇಂಡಸ್ಟ್ರೀ ಸೊಲ್ಯೂಶನ್ಸ್ ಸಾಧ್ಯವಿದೆ. ಇದು ಮತ್ತೆ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ವಿಶ್ವಾದ್ಯಂತ ೧೦ ಸಹಸ್ರ ಕೋಟಿ ರೂಪಾಯಿಗೂ ಅಧಿಕವಾದ ಅವಕಾಶವನ್ನು ಸೃಷ್ಟಿಸಲಿದೆ. ಹಲವು ಕಂಪನಿಗಳು ಈಗಾಗಳೇ ಇಂಟರ್ನೆಟ್ ಆಫ್ ಥಿಂಗ್ಸ್ ಪ್ರಯೋಜನ ಪಡೆದಿವೆ. ಈ ಇಂಟರ್ನೆಟ್ ಆಫ್ ಥಿಂಗ್ಸ್ ತಂತ್ರಜ್ಞಾನವು ವೈವಿಧ್ಯಮಯ ಹಾಗೂ ವಿಶಾಲ ಶ್ರೇಣಿಯ ಅನ್ವಯಿಕೆಗಳನ್ನು ಹೊಂದಿದ್ದು, ಇದರಲ್ಲಿ ಹಸಿರು ಕಟ್ಟಡಗಳು, ಸ್ಮಾರ್ಟ್ ಗ್ರಿಡ್, ಸ್ಮಾರ್ಟ್ ಉತ್ಪಾದನೆ, ಕೈಗಾರಿಕಾ ಮೇಲ್ವಿಚಾರಣೆ, ಕೃಷಿ, ಸ್ಮಾರ್ಟ್ ಸಿಟಿ, ಆರೋಗ್ಯ ಕಾಳಜಿ, ಸಂಪರ್ಕಿತ ಗೃಹಗಳು, ಟೆಲೆಮ್ಯಾಟಿಕ್ಸ್ ಹಾಗೂ ಸರಬರಾಜು ಜಾಲ, ಸುರಕ್ಷತೆ ಹಾಗೂ ಭದ್ರತೆ, ಅರಣ್ಯ ಮತ್ತು ವನ್ಯಜೀವಿ, ಆಟೊಮೋಟಿವ್ ಹಾಗೂ ಪ್ರಕೃತಿ ವಿಕೋಪದಂಥ ಅಂಶಗಳನ್ನು ಇಲ್ಲಿ ಉಲ್ಲೇಖಿಸಬಹುದು. ಕೇಂದ್ರ ಸರ್ಕಾರವು ೨೦೧೪ರಲ್ಲಿ ಭಾರತದ ಇಂಟರ್ನೆಟ್ ಆಫ್ ಥಿಂಗ್ಸ್ ಬಗೆಗಿನ ಕರಡು ನೀತಿಯನ್ನು ಬಿಡುಗಡೆಗೊಳಿಸಿದೆ. ಅದಾಗ್ಯೂ ಇಂಟರ್ನೆಟ್ ಆಫ್ ಥಿಂಗ್ಸ್ ಬಗೆಗಿನ ಕರಡು ನೀತಿಯನ್ನು ಮತ್ತೆ ೨೦೧೫ರ ಏಪ್ರಿಲ್ನಲ್ಲಿ ಪರಿಷ್ಕರಿಸಿ ಬಿಡುಗಡೆ ಮಾಡಲಾಗಿದೆ. ಡಿಜಿಟಲ್ ಇಂಡಿಯಾ ಯೋಜನೆಯ ಪರಿಕಲ್ಪನೆಯನ್ನು ಸೇರಿಸಿಕೊಂಡು, ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ.