ಸದಸ್ಯ:Girishhn11/ನನ್ನ ಪ್ರಯೋಗಪುಟ

[][]ಸಂಧಿ ರಚನೆಯಲ್ಲಿ 'ಯ' 'ರ' 'ಲ' 'ವ' ಈ ನಾಲ್ಕು ಅಕ್ಷರಗಳು ಆದೇಶವಾಗಿ ಬಂದರೆ ಯಣ್ ಸಂಧಿ ಎನ್ನುತ್ತೇವೆ. ಮತ್ತು ಇ,ಈ,ಉ,ಊ,ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ 'ಯ್'ಕಾರವೂ, ಉ ಊಕಾರಗಳಿಗೆ 'ವ್'ಕಾರವೂ, ಋಕಾರಕ್ಕೆ 'ರ್'(ರೇಫ)ವೂ ಆದೇಶವಾಗಿ ಬರುತ್ತದೆ. ಇದಕ್ಕೆ 'ಯಣ್ ಸಂಧಿ'ಯೆನ್ನುತ್ತೇವೆ.

ಯಣ್ ಸಂಧಿ

ಉದಾಹರಣೆ:

ಅತಿ + ಅಂತ = ಅತ್ಯಂತ

ಮನು + ಅಂತರ = ಮನ್ವಂತರ

ಪಿತೃ + ಆರ್ಜಿತ = ಪಿತ್ರಾರ್ಜಿತ


ಅತಿ + ಅವಸರ = ಅತ್ಯವಸರ

ಜಾತಿ + ಅತೀತ = ಜಾತ್ಯತೀತ

ಕೋಟಿ+ ಅಧೀಶ = ಕೋಟ್ಯಧೀಶ

                                    ಸಂಧಿಗಳು

ಪೀಠಿಕೆ

ಬದಲಾಯಿಸಿ
   ಕನ್ನಡ ವ್ಯಾಕರಣದಲ್ಲಿ ಸಂಧಿಗಳು ಮುಖ್ಯ ಪಾತ್ರ ವಹಿಸುತ್ತವೆ.
      ಮೊದಲಿಗೆ 'ಸಂಧಿ' ಎಂದರೆ ಎರಡು ಅಕ್ಷರಗಳು ಪರಸ್ಪರ ಯಾವುದೇ ಕಾಲವಿಳಂಬವೂ ಇಲ್ಲದೆ ಸೇರುವುದು ಎಂದು ಅರ್ಥ. ವ್ಯಂಜನದ ಮುಂದೆ ಸ್ವರ ಸೇರುವುದು ಕೂಡ ಸಂಧಿ.ಒಟ್ಟಿನಲ್ಲಿ ಎರೆಡೆರೆಡು ಕೂಡಿಸಿ ಹೇಳುವ ಪದಗಳನ್ನು ಸಂಧಿ ಎನ್ನುತ್ತೇವೆ
                                       ಉದಾಹರೆಣೆಗೆ-ಅವನ+ಅಂಗಡಿ=ಅವನಂಗಡಿ
                                                        ಅವನಿಗೆ+ಇಲ್ಲ=ಅವನಿಗಿಲ್ಲ
                                                         ಹಣ್ಣಿನ+ಅಂಗಡಿ=ಹಣ್ಣಿನಂಗಡಿ

