CHAITHRA659
ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ ಆದರೂ ಹಳ್ಳಿಯ ಜೀವನದ ಬಗೆಗೆ ಒಲವು ಜಾಸ್ತಿ ಇರುವ ಹುಡುಗಿ ನಾನು ಚೈತ್ರ. ಶಾಲೆಯ ದಿನಗಳಿಂದಲೂ ಓದಿನಲ್ಲಿ ಮುಂದಿದ್ದೆ. ವಿವೇಕಾನಂದ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ್ದೆ. ಶಾಲೆಯ ದಿನಗಳಲ್ಲಿ ಓದು ಬರಹದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಹೆಚ್ಚಿನ ಭಾಗವಹಿಸುವಿಕೆ ತೋರಿದ್ದೆ. ಶಾಲೆಯ ದಿನಗಳಲ್ಲಿ ಅನೇಕ ಸ್ಪಧೆ೯ಗಳಲ್ಲಿ ಭಾಗವಹಿಸಿದ್ದೆ. ಅವುಗಳಲ್ಲಿ ನೃತ್ಯ , ಸಂಗೀತ , ರಂಗೋಲಿ , ನಾಟಕ , ಮೂಕಾಭಿನಯ ಹಾಗೂ ಕ್ರೀಡೆಯಲ್ಲೂ ಚುರುಕು ಭಾಗವಹಿಸುವಿಕೆ ತೋರಿದ್ದೇನೆ. ಶಾಲೆಯಲ್ಲಿ ನಾನು ಅನೇಕ ವಿಚಾರಗಳನ್ನು ಕಲಿತುಕೊಂಡೆ. ಈ ಪ್ರಪಂಚದಲ್ಲಿ ಹುಟ್ಟಿದ ಬಳಿಕ ಏನೇ ಕಷ್ಟಗಳು ಬಂದರೂ ಎದುರಿಸುವ ಶಕ್ತಿ ತುಂಬಿದೆ. ಸ್ನೇಹ ಹಾಗೂ ಸ್ನೇಹಿತರ ಬೆಲೆಯನ್ನು ಶಾಲಾ ದಿನಗಳು ಕಲಿಸಿಕೊಟ್ಟಿದೆ ಶಾಲೆಯ ದಿನಗಳೆಂದರೆ ನನಗೆ ಮೊದಲು ನೆನಪಾಗುವುದೆಂದರೆ ನಮ್ಮ ಶಾಲೆಯಿಂದ ನಮ್ಮನ್ನು ಶೈಕ್ಷಣಿಕ ಪ್ರವಾಸಕ್ಕೆಂದು ಕರೆದುಕೊಂಡು ಹೋಗುತ್ತಿದ್ದ ದಿನಗಳು. ಇದರಿಂದ ನನ್ನ ಬುದ್ಧಿವಂತಿಕೆ ಮತ್ತಷ್ಟು ಹೆಚ್ಚಾಯಿತು ಎಂದರೆ ತಪ್ಪಾಗಲಾರದು. ದೇಶ ಸುತ್ತಿ ನೋಡು , ಕೋಶ ಓದಿ ನೋಡು ಎಂಬಂತೆ. ಅನೇಕ ಸ್ಥಳಗಳಿಗೆ ಹೋಗಿದ್ದೆನು. ಪದ್ಮವಿಭೂಷಣ ಪ್ರಶಸ್ತಿ , ಜ್ಞಾನಪೀಠ ಪುರಸ್ಕಾರ , ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಹೀಗೆ ಮುಂತಾದ ಪ್ರಶಸ್ತಿಗಳನ್ನು ಪಡೆದಿರುವ ಕನ್ನಡ ಸಾಹಿತ್ಯ ಕ್ಷೇತ್ರದ ಹಾಗೂ ಕನಾ೯ಟಕದ ಅತಿ ಅಮೂಲ್ಯ ಹಾಗೂ ಅದ್ಭುತ ಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರ ಜನ್ಮಸ್ಥಳ ಆದ ತೀಥ೯ಹಳ್ಳಿಗೆ ಭೇಟಿ ನೀಡಿದ್ದೆನು. ಕುವೆಂಪು ಅವರ ಮನೆಗೆ ಹೋಗಿದ್ದೆನು. ಅವರ ಮನೆಗೆ ಕಾಲಿಡುತ್ತಿದ್ದಂತೆ ನಮಗೆಲ್ಲಾ ಒಂದು ರೀತಿಯ ಶಕ್ತಿ ತುಂಬಿದಂತೆ ಆಯಿತು. ಅವರ ಸರಳ ಹಾಗೂ ಸುಂದರ ಜೀವನವನ್ನು ಆ ಸ್ಥಳ ಬಿಂಬಿಸುತಿತ್ತು. ಅವರ ಮನೆಯ ಸುತ್ತಲಿನ ಹಚ್ಚ ಹಸಿರು ಹಾಗೂ ತಂಪಾದ ವಾತಾವರಣವು ಮನಮೋಹಕವಾಗಿದೆ. ಕುವೆಂಪು ಅವರು ಕನ್ಡಡ ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆಗಳ ನೆನಪು ಉಂಟು ಮಾಡಿತ್ತು. ಆ ಸ್ಥಳವು ನಮ್ಮಂತಹ ಯುವ ಪೀಳಿಗೆಗೆ ಮುಂದಿನ ಕವಿಗಳಾಗಲು ಪ್ರೋತ್ಸಾಹ ನೀಡುವಂತೆ ಇತ್ತು. ಮತ್ತೊದು ತರಗತಿಯಲ್ಲಿ ಇದ್ದಾಗ ಚಿತ್ರದುಗ೯ಕ್ಕೆಂದು ಪ್ರವಾಸಕ್ಕೆ ಹೋಗಿದ್ದೆವು. ಕಲ್ಲಿನ ಕೋಟೆಗೆಂದು ಹೆಸರುವಾಸಿ ಆಗಿರುವಂತಹ ಸ್ಥಳ ಚಿತ್ರದುಗ೯ ಎನ್ನಬಹುದು. ಇದು ಐತಿಹಾಸಿಕ ಹಾಗೂ ಆಕಷ೯ಕವಾದ ಸ್ಥಳ ಆಗಿದೆ. ವೀರವನಿತೆ ಒನಕೆ ಓಬವ್ವನ ಸಾಹಸಗಳನ್ನು ಆ ಕೋಟೆಯ ಕಲ್ಲುಗಳು ಸಾರಿ ಹೇಳುವಂತೆ ಇವೆ. ಅಲ್ಲಿನ ಕೊಳ ಹಾಗೂ ವೈರಿಗಳು ನುಗ್ಗಿದ್ದ ಕಿಂಡಿ ಮತ್ತು ಓಬವ್ವನ ಮನೆ ಹಾಗೂ ಯುದ್ಧದಲ್ಲಿ ಬಳಸುತ್ತಿದ್ದ ಆಯುಧಗಳನ್ನೆಲ್ಲಾ ನೋಡಲು ಕುತೂಹಲಕಾರಿ ಆಗಿರುತ್ತಿತ್ತು. ಅಲ್ಲಿನ ಕೋಟೆಯನ್ನು ನೋಡುತ್ತಿದ್ದರೆ ಅಂದಿನ ಇತಿಹಾಸವೇ ಕಣ್ಣುಗಳ ಮುಂದೆ ಬಂದಂತಾಗುತ್ತದೆ. ಕೋಟೆಯನ್ನು ನೋಡಲು ಎರಡು ಕಣ್ಣುಗಳು ಸಾಲುವುದಿಲ್ಲ. ಕೋಟೆಯನ್ನು ಕಟ್ಟಿರುವ ರೀತಿ ಹಾಗೂ ಬಳಸಿರುವ ಕಲ್ಲು ಹಾಗೂ ಬಂಡೆಗಳ ಮಾಹಿತಿ ಸಿಕ್ಕಿತು. ಓಬವ್ವನ ಧೈಯ೯ ಹಾಗೂ ಸಾಹಸ ಮೆಚ್ಚುವಂಥದ್ದು. ಹೈಸ್ಕೂಲಿನಲ್ಲಿ ಇದ್ದಾಗ ಹಂಪಿ , ಬೇಲೂರು , ಹಳೆಬೀಡು ಮುಂತಾದ ಐತಿಹಾಸಿಕ ಸ್ಥಳಗಳಿಗೆ ಪ್ರವಾಸಕ್ಕೆಂದು ಹೋಗಿದ್ದೆನು. ಬೇಲೂರು ಮತ್ತು ಹಳೆಬೀಡುಗಳಂತಹ ಸ್ಥಳಗಳಲ್ಲಿನ ದೇವಾಲಯಗಳು ಅತಿ ಆಕಷ೯ಕವಾಗಿ ಇರುತ್ತವೆ. ಅತ್ಯಂತ ಬುದ್ಧಿವಂತಿಕೆಯಿಂದ ಕಟ್ಟಿರುವಂತಹ ದೇವಾಲಯಗಳು ಅವು. ಪ್ರತಿಯೊಂದು ಕಲ್ಲಿನ ಮೇಲಿನ ಕೆತ್ತನೆಗಳು ಸುಂದರವಾಗಿ ಇವೆ. ಅಂದಿನ ದೇವಾಲಯಗಳನ್ನು ನೋಡಿದಾಗ ಅಂದಿನ ಜನರ ಜೀವನ ಶೈಲಿ ಹಾಗೂ ವೇಷಭೂಷಣಗಳನ್ನು ನೋಡಲು ಸಿಗುತ್ತದೆ. ಇಒತಹ ಸ್ಥಳಗಳ ಭೇಟಿಯಿಂದ ವಿದ್ಯಾಥಿ೯ಗಳಾದ ನಾವು ಹೆಚ್ಚು ಕಲಿಯಲು ಅನುಕೂಲ ಆಗಿತ್ತು. ಮುಂದಿನ ತರಗತಿಯಲ್ಲಿ ಅರಮನೆ ನಗರ ಎಂದು ಹೆಸರುವಾಸಿ ಆಗಿರುವ ಮೈಸೂರಿಗೆ ಭೇಟಿ ನೀಡಿದ್ದೆನು. ಮೈಸೂರಿನ ಅರಮನೆ , ಬೃಂದಾವನ ಉದ್ಯಾನವನ , ಸೇಂಟ್ ಫಿಲೋಮೆನಾಸ್ ಚಚ್೯ , ಕಾರಂಜಿ ಕೆರೆ , ಚಾಮುಂಡಿ ಬೆಟ್ಟ ಹೀಗೆ ಮುಂತಾದ ಪ್ರಸಿದ್ಧ ಜಾಗಗಳಿಗೆ ಭೇಟಿ ನೀಡಿದ್ದೆನು. ಮೈಸೂರಿನ ಅರಮನೆಯು ಒಡೆಯರ ಆಳ್ವಿಕೆಯನ್ನು ತೋರುತ್ತದೆ. ಮೈಸೂರಿನಲ್ಲಿದ್ದ ಶ್ರೀಮಂತಿಕೆ ಹಾಗೂ ವೈಭೋಗವನ್ನು ಅರಮನೆ ಪ್ರತಿಬಿಂಬಿಸುತ್ತದೆ .