ನನ್ನ ಹೆಸರು ಹುಲಿಗೆಮ್ಮ. ನನ್ನನ್ನು ಮನೆಯಲ್ಲಿ ಎಲ್ಲರೂ ಪ್ರೀತಿಯಿಂದ ಜಯಶ್ರೀ ಎಂದು ಕರೆಯುತ್ತಾರೆ. ನಾನು ಹುಟ್ಟಿದ್ದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ. ನನ್ನ ತಂದೆಯ ಹೆಸರು ಅಪ್ಪಾಸಾಹೇಬ. ನನ್ನ ತಾಯಿಯ ಹೆಸರು ಶಕುಂತಲಾ. ನನ್ನ ತಂಗಿಯ ಹೆಸರು ವಿಜಯಲಕ್ಷ್ಮೀ.

ವಿದ್ಯಾಭ್ಯಾಸ:- ನಾನು ಒಂದರಿಂದ ಹತ್ತನೆಯ ತರಗತಿಯವರೆಗೆ ಸಿಂದಗಿಯಲ್ಲೇ ಓದಿದ್ದು. ನಾನು ನನ್ನ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ ಯನ್ನು ಕಲಬುರ್ಗಿಯಲ್ಲಿ ಓದಿದ್ದು. ನಾನು ಪಿ.ಯು.ಸಿ ಯಲ್ಲಿ ವಾಣಿಜ್ಯ ಕೋರ್ಸ್ ಅನ್ನು ತೆಗೆದುಕೊಂಡಿದ್ದೆ.ನಾನು ಪಿ.ಯು.ಸಿ ಯಲ್ಲಿ ಎಲ್ಲರಿಗಿಂತ ಹೆಚ್ಚು ಅಂಕಗಳನ್ನು ತೆಗೆದುಕೊಂಡು ಕಾಲೇಜಿಗೆ ಪ್ರಥಮ ಬಂದಿದ್ದೇನೆ. ನಾನು ಪಿ.ಯು.ಸಿ ನಂತರ ಬಿ.ಕಾಂ ಅನ್ನು ತೆಗೆದುಕೊಂಡೆ. ಈಗ ನಾನು ಸಂತ ಅಲೋಶಿಯಸ್ ಕಾಲೇಜು ಮಂಗಳೂರಿನಲ್ಲಿ ಬಿ.ಕಾಂ ಅನ್ನು ಓದುತ್ತಿದ್ದೇನೆ.

ಗುರಿ:-. ನನ್ನ ಜೀವನದ ಗುರಿ ಬ್ಯಾಂಕ್ ಮ್ಯಾನೇಜರ್ ಆಗುವುದು. ನಾನು ಚೆನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ತೆಗೆದುಕೊಂಡು ನನ್ನ ಗುರಿಯನ್ನು ತಲುಪುತ್ತೇನೆಂಬ ವಿಶ್ವಾಸ ನನಗಿದೆ. ನನಗೆ ಇಂಗ್ಲೀಷ್ ಅನ್ನು ಇನ್ನು ಚೆನ್ನಾಗಿ ಮಾತನಾಡಲು ಕಲಿತು ಬೇರೆ ಬೇರೆ ದೇಶಗಳಿಗೆ ಹೊಗಬೇಕೆಂಬ ಆಸೆ ಇದೆ. ನಾನು ಮುಂದೆ ನನ್ನ ಗುರಿಯನ್ನು ತಲುಪಿ ನನ್ನ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ.

ಹವ್ಯಾಸಗಳು:- ನನಗೆ ಕಥೆ, ಕಾದಂಬರಿ,ಪುಸ್ತಕಗಳನ್ನು ಓದುವುದೆಂದರೆ ತುಂಬಾ ಇಷ್ಟ. ನಾನು ದಿನಾಲು ಬೆಳಿಗ್ಗೆ ಪತ್ರಿಕೆಗಳನ್ನು ಓದುತ್ತೇನೆ. ನಾನು ದಿನಾಲು ಸಂಗೀತವನ್ನು ಕೇಳುತ್ತೇನೆ.ನಾನು ದಿನಾಲು ದೂರದರ್ಶನ ನೋಡುತ್ತೇನೆ.ಅದರಲ್ಲಿ ಬರುವ ಧಾರವಾಹಿಗಳನ್ನು,ಸಿನಿಮಾಗಳನ್ನು ನೋಡುತ್ತೇನೆ. ನಾನು ವಾಲಿಬಾಲ್,ತ್ರೋಬಾಲ್ ಹೀಗೆ ಅನೇಕ ಆಟಗಳನ್ನು ಆಡುತ್ತೇನೆ. .


ಈ ಸದಸ್ಯರ ಊರು ಮಂಗಳೂರು.