ಸದಸ್ಯ:Eshtarth Gowda/ನನ್ನ ಪ್ರಯೋಗಪುಟ
ಸೋಮವಾರದ ಮರ
ಬದಲಾಯಿಸಿಈ ಮರವು ವಿಭಿನ್ನ ಮತ್ತು ಸಂಕೀರ್ಣ ಜೀವಿವರ್ಗೀಕರಣ ಸಮೂಹವಾಗಿದೆ.ಇದು ಆಗ್ನೇಯ ಏಷ್ಯಾದ ಸ್ಥಳೀಯ ಪೊದೆ ಸಸ್ಯ. ೧೫೭೮ರಲ್ಲಿ ಕ್ರಿಸ್ಟೋಬಲ್ ಅಕೋಸ್ಟಾ ಅವರು ಲಿಗ್ನಮ್ಪ ವನ ಎಂದು ಐರೋಪ್ಯ ಸಾಹಿತ್ಯದಲ್ಲಿ ಮೊದಲ ಬಾರಿಗೆ ಉಲ್ಲೇಖಿಸಿದ್ದಾರೆ. ಇದರ ವೈಜ್ಞಾನಿಕ ಹೆಸರು ಕ್ರೊಟೋನ್ ಒಬ್ಲಾಂಗ್ಫೋಲಿಯಸ್‍ರಾಕ್ಸ್ಬ್
ಇತರೆ ಹೆಸರುಗಳು
ಬದಲಾಯಿಸಿ- ಬಂಗಾಳಿ: ಚುಕಾ, ಬರಾಗಾಚಿ, ಪುತ್ರಿ
- ಹಿಂದಿ: ಚುಕ್ಕಾ
- ಮಲೆಯಾಳಂ: ಕಟ್ಟುಪಟೋಲಮ್, ಕೊಟಪುಟೊಲ್
- ಮರಾಠಿ: ಗಾನಸುರ, ಘನ್-ಸುರಾಂಗ್, ಗನ್ಸುರ್
- ಸಂಸ್ಕೃತ: ಬುತಮ್ಕುಸಮ್, ಬುಟಂಕುಸಾ, ಬುಧಲಭೈರಿ
- ತಮಿಳು: ಬುತಂಕುಸಮ್, ಮಿಲಗುನರಿ, ಮಿಲ್ಗುನಾರಿ, ಮಿಲಕುಮಾರಿ
- ಟಿಬೆಟಿಯನ್: ನಾಗಡಾಟಾನಟಿ
- ತೆಲುಗು: ಬುತನ್ಕುಸಮ್, ಬುತಲ-ಭೈರಿ, ಬುಟಂಕುಸಮ್
- ಬುಡಕಟ್ಟು ಹೆಸರು: ಬೊಲ್-ಮಾಂಗ್ಖೋಲ್ಚಾಮ್[೧]
ಸಸ್ಯದ ವಿವರಣೆ
ಬದಲಾಯಿಸಿಇದರ ಎಲೆಗಳುÀ ೧೨.೫-೨೫ಸೆಂ.ಮೀ ಉದ್ದವಿದ್ದು, ಹೂವುಗಳು ಹಳದಿ ಮಿಶ್ರಿತ ಹಸಿರು ಬಣ್ಣ ಹೊಂದಿರುತ್ತದೆ. ಈ ಮರವು ೨೫ ಮೀ ಎತ್ತರದಲ್ಲಿ ಬೆಳೆಯುತ್ತದೆ. ಎಲೆಗಳು ಸರಳವಾಗಿದ್ದು, ಪಯಾರ್ಯವಾಗಿ ಜೋಡಿಸಲಾಗಿದೆ. ಇವುಗಳು ತೇವವಾದ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಬೆಳೆಯುತ್ತದೆ. ಎಲೆಯ ಎಳೆಗಳೂ ಕೆಂಪು ಬಣ್ಣ ಮತ್ತು ಕಂದು ಬಣ್ಣದಲ್ಲಿರುತ್ತವೆ.
ವಿತರಣೆ
ಬದಲಾಯಿಸಿಈ ಪ್ರಭೇದವುಉಷ್ಣವಲಯವಾಗಿದೆ. ಕೆಲವು ಪ್ರಭೇದಗಳು ಸಮಶೀತೋಷ್ಣ ಪ್ರದೇಶಗಳಲ್ಲಿ ವಿಸ್ತರಿಸುತ್ತದೆ. ಇವುಗಳನ್ನು ಹೆಚ್ಚಾಗಿ ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ್, ಶ್ರೀಲಂಕಾ, ಯುನ್ನಾನ್ಮತ್ತು ವಿಯೆಟ್ನಾಮ್ನಲ್ಲಿ ವಿತರಿಸಲಾಗಿದೆ.[೨][೩]
ಉಪಯೋಗಗಳು
ಬದಲಾಯಿಸಿ- ತೀವ್ರ ಮಲಬದ್ಧತೆಯನ್ನುಗುಣಪಡಿಸುತ್ತದೆ.
- ಸಾಂಪ್ರಾದಾಯಿಕವಾಗಿ ಗಾಯಗಳನ್ನು ಗುಣಪಡಿಸಲು ಕ್ರೋಟಾನ್ ಎಣ್ಣೆಯನ್ನು ಬಳಸುತ್ತಾರೆ.
- ಶ್ವಾಸಕೋಶದ ಅಂಗವಾಗಿ ಇದನ್ನು ಬಳಸಲಾಗುತ್ತದೆ.
- ಸ್ಥಳೀಯ ಜನರ ಮೂಲಕ ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
- ಚೀನೀ ಔಷಧದಲ್ಲಿ ಕ್ರೋಟನ್ತೈಲವನ್ನು ಬಳಸಲಾಗುತ್ತದೆ.
- ಜ್ವರವನ್ನು ಕಡಿಮೆ ಮಾಡಲು ಇದನ್ನುಉಪಯೋಗಿಸಲಾಗುತ್ತದೆ.
- ಕರಿಮೆಣಸಿನೊಂದಿಗೆ ಮೂಲ ತೊಗಟೆಯ ಕಷಾಯವನ್ನುಅತಿಸಾರ ಮತ್ತು ಭೇದಿಗೆ ನೀಡಲಾಗುತ್ತದೆ.
- ಮಾಂಸಗಳಲ್ಲಿಯೂ ಅಥವಾ ವೈನ್ ತಯಾರಿಸಲು ಬಳಸಲಾಗುತ್ತದೆ.
- ಚರ್ಮದ ಕಾಯಿಲೆಗಳಿಗೆ ಔಷಧೀಯವಾಗಿ ಬಳಕೆ ಮಾಡಲಾಗುತ್ತದೆ.[೪][೫]
ಉಲ್ಲೇಖಗಳು
ಬದಲಾಯಿಸಿ- ↑ http://envis.frlht.org/plantdetails/7a37668167883259bfef3cf604c6c48f/00cf8158bf20f440c4e111cb4cce1551
- ↑ https://wikivisually.com/wiki/Chrozophora_tinctoria
- ↑ https://www.tuninst.net/MP-KS/Euphorbiaceae/Euphorbiaceae.htm
- ↑ https://uses.plantnet-project.org/en/Croton_(PROSEA_Medicinal_plants)
- ↑ http://tropical.theferns.info/viewtropical.php?id=Croton+persimilis