thumb|311x311px

ನನ್ನ ಜೀವನ

ಬದಲಾಯಿಸಿ

t ನನ್ನ ಹೆಸರು ಧೃತಿ.  ನನ್ನ ತಂದೆ ನರಸಿಂಹ ಪ್ರಸದ್, ಇಂಜಿನೀರ್ ಅಗಿದ್ದು ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ.  ತಾಯಿ ರಶ್ಮಿ, BSc. ಪದವಿದರರು.  ನನ್ನ ತಮ್ಮ ಅನಿರುಧ್ 7ನೇ ತರಗತಿಯಲ್ಲಿ ಓದುತ್ತಿದ್ದಾನೆ.  ನಾನು ಹುಟ್ಟಿದ್ದು 6-ಅಕ್ಟೋಬರ್-2001ರಲ್ಲಿ. ಬಂಗಳೂರಿನಲ್ಲಿ ಹುಟ್ಟಿದೆ.  ನಾನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬೆಂಗಳೂರಿನ ಬನಶಂಕರಿ ೨ನೇ ಹಂತದಲ್ಲಿರುವ ಬಿ.ಎನ್.ಎಂ ಶಾಲೆಯಲ್ಲಿ ಓದಿದೆ.  ಶಾಲೆಯಲ್ಲಿದ್ದಾಗ ನನಗೆ ಬಹಳ ಇಷ್ಟವಿದ್ದ ವಿಷಯ ಗಣಿತ.  10ನೇ ತರಗತಿಯಲ್ಲಿ ಶೇ.93 ಅಂಕಗಳೊಂದಿಗೆ ಉತ್ತಿರ್ಣಳಾದೆ.  ನಂತರ ವಾಣಿಜ್ಯ ವಿಷಯವನ್ನು ತೆಗೆದುಕೊಳ್ಳಲು ನಿರ್ಧರಿಸಿ, ವಿ.ವಿ.ಪುರಂನಲ್ಲಿರುವ ಜೈನ್ ಕಾಲೇಗಿಗೆ ಸೇರಿಕೊಂಡೆ.  ಇಲ್ಲಿ ನನಗೆ ಬಹಳ ಆಸಕ್ತಿ ಮೂಡಿಸಿದ ವಿಷಯ ಸಂಖ್ಯಾ ಶಾಸ್ತ್ರ. ಪದವಿಪೂರ್ವ ಶಿಕ್ಷಣ ಪಡೆದು, ದ್ವಿತೀಯ ಪಿ.ಯು.ಸಿಯಲ್ಲಿ ಶೇ.95 ಅಂಕಗಳೊಂದಿಗೆ ಉತ್ತೀರ್ಣಳಾದೆ. ಪ್ರಸ್ತುತ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ. ಪದವಿ ಓದುತ್ತಿದ್ದೇನೆ.  ನನಗೆ ಮುಂಚಿನಿಂದಲೂ ಕ್ರೈಸ್ಟ್ ಕಾಲೇಗಿನಲ್ಲಿ ಓದಬೇಕೆಂದು ತುಂಬ ಆಸೆಯಿತ್ತು, ಅದು ಈಗ ನೆರವೇರಿದೆ.  ನಾನು ಕ್ರೈಸ್ಟ್ ವಿಶ್ವವಿದ್ಯಾಲಯ ಸೇರಿರುವ ಉದ್ದೇಶ ಪಠ್ಯ ಕಲಿಕೆ ಹಾಗೂ ವ್ಯಕ್ತಿತ್ವ ವಿಕಸನ ಎರಡರಲ್ಲೂ ಉನ್ನತಿ ಸಾಧಿಸುವುದು.

