ಹರುಕಿ ಮುರಕಮಿ

(ಸದಸ್ಯ:Bhavya gopal/sandbox ಇಂದ ಪುನರ್ನಿರ್ದೇಶಿತ)

ಹರುಕಿ ಮುರಕಮಿ ಅವರು ಜಪಾನ್‍ನಿನ ಪ್ರಸಿದ್ದವಾದ ಸಮಕಾಲೀನ ಲೇಖಕರು. ಅವರ ಪುಸ್ತಕ ಹಾಗು ಕಥೆಗಳು ಅತ್ಯುತ್ತಮ ಮಾರಾಟ ಪುಸ್ತಕಗಳಾಗಿ ಪ್ರಸಿದ್ದವಾಗಿ, ಸುಮಾರು ೫೦ ಭಾಷೆಗಳಿಗೆ ಭಾಷಾಂತರಿಸಲಾಗಿದೆ.[] ಅವರು ರಾಷ್ಟ್ರ ಹಾಗು ಅಂತರಾಷ್ಟ್ರಿಯ ಮಟ್ಟದಲ್ಲಿ ಹಲವಾರು ಬಹುಮಾನಗಳನ್ನು ಗೆದ್ದಿದ್ದಾರೆ.[][] ಅವರ ಪ್ರಸಿದ್ದ ಕಾದಂಬರಿಗಳು ಅ ವೈಲ್ದ್ ಶೀಪ್ ಛೀಸ್(೧೯೮೨), ನಾರ್ವೆಜಿಯನ್ ವುಡ್ (೧೯೮೭), ಕಾಫ಼್ಕಾ ಆನ್ ದಿ ಶೊರ್ (೨೦೦೨).

ಹರುಕಿ ಮುರಕಮಿ
村上 春樹
ಜನನ (1949-01-12) ಜನವರಿ ೧೨, ೧೯೪೯ (ವಯಸ್ಸು ೭೫)
ಜಪಾನಿನ ಕ್ಯೊಟೊ
ವೃತ್ತಿ
  • ಕಾದಂಬರಿಕಾರ
  • ಸಣ್ಣ ಕಥೆಗಾರ
  • ಪ್ರಬಂಧಕಾರ
  • ಅನುವಾದಕ
ಭಾಷೆಜಪಾನೀಸ್ ಭಾಷೆ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆವಾಸೆಡಾ ವಿಶ್ವವಿದ್ಯಾಲಯ
ಕಾಲಸಮಕಾಲೀನ
ಸಾಹಿತ್ಯ ಚಳುವಳಿ
  • ನವ್ಯ ಸಾಹಿತ್ಯ ಸಿದ್ಧಾಂತ
  • ಮಾಂತ್ರಿಕ ವಾಸ್ತವಿಕತೆ
  • ಆಧುನಿಕೋತ್ತರ ಸಾಹಿತ್ಯ
  • ಸಾಹಿತ್ಯಿಕ ವಾಸ್ತವಿಕತೆ
ಪ್ರಮುಖ ಕೆಲಸ(ಗಳು)
  • ನಾರ್ವೇಜಿಯನ್ ವುಡ್ (ಕಾದಂಬರಿ) (೧೯೮೭)
  • ವಿಂಡ್-ಅಪ್ ಬರ್ಡ್ ಕ್ರಾನಿಕಲ್ (೧೯೯೪–೯೫)
  • ಕಾಫ್ಕಾ ಆನ್ ದಿ ಶೋರ್ (೨೦೦೨)
  • ಮೆನ್ ವಿದೌಟ್ ವುಮೆನ್ (೨೦೧೪)

ಸಹಿ

www.harukimurakami.com

ಕುಟುಂಬ

ಬದಲಾಯಿಸಿ

ಮುರಕಮಿಯವರು ೧೯೪೯ ಜನವರಿ ೧೨ ರಂದು ಜಪಾನಿನ ಕ್ಯೊಟೊದಲ್ಲಿ ಹುಟ್ಟಿದರು.[] ಇವರು ಎರಡನೆ ವಿಶ್ವಯುದ್ದದ ನಂತರ ಜಪಾನ್ ಕಂಡ ಆರ್ಥಿಕ ಬೆಳವಣಿಗೆಯ ಸಮಯದಲ್ಲಿ ಬೆಳೆದವರು. ಅವರ ತಂದೆ ಭೌದ್ದ ಸನ್ಯಾಸಿಯ ಮಗನಾಗಿದ್ದರು.[] ಅವರ ತಾಯಿ ವ್ಯಾಪಾರಿಯ ಮಗಳಾಗಿದ್ದರು.[] ಮುರಕಮಿಯವರು ಒಬ್ಬನೆ ಮಗನಾಗಿದ್ದರು.