ಸಂಧಿಯ ವಿಧಗಳು

ಬದಲಾಯಿಸಿ
    ಸಂಧಿಗಳಲ್ಲಿ ಎರಡು ವಿಧ 
  ೧)ಕನ್ನಡ ಸಂಧಿಗಳು
   ೨)ಸಂಸ್ಕೃತ ಸಂಧಿಗಳು
    ೧)ಕನ್ನಡ ಸಂಧಿಗಳು-ಇದರಲ್ಲಿ ಮೂರು ವಿಧ 
      ೧)ಲೋಪ ಸಂಧಿ
      ೨)ಆದೇಶ ಸಂಧಿ
      ೩)ಆಗಮ ಸಂಧಿ
    ಸಂಸ್ಕೃತ ಸಂಧಿಗಳು-
     ೧)ಸವರ್ಣದೀರ್ಘ ಸಂಧಿ
     ೨)ಗುಣ ಸಂಧಿ 
      ೩)ಯಣ್ ಸಂಧಿ
       ೪)ವೃದ್ದಿ ಸಂಧಿ
        ೫)ಜಸ್ಥ್ವ ಸಂಧಿ
         ೬)ಶ್ಚುತ್ವ ಸಂಧಿ
  ==ಅರ್ಥ==
       ೧)ಯಣ್ ಸಂಧಿ:-.ಕನ್ನಡದ ಸಂಧಿಗಳಲ್ಲಿ ಯಣ್ ಸಂಧಿಯು ಒಂದು ಮುಖ್ಯವಾದ ಸಂಧಿ.
     ಸಂಸ್ಕೃತ ವ್ಯಾಕರಣದಲ್ಲಿ ಕೆಲವೊಂದು ಸಂಜ್ನೆಗಳನ್ನು ಮಾಡಿಕೊಂಡಿದ್ದೇವೆ.ಅದರ ಪ್ರಕಾರ 'ಯಣ್' ಎಂದರೆ "ಯರಲವ" ಎಂಬ ನಾಲ್ಕು ವ್ಯಂಜನಗಳು.ಯಣ್ ಸಂಧಿಯಲ್ಲಿ ಈ ನಾಲ್ಕು ಅಕ್ಷರಗಳು ಆದೇಶವಾಗಿ ಬರುತ್ತದೆ.

ಇ,ಈ,ಉ,ಊ,ಋ ಕಾರಗಳಿಗೆ ಸವರ್ಣವಲ್ಲದ ಸ್ವರವು ಪರವಾದಾಗ ಪೂರ್ವಾಂತ್ಯದ ಇ,ಈ ಕಾರಗಲಿಗೆ 'ಯ್' ಕಾರವು ಆದೇಶವಾಗಿ ಬಂದರೆ ಉ,ಊ ಕಾರಗಳಿಗೆ 'ವ್' ಕಾರವು ಆದೇಶವಾಗಿ ಬಂದರೂ ಮತ್ತು ಋಕಾರಕ್ಕೆ 'ರ್' ಕಾರವು ಆದೇಶವಾಗಿ ಬರುತ್ತದೆ .ಇದನ್ನು ನಾವು ಯಣ್ ಸಂಧಿ ಎನ್ನುತ್ತೇವೆ. ಒಟ್ಟಾಗಿ ಹೇಳಬೇಕೆಂದರೆ ಯ್,ವ್,ರ್ ಗಳು ಯಣ್ ಅಕ್ಷರಗಳೆಂದು ಗುರುತಸಲ್ಪಟ್ಟಿವೆ. ಈ ಅಕ್ಷರಗಳು ಯಾವ ಅಕ್ಷರಕ್ಕೆ ಆದೇಶವಾಗಿ ಬರುತ್ತವೆ ಎನ್ನುವುದನ್ನು ಈ ಕೆಳಗಿನ ಉದಾಹರಣೆಗಳ ಮೂಲಕ ಗಮನಿಸಬಹುದು.

