ಸದಸ್ಯ:Anivaasi/sandbox
ಎಸ್. ರಾಮಚಂದ್ರ | |
---|---|
Born | |
Died | ಜನವರಿ 10, 2011 |
Occupation | ಛಾಯಾಗ್ರಾಹಕ |
ಎಸ್. ರಾಮಚಂದ್ರ ಎಂದೇ ಖ್ಯಾತರಾದ ಶಿವರಾಮಯ್ಯ ರಾಮಚಂದ್ರ ಐತಾಳ ಕನ್ನಡ ಚಿತ್ರರಂಗದ ಹೊಸ ಅಲೆಯ ಸಿನಿಮಾಗಳ ಯಶಸ್ಸಿನಲ್ಲಿ ಮಹತ್ವದ ಪಾತ್ರವಹಿಸಿದ್ದ ಪ್ರತಿಭಾನ್ವಿತ ಹಾಗು ಪ್ರಸಿದ್ಧ ಹಿರಿಯ ಛಾಯಾಗ್ರಾಹಕ.
ಪರಿಚಯ
ಬದಲಾಯಿಸಿಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಎಸ್. ರಾಮಚಂದ್ರ 75ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು. ವೀಕ್ಷಕರು ಅಚ್ಚರಿ ಪಡುವಂಥ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದ ಕಲಾತ್ಮಕ ಛಾಯಾಗ್ರಾಹಕ ಎಂದೇ ಪ್ರಸಿದ್ಧರಾಗಿದ್ದರು. ರಾಮಚಂದ್ರ ಅವರ ಛಾಯಾಗ್ರಹಣಕ್ಕೆ ಅಂಥದೊಂದು ಶಕ್ತಿ ಇತ್ತು. ಸಹಜವಾಗಿ ಚಿತ್ರೀಕರಿಸಬೇಕಿದ್ದ ದೃಶ್ಯವೊಂದನ್ನು ವಿಶೇಷವಾದ ರೀತಿಯಲ್ಲಿ, ಇದನ್ನು ಹೀಗೂ ಸೆರೆಹಿಡಿಯಬಹುದೇ ಎಂದು ಬೆರಗಾಗುವ ರೀತಿಯಲ್ಲಿ ಚಿತ್ರಿಸಿಕೊಡುವ ಮಾಂತ್ರಿಕತೆ ಅವರಿಗಿತ್ತು. ಕಲಾತ್ಮಕ ಚಿತ್ರಗಳ ಪರಂಪರೆ ಕನ್ನಡದಲ್ಲಿ ಮಹತ್ವದ ಸ್ಥಾನ ಪಡೆಯುವಲ್ಲಿ ಅವರ ಅಮೂಲ್ಯ ಕೊಡುಗೆ ಇತ್ತು.
ವೃತ್ತಿ
ಬದಲಾಯಿಸಿರಾಮಚಂದ್ರರವರು ಪೂನಾ ಫಿಲ್ಮ್ ಇನ್‌ಸಿrಟ್ಯೂಟ್‌ನ ಕೊಡುಗೆ. ಅವರು ೧೯೬೭-೧೯೭೦ರಲ್ಲಿ ಛಾಯಾಗ್ರಹಣದ ವ್ಯಾಸಂಗ ಮಾಡಿದ ಮೊದಲ ತಲೆಮಾರಿನ ಗುಂಪಿಗೆ ಸೇರಿದವರು . ಅಲ್ಲಿಂದ ಬಂದ ನಂತರ ಅವರು ಗಿರೀಶ್ ಕಾರ್ನಾಡರ 'ವಂಶವೃಕ್ಷ' ಚಿತ್ರಕ್ಕೆ ಸಹಾಯಕ ಛಾಯಾಗ್ರಾಹಕರಾಗಿ ಕೆಲಸ ಮಾಡಿದರು. 1972 ರಲ್ಲಿ ತೆರೆಕಂಡ 'ಸಂಕಲ್ಪ' ಚಿತ್ರ ರಾಮಚಂದ್ರರನ್ನು ನಾಡಿಗೆ ಪರಿಚಯಿಸಿತು. ಆ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾಗಿ ಅವರು ಕನ್ನಡ ಚಿತ್ರರಂಗದಲ್ಲಿ ನೆಲೆಕಂಡುಕೊಂಡರು. ನಂತರ ಅವರು ಛಾಯಾಗ್ರಹಣ ಮಾಡಿದ ಬಹುತೇಕ ಚಿತ್ರಗಳು ಕಲಾತ್ಮಕ ಚಿತ್ರಗಳಾಗಿದ್ದವು. ಅದು ಅವರಿಗಿರುವ ಹೆಗ್ಗಳಿಕೆಯೂ ಹೌದು. ಕಲಾತ್ಮಕ ಚಿತ್ರಗಳೆಂದರೆ ಅಲ್ಲಿ ಎಸ್.