ಇತಿಹಾಸ

ಬದಲಾಯಿಸಿ
      ಮ್ಯಾಕ್ ಡೊನಾಲ್ಡ್ಸ್ ಅಮೇರಿಕದ ಹ್ಯಾಂಬರ್ಗರ್ ಮತ್ತು ಫಾಸ್ಟ್ ಫುಡ್  ರೆಸ್ಟೋರೆಂಟ್ ಚೇನ್ ಗಳಲ್ಲಿ ಒಂದು.೧೯೪೦ ರಲ್ಲಿ ರಿಚರ್ಡ್ ಡೊನಾಲ್ಡ್ ಮತ್ತು ಮೌರಿಸ್ ಡೊನಾಲ್ಡ್ ಎಂಬ ಇಬ್ಬರು ಸಹೋದರರು ಈ ರೆಸ್ಟಾರೆಂಟ್ ಅನ್ನು  ಸಾನ್ ಬರ್ನಾಡಿನೋ, ಕ್ಯಾಲಿಫೋನಿಯದಲ್ಲಿ ಸ್ಥಾಪಿಸಿದರು.. ೧೯೪೮ ರಲ್ಲಿ ಇವರು  ಉತ್ಪಾದನಾ ಮಾರ್ಗದ ತತ್ವಗಳನ್ನು ಬಳಸಿ  ಹ್ಯಾಂಬರ್ಗರ್ ಸ್ಟ್ಯಾಂಡ್ ಆಗಿ ಮರುಸಂಘಟಿಸಿದರು. ೧೯೪೮ ರಲ್ಲಿ ಈ ಇಬ್ಬರು ಸಹೋದರರು  ಸ್ಪೆಡೀ ಸರ್ವಿಸ್ ವ್ಯವಸ್ಥೆಯನ್ನು ಸಹ ಪರಿಚಯಿಸಿದರು. ಆಧುನಿಕ ಫಾಸ್ಟ್ ಫುಡ್ ರೆಸ್ಟೊರೆಂಟ್ ತತ್ವಗಳನ್ನು ತಮ್ಮ ರೆಸ್ಟಾರೆಂಟ್ ಗಳಿಗೆ ವಿಸ್ತರಿಸಲಾರಂಭಿಸಿದರು.ಮ್ಯಾಕ್  ಡೊನಾಲ್ಡ್ಸ್ ಮೂಲ ಮ್ಯಾಸ್ಕಾಟ್ ಹ್ಯಾಂಬರ್ಗರ್ನ ಮೇಲೆ ಚೆಫ್ ಹ್ಯಾಟ್ ಆಗಿತ್ತು, ಇದನ್ನು ಸ್ಪೀಡಿ ಎಂದು ಉಲ್ಲೇಖಿಸಲಾಗಿದೆ. ೧೯೫೫ ರರ್ಲ್ಲಿ ರೇ ಕ್ರಾಕ್  ಈ ಕಂಪನಿಗೆ ಫ್ರ್ಯಾಂಚೈಸ್ ಏಜೆಂಟಾಗಿ ಸೇರಿಕೊಂಡರು.ಆನಂತರ ಈ ಚೇನನ್ನು ಡೊನಾಲ್ಡ್ಸ್ ಸಹೋದರರಿಂದ   ಖರೀದಿಸಿದರು.೧೯೬೨ ರಲ್ಲಿ  ಸಾರ್ವತ್ರಿಕ ಮ್ಯಾಸ್ಕಾಟ್ ಆಗಿ ಗೋಲ್ಡನ್ ಕಾಮನುಗಳು ಆಯಿಕೆಯಾದವು.೧೯೫೩ರಲ್ಲಿ ಕಮಾನುಗಳ ಲಾಂಛನವನ್ನು ಬಳಸಿ  ಮ್ಯಾಕ್ ಡೊನಾಲ್ಡ್ಸ್ ತನ್ನ ಮೊದಲ  ಫ್ರ್ಯಾಂಚೈಸನ್ನು, ಅರಿಝೋನಾದಲ್ಲಿರುವ  ಫೀನಿಕ್ಸ್ ನಲ್ಲಿ ತೆರೆಯಿತು.ಮೇ ೪,೧೯೬೧ ರಂದು, ಮೆಕ್ಡೊನಾಲ್ಡ್ಸ್ ಮೊದಲು "  ಡ್ರೈವ್ ಇನ್  ರೆಸ್ಟೊರೆಂಟ್" ಎಂಬ ವಿವರಣೆನೊಂದಿಗೆ 'ಮೆಕ್ ಡೊನಾಲ್ಡ್ಸ್' ಎಂಬ ಹೆಸರಿನಲ್ಲಿ ಯು.ಯಸ್ ಟ್ರೇಡ್ಮಾರ್ಕ್ ಕಿಗಾಗಿ ಅರ್ಜಿ ಸಲ್ಲಿಸಿತು, ಅದನ್ನು ಇಂದಿಗೂ ನವೀಕೃತಗೊಳ್ಳಿಸುತ್ತಿದೆ 
 
ಮೆಕ್ ಡೊನಾಲ್ಡ್ಸ್ ರೆಸ್ಟಾರೆಂಟ್

[]

ಉತ್ಪನ್ನಗಳು

ಬದಲಾಯಿಸಿ
 ಮ್ಯಾಕ್ ಡೊನಾಲ್ಡ್ಸ್ ರೆಸ್ಟಾರೆಂಟ್ ಗಳು  ಕೌಂಟರ್ ಸರ್ವಿಸ್ ಹಾಗು ಡ್ರೈವ್ ಥ್ರೊ ಸೆರ್ವಿಸ್ ಜೊತೆಗೆ ಒಳಾಂಗಣ ಹಾಗು ಹೊರಾಂಗಣ ಆಸನ ವನ್ನು ನೀಡುತ್ತವೆ. ಮ್ಯಾಕ್ ಡೊನಾಲ್ಡ್ಸ್ ಪ್ರಮುಖವಾಗಿ  ಹ್ಯಾಂಬರ್ಗರ್, ಚೀಸ್ ಬರ್ಗರ್, ಚಿಕನ್ ಉತ್ಪನ್ನಗಳು, ಫ್ರೆಂಚ್ ಫ್ರೈಸ್ ,ತಂಪು ಪಾನೀಯಗಳು ,ಮಿಲ್ಕ್ಶೇಕ್ ಹಾಗು ಹಲವು ಡೆಸ್ಸೆರ್ಟ್(ಭೋಜನ ನಂತರ  ಫಲ) ಇತ್ಯಾದಿಗಳನ್ನು ತಯಾರಿಸುತ್ತದೆ.  ಅಲ್ಲದೆ ಗ್ರಾಹಕರ ರುಚಿ-ಅಭಿರುಚಿಗಳನ್ನು ಗಮನದಲ್ಲಿಟ್ಟುಕೊಂಡು  ಮ್ಯಾಕ್ ಡೊನಾಲ್ಡ್ಸ್  ವಿವಿಧ ಸಲಾಡಗಳು, ಮೀನು ಪದಾರ್ಥಗಳು, ಸ್ಮೂಥಿಗಳನ್ನು  ಅದರ ಆಹಾರಪಟ್ಟಿಯಲ್ಲಿ ಸೇರಿಸಿಕೊಂಡಿದೆ.ಪ್ರತಿದಿನ ೩೬೯೦೦ ಔಟ್ಲೆಟ್ ಸ್ಟೋರ ಗಳ ಮೂಲಕ ೬೯ ಮಿಲಿಯನ್ ಗ್ರಾಹಕರ ಆಹಾರ ಅಗತ್ಯಗಳನ್ನು ಪೂರೈಸುತ್ತದೆ. ಮ್ಯಾಕ್ ಡೊನಾಲ್ಡ್ಸ್ ಉಪಸಂಸ್ಥೆ ,ಅಂಗಸಂಸ್ಥೆ ಹಾಗು ಪೌರಸಂಸ್ಥೆಯ ಮೂಲಕ ವಿಶ್ವದಾದ್ಯಂತ ೧೨೦ ದೇಶಗಳಲ್ಲಿ ಹಾಗು  ಟೆರಿಟರಿ(ಪ್ರದೇಶ) ಗಳಲ್ಲಿ  ಕಾರ್ಯನಿರ್ವಹಿಸುತ್ತಿದೆ.ಮ್ಯಾಕ್ ಡೊನಾಲ್ಡ್ಸ್ ಕಾರ್ಯನಿರ್ವಹಿಸುವ ಪ್ರಮುಖ ದೇಶಗಳು ಚೀನಾ, ಭಾರತ, ಮಲೇಶಿಯಾ, ಶ್ರೀಲಂಕಾ, ಆಸ್ಟ್ರಿಯಾ, ಇಟಲಿ ರಷ್ಯಾ, ಅಮೆರಿಕ ಹಾಗು ಆಸ್ಟ್ರೇಲಿಯಾ
 
