ಚೌಳಿಕಾಯಿ ಬದಲಾಯಿಸಿ

ಒಂದು ಜಾತಿಯ ತರಕಾರಿ. ಕೆಲವು ಕಡೆ ಇದನ್ನು ಗೋರಿಕಾಯಿ ಎಂದು ಕರೆಯುತ್ತಾರೆ. ಇದರ ಸಸ್ಯ ಶಾಸ್ತ್ರೀಯ ಹೆಸರು ಸಯಾಮಾಪ್ಸಿಸ್ ಟೆಟ್ರಾಗೋನೊಲೋಬ(cyamopsis tetragonolova). ಇದರ ಕುಟುಂಬ ಫ್ಯಾಬೆಸಿ (fabaceae).ಇದು ಮಧ್ಯ ಏಷ್ಯಾಖಂಡದ ಸ್ವಾಭಾವಿಕ ಬೆಳೆಯಾಗಿದೆ.ಇದರ ಮೂಲ ಹೆಸರುಗಳು ಗುಅರ್,ಕುವಾರ,ಕೌರಿ ಎಂದಿವೆ[೧].

ಔಷದೀಯ ಗುಣಗಳು ಬದಲಾಯಿಸಿ

ಬಾಯಿಯ ಕೆಟ್ಟ ಗುಣಗಳು ನಿವಾರಣೆಯಾಗುತ್ತದೆ. ಹಲ್ಲು ಮತ್ತು ನಾಲಗೆ ಶುಚಿಯಾಗುತ್ತದೆ.

ಬೇಸಾಯ ಬದಲಾಯಿಸಿ

ಎಲ್ಲಾ ರೀತಿಯ ಮಣ್ಣುಗಳಿಗೆ ಹೊಂದಿಕೊಂಡು ಬೆಳೆಯುತ್ತದೆ.ಮಳೆಗಾಲ ಮತ್ತು ಬೇಸಿಗೆ ಕಾಲದಲ್ಲಿ ಉತ್ತಮವಾಗಿ ಬೆಳೆಸಬಹುದು. ಹೆಚ್ಚು ಉಷ್ಣ ಮತ್ತು ಕಡಿಮೆ ಮಳೆ ಇರುವ ಪ್ರದೇಶಗಳಲ್ಲಿ ಬೆಳೆಯುತ್ತದೆ. ಈ ಬೆಳೆಯನ್ನು ಪ್ರಾರಂಭಿಸಲು ಜೂನ್-ಜುಲಾಯ್, ಫೆಬ್ರವರಿ-ಮಾರ್ಚ್ ತಿಂಗಳುಗಳು ಸೂಕ್ತ.

  • ಬೀಜ ಮತ್ತು ಬಿತ್ತನೆ

ಪ್ರತಿ ಎಕರೆಗೆ ೬-೮ಗ್ರಾಂ ಬಿತ್ತನೆ ಬೀಜ ಬೇಕು. ೨-೩ ಭಾರಿ ಉತ್ತು ಹದ ಮಾಡಿದ ನಂತರ ೧.೫ ಅಡಿ ಅಂತರದಲ್ಲಿ ಸಾಲುಗಳನ್ನು ಮಾಡಿ, ಈ ಸಾಲುಗಳಲ್ಲಿ ಎಕರಗೆ ೪ಟನ್ ಗೊಬ್ಬರ, ೫ಕಿ.ಗ್ರಾಂ ಸಾರಜನಕ(೧೧ಕಿ.ಗ್ರಾಂ ಯೂರಿಯಾ, ೩೦ಕಿ.ಗ್ರಾಂ ರಂಜಕ(೧೮೭.೫ಕಿ.ಗ್ರಾಂ ಫಾಸ್ಫೇಟ್) ಮತ್ತು ೨೪ಕಿ.ಗ್ರಾಂ ಪೊಟ್ಯಾಷ್ (೪೦ಕಿ.ಗ್ರಾಂ ಮ್ಯೂರೆಟ್ ಆಫ್ ಪೊಟ್ಯಾಷ್) ಸತ್ವ ಒದಗಿಸುವ ಗೊಬ್ಬರಗಳನ್ನು ಹಾಕಿ ಮಿಶ್ರ ಮಾಡಿದ ನಂತರ ೨೦-೨೫ಸೆಂ.ಮೀ(೮-೧೦ ಅಂಗುಲ) ಅಂತರಕ್ಕೆ ಒಂದರಂತೆ ಬೀಜ ಬಿತ್ತಬೇಕು. ಬೀಜ ಬಿತ್ತಿದ ೬ ವಾರಗಳ ತರುವಾಯ ೫ಕಿ.ಗ್ರಾಂ ಸಾರಜನಕ(೧೧ಕಿ.ಗ್ರಾಂ ಯೂರಿಯಾ)ವನ್ನು ಮೇಲುಗೊಬ್ಬರವಾಗಿ ಒದಗಿಸಬೇಕು.

  • ನೀರಾವರಿ

ಈ ಬೆಳೆಯು ಬರ ನಿರೋಧಕ ಗುಣ ಹೊಂದಿದೆ. ವಾರಕ್ಕೊಂದು ಬಾರಿ ನೀರು ಹಾಯಿಸುವುದರಿಂದ ಇಳುವರಿ ಹೆಚ್ಚಾಗುವುದು. ಗೋರಿಕಾಯಿ ತೋಟದಲ್ಲಿ ಕಳೆ ಇರಬಾರದು.

  • ಕೊಯ್ಲು ಮತ್ತು ಇಳುವರಿ

೪ರಿಂದ ೫ದಿನಗಳ ಅಂತರದಲ್ಲಿ ಕೊಯ್ಲು ಮಾಡಿದರೆ ಪ್ರತಿ ಎಕರೆಗೆ ಸುಮಾರು ೨೪೦೦ರಿಂದ ೩೨೦೦ಕಿ.ಗ್ರಾಂ ಇಳುವರಿ ಸಿಗುತ್ತದೆ.

ತಳಿಗಳು ಬದಲಾಯಿಸಿ

  1. ಪೂಸ ಸದಾಬಹಾರ್
  2. ಪೂಸಾ ಮೌಸಮಿ
  3. ಪೂಸ ನೌಬಹಾರ್

ಉಲ್ಲೇಖ ಬದಲಾಯಿಸಿ

  1. ಡಾ.ಪಿ ನಾರಯಣಸ್ವಾಮಿ, ಡಾ.ಎಲ್ ವಸಂತ,ಗಿಡ ತರಕಾರಿಗಳು,೨೦೦೬