ಅವರಿಗೆ ಜಪಾನಿನ ಸಾಹಿತ್ಯ ಓದಿಸಿ ಬೆಳಸಿದರು.[] ಚಿಕ್ಕಂದಿನಿಂದಲೆ ಅವರು ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಪ್ರಭಾವಿತರಾಗಿದ್ದರು, ಪಾಶ್ಚಿಮಾತ್ಯ ಸಾಹಿತ್ಯ, ಸಂಗೀತ ಅವರಿಗೆ ಪ್ರೊತ್ಸಾಹ ನೀಡುತ್ತಿತ್ತು. ಅಮೆರಿಕಾ ಹಾಗು ಯೂರೋಪಿನ ಲೇಖಕರಾದ ಫ಼್ರಾನ್ಸ್ ಕಾಫ಼ಕಾ, ಗಸ್ಟೆವ್, ಚಾರ್ಲ್ಸ್ ಡಿಕನ್ಸ್ ಮುಂತಾದವರಿಂದ ಪ್ರಭಾವಿತರಾಗಿದ್ದರು. ಈ ಕಾರಣದಿಂದ ಜಪಾನಿನ ಬೇರೆ ಲೇಖಕರು ಅವರನ್ನು ವಿಭಿನ್ನವಾಗಿ ನೋಡುತ್ತಿದ್ದರು.

ಮುರಕಮಿಯವರು ನಾಟಕವನ್ನು ಟೋಕ್ಯೊದ ವಾಸೆಡದಲ್ಲಿ ಕಲಿತರು. ಇಲ್ಲೆ ಅವರು ತಮ್ಮ ಭವಿಷ್ಯದಲ್ಲಿ ತಮ್ಮ ಪತ್ನಿಯಾಗುವ ಯೋಕೊ ಅವರನ್ನು ಭೇಟಿಯಾದರು.[] ನಂತರ ಅವರು ಸಂಗೀತ ಧ್ವನಿ ಮುದ್ರಣ ಅಂಗಡಿಯಲ್ಲಿ ಸ್ವಲ್ಪ ಸಮಯ ಕೆಲಸ ಮಾಡುತ್ತಿದ್ದರು. ನಂತರ ತಮ್ಮ ಪತ್ನಿಯೊಂದಿಗೆ ಸೇರಿ ಹೋಟೆಲ್ ಅನ್ನು ಪ್ರಾರಂಭಿಸಿದರು.

ಬರವಣಿಗೆ ವೃತ್ತಿ

ಬದಲಾಯಿಸಿ

ಅವರು ಬರಹ ವೃತ್ತಿಯನ್ನು ತಮ್ಮ ೨೯ನೇ ವಯಸ್ಸಿನಲ್ಲಿ ಪ್ರಾರಂಭಿಸಿದರು. ಅವರು ಬೆಸ್ಬಾಲ್ ಪಂದ್ಯ ನೋಡುತ್ತಿರುವಾಗ ಮೊದಲನೆ ಕಾದಂಬರಿ ಹಿಯರ್ ದಿ ವಿಂಡ್ ಸಿಂಗ್ (೧೯೭೯) ಬರೆಯಲು ಭಾವಿಸುತ್ತಾರೆ.[] ಅದೆ ರಾತ್ರಿ ಮನೆಗೆ ಹಿಂದಿರುಗಿ ಕಥೆಯನ್ನು ಬರೆಯಲು ಶುರು ಮಾಡುತ್ತಾರೆ. ಇದನ್ನು ಮುಗಿಸಲು ೧೦ ತಿಂಗಳು ತೆಗೆದುಕೊಳ್ಳುತ್ತಾರೆ.

