ಸಾರ ಫಿಜ್ ಈಗರ್ಟನ್

ಬದಲಾಯಿಸಿ
 

ಸಾರ ಫಿಜ್( ೧೬೬೮ - ೧೭೨೩ ) ರವರು ಆ೦ಗ್ಲ ಭಾಷೆಯ ಕವಯಿತ್ರಿಯಾಗಿದ್ದರು. ಇವರು ೧೭ ಮತ್ತು ೧೮ ರ ಕಾಲದ ಕವಯಿತ್ರಿ . ಅವರು ವಿವಾಹ , ಜಾತಿ , ಲಿ೦ಗ,ಸ್ನೇಹ , ರಾಜಕೀಯ ಶಿಕ್ಷಣ ಮತ್ತಿತರ ವಿಷಯಗಳ ಬಗ್ಗೆ ಬರೆಯುತ್ತಿದ್ದರು .ಸಾರ ಅವರು ರಾಬರ್ಟ್ ಗ್ಲಾಡ್ಸ್ ರವರ ಸ್ತ್ರೀ ದ್ವೇಷಕ್ಕೆ ಎದುರು ನಿ೦ತ ಮೊದಲ ಮಹಿಳೆ .

ಸಾರ ಫಿಜ್ ಹುಟ್ಟಿದು ಲಂಡನ್ ನಲ್ಲಿ , ಅವರನ್ನು ಡಿಸೆಂಬರ್ ೨೦,೧೬೬೮ ರಂದು ಬ್ಯಾಪ್ಟೈಜ್ ಮಾಡಲಾಯಿತು .ಅವರ ತಂದೆ ಥಾಮಸ್ ಫಿಜ್ ಮತ್ತು ತಾಯಿ ರೆಬೆಕ್ಕಾ ಅಲ್ಕಾಕ್ .ಅವರು ೩ ವರ್ಷ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊ೦ಡರು . ನ೦ತರ ಅವರ ಮಲತಾಯಿಯಾದ ಮೇರಿ ಅವರನ್ನು ಬೆಳೆಸಿದರು . ಅವರ ತ೦ದೆ ಔಷಧಿಕಾರ ಆದುದರಿ೦ದ ಈಗರ್ಟನ್ ರವರಿಗೆ ಒಳ್ಳೆಯ ವಾತವರಣದಲ್ಲಿ ಬೆಳೆಯುವ ಅವಕಾಶ ದೊರೆಯಿತು . ಈ ಕಾರಣದಿ೦ದ ಈಗಟನ್ ರವರಿಗೆ ಪುರಾಣ , ತತ್ವಶಾಸ್ತ್ರ ಮತ್ತು ಭೂಗೋಳ ವಿಷಯಗಳಲ್ಲಿ ಅನುಭವವಿತ್ತು . ಅವರ ೧೪ ನೇ ವಯಸಿನಲ್ಲಿ ಅತ್ಯ೦ತ ಜನಪ್ರಿಯಾವಾದ " ಮಹಿಳೆ ವಕೀಲರು " ಎ೦ಬ ಪುಸ್ತಕ ಬರೆದರು (೧೬೮೬ ) . ಮಹಿಳಾ ವಕೀಲರು ಎ೦ಬ ಪುಸ್ತಕ ರಾಬರ್ಟ್ ಗೌಲ್ಡ್ಸ್ ರವರ ಪುಸ್ತಕಗಳಿ೦ದ ಪ್ರೇರಿತಗೊ೦ಡಿದೆ. ಅವರ ಪುಸ್ತಕ ಬರವಣಿಗೆಯ ಕಾರಣದಿ೦ದ ಸಾರರವರ ತ೦ದೆ ಅವರನ್ನು ಮನೆಯಿ೦ದ ಹೊರಗೆ ಹಾಕಿದರು .ಅನ೦ತರ ಅವರು ವಿನ್ಸ್ಲೋ ನಲ್ಲಿರುವ ಕುಟು೦ಬದೊಡನೆ ಜೀವನ ಸಾಗಿಸಿದರು . ಅವರ ಜೀವನದ ಈ ಸಮಯದಲ್ಲಿ "ಅನ್ ಮೈ ಲಿವಿ೦ಗ್ ಲ೦ಡನ್" ಎ೦ಬ ಪುಸ್ತಕವನ್ನು ಬರೆದರು.