ಮೆಕ್ ಡೊನಾಲ್ಡ್ಸ್ ಹ್ಯಾಮ್ ಬರ್ಗರ್

ಸಾಂಸ್ಥಿಕ ಅವಲೋಕನ

ಬದಲಾಯಿಸಿ
  ೨೦೧೬ರ ಬಿಬಿಸಿ ಯ ವರದಿಯ ಪ್ರಕಾರ ಮ್ಯಾಕ್ ಡೊನಾಲ್ಡ್ಸ್ ವಿಶ್ವದ ಎರಡನೇ ಅತಿದೊಡ್ಡ ಖಾಸಗಿ ಉದ್ಯೋಗದಾತ ಕಂಪನಿ .೨೦೧೬ರ ಪ್ರಕಾರ ೧.೫ ಮಿಲಿಯನ್ ನೌಕರರು ಮ್ಯಾಕ್ ಡೊನಾಲ್ಡ್ಸ್ ನಲ್ಲಿ ಫ್ರಾಂಚೈಸಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು.ವಾಲ್ಮಾರ್ಟ್ ೧.೯ ಮಿಲ್ಲಿಯನ್ ನೌಕಕರಿಗೆ ಉದ್ಯೊಗವನ್ನು ನೀಡಿ ಮೊದಲನೆ ದೊಡ್ಡ  ಉದ್ಯೋಗದಾತ ಕಂಪನಿಯನ್ನಿಸಿಕೊಂಡಿದೆ.ಇದರ ಒಟ್ಟು ಆದಾಯ ೨೪.೬೨೨ ಬಿಲಿಯನ್ ಡಾಲರ್ಸ್.ಮ್ಯಾಕ್ ಡೊನಾಲ್ಡ್ಸ್ ಆಹಾರ ಮಾರಾಟದಿಂದ ಮಾತ್ರವಲ್ಲದೆ ಬಾಡಿಗೆ, ರಾಯಧಾನ ಹಾಗು ಫ್ರ್ಯಾಂಚೈಸಗಳು ನೀಡುವ ಶುಲ್ಕದ ಹಣದಿಂದಲೂ ಸಹ ಆದಾಯ ಪಡೆಯುತ್ತದೆ. ಸತತ  ೨೫ ವರ್ಷಗಳ ಕಾಲ ಮ್ಯಾಕ್  ಡೊನಾಲ್ಡ್ಸ್ ಅದರ ಷೇರುದಾರರ ಲಾಭಾಂಶವನ್ನು  ಹೆಚ್ಚಿಸಿದೆ.ಇದರಿಂದ  ಎಸ್ ಆನ್ಡ್ ಪಿ ೫೦೦ ಡಿವಿಡೆಂಡ್ ಅರಿಸ್ಟಾಕ್ಟ್ಗಳಲ್ಲಿ ಒಂದಾಗಿದೆ.ಮ್ಯಾಕ್ ಡೊನಾಲ್ಡ್ಸ್ ಆಹಾರ ಹೆಚ್ಚಾಗಿ ಯು.ಎಸ್ ನಲ್ಲಿ ಮಾರಾಟವಾಗುವುದರಿಂದ ಇದೇ ಅದರ ಅತಿ ದೊಡ್ಡಮಾರುಕಟ್ಟೆಯಾಗಿದೆ.ಯುರೋಪ ಇದರ ಎರಡನೆ ದೊಡ್ಡ ಮಾರುಕಟ್ಟೆ.ಆಗಸ್ಟ್ ೫,೨೦೧೩ರಲ್ಲಿ" ದಿ ಗಾರ್ಡಿಯನ್"  ಎಂಬ ಬ್ರಿಟಿಷ್ ದಿನಪತ್ರಿಕೆಯು ಹೇಳುವ ಪ್ರಕಾರ ೯೦ ಪ್ರತಿಶತ ಮೆಕ್  ಡೊನಾಲ್ಡ್ಸ್ ಯು.