ಸದಸ್ಯ:Deepthi A Rai/ನನ್ನ ಪ್ರಯೋಗಪುಟ

thumb|ಸುಮನ್ ರಂಗನಾಥನ್ thumb|ರಮೇಶ್ ಅರವಿಂದ್

ಓ ಗಂಡಸರೇ ನೀವೆಷ್ಟು ಒಳ್ಳೆಯವರು
ಓ ಗಂಡಸರೇ ನೀವೆಷ್ಟು ಒಳ್ಳೆಯವರು
ನಿರ್ದೇಶನ ಕೆ.ವಿ.ರಾಜು
ಪಾತ್ರವರ್ಗ ರಮೇಶ್, ಕುಮಾರ್ ಗೋವಿಂದ್ ಸುಮನ್ ರಂಗನಾಥ್
ಬಿಡುಗಡೆಯಾಗಿದ್ದು ೧೯೯೮
ಚಿತ್ರ ನಿರ್ಮಾಣ ಸಂಸ್ಥೆ ಜನಪ್ರಿಯ ಮೂವಿ ಮೇಕರ್ಸ್

ವರ್ಗ:

       ಈ ಚಲನಚಿತ್ರದಲ್ಲಿ ರಮೇಶ್ ಅರವಿಂದ್, ಸುಮನ್ ರಂಗನಾಥ್, ಕುಮಾರ್ ಗೋವಿಂದ್, ತಾರಾ, ಅವಿನಾಶ್ ಪಾತ್ರಧಾರಿಗಳಾಗಿದ್ದರೆ[].ಈ ಚಿತ್ರವು 'U' ಪ್ರಮಾಣಪತ್ರ ವರ್ಗಕ್ಕೆ ಸೇರಿದೆ.ಇದನ್ನು ಬೆಂಗಳೊರಿನಲ್ಲಿ ಪ್ರಮಾಣೀಕರಿಸಲಾಗಿದೆ.ಇದರ ಪ್ರಮಾಣಪತ್ರ ಸಂಖ್ಯೆ 19693-U. ೨೨/೩/೧೯೯೫ ರಂದು ಈ ಚಿತ್ರವನ್ನು ದಾಖಲಿಸಲಾಗಿದೆ.[]

ಚಲನಚಿತ್ರದ ವಿಮರ್ಶೆ:

       ನಾಗರಿಕ ಸಮಾಜದಲ್ಲಿ, ಹೆಣ್ಣಿನ ಶೋಷಣೆ ನದೆಯುತ್ತಲೇ ಇದೆ.ಇದರ ಸುತ್ತ ಹೆಣೆದಿರುವಂತಹ ಚಿತ್ರ 'ಓ ಗಂಡಸರೇ ನೀವೆಶ್ತು ಒಳ್ಳೆಯವರು?.

ಜಾನಕಿಗೆ (ಸುಮನ್ ರಂಗನಾಥ್) ,ಗಂಡಸರು ಎಂದರೆ ಅಸಹ್ಯ. ಗಂಡಸರು,ಹೆಂಗಸರನ್ನು ಬರಿ ಕೆಟ್ಟ ದ್ರಿಷ್ಟಿಯಿಂದ ನೋಡುತ್ತಾರೆ,ಅವರನ್ನು ಶೋಷಣೆ ಮಾಡುತ್ತಾರೆ ಎಂದು ನಂಬಿದ ಹೆಣ್ಣು ಆಕೆ. ರಾಮ (ರಮೇಶ್ ಅರವಿಂದ್) ಜಾನಕಿಯನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿರುತ್ತಾನೆ. ಆಕೆ ಅವನ ಪ್ರೀತಿಯನ್ನು ಸ್ವೀಕರಿಸಿ ಅವನನ್ನು ತನ್ನ ಬಾಳ ಸಂಗಾತಿಯಾಗಿ ಒಪ್ಪಿಕೊಳ್ಳುತ್ತಾಳೆ. ಮದುವೆಯ ಶಾಸ್ತ್ರಗಳೆಲ್ಲವೂ ಹೆಣ್ಣಿನ ಶೋಷಣೆಗೆ ಒಡ್ಡಿಯಾಗುವ ಬಲೆಗಳು ಎಂದು ನಂಬಿದವಳು.ಇಂತಹ ಹೆಣ್ಣಿನ ಜೀವನದ ಕಥೆ ಇದಾಗಿದೆ.

