ಸದಸ್ಯ:Chandanakm2001/ನನ್ನ ಪ್ರಯೋಗಪುಟ
ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರವಾಸಿ ತಾಣಗಳು
ಬದಲಾಯಿಸಿಚಿಕ್ಕಬಳ್ಳಾಪುರ ಕರ್ನಾಟಕದ ಜಿಲ್ಲೆಗಳಲ್ಲಿ ಒಂದು. ಮುಂಚೆ ಕೋಲಾರ ಜಿಲ್ಲೆಯಲ್ಲಿನ ಒಂದು ತಾಲೂಕು ಆಗಿದ್ದ ಇದು ೨೦೦೮ ರಲ್ಲಿ ಜಿಲ್ಲಾ ಅಡಳಿತ ಕೇಂದ್ರವಾಯಿತು. ಈ ಜಿಲ್ಲೆಗೆ ಸರ್. ಎಮ್. ವಿಶ್ವೇಶ್ವರಯ್ಯ ಜಿಲ್ಲೆ ಎಂದು ನಾಮಕರಣ ಮಾಡುವ ಅಪೇಕ್ಷೆ ಜನರಲ್ಲಿದೆ. ಇಲ್ಲಿಗೆ ಹತ್ತಿರ ಇರುವ ನಂದಿ ದೇವಸ್ಥಾನ ಬಹಳ ಪ್ರಾಚೀನ ದೇವಸ್ಥಾನ. . ಇಲ್ಲಿಗೆ ಸಮೀಪ (೨೫ ಕಿ.ಮಿ.) ಇರುವ ಮಾಕಿರೆಡ್ಡಿಪಲ್ಲಿಯಲ್ಲಿ ಮುತರಾಯಸ್ವಾಮಿ ದೇವಸ್ಥಾನವು ಸಹ ಬಹಳ ಪ್ರಾಚೀನವಾದ ದೇವಸ್ಥಾನ. ಇಲ್ಲಿ ಶ್ರೀರಾಮ ನವಮಿಯ ದಿನ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ನಂದಿ ಬೆಟ್ಟ ಇಲ್ಲಿಯ ಪ್ರಮುಖ ಗಿರಿಧಾಮ.ಆವಲಬೆಟ್ಟ ಪ್ರಸಿದ್ಧ ಸ್ಥಳ. ಚಿಕ್ಕಬಳ್ಳಾಪುರ ಮೆಣಸಿನಕಾಯಿ ತುಂಬ ಪ್ರಸಿದ್ಧಿ. ಇಲ್ಲಿನ ರೈತ ಸಮುದಾಯ ಬಹಳ ಪ್ರಗತಿ ಪರ ರೈತರನ್ನು ಹೊಂದಿದೆ.
ವಿಶ್ವೇಶ್ವರಯ್ಯ ಎಂದು ನಾಮಕರಣ ಮಾಡುವ ಅಪೇಕ್ಷೆ ಜನರಲ್ಲಿದೆ.
ಪ್ರವಾಸ ತಾಣಗಳು.
ಬದಲಾಯಿಸಿಚಿಕ್ಕಬಳ್ಳಾಪುರದಲ್ಲಿನೀರಿಗೆ ಬರವಿದೆ. ಆದರೆ, ಪ್ರವಾಸಿ ತಾಣಗಳಿಗೆ ಬರವಿಲ್ಲ. ಪ್ರೇಮಿಗಳ ಸ್ವರ್ಗವೆಂದೇ ಪ್ರಸಿದ್ಧ ಪಡೆದಿರುವ ಗಿರಿಧಾಮ ನಂದಿ ಬೆಟ್ಟ, ಸ್ಕಂದಗಿರಿ, ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್ ಎಂದೇ ಹೆಸರಾಗಿರುವ ವಿದುರಾಶ್ವತ್ಥ ಸೆಲ್ಫಿ ಪ್ರೇಮಿಗಳ ಹಾಟ್ ಫೇವರಿಟ್ ಆವಲಬೆಟ್ಟ, ಯೋಗಿನಾರೇಯಣನಿರುವ ಕೈವಾರ, ಜನಪ್ರಿಯ ದರ್ಗಾವಿರುವ ಮುರಗಮಲ್ಲ, ಕೈಲಾಸಗಿರಿ ಮುಂತಾದ ಹಲವು ಪ್ರವಾಸಿ ತಾಣಗಳು ಜಿಲ್ಲೆಯ ಕಳಶದಂತಿವೆ. ಸಾವಿರಾರು ಪ್ರವಾಸಿಗರು ಬಂದು ಹೋಗುತ್ತಾರೆ. ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಅಂತಹ ಪ್ರವಾಸಿ ತಾಣಗಳ ಪುಟ್ಟ ಪರಿಚಯ ನಿಮಗಾಗಿ.