ಹವ್ಯಾಸಗಳು

ಬದಲಾಯಿಸಿ

ನನ್ನ ಹವ್ಯಾಸಗಳೆಂದರೆ, ಸಂಗೀತ ಹಾಡುವುದು, ಟಿ.ಟಿ. ಆಡುವುದು ಮತ್ತು ಈಜುವುದು.  ನಾನು ಐದನೇ ವಯಸ್ಸಿನಿಂದಲೇ ಸಂಗೀತದ ಮೇಲೆ ಆಸಕ್ತಿ ಹೊಂದಿರುವುದನ್ನು ಗುರುತಿಸಿದ ನನ್ನ ಪಾಲಕರು ನನ್ನನ್ನು 2007ರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಸೇರಿಸಿದರು.  2013ರಲ್ಲಿ ನಾನು ಜೂನಿಯರ್ ಸಂಗೀತ ಪರೀಕ್ಷೆಯಲ್ಲಿ ಶೇ.98 ಅಂಕದೊಂದಿಗೆ ಉತ್ತೀರ್ಣಳಾದೆ.  ಸೀನಿಯರ್ ಸಂಗೀತ ಪಾಠವನ್ನು ವಿದ್ವಾನ್ ಚಿನ್ಮಯ ರಾವ್ ಅವರ ಬಳಿ ಮೂರು ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದೇನೆ.  ಜೊತೆಗೆ ಸುಗಮ ಸಂಗೀತವನ್ನೂ ಕಲಿಯುತ್ತಿದ್ದೇನೆ.  ಇಲ್ಲಿಯವರೆಗೂ, ಯಾವುದೇ ಕಷ್ಟದ ಹಂತದಲ್ಲಿಯೂ ನಾನು ಸಂಗೀತದ ಕಲಿಕೆ ಮತ್ತು ಅಭ್ಯಾಸವನ್ನು ನಿಲ್ಲಿಸಿಲ್ಲ.  ಪ್ರತಿದಿನವೂ ೨ ಘಂಟೆ ಕಾಲ ಸಾಂಗೀತ ಅಭ್ಯಾಸವನ್ನು ಮಾಡುತ್ತೇನೆ.  ಇದನ್ನು ನನ್ನ ಜೀವನದ ಒಂದು ಮುಖ್ಯವಾದ ಭಾಗವನ್ನಾಗಿಸಿಕೊಳ್ಳುವುದು ನನ್ನ ಗುರಿ.  ಅಲ್ಲದೇ ಬಿಡುವಿನ ಸಮಯದಲ್ಲಿ ಚಲನಚಿತ್ರ ಗೀತೆಗಳನ್ನು ಕೇಳುತ್ತೇನೆ.  ಕನ್ನಡ, ಹಿಂದಿ, ತೆಲುಗು ಭಾಷೆಗಳ ಹಾಡುಗಳನ್ನು ಕೇಳುವುದು ನನ್ನ ಹವ್ಯಾಸ.  ನನಗೆ ಬಹಳ ಇಷ್ಟವಾದ ಹಿನ್ನೆಲೆ ಗಾಯಕರೆಂದರೆ ಶ್ರೇಯಾ ಘೋಶಾಲ್ ಮತ್ತು ಅರಿಜಿತ್ ಸಿಂಗ್. ಈಜುವುದು ಕೂಡಾ ನನಗೆ ಇಷ್ಟವಾದ ಹವ್ಯಾಸ. ನಾನು ಬಸವನಗುಡಿ ಅಕ್ವಾಟಿಚ್ ಸೆಂಟರ್ ನಲ್ಲಿ ಈಜುವುದನ್ನು ಕಲಿತೆ.  ನಾನು ಕಳೆದ 8 ವರ್ಷಗಳಿಂದ ಈಜುವುದನ್ನು ಅಭ್ಯಾಸ ಮಾಡುತ್ತಿದ್ದೇನೆ. ನನಗೆ ಫ಼್ರೀ ಸ್ಟೈಲ್, ಬ್ಯಾಕ್ ಸ್ಟ್ರೋಕ್, ಬ್ರೆಸ್ಟ್ ಸ್ಟ್ರೋಕ್, ಬಟರ್ಫ಼್ಲೈ ಸ್ಟ್ರೋಕ್ ಹೀಗೆ ನಾಲ್ಕು ಸ್ಟ್ರೋಕ್ ಗಳು ಈಜಲು ಬರುತ್ತದೆ.  ನಿಯಮಿತವಾಗಿ ಈಜು ಅಭ್ಯಾಸ ಮಾಡುವುದರಿಂದ ದೇಹಕ್ಕೆ ವ್ಯಾಯಾಮ ಹಾಗೂ ಮನಸ್ಸಿಗೂ ಚೈತನ್ಯ ಸಿಗುತ್ತದೆ.