ಕೆ ಯ ಕಾರ್ಯಪಡೆಯು" ಒಪ್ಪಂದ "ದಲ್ಲಿ ಕೆಲಸ ಮಾಡುತ್ತಾರಂತೆ.ಜೀರೊ ಹಾರ್ ಒಪ್ಪಂದದ ಪ್ರಕಾರ  ಉದ್ಯೋಗದಾತನು ಯಾವುದೇ ಕನಿಷ್ಟ ಕೆಲಸದ ಸಮಯವನ್ನು  ತೀರ್ಮಾನಿಸುವಂತಿಲ್ಲ  ಮತ್ತು ಕೆಲಸಗಾರನು ಸಹ ಒಪ್ಪಿಕೊಂಡಿರುವ ಕೆಲಸವನ್ನು ಕಡ್ಡಾಯವಾಗಿ ಮಾಡಬೇಕೆಂಬುದೇನಿಲ್ಲ.
      ಮ್ಯಾಕ್ ಡೊನಾಲ್ಡ್ಸ್ ಹಲವಾರು ದಶಕಗಳಿಂದ ಉತ್ತಮವಾದ ಜಾಹೀರಾತು ಪ್ರಚಾರ ತಂಡವನ್ನು ನಿರ್ಮಿಸಿದೆ.ಮಾಧ್ಯಮ ಉಪಕರಣಗಳಾದ ದೂರದರ್ಶನ, ರೇಡಿಯೊ  ಹಾಗು ದಿನಪತ್ರಿಕೆಯ ಹೊರತಾಗಿ ಮೆಕ್ ಡೊನಾಲ್ಡ್ಸ್ ಫಲಕಗಳು ಮತ್ತು ಸಂಕೇತಗಳ ಗಮನಾರ್ಹ ಬಳಕೆಯನ್ನು  ಮಾಡಿ  ಜನಪ್ರಿಯತೆಯನ್ನು ಗಳಿಸುತ್ತಿದೆ.ಮ್ಯಾಕ್ ಡೊನಾಲ್ಡ್ಸ್ ಇಲ್ಲಿಯವರೆಗೆ ೨೩ ವಿವಿಧ ಸ್ಲೊಗನ್(ಘೋಷಣೆ)ಗಳನ್ನು ಬಿಡುಗಡೆ ಮಾಡಿದೆ.   ಆಕರ್ಷಿಕ ಘೋಷಣೆಗಳಿಂದ  ಜನರನ್ನು ತನ್ನತ್ತ ಸೆಳೆಯುಯವಲ್ಲಿ ಯಶಶ್ವಿಯಾಗಿದೆ.ಮ್ಯಾಕ್ ಡೇ ವಾರ್ಷಿಕವಾಗಿ ನೆಡೆಯುವ ಒಂದು ಆಚರಣೆ.ಈ ದಿನದೊಂದು ಮೆಕ್ ಡೊನಾಲ್ಡ್ಸ್ ಸಂಪಾದಿಸುವ ಹಣದಲ್ಲಿ ಒಂದು ಭಾಗವನ್ನು ಬಡವರಿಗೆ ಧಾನಮಾಡಲಾಗುತ್ತದೆ. ಮ್ಯಾಕ್ ಡೊನಾಲ್ಡ್ಸ್ ಅಮೇರಿಕನ್ ಮ್ಯಾಕ್ ಡೊನಾಲ್ಡ್ಸ್ ಗೇಮ್ ನ ಶೀರ್ಷಿಕೆ ಪ್ರಾಯೋಕ.ಒಲಿಂಪಿಕ್ಸ್ ಮತ್ತು ಫಿಫಾ ವಿಶ್ವಕಪ್ ಗಳಂತಹ ಕ್ರೀಡಾ ಕಾರ್ಯಕ್ರಮಗಳನ್ನು ಸಹ ಪ್ರಾಯೋಗಿಸುತ್ತದೆ..
            