     ಉದಾಹರಣೆಗೆ:-೧)ಅವನು 'ಅತ್ಯಂತ' ಪರಾಕ್ರಮಿ.
                        ೨)ಈ 'ಮನ್ವಂತರದಲ್ಲಿ' ನಡೆಯಿತು.
                        ೩)ನಮ್ಮದು 'ಪಿತ್ರಾರ್ಜಿತ' ಆಸ್ತಿ.
    ಈ ಮೂರು ವಾಕ್ಯಗಳಲ್ಲಿ ಬಂದಿರುವ 'ಅತ್ಯಂತ','ಮನ್ವಂತರ','ಪಿತ್ರಾರ್ಜಿತ',ಈ ಪದಗಳನ್ನು ಬಿಡಿಸಿ ಬರೆದಾಗ
            ೧) ಅತಿ+ಅಂತ=ಅತ್+ಯ್+ಅಂತ=ಅತ್ಯಂತ(ಇ+ಅ=ಯ)ಇಲ್ಲಿ ಇಕಾರದ ಜಾಗದಲ್ಲಿ 'ಯ್'ಅಕ್ಷರವು ಆದೇಶವಾಗಿ ಬಂದಿರುವುದನ್ನು ನೋಡಬಹುದು.
            ೨)ಮನು+ಅಂತರ=ಮನ್ ವ್+ಅಂತರ=ಮನ್ವಂತರ(ಉ+ಅ=ವ್ ಅ)ಇಲ್ಲಿ ಉ ಅಕ್ಷರದ ಜಾಗದಲ್ಲಿ 'ವ್'ಕಾರದೇಶವಾಗಿದೆ.
            ೩)ಪಿತೃ+ಅರ್ಜಿತ=ಪಿತ್ರಾರ್ಜಿತ(ಋ+ಅ+ರ್ ಅ)ಈ ಉದಾಹರಣೆಯಲ್ಲಿ ಋ ಅಕ್ಷರದ ಜಾಗದಲ್ಲಿ 'ರ್' ಆದೇಶವಾಗಿ ಬಂದಿರುವುದನ್ನು ಕಾಣಬಹುದು.
      ಇದನ್ನು ಗಮನಿಸಿದಾಗ ಪೂರ್ವದಲ್ಲಿ ಇರುವ ಇ,ಉ, ಋ ಅಕ್ಷರಗಳಿಗೆ ,ಕ್ರಮವಾಗಿ ಯ್,ವ್,ರ್,ಗಳು ಆದೇಶವಾಗಿ ಬಂದಿರುವುದನ್ನು ನವು ಇಲ್ಲಿ ಗಮನಿಸಬಹುದು.ಎದುರಿಗೆ ಇಂಥ ಸ್ವರಗಳು ಇರಬೇಕೆಂಬುದಕ್ಕೂ ಒಂದು ನೇಮವಿದೆ.ಉದಾಹರೆಣೆಗೆ ಅತಿ+ಇಚ್ಛಾ ಈ ಪದದ ತರ ಇಕಾರದ ಮುಂದೆ ಇ ಕಾರವೆ ಬಂದಿದ್ದರೆ ಅತೀಚ್ಛಾ ಎಂದು 'ಸವರ್ಣದೀರ್ಘ ಸಂಧಿ ಆಗುತಿತ್ತು  ಇದರಿಂದ ನಾವು ಇಲ್ಲಿ ಸವರ್ಣಸ್ವರ ಎದುರಿಗೆ ಬರಬಾರದೆಂದ ಹಾಗಯಿತು.ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.
    ಇ,ಈ,ಉ,ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರಗಳು ಪರವಾದರೆ ಇ ಈಅಕ್ಷರಗಳಿಗೆ 'ಯ್' ಕಾರವೂ ,ಉ ಊಕಾರಗಳಿಗೆ 'ವ್' ಕಾರವು ,ಋಕಾರಕ್ಕೆ 'ರ್'ಕಾರವು ಆದೇಶವಾಗಿ ಬರುತ್ತದೆ.ಇದುನ್ನ ನವು ಯಣ್ ಸಂಧಿ ಎನ್ನುತ್ತೇವೆ.
ಈ ಹಿಂದೆ ಯಣ್ ಎಂದರೆ ಯ,ವ,ಲ ,ರ ಈ ನಾಲ್ಕು ಅಕ್ಷರಗಳೆಂದು ತಿಳಿಸಿದೆಯೆಷ್ಟೆ.ಲ ಕಾರವೂ ಆದೇಶವಾಗಿ ಬರುವ ಉದಾಹರಣೆಗಳು ಕನ್ನಡ ಭಾಷೆಯಲ್ಲಿ ಇಲ್ಲವಾದ್ದರಿಂದ ಸೂತ್ರದಲ್ಲಿ ಇದನ್ನು  ಕೈ ಬಿಟ್ಟಿದ್ದಾರೆ.