ವೈವಾಹಿಕ ಜೀವನ

ಬದಲಾಯಿಸಿ

ಸಾರಾ ರವರು ಎರಡು ಬಾರಿ ವಿವಾಹವಾದರು ಮೊದಲ ಬಾರಿ ವಕೀಲರಾದ ಎಡ್ವರ್ಡ್ ಪೀಲ್ಡ್ ರವರನ್ನು ೧೬೮೦ ರಲ್ಲಿ ವಿವಾಹವಾದರು .ಈಗರ್ಟನ್ ರವರು ಬಲವ೦ತವಾಗಿ ಮದುವೆಯಾದ ನ೦ತರ "ಅನ್ ಮೈ ವೆಡೆ೦ಗ್ ಡೇ " ಎ೦ಬ ಪುಸ್ತಕವನ್ನು ಬರೆದರು. ೧೭೦೦ ಅವಧಿಯಲ್ಲಿ ಎಡ್ವರ್ಡ್ ರವರು ನಿಧನರಾದರು . ಈ ವಿವಾಹದಿ೦ದ ಮುಕ್ತಿ ಪಡೆದ ಸಾರರವರು ತಮಗಿ೦ತ ಬಹಳ ಹಿರಿಯ ಸ೦ಬ೦ಧಿಯಾದ ಥಾಮಸ್ಸ ಈಗರ್ಟನ್ ಅವರನ್ನು ವಿವಾಹವಾದರು . ಮದುವೆಯಾಗುವ ಮು೦ಚೆ ಮತ್ತು ನ೦ತರ ಸಾರರವರಿಗೆ ತಮ್ಮ ಮೊದಲನೆ ಗ೦ಡನ ಸ್ನೇಹಿತರಾದ ಹೆನ್ರಿ ಪಿಯರ್ಸ್ ರವರ ಕಡೆಗೆ ಭಾವನೆಗಳಿದ್ದವು. ಅವರು ೧೭೦೩ ವಿವಾಹ ವಿಚ್ಛೇದನೆಗಾಗಿ ಅರ್ಜಿ ಹಾಕಿದರು ಆದರೆ ಕೆಲವು ಕಾರಣಗಳಿ೦ದ ವಿವಾಹವನ್ನು ವಿಚ್ಛದಿಸಲಾಗಲಿಲ್ಲ.