ವಿಮರ್ಷೆ

ಬದಲಾಯಿಸಿ
        ಕೆಲವು ದಶಕಗಳಿಂದ ,  ಮ್ಯಾಕ್ ಡೊನಾಲ್ಡ್ಸ್  ವಿವಿಧ ರೀತಿಯ ಆಪಾಧನೆಗಳಿಗೆ ಗುರಿಯಾಗಿದೆ.  ಅದರ ಬಿಸಿ ಕಾಫಿ ತಾಪಮಾನ ಅತ್ಯಂತ ಜನಪ್ರಿಯ  ಪ್ರಕರಣಗಳಲ್ಲಿ ಒಂದು. ೧೯೯೨ ರ ಮ್ಯಾಕ್ ಡೊನಾಲ್ಡ್ಸ್ ಕಾಫಿ ಕೇಸಿನಲ್ಲಿ, ಗ್ರಾಹಕನು  ಮೆಕ್ಡೊನಾಲ್ಡ್ಸ್ ವಿರುದ್ಧ ಮೊಕದ್ದಮೆ ಯನ್ನು  ಹೂಡಿದ್ದನು.ಗ್ರಾಹಕನು  ತನ್ನ ತೊಡೆಯ ಮೇಲೆ ಮೆಕ್ ಡೊನಾಲ್ಡ್ಸ್ ಕಾಫಿ ಚೆಲ್ಲಿಕೊಂಡ  ಕಾರಣ ಮೂರು ಸುಟ್ಟು ಗಾಯಗಳನ್ನು ಅನುಭವಿಸಿಬೇಕಾಯಿತು ಮತ್ತು ಎಂಟು ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಬೇಕಾಯಿತು.ಈ ಸಮಸ್ಯೆಯ ಬಗ್ಗೆ ಮ್ಯಾಕ್ ಡೊನಾಲ್ಡ್ಸ್  ನೂರಾರು ದೂರುಗಳನ್ನು ಸ್ವೀಕರಿಸಿದ್ದರು ಸಹ ಯಾವ ಕ್ರಮಗಳನ್ನು ಕೈಗೊಂಡಿರಲಿಲ್ಲ.ಆದುದರಿಂದ ಮ್ಯಾಕ್ ಡೊನಾಲ್ಡ್ಸ್  ಪರಿಹಾರ ಮತ್ತು ದಂಡನಾತ್ಮಕ ಹಾನಿಯನ್ನು ಕಟ್ಟಬೇಕಾಯಿತು. ಮ್ಯಾಕ್ ಡೊನಾಲ್ಡ್ಸ್ ಫ್ರೆಂಚ್ ಫ್ರೈಗಳು ಮತ್ತೊಂದು  ಪ್ರಮುಖ ಪ್ರಕರಣಗಳಲ್ಲಿ ಒಂದು .೧೯೯೦ ರಲ್ಲಿ, ಮೆಕ್ಡೊನಾಲ್ಡ್ಸ್  ಗೋಮಾಂಸ ಕೊಬ್ಬಿನಲ್ಲಿ ಫ್ರೈಸ್ಗಳನ್ನು ಬೇಯಿಸುವುದಿಲ್ಲ ವೆಂದು  ಪ್ರಕಟಿಸಿತು , ಆದುದರಿಂದ  ಸಸ್ಯಹಾರಿಗಳು  ಸಸ್ಯಜನ್ಯ ಎಣ್ಣೆಯಲ್ಲಿ, ಫ್ರೈಸ್ ಗಳನ್ನು ಮಾಡುತ್ತಾರೆಂದು  ನಂಬಿದ್ದರು. ನಂತರ, ಫ್ರೈಸ್ ಗಳನ್ನು  ಗೋಮಾಂಸದಿಂದ ಮಾಡಿದ್ದನ್ನು ತಿಳಿದು ಸಸ್ಯಾಹಾರಿಗಳು ಮತ್ತು ಹಿಂದೂಗಳು ಮ್ಯಾಕ್ ಡೊನಾಲ್ಡ್ಸ್ ಮೇಲೆ  ಮೊಕದ್ದಮೆ ಯನ್ನು  ಹೂಡಿದ್ದರು. ೨೦೦೨ರಲ್ಲಿ ಮೆಕ್ಡೊನಾಲ್ಡ್ಸ್ ೧೦  ದಶಲಕ್ಷ ಡಾಲರಗಳನ್ನು ಖಾದ್ಯ ಮಾಡಲು ಒಪ್ಪಿಕೊಂಡಿತು ಮತ್ತು ಈ ಗೊಂದಲಕ್ಕಾಗಿ ಕ್ಷಮೆಯಾಚಿಸಿತು ೨೦೦೧ ರಲ್ಲಿ ಎರಿಕ್ ಸ್ಕ್ಲೋಸರ್ ಅವರ ಪುಸ್ತಕ  " ಫಾಸ್ಟ್ ಫುಡ್ ನೇಷನ್"ನಲ್ಲಿ ಮ್ಯಾಕ್ ಡೊನಾಲ್ಡ್ಸ್ ನ ವ್ಯಾಪಾರದ ಅಭ್ಯಾಸಗಳನ್ನು ಟೀಕಿಸಿದೆ. ಜನರ ಆರೋಗ್ಯ ಮತ್ತು ಅದರ ಕಾರ್ಮಿಕರ ಸಾಮಾಜಿಕ ಸ್ಥಿತಿಯ ವೆಚ್ಚದಲ್ಲಿ ಅದರ ಲಾಭಗಳನ್ನು ಹೆಚ್ಚಿಸಲು ಮ್ಯಾಕ್ ಡೊನಾಲ್ಡ್ಸ್ ತನ್ನ ರಾಜಕೀಯ ಪ್ರಭಾವವನ್ನು ಬಳಸಿಕೊಂಡಿದೆ ಎಂದು ಟೀಕಾಕಾರರು ಆರೋಪಿಸಿದ್ದಾರೆ.ಮೋರ್ಗನ್ ಸ್ವರ್ಕ್ಲಾಕ್ನ ೨೦೦೪ ರ ಸಾಕ್ಷ್ಯಚಿತ್ರವು, ಸಮಾಜದಲ್ಲಿ ಸ್ಥೂಲಕಾಯತೆಯ ಹೆಚ್ಚಳಕ್ಕೆ ಮ್ಯಾಕ್ ಡೊನಾಲ್ಡ್ಸ್ ಆಹಾರಗಳು ಕೊಡುಗೆಯಾಗಿವೆ ಎಂದು ಹೇಳಿದೆ
 