ನಂದಿಬೆಟ್ಟ.
ಬದಲಾಯಿಸಿನಂದಿಬೆಟ್ಟ ಜಿಲ್ಲೆಗೆ ಕಳಶವಿದ್ದಂತೆ. ಬೆಂಗಳೂರು ಮಾರ್ಗವಾಗಿ ಬರುವವರೆಲ್ಲನಂದಿಬೆಟ್ಟದ ದರ್ಶನ ಮಾಡಿಕೊಂಡೇ ಚಿಕ್ಕಬಳ್ಳಾಪುರ ಪ್ರವೇಶಿಸುತ್ತಾರೆ. ಚಳಿಗಾಲ ಮತ್ತು ಮಳೆಗಾಲದಲ್ಲಿಸದಾ ಮಂಜಿನಿಂದ ಕೂಡಿರುವ ಈ ಬೆಟ್ಟದಲ್ಲಿಹಲವು ವಿಶಿಷ್ಟ ಸಂಗತಿಗಳಿವೆ. ಗಾಂಧೀಜಿ, ನೆಹರೂ ಸೇರಿದಂತೆ ಅನೇಕ ಗಣ್ಯರು, ಸ್ವಾತಂತ್ರಯ ಹೋರಾಟಗಾರರು ಈ ಗಿರಿಧಾಮದಲ್ಲಿವಿಶ್ರಾಂತಿ ಪಡೆದು ಹೋಗಿದ್ದಾರೆ. ಟಿಪ್ಪು ಸುಲ್ತಾನ್ ತಪ್ಪಿತಸ್ಥರನ್ನು ಇದೇ ಬೆಟ್ಟದಿಂದ ಕೆಳಗೆ ತಳ್ಳಿ ಶಿಕ್ಷಿಸುತ್ತಿದ್ದ ಟಿಪ್ಪು ಡ್ರಾಪ್ ಇಲ್ಲಿನ ಅಟ್ರಾಕ್ಷನ್. ವೀಕೆಂಡ್ ಬಂದರೆ ಬೆಂಗಳೂರಿನಿಂದ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.
ಚಾರಣ ಮಾಡುವ ಸಾ[೧]ಹಸಿಗರಿಗೆ ತಾಲೂಕಿನ ಸ್ಕಂದಗಿರಿ (ಕಳವಾರ ಬೆಟ್ಟ) ಸ್ವರ್ಗ ಎಂದೆನಿಸಿಕೊಂಡಿದೆ. ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿಚಾರಣಕ್ಕೆ ಅವಕಾಶ ಮಾಡಿಕೊಟ್ಟಿರುವುದರಂದ ಚಾರಣಕ್ಕೆಂದೇ ಇದು ಫೇಮಸ್. ಇಲ್ಲಿನ ಪ್ರಕೃತಿ ಸೌಂದರ್ಯ ಮನ ಸೆಳೆಯುತ್ತದೆ
ರಂಗನಾಥಸ್ವಾಮಿ ದೇವಸ್ಥಾನ.
ಬದಲಾಯಿಸಿಚಿಕ್ಕಬಳ್ಳಾಪುರದ ತಾಲೂಕಿನ ತಿಪ್ಪೇನಹಳ್ಳಿ ಬಳಿ ಇರುವ ರಂಗನಾಥಸ್ವಾಮಿ ದೇವಸ್ಥಾನ ರಂಗಸ್ಥಳವೆಂದೇ ಎಂದು ಪ್ರಸಿದ್ಧಿ ಪಡೆದಿದೆ. ಸಂಕ್ರಾಂತಿ ಹಬ್ಬದಂದು ಮುಂಜಾನೆ ಸೂರ್ಯನ ಕಿರಣಗಳು ರಂಗನಾಥ ಸ್ವಾಮಿಯ ಪಾದದ ಮೇಲೆ ಬೀಳುವುದು ಈ ಕ್ಷೇತ್ರದ ವೈಶಿಷ್ಟತ್ರ್ಯ. ಪ್ರಾಚೀನ ಕಾಲದ ಈ ದೇಗುಲದ ಶಿಲ್ಪಕಲೆ, ವಿನ್ಯಾಸ ಭಕ್ತರು ಮತ್ತು ಕಲಾರಸಿಕರನ್ನು ಏಕಕಾಲದಲ್ಲಿಸೆಳೆಯುತ್ತದೆ.
ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ದಕ್ಷಿಣ ಭಾರತದ ಜಲಿಯನ್ ವಾಲಿಬಾಗ್ ಎಂದೇ ಜನಪ್ರಿಯ. 1938ರ ಏಪ್ರಿಲ್ 25ರಂದು ಸಾವಿರಾರು ಸ್ವಾತಂತ್ರತ್ರ್ಯ ಹೋರಾಟಗಾರರು ಇಲ್ಲಿ''ಧ್ವಜ ಸತ್ಯಾಗ್ರಹ'' ಚಳವಳಿಗಾಗಿ ಸಭೆ ನಡೆಸಿದ್ದರು. ಸಭೆಯನ್ನು ನಿಲ್ಲಿಸಲು ಬಂದ ಪೊಲೀಸರು ಮೊದಲು ಲಾಠಿ ಪ್ರಹಾರ ನಡೆಸಿ ಬಳಿಕ ಗುಂಡು ಹಾರಿಸಿದ್ದರು. ಪರಿಣಾಮ, ಅನೇಕ ಹೋರಾಟಗಾರರು ಸ್ಥಳದಲ್ಲಿಯೇ ಹುತಾತ್ಮರಾದರು. ಈ ಘಟನೆ ವಿಧುರಾಶ್ವತ್ಥ ಹತ್ಯಾಕಾಂಡ ಎಂದೇ ಸ್ವಾತಂತ್ರತ್ರ್ಯ ಚಳುವಳಿಯಲ್ಲಿದಾಖಲಾಗಿದೆ. ಈ ವೀರಭೂಮಿ ಕೆಚ್ಚು, ಸಾಹಸದ ಸ್ಮಾರಕವಾಗಿ ಜನರನ್ನು ಸೆಳೆಯುತ್ತಿದೆ.
ಕೈವಾರ.
ಬದಲಾಯಿಸಿಚಿಂತಾಮಣಿ ತಾಲೂಕಿನಲ್ಲಿರುವ ಕೈವಾರಕ್ಕೂ ಮತ್ತು ಮಹಾಭಾರತಕ್ಕೂ ಸಂಬಂಧವಿದೆ ಎಂಬ ಐತಿಹ್ಯವಿದೆ. ಅಜ್ಞಾತವಾಸ ಸಂದರ್ಭದಲ್ಲಿಪಾಂಡವರು ಇಲ್ಲಿವಾಸವಿದ್ದರು ಎಂಬುದು ಪ್ರತೀತಿ. ಕೈವಾರದ ಬೆಟ್ಟದಲ್ಲಿಯೋಗಿ ನಾರೇಯಣ, ಅಮರ ನಾರಾಯಣ ಮತ್ತು ಭೀಮೇಶ್ವರ ದೇವಾಸ್ಥಾನಗಳಿವೆ. ಯೋಗಿ ನಾರಾಯಣ ದೇವಾಸ್ಥಾನದ ಆವರಣದಲ್ಲಿ''ನಾದ ಸುಧಾರಸ' ಮಂಟಪ ನಿರ್ಮಿಸಲಾಗಿದೆ. ಇಲ್ಲಿಪ್ರತಿವರ್ಷ ನಡೆಸುವ ಸಂಗೀತೋತ್ಸವ ವಿಶ್ವಪ್ರಸಿದ್ಧವಾಗಿದೆ. ಸಾವಿರಾರು ಭಕ್ತರು, ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.
ಬಾಗೇಪಲ್ಲಿಯ ಹೆಗ್ಗುರುತು ಗುಮ್ಮನಾಯಕನ ಕೋಟೆ
ಬಾಗೇಪಲ್ಲಿಯಿಂದ 16ಕಿ.ಮೀ ದೂರದಲ್ಲಿರುವ ಗುಮ್ಮನಾಯಕನ ಕೋಟೆ, ಈ ತಾಲೂಕಿನ ಹೆಗ್ಗುರುತು. 1350ರಲ್ಲಿಬಾಗೇಪಲ್ಲಿಯನ್ನು ಆಳುತ್ತಿದ್ದ ಗುಮ್ಮನಾಯಕ ಈ ಕೋಟೆ ನಿರ್ಮಿಸಿದ್ದರು ಎನ್ನಲಾಗಿದೆ. ಈಗಲೂ ಭದ್ರವಾಗಿರುವ ಕೋಟೆ ಸಾಹಸಿಗರನ್ನು, ಇತಿಹಾಸಪ್ರಿಯರನ್ನು ಸೆಳೆಯುತ್ತಿದೆ.
