Bhagyashree456
ಆರ್ಥಿಕ ಸಮೀಕ್ಷೆ (Economics Survey)
ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿ ಅವರು 2013-2014ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಜುಲೈ 9ರಂದು ಲೋಕಸಭೆಯಲ್ಲಿ ಮಂಡಿಸಿದರು. ಮಂದಗತಿಯಲ್ಲಿರುವ ಅರ್ಥ ವ್ಯವಸ್ಥೆಯನ್ನು ಪ್ರಗತಿಯ ಹಾದಿಗೆ ತರಲು ಹೂಡಿಕೆ ಪರಿಸರವನ್ನು ಪುನಶ್ಚೇತನಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಆರ್ಥಿಕ ಸಂಈಕ್ಷೇಯ ಮುಖ್ಯಾಂಶಗಳು ಹೀಗಿವೆ:
ಯುವ ಸಮುದಾಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು. ಈ ವರ್ಷ ಭಾರತದ ಅರ್ಥ ವ್ಯವಸ್ಥೆ ಶೇ.5.4 ರಿಂದ 5.9 ರವರೆಗೆ ಅಂದಾಜು ಪ್ರಗತಿ ಸಾಧಿಸುವ ಸಾಧ್ಯತೆಗಳಿವೆ. ಆದರೆ, ದುರ್ಬಲ ಮುಂಗಾರು ಮತ್ತು ಗೊಂದಲಮಯ ಬಾಹ್ಯ ಪರಿಸರವು ಆತಂಕಕಾರಿಯಾಗಿ ಉಳಿಯಲಿದೆ.
ಕಳೆದ 2 ವರ್ಷಗಳಿಂದ ಅರ್ಥವ್ಯವಸ್ಥೆಯ ಪ್ರಗತಿ ಮಂದಗತಿಯಲ್ಲಿರುವುದು ಕೈಗಾರಿಕಾ ವಲಯದ ಮೇಲೆ ಪರಿಣಾಮ ಬೀರಿದೆ. ಈ ಅವಧಿಯಲ್ಲಿ ಹಣದುಬ್ಬರ ದರವೂ ಕುಸಿದಿದೆ. ಆದರೆ ಸಂತೃಪ್ತ ಮಟ್ಟಕ್ಕಿಂತ ಮೇಲಿದೆ. ಆಹಾರ ಹಣದುಬ್ಬರವು ಏರಿಕೆಯ ಹಂತದಲ್ಲಿ ಮುಂದುವರಿಯಲು ಇದು ಕಾರಣವಾಗಿದೆ.
ಹಣದುಬ್ಬರ ವರ್ಷಾಂತ್ಯದಲ್ಲಿ ಇಳಿಕೆ ಕಾಣುವ ಎಲ್ಲಾ ನಿರೀಕ್ಷೆಗಳಿವೆ. ಇದು ಆರ್ ಬಿಐನ
ಬಡ್ಡಿದರ ಇಳಿಸುವ ಕ್ರಮಗಳಿಗೆ ಪ್ರೇರಣೆ ನೀಡಲಿದೆ. ಜತೆಗೆ, ಹೂಡಿಕೆದಾರರ ಆತ್ಮವಿಶ್ವಾಸ ಹೆಚ್ಚಿಸಲು ಇಂಬು ಕೊಡಲಿದೆ. ಜಾಗತಿಕ ಅರ್ಥ ವ್ಯವಸ್ಥೆ ಸಾಧಾರಣವಾಗಿ ಸುಧಾರಣೆ ಕಾಣುವ ಎಲ್ಲಾ ನಿರೀಕ್ಷೆಗಳಿವೆ. ಮುಂದುವರಿದ ರಾಷ್ಟ್ರಗಳ ಅರ್ಥ ವ್ಯವಸ್ಥೆ ಉತ್ತಮವಾಗುತ್ತಿರುವುದೇ ಈ ನಿರೀಕ್ಷೆಗೆ ಕಾರಣ. ಹಿನ್ನೆಲೆಯಲ್ಲಿ ದೇಶದ ಅರ್ಥವ್ಯವಸ್ಥೆ ಈ ವರ್ಷ ಮತ್ತು ಮುಂದಿನ ದಿನಗಳಲ್ಲಿ ಪ್ರಗತಿಯ ಪಥಕ್ಕೆ ಸಾಗುವುದನ್ನು ನೋಡಬಹುದು.