ಮ್ಯಾಕ್ ಡೊನಾಲ್ಡ್ಸ್

[]

             ಸಾರ್ವಜನಿಕ ಒತ್ತಡಕ್ಕೆ ಪ್ರತಿಕ್ರಿಯೆಯಾಗಿ, ಮ್ಯಾಕ್ ಡೊನಾಲ್ಡ್ಸ್ ತನ್ನ ಮೆನ್ಯುವಿನಲ್ಲಿ ಹೆಚ್ಚು ಆರೋಗ್ಯಕರ ಆಯ್ಕೆಗಳನ್ನು ಸೇರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.ಮ್ಯಾಕ್ ಡೊನಾಲ್ಡ್ಸ್ ಅದರ ಬಾಟಲ್ ಹಾಲು ಮತ್ತು ಬಿಸಿ ಪಾನೀಯಗಳಿಗಾಗಿ ಸಾವಯವ ಹಾಲನ್ನು ಬಳಸಲಾರಂಭಿಸಿತು, ಆದರೂ ಅದರ ಮಿಲ್ಕ್ಶೇಕ್ಗಳಲ್ಲಿ ಸಾಂಪ್ರದಾಯಿಕ ಹಾಲನ್ನು ಬಳಸುತ್ತದೆ. ೨೦೦೭ ರಲ್ಲಿ "ರೈತರ ಸಾಪ್ತಾಹಿಕ" ಪ್ರಕಟಿಸಿದ ಒಂದು ವರದಿಯ ಪ್ರಕಾರ, ಮ್ಯಾಕ್ ಡೊನಾಲ್ಡ್ಸ್ ಯೂ.ಕೆ  ಸಾವಯವ ಹಾಲಿನ ಉತ್ಪಾದನೆಯ ೫% ರಷ್ಟು  ಹಾಲಿನ್ನು ಬಳಸುತ್ತದೆ.ಮೇ ೨೨, ೨೦೦೮ ರಂದು ಮ್ಯಾಕ್ ಡೊನಾಲ್ಡ್ಸ್ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ಅಡುಗೆ ಎಣ್ಣೆಯನ್ನು ಅದರ ಫ್ರೆಂಚ್ ಉಪ್ಪೇರಿಗಾಗಿ ಯಾವುದೇ ಟ್ರಾನ್ಸ್ ಕೊಬ್ಬುಗಳನ್ನು ಹೊಂದಿರುವುದಿಲ್ಲ ಮತ್ತು ಅದರ ಬೇಯಿಸಿದ ವಸ್ತುಗಳು, ಕಾರ್ನ್ ಮತ್ತು ಸೋಯಾ ಎಣ್ಣೆ ಆಧಾರಿತ ತೈಲವನ್ನು ಬಳಸಲಾಗುತ್ತದೆ ಎಂದು  ಘೋಷಿಸಿತು.
   
