Janaica fernandes/sandbox
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಪಂಗಡ:
ಕುಲ:
ಪ್ರಜಾತಿ:
C. esculenta
Binomial name
Colocasia esculenta

ಕುಟುಂಬ:ಅರೇಸಿ

ಕೆಸುವಿನ ದಂಟು ಸಾಮಾನ್ಯವಾಗಿ ಹೆಚ್ಚು ತೇವಾಂಶನ್ನೊಳಗೊಂಡ ನದೀದಂಡ, ಕೊಳ ಮತ್ತು ಕೆರೆಗಳ ಸುತ್ತಮುತ್ತ ಸ್ವಾಭಾವಿಕವಾಗಿ ಬೆಳೆಯುತ್ತದೆ. ನೆರಳು ಮತ್ತು ತೇವಾಂಶ ಹೆಚ್ಚಿರುವ ದಟ್ಟವಾದ ಕಡುಗಳಲ್ಲಿ ಸುಲಭವಾಗಿ ಕಾಣ ಸಿಗುತ್ತದೆ. ಇದರ ಗೆಡ್ಡೆ, ಕಾಂಡ ಮತ್ತು ಎಲೆಗಳು ಉತ್ತಮ ತರಕಾರಿಯಾಗಿವೆ. ಸಸಿಗಳ ವಯಸ್ಸು ಹೆಚ್ಚಿದಂತೆ ನಾರು ಮತ್ತು ಒಗರು ಹೆಚ್ಚಾಗುತ್ತದಎದೆ. ಆದುದರಿಂದ ಹೊಸ ಎಲೆಗಳು ಬಿರಿಯುವಂತಹ ಸಮಯದಲ್ಲಿ ಇದು ಅತ್ಯುತ್ತಮ ತರಕಾರಿ ಎನಿಸಿದೆ. ೧೦೦ ಗ್ರಾಂ ತಿನ್ನಬಲ್ಲ ಕೆಸುವಿನಲ್ಲಿ ಈ ಪೋಷಕಾಂಶಗಳಿವೆ:[]. ಇದರ ವೈಜ್ಞಾನಿಕ ಹೆಸರು Colocasia esculenta.[]

ಪೋಷಕಾಂಶ

ಬದಲಾಯಿಸಿ
ಪೋಷಕಾಂಶಗಳು ಪ್ರಮಾಣ
ಪಿಷ್ಠ ೨೨ ಗ್ರಾಂ.
ಸಸಾರಜನಕ ೩ ಗ್ರಾಂ.
ಕೊಬ್ಬು ೦.೪ ಗ್ರಾಂ.
ಸುಣ್ಣ ೨೮ ಮಿ.ಗ್ರಾಂ.
ರಂಜಕ ೧೪೦ ಮಿ.ಗ್ರಾಂ.
ಕಬ್ಬಿಣ ೨ ಮಿ.ಗ್ರಾಂ.
ಪೊಟ್ಯಾಷ್ ೪೬೪ ಮಿ,ಗ್ರಾಂ.
'ಎ' ಜೀವಸತ್ವ ೪೦ ಐ.ಯು.
'ಬಿ೧' ಜೀವಸತ್ವ ೯೦ ಎಂ.ಸಿ.ಜಿ
ಬಿ೨ ಜೀವಸತ್ವ ೩೧ ಎಂ.ಸಿ.ಜಿ
ನಯಾಸಿನ್ ೦.೪ ಮಿ.ಗ್ರಾಂ
'ಸಿ' ಜೀವಸತ್ವ ಅಲ್ಪ
ಸೋಡಿಯಂ ೨೫ ಮಿ.ಗ್ರಾಂ
ಆಕ್ಸಾಲಿಕ್ ಆಮ್ಲ ೧೩೩.೪ ಮಿ.ಗ್ರಾಂ

ಅಲ್ಲದೆ ಅಮೈನೋ ಆಮ್ಲಗಳೂ ಇರುತ್ತವೆ.

ಔಷಧೀಯ ಗುಣಗಳು

ಬದಲಾಯಿಸಿ

ಕೆಸುವಿನ ದಂಟು, ಎಲೆ ಮತ್ತು ಗೆಡ್ಡೆಯನ್ನು ಆಹಾರದಲ್ಲಿ ಬಳಸಲಾಗುವುದು.ಇದನ್ನು ಬೇಯಿಸದೆ ಹಸಿಯಾಗಿ ಸೇವಿಸಲು ಬರುವುದಿಲ್ಲ.ಬೇಯಿಸದೆ ಸೇವಿಸಿದರೆ ನಾಲಿಗೆ ಮತ್ತು ಗಂಟಲಿನ ಮೇಲೆ ಅಹಿತಕರ ಪರಿಣಾಮ ಉಂಟಾಗುತ್ತದೆ.ಇದನ್ನು ನಿತ್ಯಾಹಾರದಲ್ಲಿ ಬಳಸಿದರೆ ಮೂಲವ್ಯಾಧಿ ನಿವಾರಣೆಯಾಗುತ್ತದೆ.ಬಿಸಿ ಗೆಡ್ಡೆಗಳನ್ನು ಜಜ್ಜಿ ಊದಿದ ಭಾಗಗಳ ಮೇಲೆ ಹರಡಿ ಕಟ್ಟಿದರೆ ನೋವು ಶಮನವಾಗತ್ತದೆ.ಗೆಡ್ದೆ ಸುಟ್ಟು ತಯಾರಿಸಿದ ಬೂದಿಗೆ ಜೇನುತುಪ್ಪ ಸೇರಿಸಿ ಬಾಯೊಳಗಿನ ವ್ರಣಗಳಿಗೆ ಹಚ್ಚುತ್ತಾರೆ. ಕಿವಿನೋವಿಗೆ ದಂಟು ಹಾಗೂ ಎಲೆಗಳ ರಸವನ್ನು ಕಿವಿಯೊಳಕ್ಕೆ ಬಿದುತ್ತರೆ. ಇದರ ಹೆಚ್ಚು ಪ್ರಯೋಗ ತೂಕ ಹೆಚ್ಚಿಸುತ್ತದೆ ಮತ್ತು ಕೆಲವೊಮ್ಮೆ ಮೂತ್ರದಲ್ಲಿ ಕಲ್ಲುಂಟುಮಾಡಲೂಬಹುದು.

ಉಲ್ಲೇಖ

ಬದಲಾಯಿಸಿ
  1. ಸೊಪ್ಪು ತರಕಾರಿಗಳು,ಡಾ.ಎಲ್.ವಸಂತ,ನವಕರ್ನಾಟಕ ಪ್ರಕಾಶನ,ಮುದ್ರಣ ೨೦೦೬,ಪುಟ ಸಂಖ್ಯೆ ೩೯
  2. https://npgsweb.ars-grin.gov/gringlobal/taxonomydetail.aspx?11177