ಉದಾಹರಣೆಗಳು

ಬದಲಾಯಿಸಿ

ಕೊನೆಗೆ ನಾವು ಯಣ್ ಸಂಧಿಗಳಿಗೆ ಇನ್ನೂ ಉದಾಹರೆಣೆಗಳನ್ನು ನೋಡಣ. ೧)ಅತಿ+ಅವಸರ=ಅತ್ಯವಸರ(ಇಕಾರಕ್ಕೆ ಯಕಾರ ಆದೇಶವಾಗಿದೆ)

 (ಇ+ಅ)

೨)ಜಾತಿ+ಆತೀತ=ಜಾತ್ಯಾತೀತ(ಇಕಾರಕ್ಕೆ ಯಕಾರ ಆದೇಶವಾಗಿದೆ)

      (ಇ+ಅ)

೩)ಗತಿ+ಅಂತರ=ಗತ್ಯಂತರ(ಇಕಾರಕ್ಕೆ ಯಕಾರ ಆದೇಶವಾಗಿದೆ)

     (ಇ+ಅ)

೪)ಪ್ರತಿ+ಉತ್ತರ=ಪ್ರತ್ಯುತ್ತರ(ಇಕಾರಕ್ಕೆ ಯಕಾರ ಆದೇಶವಾಗಿದೆ)

      (ಇ+ಉ)

೫)ಇತಿ+ಅರ್ಥ=ಇತ್ಯರ್ಥ(ಇಕಾರಕ್ಕೆ ಯಕಾರ ಆದೇಶವಾಗಿದೆ)

    (ಇ+ಅ)

೬)ಅತಿ+ಆಸೆ=ಅತ್ಯಾಸೆ(ಇಕಾರಕ್ಕೆ ಯಕಾರ ಆದೇಶವಾಗಿದೆ)

    ಇ+ಅ

೭)ಮನು+ಆದಿ=ಮನ್ವಾದಿ(ಉಕಾರಕ್ಕೆ ವ್ ಕಾರ ಆದೇಶವಾಗಿದೆ)

      ಉ+ಅ

೮)ವಧೂ+ಆಭರಣ=ವಧ್ವಾಭರಣ(ಉಕಾರಕ್ಕೆ ಉಕಾರ ಆದೇಶವಾಗಿದೆ)

    ಉ+ಅ

೯)ಪಿತೃ+ಅರ್ಥ=ಪಿತ್ರಾರ್ಥ(ಋ ಕಾರಕ್ಕೆ ರ್ ಕಾರದೇಶ)

    ಋ+ಅ

೧೦)ಮಾತೃ+ಅಂಶ=ಮಾತ್ರಂಶ(ಋ ಕಾರಕ್ಕೆ ರ್ ಕಾರದೇಶ)

      ಋ+ಅ

೧೧) ಅತಿ+ಉಗ್ರ =ಅತ್ಯುಗ್ರ

        ಇ+ಉ (ಇಲ್ಲಿ ಇ ಕಾರಕ್ಕೆ ಉ ಕಾರದೇಶವಾಗಿದೆ)

೧೨) ಮನು+ಅಂತರ=ಮನ್ವಂತರ

          ಉ+ಅ (ಇಲ್ಲಿ ಉ ಕಾರಕ್ಕೆ ಅ ಕಾರಾದೇಶವಾಗಿದೆ)

೧೩)ವಧೂ+ಅನ್ವೇಷಣೆ=ವಧ್ವಾನ್ವೇಷಣೆ

          ಊ+ಅ (ಇಲ್ಲಿ ಊ ಕಾರಕ್ಕೆ ಅ ಕಾರಾದೇಶವಾಗಿದೆ)

೧೪) ಕೋಟಿ+ಆದೀಶ=ಕೋಟ್ಯಾಧೀಶ

          ಇ+ಅ  (ಇಲ್ಲಿ ಇ ಕಾರಕ್ಕೆ ಅ ಕಾರಾದೇಶವಾಗಿದೆ)

೧೫) ಭೂಮಿ+ಅಂತ್ಯರ್ಗತ=ಭೂಮಂತ್ಯರ್ಗತ

         ಇ+ಅ  (ಇಲ್ಲಿ ಇ ಕಾರಕ್ಕೆ ಅ ಕಾರಾದೇಶವಾಗಿದೆ)