ಅಲ್ಲಿನ ಬೃಂದಾವನ ಉದ್ಯಾನವನವು ಮರ , ಗಿಡ , ಬಳ್ಳಿ ಹಾಗೂ ಹೂವುಗಳಿಂದ ತುಂಬಿದ್ದು ನೋಡುಗರ ಕಣ್ಣಗಳಿಗೆ ಹಬ್ಬದಂತೆ ಇರುತ್ತದೆ ಎನ್ನುವುದರಲ್ಲಿ ಸಂಶಯ ಇಲ್ಲ. ಕಾರಂಜಿ ಕೆರೆಯ ಸುತ್ತಲಿನ ವಾತಾವರಣ ಹಚ್ಚ ಹಸಿರಾಗಿರುತ್ತದೆ. ಚಾಮುಂಡಿ ಬೆಟ್ಟ ಹಾಗೂ ಸೇಂಟ್ ಫಿಲೋಮೆನಾಸ್ ಚಚ್೯ ಭಕ್ತಿಯ ಸಂಕೇತವಾಗಿವೆ. ಕೆ ಆರ್ ಎಸ್ ಅಣೆಕಟ್ಟು ನೋಡಲು ಅದ್ಭುತ ಆಗಿದೆ. ಮೈಸೂರು ಸ್ವಚ್ಛತೆಗೆ ಪ್ರಸಿದ್ಧ. ಹೀಗೆ ಶಾಲೆಯ ಪ್ರವಾಸದ ದಿನಗಳು ಅಮರ ಹಾಗೂ ಶ್ರೇಷ್ಠ ಎನ್ನಬಹುದು. ಹತ್ತನೆಯ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀಣ೯ ಆದೆನು. ನಂತರ ಕ್ರೈಸ್ಟ್ ಜೂನಿಯರ್ ಕಾಲೇಜಿಗೆ ಸೇರಿಕೊಂಡೆನು. ವಿಜ್ಞಾನದಲ್ಲಿ ಒಲವು ಹೆಚ್ಚು ಇರುವುದರಿಂದ ಪಿ ಯು ಸಿ ಯಲ್ಲಿ ವಿಜ್ಞಾನ ತೆಗೆದು ಕೊಂದೆನು. ಕಾಲೇಜಿನಲ್ಲಿ ಅನೇಕ ಸ್ಪಧೆ೯ಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳೂ ದೊರೆತಿವೆ. ಪಿ ಯು ಸಿ ಯಲ್ಲೂ ಉತ್ತಮ ಅಂಕಗಳನ್ನು ಪಡೆದು ಕ್ರೈಸ್ಟ್ ಯೂನಿವಸಿ೯ಟಿಗೆ ಸೇರಿಕೊಂಡಿದ್ದೇನೆ. ಡಿಗ್ರಿ ಮುಗಿದ ಬಳಿಕ ಆಹಾರ ವಿಜ್ಞಾನವನ್ನು ಓದ ಬೇಕೆಂಬ ಹಂಬಲವಿದೆ. ಆಹಾರ ತಜ್ಞೆ ಅಥವಾ ವಿಜ್ಞಾನಿ ಆಗುವ ಆಸೆ ಇದೆ. ಉತ್ತಮ ವಿಜ್ಞಾನಿ ಆಗಿ ದೇಶದ ಬೆಳವಣಿಗೆಗೆ ಸಹಕಾರಿ ಆಗುವಂತೆ ಮಾಡುವ ಆಸೆ ನನ್ನಲ್ಲಿ ಬಲವಾಗಿ ಇದೆ. ಮನಸ್ಸಿದ್ದರೆ ಮಾಗ೯ ಎನ್ನುವ ಮಾತುಗಳನ್ನು ಮನದಟ್ಟು ಮಾಡಿಕೊಳ್ಳುವುದರಿಂದ ಆತ್ಮಸ್ಥೈಯ೯ ಹೆಚ್ಚುತ್ತದೆ. ದೇಶದ ಉತ್ತಮ ಪ್ರಜೆ ಆಗುವುದರ ಜೊತೆ ಜೊತೆಗೆ ತಂದೆ ತಾಯಿಗೆ ಉತ್ತಮ ಮಗಳಾಗ ಬೇಕು.