ವೈಯಕ್ತಿಕ ಪರಿಚಯ

ಬದಲಾಯಿಸಿ

ನನ್ನ ಹೆಸರು ಅಂಜನಾ.ಎಸ್.ಶೋಭನಾ ಹಾಗು ಶಶಿಧರನ್ ದಂಪತಿಯವರ ದ್ವಿತೀಯ ಪುತ್ರಿಯಾಗಿ ಕರ್ನಾಟಕ ರಾಜ್ಯದ ಬೆಂಗಳೂರು ನಗರದ ಚಿನ್ಮಯಾ ಮಿಷನ್ ಆಸ್ಪತ್ರೆಯಲ್ಲಿ ೨೯ನೇ ನೆವೆಂಬರ್ ೧೯೯೮ರಂದು ಜನಿಸಿದೆನು. ನಾನು ಹುಟ್ಟಿ ಬೆಳೆದ್ದಿದ್ದು ಬೆಂಗಳೂರಿನಲ್ಲಾದರೂ ನನ್ನ ತವರೂರು

ಕೇರಳಾ ರಾಜ್ಯದಲ್ಲಿರುವ ಪಾಲಕಾಡ್ ಜಿಲ್ಲೆ. ನನ್ನ ಮಾತೃ ಭಾಷೆ ಮಲಯಾಳಂ ಆದರೂ ನನಗೆ ಇತರ ಭಾಷೆಗಳಾದ- ಕನ್ನಡ, ತಮಿಳು, ಹಿಂದಿ, ಇಂಗ್ಲೀಷ್ ಹಾಗು ತೆಲುಗು ಸಹ ತಿಳಿದಿದೆ. ನಾನು ಬಹಳ ಜವಾಬ್ದಾರಿಯುತ್ತ ವ್ಯಕ್ತಿಯಾಗಿದ್ದೇನೆ. ಸಹಾನುಭೂತಿ ಹಾಗು ಸ್ವಾಭಿಮಾನದ ಜೀವನವನ್ನು ನಡೆಸಲು ಆಶಿಸುತ್ತೇನೆ. ಯಾವುದಾದರು ಒಂದು ಕೆಲಸವನ್ನು ಪ್ರಾರಂಭಿಸಿದರೆ, ಅದನ್ನು ಮುಗಿಸುವ ಛಲ ನನ್ನಲ್ಲಿ ಇದೆ. ನನಗೆ ಸಾಕು ಪ್ರಾಣಿಗಳೆಂದರೆ ಬಹಳಾ ಇಷ್ಟ.       

ವಿದ್ಯಾಬ್ಯಾಸ

ಬದಲಾಯಿಸಿ

ಬಾಲ್ಯದ ವಿದ್ಯಾಬ್ಯಾಸವನ್ನು ಬಾಲ್ಡವಿನ್ ಬಾಲಕೀಯರ ಪ್ರೌಢ ಶಾಲೆಯಲ್ಲಿ ೧೦ನೇ ತರಗತಿಯವರೆಗೂ ಓದಿದ್ದೇನೆ. ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ ಯನ್ನು

ಕ್ರೈಸ್ಟ್ ಪದವಿಪೂವ೯ ಕಾಲೇಜಿನಲ್ಲಿ ಮುಗಿಸಿ ಪ್ರಸ್ತುತ ಇದೇ ಕಾಲೇಜಿನ ವಿಶ್ವವಿದ್ಯಾನಿಲಯದಲ್ಲಿ ಬಿ.ಕಾಂ ಪದವಿಯ ವ್ಯಾಸಂಗವನ್ನು ಮುಂದುವರೆಸುತ್ತಿದ್ದೇನೆ.

ಆಸಕ್ತಿಗಳು

ಬದಲಾಯಿಸಿ

ನನ್ನ ಆಸಕ್ತಿಗಳ ಬಗ್ಗೆ ಹೇಳುವುದಾದರೆ ಚಿತ್ರಗಳನ್ನು ಬಿಡಿಸುವುದು, ಕಥೆ ಪುಸ್ತಕಗಳ್ಳನ್ನು ಓದುವುದು, ವಾಹನವನ್ನು ಚಲಾಯಿಸುವುದು, ಅನ್ಯ ಭಾಷೆಗಳನ್ನು ಕಳಿಯುವುದು, ಅನೇಕ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು, ಕುತೂಹಲಕಾರವಾದ ಜಾಗ/ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳುವುದೆಂದರೆ ಬಹಳ ಇಷ್ಟ . ತಾತನೊಂದಿಗೆ ಮನೆಯ ತೋಟಗಾರಿಕೆಯಲ್ಲಿ ಸಹಾಯಮಾಡುವುದೇ ನನ್ನ ಕಾಲ ಹರಣ.

ಯಕ್ಷಗಾನವನ್ನು ಕಲಿಯಲು ನಾನು ಬಯಸುತ್ತೇನೆ. ಆದರೆ ಅದಕ್ಕೆ ಒಂದು ಅವಕಾಶ ಸಿಗಬೇಕೆಂಬುದೇ ನನ್ನ ಆಸೆ.

ಸಾಧನೆಗಳು

ಬದಲಾಯಿಸಿ

ಟೇಬಲ್ ಟೆನ್ನಿಸ್ ಎಂಬ ಕ್ರೀಡೆಯಲ್ಲಿ ತರಬೇತಿಯನ್ನು ಪಡೆದಿದ್ದೇನೆ. ಮೊಟ್ಟಮೊದಲಿಗೆ ಟೇಬಲ್ ಟೆನ್ನೀಸಿನಲ್ಲಿ ನನಗೆ ಆಸಕ್ತಿ ಬರಲು ಕಾರಣರಾದವರು ನನ್ನ ಗುರುಗಳಾದ ನನ್ನ ತಂದೆ. ಅವರ ಸ್ಪೊತಿ೯ ಹಾಗು ಪ್ರೋತ್ಸಾಹದಿಂದಲೇ ಜಿಲ್ಲಾ ಮಟ್ಟದಲ್ಲಿ ಅನೇಕ ಬಹುಮಾನಗಳನ್ನು ಪಡೆದು ಸುಮಾರು ೬ ಬಾರಿಗೆ ಕರ್ನಟಕ ರಾಜ್ಯದ ಪರವಾಗಿ ರಾಷ್ಟ್ರೀಯ ಮಟ್ಟದಲ್ಲಿ ಆಟ ಆಡಿದ್ದೇನೆ. ಈಗಳೂ ಸಹ ಈ ಕ್ರೀಡೆಯನ್ನು ಮುಂದುವರೆಸಿ ನನ್ನ ಕಾಳೇಜಿನ ಪರವಾಗಿ ಭಾಗವಹಿಸುತ್ತಿದ್ದೇನೆ.ಮುಂದೆ ನಾನು ಎಂ.ಬಿ.ಎ ಪದವಿ ಮಾಡಬೇಕೆಂಬ ಆಸೆ ಉಂಟು. ಇದನ್ನು ಒಂದು ಒಳ್ಳಯ ಕಾಳೇಜಿನಿಂದ ಮಾಡಬೇಕೆಂಬುವುದು ನನ್ನ ಕನಸು.