೧೬) ಆಧಿ+ಆತ್ಮ=ಆಧ್ಯಾತ್ಮ

         ಇ+ಅ  (ಇಲ್ಲಿ ಇ ಕಾರಕ್ಕೆ ಅ ಕಾರಾದೇಶವಾಗಿದೆ)

೧೬) ವಧೂ+ಆಗಮನ=ವಧ್ವಾಗಮನ

         ಊ+ಅ  (ಇಲ್ಲಿ ಊ ಕಾರಕ್ಕೆ ಅ ಕಾರಾದೇಶವಾಗಿದೆ)

೧೭) ಮನು+ಆದಿ=ಮನ್ವಾದಿ

        ಉ+ಅ  (ಇಲ್ಲಿ ಉ ಕಾರಕ್ಕೆ ಅ ಕಾರಾದೇಶವಾಗಿದೆ)

ಇದು ಯಣ್ ಸಂಧಿಯಲ್ಲಿ ಬರುವ ಕೆಲವೊಂದು ಉದಾಹರಣೆಗಳು....

ಉಪಸಂಹಾರ

ಬದಲಾಯಿಸಿ

ಯಣ್ ಸಂಧಿಯು ಕೇವಲ ನಮ್ಮ ಕನ್ನಡ ಭಾಷೆ ಯಲ್ಲಿಯೇ ಅಲ್ಲ ನಾವು ಬೇರೆ ಬೇರೆ ಡ್ರಾವಿಡ ಭಾಷೆಯಲ್ಲಿಯು ಹಾಗು ನಮ್ಮ ರಾಷ್ಟ್ರ ಭಾಷೆಯಾದ ಹಿಂದಿ ವ್ಯಾಕರಣದಲ್ಲಿಯೂ ನಾವು ಈ ಸಂಧಿಯನ್ನುಕಾಣಬಹುದು. ಈ ಸಂಧಿ ಯ ಅರ್ಥವು ಬೇರೆ ಬೇರೆ ಭಾಷೆಯಲ್ಲಿಯೂ ಕನ್ನಡದ ಯಣ್ ಸಂಧಿ ಯ ಯಥಾವತ್ತಾದ ಅರ್ಥವನ್ನು ನೀಡದೆ ಹೋದರು ಹೆಚ್ಚು ಕಡಿಮೆ ಎಲ್ಲದರಲ್ಲಿಯೂ ಸಾಮ್ಯತೆಯನ್ನು ನಿರೀಕ್ಷಿಸಬಹುದು.

  ಯಣ್ ಸಂಧಿಯು ಎಲ್ಲಾ ಭಾಷೆಯ ವ್ಯಾಕರಣದಲ್ಲಿಯೂ ತನ್ನದೆ ಆದ ಮಹತ್ವವನ್ನು ಇರುವುದನ್ನು ನಾವು ಇಲ್ಲಿ ಗಮನಿಸಬುಹುದು.ಯಣ್ ಸಂಧಿಯು ವ್ಯಾಕರಣದಲ್ಲಿ ಇರದೇ ಹೋಗಿದ್ದರೆ ಯಾವುದೋ ಒಂದು ಅಂಶವು ವ್ಯಾಕರಣದಲ್ಲಿ ಇಲ್ಲದೆ ಇರುವಂತೆ ಭಾಸವಾಗಬಹುದು......
  1. ಕನ್ನಡ ವ್ಯಾಕರಣ ದರ್ಪಣ. ಮೈಸುರು: ವಿದ್ಯ ಸಂಶೋಧನ ಶಾಖೆ. ೧೯೭೧.
  2. ಪಂ (೨೦೦೪). ಕನ್ನಡ ವ್ಯಾಕರಣ ಕೈಪಿಡಿ. ತುಮಕೂರು: ಕಾವ್ಯಮೃತ ಪ್ರಕಾಶನ. pp. ೨೦+೨೪೮. {{cite book}}: Text "ಎಂ. ಈಶ್ವರಪ್ಪ" ignored (help)