ದುರ್ಬಲ ಮುಂಗಾರು, ಬಾಹ್ಯ ಸವಾಲುಗಳು ಮತ್ತು ದುರ್ಬಲ ಹೂಡಿಕೆ ಪರಿಸರದಿಂದಾಗಿ ಅರ್ಥ ವ್ಯವಸ್ಥೆ ಮಂದಗತಿಯಲ್ಲಿದೆ. ಇದರ ಪರಿಣಾಮವಾಗಿ ಕಳೆದ ವರ್ಷ ಜಿಡಿಪಿ ಪ್ರಗತಿ ದರ ಶೇ.4.7ಕ್ಕೆ ಕುಸಿದಿತ್ತು. ಆದರೆ, ಹೂಡಿಕೆ ಪರಿಸರ ಮತ್ತು ಆಡಳಿತ ಸುಧಾರಣೆಗೆ ಈಗ ಸರಕಾರ ತೆಗೆದುಕೊಂಡಿರುವ ಕ್ರಮಗಳಿಂದಾಗಿ ಮುಂಬರುವ ದಿನಗಳಲ್ಲಿ ಅರ್ಥ ವ್ಯವಸ್ಥೆ ಶೇ. 7 ರಿಂದ 8ರ ಮಟ್ಟಕ್ಕೆ ಬೆಳವಣಿಗೆ ಕಾಣಲಿದೆ.
ದೇಶದಲ್ಲಿ ವ್ಯಾಪಾರ, ವಹಿವಾಟಿನ ಭಾವನೆಗಳನ್ನು ಪುನಶ್ಚೇತನಗೊಳಿಸುವುದೇ ಸರಕಾರದ ಆದ್ಯತೆಯಾಗಿದೆ. ಹೂಡಿಕೆ ಆವರ್ತವನ್ನು ಪುನಾರಂಭಿಸುವುದೇ ಸರಕಾರದ ಉದ್ದೇಶ. ಅರ್ಥ ವ್ಯವಸ್ಥೆಯಲ್ಲಿರುವ ರಚನಾತ್ಮಕ ಅಡೆತಡೆಗಳನ್ನು ನಿವಾರಿಸಿ, ವಿತ್ತೀಯ ಸದೃಢತೆಗೆ ಪೂರಕವಾಗಿ ನೀತಿಗಳನ್ನು ಜಾರಿಗೆ ತರಲು ಒತ್ತು ನೀಡಲಾಗುವುದು.
ಸಿರಿಯ ಸಾರ್ಥಕತೆ
ನಾವು ಈ ಪ್ರಪಂಚದಲ್ಲಿ ಒಳಗೂ ಹೊರಗೂ ಸಿರಿವಂತರಾಗಿ ಬದುಕಬೇಕೆ ವಿನಾ ಬಡವರಾಗಿ ಅಲ್ಲ. “ಪುರುಷಸ್ಯ ಬಂಧುಃ ಸಂಪದಃ ಲೋಕೇ” ಈ ಜಗತ್ತಿನಲ್ಲಿ ಸಿರಿಯೇ ನಮ್ಮ ನೆರೆ-ಹೊರೆ, ಬಂಧು-ಬಳಗ ಎಂದು ಬಲ್ಲವರು ಹೇಳಿದರು. ನೀರಿಲ್ಲದಿದ್ದರೆ, ಸರೋವರವಿಲ್ಲ, ಪಕ್ಕವಿಲ್ಲದಿರೆ ಹಕ್ಕಿಯಿಲ್ಲ, ಹಸಿರಿಲ್ಲದಿದ್ದರೆ ಮರವಿಲ್ಲ, ಹಾಗೆಯೇ ಸಿರಿಯಿಲ್ಲದಿರೆ ಜೀವನವಿಲ್ಲ…!
ಯಾರಲ್ಲಿ ಸಂಪತ್ತಿದೆಯೋ ಅವನೇ ಉತ್ತಮ ಕುಲದವನು. ಪಂಡಿತನು, ಶಾಸ್ತ್ರಜ್ಞನು, ಗುಣವಂತನು, ಸುಂದರನು! ಎಲ್ಲ ಸುಗುಣಗಳು ಸಿರಿ-ಸಂಪದವನ್ನೇ ಆಶ್ರಯಿಸಿವೆ. ಮನುಷ್ಯ ಪ್ರಾಮಾಣಿಕವಾಗಿ ದುಡಿದು ಏನೆಲ್ಲ ಸಿರಿ-ಸಂಪದ ಗಳಿಸಬೇಕು. ಆದರೆ ಗಳಿಸಿದ ಸಿರಿ-ಸಂಪದವು ನಮಗೂ, ನಮ್ಮ ನೆರೆಹೊರೆಯವರ ಬದುಕಿಗೆ ಆಸರೆಯಾಗಬೇಕು, ಆನಂದ ತರಬೇಕು. ಯಾವುದು ನಮ್ಮ ಯೋಗ್ಯವಾದ ಬೇಡಿಕೆಗಳನ್ನು ಈಡೇರಿಸುತ್ತದೆಯೋ, ನಮ್ಮ ಹಸಿವೆ ತೃಷೆಗಳನ್ನೇ ಹಿಂಗಿಸುತ್ತದೆಯೋ ಅದುವೇ ನಿಜವಾದ ಸಂಪತ್ತು! ಎಂಬುದು ಅರ್ಥಶಾಸ್ತ್ರಜ್ಞರ ಅಭಿಪ್ರಾಯವಾಗಿದೆ.