ಪ್ರವಾಸ

ಬದಲಾಯಿಸಿ

ರಜ ದಿನಗಳಲ್ಲಿ ನಮ್ಮ ಪರಿವಾರದೊಂದಿಗೆ ಬೇರೆ ಬೇರೆ ಜಾಗಗಳಿಗೆ ಪ್ರವಾಸ ಹೋಗುವುದು ನಮ್ಮ ವಾಡಿಕೆ. ನಾನು ಕರ್ನಾಟಕ ಮತ್ತು ವಿವಿಧ ರಾಜ್ಯಗಳ ಪ್ರವಾಸಿ ತಾಣಗಳನ್ನು ನೋಡಿದ್ದೇನೆ. ನನಗೆ ಅತೀ ಪ್ರಿಯವಾದ ಪ್ರವಾಸಿ ತಾಣವೆಂದರೆ ಕೊಡಗು.  ಕೊಡಗಿನ ಪ್ರಾಕೃತಿಕ ಸೌಂದರ್ಯ, ತಂಪಾದ ಮತ್ತು ಪ್ರಶಾಂತವಾದ ವಾತಾವರಣ ಎಲ್ಲವೂ ಮನಸ್ಸಿಗೆ ಆನಂದವನ್ನು ನೀಡುತ್ತದೆ.  ಅಲ್ಲಿರುವ ಪ್ರೇಕ್ಷಣೀಯ ಸ್ಥಳಗಳೆಂದರೆ ತಲಕಾವೇರಿ, ಭಾಗಮಂಡಳ, ಅಬ್ಬೆ ಫ಼ಾಲ್ಸ್, ದುಬಾರೆ, ಹಾರಂಗಿ ಜಲಪಾತ, ನಿಸರ್ಗ ಧಾಮ ಮುಂತದವುಗಳು.  ಬೇರೆ ಬೇರೆ ಊರುಗಳನ್ನು ಸಂದರ್ಶಿಸುವುದರಿಂದ ನಮ್ಮ ಜ್ಞಾನ ವೃದ್ಧಿಯಾಗುತ್ತದೆ.

ನನ್ನ ಜೀವನದ ಗುರಿ ಸಿ.ಎ ಮಾಡಿ ದೊಡ್ಡ ಬಹುರಾಷ್ಟ್ರೀಯ ಕಂಪನಿಯಲ್ಲಿ ದೊಡ್ಡ ಹುದ್ದೆ ಸಂಪಾದಿಸುವುದು. ನಮ್ಮ ಅಪ್ಪ ಅಮ್ಮನಿಗೆ ಒಳ್ಳೆ ಹೆಸರು ತಂದು ಅವರ ತ್ಯಾಗ, ಶ್ರಮಗಳನ್ನು ಸಾರ್ಥಕ ಮಾಡುತ್ತೇನೆ. ಈ ಗುರಿ ಸಾಧಿಸಲು ನಾನು ಬಹಳ ಶ್ರಮ ಪಟ್ಟು ಅಭ್ಯಾಸ ಮಾಡುತ್ತೇನೆ.  ನನ್ನ ಗುರಿ ಸಾಧನೆಗೆ ಸಹಾಯಕವಾಗಿರುವ ಕ್ರೈಸ್ಟ್ ವಿದ್ಯಾ ಸಂಸ್ಥೆಗೆ ನಾನು ಸದಾ ಋಣಿಯಾಗಿದ್ದೇನೆ.