       ಆಕೆ ತನ್ನ boss ಜೊತೆಗೆ ಸಲಿಗೆಯಿಂದ ಬೆರೆಯುತ್ತಿರುವುದನ್ನು ನೋಡಿ ರಾಮ್ ಗೆ  ಸಹಿಸಿಕೊಳ್ಳಲಾಗುವುದಿಲ್ಲ. ಆದರೆ ಆಕೆ, ಗಂಡು-ಹೆಣ್ಣು ಸಮಾನತೆಯಿಂದ,ಸಹಜೀವಿಗಳಾಗಿ ಬಾಳಬೇಕು ಎಂದು ನಂಬಿದವಳು. ಆಕೆಯ ಮೇಲಿನ ಪ್ರೀತಿ ಅವನನ್ನು ಕುರುಡು ಮಾಡಿ,ತಾನು ಏನು ಮಾಡುತ್ತಿರುವೆ ಎನ್ನುವ ಪರಿವು ಅವನಿಗಿರಲಿಲ್ಲ. ಆಕೆ ತನ್ನವಳಾಗಿಯೇ ಇರಬೇಕೆಂದು, ಅವಳನ್ನು ಮನೆಯಲ್ಲಿ ಕೂಡಿಹಾಕುವ ಮೂಲಕ ಅವಳ ಶೋಷಣೆ ಮಾಡಿದ. ಇದರಿಂದಾಗಿ,ಗಂಡಸರ ಮೇಲಿದ್ದ ಒಂದಿಷ್ಟು ನಂಬಿಕೆಯನ್ನೂ ಅವಳು ಕಳೆದುಕೊಂಡಳು. ತನ್ನ ಪತಿಯ ವರ್ತನೆಯಿಂದ ಬೇಸತ್ತ ಅವಳು ತನ್ನ ತವರು ಮನೆಗೆ ಹಿಂತಿರುಗಿದಳು. ತನ್ನ ಆತ್ಮೀಯ ಗೆಳೆಯನಾದ ತನ್ನ boss, ಅವಳ ಸಾಂಸಾರಿಕ ಬದುಕನ್ನು ಸರಿ ಮಾಡುವ ಪ್ರಯತ್ನ ಮಾಡುತ್ತಾನೆ. ಆದರೆ ಗಂಡಸರ ಮೇಲಿದ್ದ ಆಕೆಯ ಅಸೂಯೆ ಅವಳನ್ನು ಹಿಂತಿರುಗದಂತೆ ಮಾಡಿತ್ತು. ಇದಾದ ಕೆಲವು ದಿನಗಳ ನಂತರ,ಅವಳ ಆತ್ಮೀಯ ಗೆಳೆಯನಾಗಿದ್ದ ಅವಳ boss, ಇದ್ದಕ್ಕಿದ್ದಂತೆ ಬದಲಾಗುತ್ತಾನೆ. ಅವನು ಅವಳನ್ನು ದ್ವೇಷಿಸಲಾರಂಭಿಸುತ್ತಾನೆ. ಆಕೆ ಕಾರಣವನ್ನು ಕೇಳಿದರೆ, ಅವನು ಹೇಳುತ್ತಿರಲಿಲ್ಲ. ಆದರೆ ಸಧ್ಯದಲ್ಲಿಯೇ ಆಕೆಗೆ ಸತ್ಯದ ಅರಿವಾಗುತ್ತದೆ,ಅವನ ನಿಜವಾದ ಗುಟ್ಟು ಅವಳಿಗೆ ತಿಳಿಯುತ್ತದೆ.ಆದರೆ ಅಷ್ಟರಲ್ಲಾಗಲೇ ಅವಳ ಜೀವನವು ತಿರುಗು-ಮುರುಗಾಗಿರುತ್ತದೆ.ಅವಳು ನಂಬಿದ್ದೇ ಕೊನೆಗೆ ನಿಜವಾಗುತ್ತದೆ.' ಓ ಗಂಡಸರೇ,ನೀವೆಷ್ಟು ಒಳ್ಳೆಯವರು?' ಎಂಬ ಪ್ರಶ್ನೆ ಮೂಡುತ್ತದೆ
  1. https://kannadamoviesinfo.wordpress.com/2015/04/22/o-gandasare-neeveshtu-olleyavaru-1998/
  2. http://movies.syzygy.in/censor/o-gandasare-neevestu-olleyavaru-celluloid