ಚಿಕ್ಕಬಳ್ಳಾಪುರದಲ್ಲಿ ಪ್ರವಾಸಿ ಆಕರ್ಷಣೆಗಳು ಕಡಿಮೆ ಇಲ್ಲ, ಈ ಸುಂದರವಾದ ಸ್ಥಳದಲ್ಲಿ ಪ್ರಸಿದ್ಧವಾದ ಪ್ರವಾಸಿ ತಾಣಗಳಿದ್ದು, ಹಲವಾರು ರಾಜ್ಯಗಳಿಂದ ಭೇಟಿ ನೀಡುತ್ತಾರೆ.
ಬೆಂಗಳೂರಿನ ಚಿಕ್ಕಬಳ್ಳಾಪುರಕ್ಕೆಕೇವಲ 58 ಕಿ ಮೀ ದೂರದಲ್ಲಿದೆ, ವಾರಾಂತ್ಯದ ಸಮಯದಲ್ಲಿ ಜನರು ಚಿಕ್ಕಬಳ್ಳಾಪುರ ಕ್ಕೆ ಭೇಟಿ ನೀಡುತ್ತಾರೆ ಹಲವಾರು ಪ್ರವಾಸಿಗಳಿಗೆ ಚಿಕ್ಕಬಳ್ಳಾಪುರದಲ್ಲಿ ವಿಶೇಷವಾದದ್ದು ಎಂದರೆ ನಂದಿ ಬೆಟ್ಟ.
ಚಿಕ್ಕಬಳ್ಳಾಪುರದ ಆಸುಪಾಸಿನಲ್ಲಿ ಅನೇಕ ಪ್ರವಾಸಿ ಆಕರ್ಷಣೆಗಳುು ಇದ್ದು.
ಅವು ಯಾವ್ಯಾವು ಅಂದರೆ
ವಿವೇಕಾನಂದ ಫಾಲ್ಸ್
ಈ ಸುಂದರವಾದ ವಿವೇಕಾಂನಂದ ಫಾಲ್ಸ್ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದೆ. ನಗರದಿಂದ ಸುಮಾರು 13 ಕಿ. ಮೀ ದೂರದಲ್ಲಿರುವ ಈ ಅದ್ಭುತವಾದ ಸ್ಥಳಕ್ಕೆ ಕೆಥಾನಹಳ್ಳಿಯ ಮೂಲಕ ಸಾಗಬೇಕು. ಅಲ್ಲಿಂದ 1 ಕಿ. ಮೀ ದೂರ ನಡೆದುಕೊಂಡೇ ಹೋಗಬೇಕು. ಈ ಜಲಪಾತದ ಬಳಿ ಪ್ರಶಾಂತತೆಯ ಜೊತೆ ಜೊತೆಗೆ ನೀರಿನ ಝಳು ಝಳು ಹರಿಯುವಿಕೆಯನ್ನು ಆನಂದಿಸಬಹುದಾಗಿದೆ.
ರಂಗನಾಥ ಸ್ವಾಮಿ ದೇವಾಲಯ
ರಂಗನಾಥ ಸ್ವಾಮಿ ದೇವಾಲಯ ಅಥವಾ ರಂಗಸ್ಥಳವು ಗೌರಿಬಿದನೂರಿನ ಹಳ್ಳಿಗೆ ಚಿಕ್ಕಬಳ್ಳಾಪುರದ ಕೆಳಗಿನ ಮಾರ್ಗವಾಗಿ ಕೇವಲ 5 ಕಿ.ಮೀ ದೂರದಲ್ಲಿದೆ. ಈ ದೇವಾಲಯದಲ್ಲಿ ಮಹಾವಿಷ್ಣುವು ನೆಲೆಸಿದ್ದಾನೆ. ಅದ್ಭುತವಾದ ಪ್ರತಿಮೆಗಳು, ಕೆತ್ತನೆಗಳಿಂದ ದೇವಾಲಯವು ಕಂಗೊಳಿಸುತ್ತಿದೆ. ಕಪ್ಪು ಕಲ್ಲಿನ ಮೇಲೆ ವಿಜಯನಗರ ಬಗ್ಗೆ ಕೆತ್ತನೆಗಳನ್ನು ಇಲ್ಲಿ ಕಾಣಬಹುದಾಗಿದೆ.