              ಮ್ಯಾಕ್  ಡೊನಾಲ್ಡ್ಸ್ ನ  ಪ್ರಧಾನ ಕಚೇರಿ ಓಕ್ ಬ್ರೂಕ್, ಇಲಿನಾಯ್ಸ್ ನಲ್ಲಿದೆ.ಸ್ಟೀವ್ ಈಸ್ಟರ್ಬ್ರೂಕ್ ಮೆಕ್ ಡೊನಾಲ್ಡ್ಸ್ ನ   ಪ್ರಸ್ತುತ  ಸಿ.ಇ.ಒ.ಮ್ಯಾಕ್ ಡೊನಾಲ್ಡ್ಸ್ ಆರಂಭದಲ್ಲಿ ಹೆಚ್ಚಾಗಿ ಅದರ ಮುಖ್ಯ ಬ್ರಾಂಡಿನತ್ತ  ಕೇಂದ್ರೀಕರಿಸಿದ್ದರು ಸಹ ೧೯೯೦ರಂದು ಅದರ ಸರಣಿಯನ್ನು ವಿಸ್ತರಿಸಲು ಹಾಗು ವೈವಿಧ್ಯಗೊಳಿಸಲು ಪ್ರಾರಂಭಿಸಿತು.ಅವರು ಅಳವಡಿಸಿಕೊಂಡ ಈ ಸ್ಟ್ರಾಟರ್ಜಿ ಯೇ ಅವರನ್ನು ಇಷ್ಟು ಎತ್ತರಕ್ಕೆ ಬೆಳೆಸಿತು.ಮ್ಯಾಕ್  ಡೊನಾಲ್ಡ್ಸ್ ಜಾಗತೀಕರಣದ ಸಾಂಕೇತಿಕವಾಗಿ ಮಾರ್ಪಾಟಾಗಿದೆ.ಆದುದರಿಂದ ಇದ್ದನ್ನು ಮೆಕ್ಡೊನಾಲ್ಡ್ಯೇಶನ್ ಆಫ್ ಸೊಸೈಟಿ  ಎಂದು  ಕರೆಯಲಾಗುತ್ತೆ .

[]

  1. https://www.google.co.in/search?q=mcdonalds+wikipedia&ie=utf-8&oe=utf-8&aq=t&rls=org.mozilla:en-US:official&client=firefox-a&channel=fflb&gfe_rd=cr&dcr=0&ei=P72BWv3kIe2eX9q9gaAF#
  2. https://www.google.co.in/search?q=mcdonalds+wikipedia&ie=utf-8&oe=utf-8&aq=t&rls=org.mozilla:en-US:official&client=firefox-a&channel=fflb&gfe_rd=cr&dcr=0&ei=P72BWv3kIe2eX9q9gaAF#
  3. https://www.google.co.in/search?q=mcdonalds+wikipedia&ie=utf-8&oe=utf-8&aq=t&rls=org.mozilla:en-US:official&client=firefox-a&channel=fflb&gfe_rd=cr&dcr=0&ei=P72BWv3kIe2eX9q9gaAF#