೧ ವರ್ಷದ ನಂತರ ಪಿನ್ ಬಾಲ್ ಎಂಬ ಕಾದಂಬರಿ ೧೯೭೩ರಲ್ಲಿ ಹೊರ ತರುತ್ತಾರೆ. ೧೯೮೨ರಲ್ಲಿ ವೈಲ್ಡ್ ಶೀಪ್ ಚೀಸ್ ಬಿಡುಗಡೆಯಾಯಿತು. ೧೯೮೭ರಲ್ಲಿ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದ ಪುಸ್ತಕ ನಾರ್ವೆಜಿಯನ್ ವುಡ್ ಬಿಡುಗಡೆಯಾಯಿತು.[೧೦] ಈ ಪುಸ್ತಕ ಸಾವು, ಅದರಿಂದ ಉಂಟಾದ ಒಂಟಿತನದ ಬಗ್ಗೆ ತಿಳಿಸುತ್ತದೆ. ಅವರ ಇನ್ನೊಂದು ಪುಸ್ತಕ ವಿಂಡ್ ಅಪ್ ಬರ್ಡ್ ಕ್ರಾನಿಕಲ್ ನಿಜ ಅಂಶಗಳು ಹಾಗು ಫ಼್ಯಾಂಟಸಿಯನ್ನು ಸೇರಿಸಿ ಬರೆದಿರುವ ಕಥೆಯಾಗಿ ಖ್ಯಾತಿ ಹೊಂದಿದೆ.[೧೧] ಜಪಾನ್ ದೇಶ ಚೀನಾದ ಮನ್ ಚೂರ್ಯವನ್ನು ಆಕ್ರಮಣ ಮಾಡಿದಾಗ ಅಲ್ಲಿ ನಡೆದ ಯುದ್ಧ ಕ್ರೂರ ಅಪರಾಧಗಳ ಬಗ್ಗೆ ತಿಳಿಸುತ್ತದೆ. ಈ ಪುಸ್ತಕಕ್ಕೆ ಯೂಮುರಿ ಪ್ರಶಸ್ತಿ ದೊರಕಿತು. ಜಪಾನಿನ ಭೂಕಂಪದ ಮೇಲೆ ಆಧಾರಿತವಾಗಿ ಅವರು ಪುಸ್ತಕಗಳನ್ನು ಬರೆದಿದ್ದಾರೆ. ಜಪಾನಿನಲ್ಲಿ ನಡೆದ ಅನಿಲ ದಾಳಿಗಳ (೧೯೯೫) ಕುರಿತು ಅಂಡರ್ ಗ್ರಾಂಡ್ ಎಂಬ ಪುಸ್ತಕ ಹೊರ ತಂದರು. ಈ ಪುಸ್ತಕದಲ್ಲಿ ಸಂತ್ರಸ್ತರ ಸಂದರ್ಶಗಳನ್ನು ಸಂಗ್ರಹಿಸಿದ್ದಾರೆ. ಇದಲ್ಲದೆ ಅವರು ಖ್ಯಾತ ಲೇಖಕರಾದ ಜಾನ್ ಇರ್ ವಿಂಗ್ ಮುಂತಾದವರ ಕಥೆಗಳನ್ನು ಜಪಾನೀಸ್‍ಗೆ ಭಾಷಾಂತರಿಸಿದ್ದಾರೆ. ಸ್ಪುಟ್ ನಿಕ್ ಸ್ವೀಟ್ ಹಾರ್ಟ್ ಎಂಬ ಕಾದಂಬರಿಯನ್ನು ೧೯೯೯ ರಲ್ಲಿ ಹೊರ ತಂದರು.

ಪ್ರಶಸ್ತಿಗಳು

ಬದಲಾಯಿಸಿ
 
೨೦೧೮ ರಲ್ಲಿ ಹರುಕಿ ಮುರಕಮಿ

ಅವರ ಪುಸ್ತಕ ಕಾಫ಼್ ಬೈ ಶೋರ್ ಗೆ ವಿಶ್ವ ಫ಼್ಯಾಂಟಸಿ ಪ್ರಶಸ್ತಿ ದೊರಕಿತು. ನಂತರ ಮಿಸ್ಟ್ರಿಸ್ ಆಫ಼್ ಟೋಕ್ಯೊ, ಬ್ಲೈಂಡ್ ವಿಲ್ಲೊ ಮುಂತಾದ ಹಲವಾರು ಕಾದಂಬರಿಗಳನ್ನು ಬರೆದಿದ್ದಾರೆ. ಅವರ ಮ್ಯಾರಥಾನ್ ಅನುಭವಗಳನ್ನು ತಮ್ಮ ಪುಸ್ತಕಗಳಲ್ಲಿ ಹಂಚಿಕೊಂಡಿದ್ದಾರೆ. ಅವರ ಕಥೆಗಳಲ್ಲಿ ಮೊದಲನೆ ವ್ಯಕ್ತಿ ನಿರೂಪಣೆ ಬಳಿಸಿದ್ದಾರೆ. ಅವರ ಕಾದಂಬರಿಗಳ ಶೀರ್ಷಿಕೆ ಹಾಡುಗಳ ಶೀರ್ಷಿಕೆಗಳ ಮೇಲೆ ಆಧಾರಿತವಾಗಿವೆ. ಅವರ ಹಲವಾರು ಕಥೆಗಳು ಖೇದ, ದುಃಖ, ಅಸಂಭಾವ್ಯ ಅಂಶಗಳನ್ನು ಒಳಗೊಂಡಿವೆ.

ಅವರು ಜಪಾನೀಸ್ ಸಾಹಿತ್ಯಕ್ಕೆ ಕೊಟ್ಟ ಕಾಣಿಕೆಗೆ ಅವರಿಗೆ ಹಲವಾರು ಪ್ರಶಸ್ತಿಗಳು ದೊರಕಿದೆ ಫ್ರಾಂಕ್ ಓ 'ಕಾನರ್ ಇಂಟರ್ನ್ಯಾಷನಲ್ ಶಾರ್ಟ್ ಸ್ಟೋರಿ ಪ್ರಶಸ್ತಿ (೨೦೦೬), ಫ್ರ್ಯಾನ್ಝ್ ಕಾಫ್ಕ ಬಹುಮಾನ(೨೦೦೬), ಜೆರುಸಲೆಮ್ ಪ್ರಶಸ್ತಿ (೨೦೦೯).[೧೨][೧೩][೧೪] ಅವರ ಕೃತಿಗಳು ಜಪಾನಿ ಜಾನಪದ ಮತ್ತು ಅಭಿಚಾರ ಪರಿಕಲ್ಪನೆಗಳನ್ನು ಒಳಗೊಂಡಿವೆ. ೨೦೧೧ ರಲ್ಲಿ, ಮುರಕಮಿಯವರು ಭೂಕಂಪ ಮತ್ತು ಸುನಾಮಿ ಸಂತ್ರಸ್ತರಿಗೆ ಹಾಗೂ ಫ಼ುಕುಶಿಮ ಪರಮಾಣು ವಿಪತ್ತಿನಿಂದ ತೊಂದರೆಗೊಳಗಾಗಿರುವವರಿಗೆ ತನ್ನ ಇಂಟರ್ನ್ಯಾಷನಲ್ ಕ್ಯಾತಲುನ್ಯಾ ಪ್ರಶಸ್ತಿಯ (ಕ್ಯಾತಲುನ್ಯಾ ಜನರಲ್ ರಿಂದ) € ೮೦,೦೦೦ ಗೆಲುವಿನ ದಾನವನ್ನು ನೀಡಿದರು.