ಕೈವಾರ
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿರುವ ಕರ್ನಾಟಕದ ಒಂದು ಸಣ್ಣ ಪಟ್ಟಣವಾದ ಕೈವಾರ ಕರ್ನಾಟಕದ ಪ್ರಮುಖ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಈ ಸ್ಥಳವು ವಿಶೇಷವಾಗಿ ಐತಿಹಾಸಿಕ ಮಹತ್ವವನ್ನು ಹೊಂದಿದೆ.
ಮಹಾಭಾರತದ ಪ್ರಕಾರ ಪಾಂಡವರ ವನವಾಸದ ಸಮಯದಲ್ಲಿ ಈ ಸ್ಥಳದಲ್ಲಿಯೇ ಸ್ವಲ್ಪ ಕಾಲ ಇದ್ದರು ಎಂದು ಸ್ಥಳ ಪುರಾಣವು ತಿಳಿಸುತ್ತದೆ. ಪಾಂಡವರಲ್ಲಿನ ಭೀಮನು ಬಕಾಸುರನನ್ನು ಈ ಸ್ಥಳದಲ್ಲಿಯೇ ಕೊಂದನು ಎಂದು ಹೇಳಲಾಗುತ್ತದೆ. ಚಿಕ್ಕಬಳ್ಳಾಪುರದಿಂದ ಕೈವಾರಕ್ಕೆ 25 ಕಿ.ಮೀ ದೂರದಲ್ಲಿದೆ.
ಭೋಗನಂದೀಶ್ವರ ದೇವಾಲಯ
ಭೋಗನಂದೀಶ್ವರ ದೇವಾಲಯಕ್ಕೆ ಸುಮಾರು ಈಚಿಕ್ಕಬಳ್ಳಾಪುರದಿಂದ 21 ಕಿ.ಮೀ ದೂರದಲ್ಲಿದೆ. ದ್ರಾವಿಡ ಶೈಲಿಯಲ್ಲಿ ಬಾನಾ ರಾಜವಂಶದ ರತ್ನವಲ್ಲಿ ಎಂಬ ರಾಣಿ
ನಿರ್ಮಾಣ ಮಾಡಿದರು. ಈ ದೇವಾಲಯವು ತನ್ನ ಪ್ರಾಚೀನ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯವು ನಂದಿ ಗ್ರಾಮದಲ್ಲಿದೆ ಮತ್ತು ಇದು ಇತಿಹಾಸ ಮತ್ತು ವಾಸ್ತುಶಿಲ್ಪದ ಪ್ರೇಮಿಗಳಿಗೆ ಒಳ್ಳೆಯ ಸ್ಥಳವಾಗಿದೆ.
ನಂದಿ ಬೆಟ್ಟ
ನಂದಿ ಬೆಟ್ಟವು ರಾಜ್ಯ ಹೆದ್ದಾರಿಯಿಂದ ಚಿಕ್ಕಬಳ್ಳಾಪುರಕ್ಕೆ 10 ಕಿ.ಮೀ ದೂರದಲ್ಲಿದೆ. ಬೆಟ್ಟದ ಸುತ್ತಲೂ ಸುಂದರವಾದ ಸೌಂದರ್ಯವನ್ನು ವೀಕ್ಷಿಸಲು ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಪ್ರವಾಸಿಗರು ಟಿಪ್ಪು ಸುಲ್ತಾನ್ ನಿರ್ಮಾಸಿದ ಕೋಟೆಯ ಕಾರಣದಿಂದ ನಂದಿದುರ್ಗ ಕೋಟೆ ಪ್ರಸಿದ್ಧವಾಗಿದೆ. ಇಲ್ಲಿ ದೇವಾಲಯಗಳು, ಟಿಪ್ಪು ಸುಲ್ತಾನ್ ಅರಮನೆಗಳು, ಟಿಪ್ಪು ಡ್ರಾಪ್, ಸುಂದರವಾದ ಪ್ರಕೃತಿ ದೃಶ್ಯವನ್ನು ಕಾಣಬಹುದು. ಪ್ರಕೃತಿಯ ಮಡಿಲಲ್ಲಿ ಕೆಲವು ಸಮಯಗಳ ಕಾಲ ಇರಲು ಬಯುಸುವವರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ
ಮುಕ್ತಾಯ...
ಬದಲಾಯಿಸಿಉಲ್ಲೇಖಗಳು
- ↑
ನಂದಿಬೆಟ್ಟ