ಒಂದು ಅರಮನೆಯ ಹಿಂದೆ ದೊಡ್ಡ ತಿಪ್ಪೆ, ಅರಮನೆಯ ತಿಪ್ಪೆ ಎಂದ ಮೇಲೆ ಹೇಳುವುದೇನಿದೆ? ಅದರಲ್ಲಿ ಏನೆಲ್ಲ ಇರಬಹುದು. ಒಂದು ಕೋಳಿಗೆ ಆ ತಿಪ್ಪೆ ಕೆದರುವಾಗ ರತ್ನದ ಹರಳೆ ದೊರೆಯಿತು. ‘ರಾಜ-ಮಹರಾಜರಲ್ಲಿ, ದೇಶ-ದೇಶಗಳಲ್ಲಿ ಹಗೆ-ಹೊಗೆಗಳನ್ನು ಎಬ್ಬಿಸಿ ಯುದ್ಧ-ಕಲಹಗಳಿಗೆ, ಸಾವು-ನೋವುಗಳಿಗೆ ಕಾರಣವಾದ ನೀನು ನನಗೆ ನಿರುಪಯಿಕ್ತ’ ದು ಕೋಳಿಯು ಆ ರತ್ನವನ್ನು ತಿಪ್ಪೆಯಿಂದ ದೂರ ಎಸೆಯಿತು. ಸ್ವಲ್ಪ ಸಮಯದಲ್ಲಿ ಕೋಳಿಗೆ ಜೋಳದ ಒಂದು ಕಾಳು ದೊರೆಯಿತು. .ನೀನೆ ನನ್ನ ಪ್ರಾಣದ ಪ್ರಾಣ’ ಎಂದು ಕೋಳಿಯು ಆ ಜೋಳದ ಕಾಳನ್ನು ತಿಂದು ಹಾಡುತ್ತಾ ಕುಣಿಯುತ್ತ ಹೊರಟಿತು. ‘ಈ ಕೋಳಿಗೆ ಬುದ್ದಿಯಿಲ್ಲ’ ಎಂದು ಒಬ್ಬ ಮನುಷ್ಯ ರತ್ನವನ್ನು ಎತ್ತಿಕೊಂಡು ಹೊರಟ. ಅಷ್ಟರಲ್ಲಿ ಅರಮನೆಯ ಸೈನಿಕರು ಬಂದು ಅವನನ್ನು ಎಳೆದು ಸೆರೆಮನೆಗೆ ಹಾಕಿದರು.
ನಾವು ಪ್ರಮಾಣಿಕವಾಗಿ ದುಡಿದು ಸಿರಿ-ಸಂಪತ್ತತನ್ನು ಗಳಿಸಬೇಕು ಮತ್ತು ಅದನ್ನು ಸತ್ಕಾರ್ಯಕ್ಕೆ ಬಳಸಬೇಕು. ಬಳಸಿದ್ದು ಬೆಳೆಯುತ್ತದೆ. ಕೊಟ್ಟಿದ್ದು ಮರಳಿ ಬರುತ್ತದೆ. ಆದರೆ ಕೂಡಿಟ್ಟದ್ದು ಪರರಿಗೆ ಸೇರುತ್ತದೆ. ಇದು ಅನುಭವಿಗಳ ಮಾತು. ಜಡ ಸಿರಿಯನ್ನು ಬಳಸುತ್ತಾ ಸದ್ಗುಣ ಸಿರಿಯನ್ನು ಬೆಳೆಸುತ್ತಾ ಬದುಕಬೇಕು. ಹೀಗೆ ಇದ್ದಾಗ ಮಾತ್ರ ನಮ್ಮ ಸಿರಿ-ಸಂಪದವು ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ಕಲ್ಲು ಮಣ್ಣಿನಂತೆ ಜಡವಾಗಿ ಅದು ನಿರರ್ಥಕವೆನಿಸುತ್ತದೆ.