ಎಪ್ರಿಲ್ ೨೦೧೫ ರಲ್ಲಿ, ಮುರಕಮಿ ದಿ ಟೈಮ್ ನ ೧೦೦ ಅತ್ಯಂತ ಪ್ರಭಾವಿ ಜನರಲ್ಲಿ ಒಬ್ಬರಾಗಿದ್ದರು. ನವೆಂಬರ್ ೨೦೧೫ ರಲ್ಲಿ, ಅವರಿಗೆ ಡ್ಯಾನಿಶ್ ಹ್ಯಾನ್ಸ್ ಕ್ರಿಶ್ಚಿಯನ್ ಆಂಡರ್ಸನ್ ಸಾಹಿತ್ಯ ಪ್ರಶಸ್ತಿ ನೀಡಲಾಯಿತು.[೧೫] ಲೇಖಕ ಮುರಕಮಿ ಸಮುದಾಯದ ಒಂದು ಭಾಗವಾಗಿ ಎಂದಿಗೂ ಹೊಂದಿಕೊಂಡಿಲ್ಲ, ಅದರ ಕಾರಣ ಅವರು ಒಂಟಿಜೀವಿ ಮತ್ತು ಎಂದಿಗೂ ಗುಂಪುಗಳು, ಶಾಲೆಗಳು, ಮತ್ತು ಸಾಹಿತ್ಯಕ ವಲಯಗಳಲ್ಲಿ ಇಷ್ಟಪಟ್ಟಿದ್ದಿಲ್ಲ. ಪುಸ್ತಕ ಕೆಲಸ ಮಾಡಿದಾಗ, ಮುರಕಮಿ ಅವರನ್ನು ತಮ್ಮ ಪತ್ನಿ ಅವಲಂಬಿಸಿದ್ದಾರೆ, ಅವರ ಪತ್ನಿ ಯಾವಾಗಲೂ ತನ್ನ ಮೊದಲ ರೀಡರ್ ಎಂದು ಹೇಳುತ್ತಿದ್ದರು. ಮುರಕಮಿ ಸಂಗೀತ, ವಿಶೇಷವಾಗಿ ಶಾಸ್ತ್ರೀಯ ಮತ್ತು ಜಾಝ್ ಕೇಳುವ ಮನೋಭಾವ ಹೊಂದಿದ್ದರು. ಅವರು ಸುಮಾರು ೧೫ ವರ್ಷವಿರುವಾಗ ಅವರಿಗೆ ಜಾಝ್‍ನ ಆಸಕ್ತಿ ಬೆಳೆಯತೊಡಗಿತು. ಅವರು ನಂತರ ಪೀಟರ್ ಕಾಟ್ ಎಂಬ ಜಾಝ್ ಬಾರ್ ತೆಗೆದರು. ಒಂದು ಸಮಯದಲ್ಲಿ ಅವರು ಸಂಗೀತಗಾರ ಆಗುವುದನ್ನು ಅಪೇಕ್ಷಿಸಿದ್ದರು. ಆದರೆ ಅವರು ವಾದ್ಯಗಳನ್ನು ನುಡಿಸಲು ಬರೆದೆ ಇರುವ ಕಾರಣ ಬದಲಿಗೆ ಬರಹಗಾರರಾದರು. ಅವರ ಹಲವಾರು ಕಾದಂಬರಿಗಳನ್ನು ಚಿತ್ರಗಳಾಗಿ ಬದಲಾಯಿಸಲಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. Curtis Brown (2014), "Haruki Murakami now available in 50 languages" Archived February 15, 2015, ವೇಬ್ಯಾಕ್ ಮೆಷಿನ್ ನಲ್ಲಿ., curtisbrown.co.uk, February 27, 2014: "Following a recent Malay deal Haruki Marukami's work is now available in 50 languages worldwide."
  2. Maiko, Hisada (November 1995). "Murakami Haruki". Kyoto Sangyo University. Archived from the original on May 23, 2008. Retrieved April 24, 2008. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  3. McCurry, Justin, "Secrets and advice: Haruki Murakami posts first responses in agony uncle role" Archived October 14, 2016, ವೇಬ್ಯಾಕ್ ಮೆಷಿನ್ ನಲ್ಲಿ., The Guardian, January 16, 2015.
  4. "UPI Almanac for Tuesday, Jan. 12, 2021". United Press International. January 12, 2021. Archived from the original on January 29, 2021. Retrieved February 27, 2021. … author Haruki Murakami in 1949 (age 72)
  5. Tandon, Shaun (March 27, 2006). "The loneliness of Haruki Murakami". iAfrica. Archived from the original on December 23, 2008. Retrieved April 24, 2008.
  6. Rubin, Jay (2002). Haruki Murakami and the Music of Words. Harvill Press. p. 14. ISBN 1-86046-986-8.
  7. Naparstek, Ben (June 24, 2006). "The lone wolf". The Age. Melbourne. Archived from the original on May 23, 2008. Retrieved April 24, 2008.
  8. Goodwin, Liz C. (November 3, 2005). "Translating Murakami". Harvard Crimson. Archived from the original on October 31, 2007. Retrieved April 24, 2008.
  9. Phelan, Stephen (February 5, 2005). "Dark master of a dream world". The Age. Melbourne. Archived from the original on May 11, 2008. Retrieved April 24, 2008.
  10. Rapold, Nicolas (25 November 2021). "Haruki Murakami and the Challenge of Adapting His Tales for Film". The New York Times (in ಅಮೆರಿಕನ್ ಇಂಗ್ಲಿಷ್). Retrieved 29 November 2021.
  11. Fisher, Susan (2000). "An Allegory of Return: Murakami Haruki's the Wind-up Bird Chronicle" (JSTOR), Comparative Literature Studies, Vol. 37, No. 2 (2000), pp. 155–170.
  12. "Japan's Murakami wins Kafka prize". CBC. 30 October 2006. Retrieved 12 September 2020.
  13. Kelleher, Olivia (25 September 2006). "Frank O'Connor short story award goes to Japanese author". Irish Times. Retrieved 12 September 2020.
  14. Flood, Alison (16 February 2009). "Murakami defies protests to accept Jerusalem prize". The Guardian. Retrieved 12 September 2020.
  15. Silas Bay Nielsen (November 17, 2015). "Japansk stjerneforfatter får Danmarks største litteraturpris". DR (in ಡ್ಯಾನಿಶ್). Archived from the original on November 21, 2015. Retrieved November 20, 2015.