ಈ ಕರಡು ನೀತಿಯು ೨೦೨೦ರೊಳಗೆ ದೇಶದ ಇಂಟರ್ನೆಟ್ ಆಫ್ ಥಿಂಗ್ಸ್ ಕ್ಷೇತ್ರದ ವಹಿಆಟನ್ನು ೧೫ ಶತಕೋಟಿ ಡಾಲರ್ಗಳಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದರ ಜತೆಗೆ ಕೇಂದ್ರ ಸರ್ಕಾರವು ೨೦೧೫ರ ಜುಲೈ ತಿಂಗಳಲ್ಲಿ, ಇಂಟರ್ನೆಟ್ ಆಫ್ ಥಿಂಗ್ಸ್ ಕುರಿತ ಜೇಷ್ಠತಾ ಕೇಂದ್ರವನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿದೆ. ಇದು ಡೈಟ್, ಶಿಕ್ಷಣ ಹಾಗೂ ಸಂಶೋಧನೆ ಜಾಲ ಹಾಗೂ ನ್ಯಾಸ್ಕಾಂನ ಜಂಟಿ ಸಹಭಾಗಿತ್ವದ ಯೋಜನೆ ಇದಾಗಿದೆ. ಇದೇ ವೇಳೆ ಆಂಧ್ರ ಪ್ರದೇಶ ಸರ್ಕಾರವು ದೇಶದ ಮೊಟ್ಟಮೊದಲ ಇಂಟರ್ನೆಟ್ ಆಫ್ ಥಿಂಗ್ಸ್ ಬಗೆಗಿನ ನೀತಿಯನ್ನು ೨೦೧೬ರ ಮಾರ್ಚ್ ತಿಂಗಳಲ್ಲಿ ಪ್ರಕಟಿಸಿದೆ. ಇದರ ಮುಖ್ಯವಾದ ಉದ್ದೇಶವೆಂದರೆ, ೨೦೨೦ರ ಒಳಗಾಗಿ ರಾಜ್ಯವನ್ನು ಇಂಟರ್ನೆಟ್ ಆಫ್ ಥಿಂಗ್ಸ್ನ ಹಬ್ ಆಗಿ ಪರಿವರ್ತಿಸುವುದು. ರಿಲಯನ್ಸ್ ಕಮ್ಯುನಿಕೇಶನ್ನಂಥ ಖಾಸಗಿ ವಲಯದ ಕೈಗಾರಿಕೆಗಳು ಕೂಡಾ ೨೦೧೫ರ ಆಗಸ್ಟ್ನಲ್ಲಿ ಅಮೆರಿಕ ಮೂಲದ ಜಸ್ಪೆರ್ ಟೆಕ್ನಾಲಜೀಸ್ ಜತೆ ಒಪ್ಪಂದ ಮಾಡಿಕೊಂಡಿದ್ದು, ಇದು ಭಾರತಕ್ಕೆ ಇಂಟರ್ನೆಟ್ ಆಫ್ ಥಿಂಗ್ಸ್ ಸಂಪರ್ಕವನ್ನು ಕಲ್ಪಿಸಿಕೊಡಲಿದೆ. ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇನ್ಸ್, ಕಂಪ್ಯೂಟರ್ ಸೈನ್ಸ್, ಕಮ್ಯುನಿಕೇಷನ್ ಇಂಜಿನಿಯರಿಂಗ್, ಇನ್ಫೋಮೇಷನ್ ಸೈನ್ಸ್, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಇನ್ಸ್ಟ್ರುಮೆಂಟೇಷನ್ ಟೆಕ್ನಾಲಜಿ, ಟೆಲಿಕಮ್ಯೂನಿಕೇಷನ್ ಎಂಜಿನಿಯರಿಂಗ್, ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ ವಿಷಯಗಳ ಬೋಧನಾ ವರ್ಗ, ಸಂಶೋಧನಾ ನಿರತರು, ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆಯಬಹುದಾಗಿದೆ.
ಉಪಸಂಹಾರ
ಬದಲಾಯಿಸಿಟೆಲಿಕಾಂ ಕಾರ್ಯದರ್ಶಿ 'ಜೆ ಎಸ್ ದೀಪಕ್'ರವರು 'ಇಂಟರ್ನೆಟ್ ಆಫ್ ಥಿಂಗ್ಸ್ ಇಂಡಿಯಾ ಕಾಂಗ್ರೇಸ್'ನ ಮೊದಲ ಸಂಚಿಕೆಯನ್ನು ಉದ್ಘಾಟಿಸಿ, ಇಂಟರ್ನೆಟ್ ಸೇವೆಯಲ್ಲಿ ಉತ್ತಮ ಮೌಲ್ಯ ಸರಪಳಿ ಸಹಯೋಗವನ್ನು ಕಲ್ಪಸುವ ಗುರಿಹೊಂದಿರುವುದಾಗಿ ಹೇಳಿದರು. ಇಂಟರ್ನೆಟ್ ಆಫ್ ಥಿಂಗ್ಸ್ ಇನ್ನೂ ೫-೬ ವರ್ಷದೊಳಗೆ ೫೦ ದಶಲಕ್ಷ ಡಿವೈಸ್ಗಳು ಸಂಪರ್ಕ ಹೊಂದುವ ಬಗ್ಗೆ ನಿರೀಕ್ಷೆ ಹೊಂದಿದೆ. ಇದರಿಂದ ಉದ್ಯಮ ಅವಕಾಶಗಳು ಭಾರತದಲ್ಲಿ ಹೆಚ್ಚಲಿವೆ. ಇಂಟರ್ನೆಟ್ ಆಫ್ ಥಿಂಗ್ಸ್', 'ಬಡವರಿಗೆ, ರೈತರಿಗೆ, ಆರೋಗ್ಯ ಪಾಲನೆಗೆ, ಶಿಕ್ಷಣ ಕ್ಷೇತ್ರಕ್ಕೆ, ಉತ್ತಮ ಜೀವನ ಮಟ್ಟಕ್ಕೆ ಮುಖ್ಯವಾಗಿದೆ ಎಂದು ಟೆಲಿಕಾಂ ಸಚಿವರು ಹೇಳಿದ್ದಾರೆ. ಪ್ರಸ್ತುತದಲ್ಲಿ ಬೆಳವಣಿಗೆ ಹೊಂದುತ್ತಿರುವ ಇಂಟರ್ನೆಟ್ ಆಫ್ ಥಿಂಗ್ಸ್ ಟೆಕ್ನಾಲಜಿಯಿಂದ ಭಾರತ ದೇಶದಲ್ಲಿ ೨೦೨೧ ರ ವೇಳೆಗೆ ೧೨೦೦೦೦ ಉದ್ಯೋಗಗಳ ಮೇಲೆ ಪರಿಣಾಮ ಬೀರಲಿದೆ. 'ಇಂಟರ್ನೆಟ್ ಆಫ್ ಥಿಂಗ್ಸ್' ಎಂಬುದು ಸೆನ್ಸಾರ್ ಮತ್ತು ಚಿಪ್ಗಳ ಯಂತ್ರೋಪಕರಣಗಳ ಬಗ್ಗೆ ವಿವರಿಸಲು ಬಳಸುವ ಪದವಾಗಿದ್ದು, ಇವುಗಳು ಇಂಟರ್ನೆಟ್ ಮೂಲಕ ನಿಯಂತ್ರಣ ಹೊಂದಲು ಅವಕಾಶ ನೀಡುತ್ತವೆ. ಆಫೀಸ್ ಆಡಳಿತ, ಸಹಾಯಕ ಸಿಬ್ಬಂದಿ ಮತ್ತು ನಿರ್ವಹಣೆ ಉದ್ಯೋಗವನ್ನು ನಿರ್ವಹಿಸುತ್ತಿರುವ ಜನರ ಬದಲಾಗಿ ಅವರ ಕೆಲಸವನ್ನು ಟೆಕ್ನಾಲಜಿ ನಿರ್ವಹಿಸಲಿದೆ. ಹೊಸ ಉದ್ಯೋಗಗಳು 'ಇಂಟರ್ನೆಟ್ ಆಫ್ ಥಿಂಗ್ಸ್' ಪ್ರಾಡಕ್ಟ್ ಮ್ಯಾನೇಜರ್, ರೊಬೋಟ್ ಸಂಯೋಜಕರು, ಕೈಗಾರಿಕಾ ಪ್ರೋಗ್ರಾಮರ್ ಮತ್ತು ನೆಟ್ವರ್ಕ್ ಎಂಜಿನಿಯರ್ಗಳಿಗಾಗಿ ಕ್ರಿಯೇಟ್ ಆಗಲಿವೆ.
ಉಲ್ಲೇಖನಗಳು
ಬದಲಾಯಿಸಿ- ↑ http://www.forbes.com/sites/jacobmorgan/2014/05/13/simple-explanation-internet-things-that-anyone-can-understand/#71f9f2246828
- ↑ https://en.wikipedia.org/wiki/Internet_of_things
- ↑ http://www.mckinsey.com/industries/high-tech/our-insights/the-internet-of-things
- ↑ https://www.techopedia.com/definition/28247/internet-of-things-iot
- ↑ https://www.microsoft.com/en-in/cloud-platform/internet-of-things