ರಚನೆಗಳು

ಬದಲಾಯಿಸಿ

೧೭ ಮತ್ತು ೧೮ ರ ಶತಮಾನಗಳ ಕವಿಗಳ೦ತೆ ಸಾರಾರವರು ತಮ್ಮ ಕೃತಿಗಳನ್ನು ಇತರ ಕವಿಯತ್ರಿಗಳೊ೦ದಿಗೆ ಹ೦ಚಿಕೊಳ್ಳುತ್ತಿದ್ದರು .ಈಗರ್ಟನ್ ರವರು ತಮ್ಮ ವಿವಾಹ ಬ೦ಧನದ ಆಧಾರಿತವಾಗಿ "ದ ನೃ ಅಟ್ಲಾ೦ಟಿಕ್ಸ್" ಎ೦ಬ ಪುಸ್ತಕ ಬರೆದರು. ಅವರ ಸ್ನೇಹಿತರ ಅಭಿನ೦ದನೆಗಳಿ೦ದ ಸ೦ತೋಷ ಪಡುತ್ತಿದ್ದರು ."ದಿ ಫಿಮೇಲ್ ಅಡ್ವೋಕೇಟ್ " ಎ೦ಬ ಪುಸ್ತಕದಿಂದ ಅವರು ಪ್ರಚಲಿತವಾದರು.ಅವರ ಹಲವಾರು ಪುಸ್ತಕಗಳು ಮಹಿಳೆ ಸ್ವಾತ೦ತ್ರ್ಯ ಮತ್ತು ಸಾಮಾಜಿಕ ಸ೦ಪ್ರದಾಯಗಳ ಮೇಲೆ ಧಾವಿಸಿದರು . ಅವರು ಹಲವಾರು ಸ೦ದರ್ಭಗಳಲ್ಲಿ ಮಹಿಳೆಯರನ್ನು ವರ್ಣಿಸಲು ಇರುವ ಒ೦ದೆ ಪ್ರಕಾರ ಪ್ರೀತಿ ಎ೦ದು ತಿಳಿಸಿದ್ದಾರೆ. ಅವರ ಹಲವಾರು ಪುಸ್ತಕಗಳಲ್ಲಿ ಮಹಿಳಾ ಹಕ್ಕುಗಳಿಗೆ ಪ್ರಾಮುಖ್ಯತೆ ನೀಡಿದ್ದಾರೆ.ಅವರ ಮೊದಲನೆ ಪುಸ್ತಕ "ದಿ ಫಿಮೇಲ್ ಅಡ್ವೋಕೇಟ್ " ದಲ್ಲಿ ಸಾರರವರು ಸ್ತ್ರೀಯರಿಗೆ ಉನ್ನತ ಸ್ಥಾನ ನೀಡಿದ್ದಾರೆ. ಎರಡನೆ ಪುಸ್ತಕ "ಪ್ಯೂಯಮ್ಸ್ ಅನ್ ಸೆವೆರಲ್ ಅಕೇಶನ್ಸ್ "ದಲ್ಲಿರುವ ಎಲ್ಲಾ ಕಾವ್ಯಗಳು ಅವರ ಅತ್ಯುತ್ತಮ ರಚನೆಗಳು. ಈ ಪುಸ್ತಕದಲ್ಲಿ ೫೬ ಕಾವ್ಯಗಳಿವೆ ಹಲವಾರು ಕಾವ್ಯಗಳು ಸರಳ ಜೀವನ ಚರಿತ್ರೆ ಮತ್ತು ಪದಡಿಯಚ್ಚುಗಳಿಗೆ ಸವಾಲು ನೀಡಿದರು ಈ ಪುಸ್ತಕಾಲ್ಲಿ ಪ್ರೀತಿಯನ್ನು ತಮ್ಮ ಜೀವನದ ಆಧಾರವಾಗಿ ಪರಿಚಯಿಸಿದ್ದಾರೆ. ಹಲವಾರು ಕಾವ್ಯಗಳಲ್ಲಿ ಮಹಿಳಾ ಶಿಕ್ಷಣ , ಮಹಿಳಾ ಸಮಾನತೆ ಮತ್ತು ಸಮಾಜದಲ್ಲಿ ಮಹಿಳೆಯ ಪಾತ್ರದ ಬಗ್ಗೆ ಈ ಪುಸ್ತಕದಲ್ಲಿ ಚರ್ಚಿಸಿದ್ದಾರೆ .

ಸಾರ ಪೈಜಿ ಈಗರ್ಟನ್ ರವರು ೧೩ - ಫೆಬ್ರವರಿ ೧೭೨೩ ರ೦ದು ನಿಧನರಾದರು . ಅವರು ಮರಣದ ಸಮಯಕ್ಕೆ ಅವರ ವಯಸ್ಸು ೫೧ ವರ್ಷಗಳೆಂದು ತಿಳಿಯಲಾಗಿತ್ತು . ಅವರ ಮರಣದ ಮು೦ಚೆ ಅವರನ್ನು ವಿನ್ಸ್ಲೋ ಚರ್ಚ್ ಪರಿಸರದಲ್ಲಿ ಸಮಾಧಿ ಮಾಡುವುದಾಗಿ ಕೋರಿದ್ದರು.

ರೆಫ಼ರೆನ್ಸ್

ಬದಲಾಯಿಸಿ
  []
  []
  []
  1. https://en.wikipedia.org/wiki/Sarah_Fyge_Egerton
  2. https://mypoeticside.com/poets/sarah-fyge-egerton-poems
  3. https://www.goodreads.com/author/show/1659475.Sarah_Fyge_Egerton