ರಾಮಚಂದ್ರ ಇರಲೇಬೇಕು ಎಂಬಷ್ಟು ಅವರು ಆ ಚಿತ್ರಗಳ ಪಾಲಾಗಿದ್ದರು. ಗಿರೀಶ್ ಕಾಸರವಳ್ಳಿಯವರ ಮೊದಲ ಚಿತ್ರ ಘಟಶ್ರಾದ್ಧವಲ್ಲದೆ, ನಂತರ ಅವರ ಹಲವಾರು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸಮಾಡಿದ್ದಾರೆ. ಸದಾಶಿವ ಶೆಣೈ ನಿರ್ದೇಶನದ 'ಪ್ರಾರ್ಥನಾ' ಅವರ 75ನೆ ಚಿತ್ರ. ಶಂಕರ್ ನಾಗ್ ನಿರ್ದೇಶನದ ಹಿಂದಿಯ 'ಮಾಲ್ಗುಡಿ ಡೇಸ್' ಧಾರಾವಾಹಿಗೂ ರಾಮಚಂದ್ರ ಕ್ಯಾಮರಾ ಹಿಡಿದಿದ್ದರು. ನಿರ್ದೇಶಕ ರಾಮದಾಸ್ ನಾಯ್ಡು ನಿರ್ದೇಶನದ 'ಹೆಜ್ಜೆಗಳು' ರಾಮಚಂದ್ರ ಅವರು ಕ್ಯಾಮರಾ ಹಿಡಿದ ಕೊನೆಯ ಚಿತ್ರ. ಚಿಕ್ಕ ವಯಸ್ಸಿನಿಂದಲೇ ಪೋಲಿಯೋದ ಕಾರಣ ತುಸು ಕುಂಟುನಡಿಗೆಯಿದ್ದರೂ ಅದನ್ನು ಮೆಟ್ಟಿ ನಿಂತು ಅವರು ಸಾಧನೆಯ ಶಿಖರವೇರಿದರು.
ಪ್ರಶಸ್ತಿ
ಬದಲಾಯಿಸಿ೧೯೭೭ರಲ್ಲಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಛಾಯಾಗ್ರಾಹಕ (ಚಂದ್ರಶೇಖರ ಕಂಬಾರ ಕಥೆಯಾಧಾರಿತ ‘ಋಷ್ಯಶೃಂಗ’) ಪ್ರಶಸ್ತಿ, ಹಲವು ಬಾರಿ ರಾಜ್ಯಪ್ರಶಸ್ತಿ, ೨೦೦೬ರಲ್ಲಿ ಜೀವಮಾನ ಸಾಧನೆಗಾಗಿ ಸಂದ ಗೌರವಗಳು ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ರಾಮಚಂದ್ರ ಅವರು ಪಾತ್ರರಾಗಿದ್ದಾರೆ.
ನಿಧನ
ಬದಲಾಯಿಸಿಇವರು ಕ್ಯಾನ್ಸರಿನಿಂದ ಬಳಲುತ್ತಿದ್ದು ಜನವರಿ 10, 2011
ರಂದು ನಿಧನರಾದರು. ಇವರ ಪತ್ಮಿಯ ಹೆಸರು ಮೀನಾಕ್ಷಿ ಹಾಗು ಪುತ್ರಿಯರು ಚೈತ್ರಾ ಮತ್ತು ವರ್ಷಾ.ಚಿತ್ರಪಟ್ಟಿ
ಬದಲಾಯಿಸಿಚಲನಚಿತ್ರಗಳು
ಬದಲಾಯಿಸಿವರ್ಷ | ಚಿತ್ರ | ಭಾಷೆ | ಇತರ ಸಂಗತಿ |
---|---|---|---|
1972 | ವಂಶವೃಕ್ಷ | ಕನ್ನಡ | ಸಹಾಯಕ ಛಾಯಾಗ್ರಾಹಕ |
1972 | ಸಂಕಲ್ಪ | ಕನ್ನಡ | ವಿಜೇತರು : ಕರ್ನಾಟಕ ರಾಜ್ಯ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ[೨] |
1974 | ಕಂಕಣ | ಕನ್ನಡ | |
1975 | ಚೋಮನ ದುಡಿ | ಕನ್ನಡ | |
1976 | ಪಲ್ಲವಿ | ಕನ್ನಡ | |
1976 | ಋಷ್ಯಶೃಂಗ | ಕನ್ನಡ | ವಿಜೇತರು : ಅತ್ಯುತ್ತಮ ಛಾಯಾಗ್ರಾಹಕ ರಾಷ್ಟ್ರ ಪ್ರಶಸ್ತಿ |
1977 | ಘಟಶ್ರಾದ್ಧ | ಕನ್ನಡ | |
1978 | ಗ್ರಹಣ | ಕನ್ನಡ | Winner : ಕರ್ನಾಟಕ ರಾಜ್ಯ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ (ಕಪ್ಪು ಬಿಳುಪು) |
1978 | ಗೀಜಗನ ಗೂಡು | ಕನ್ನಡ | |
1978 | ಹೊಂಬಿಸಿಲು | ಕನ್ನಡ | |
1978 | ಮಲಯ ಮಕ್ಕಳು | ಕನ್ನಡ | |
1978 | ಪರಸಂಗದ ಗೆಂಡೆತಿಮ್ಮ | ಕನ್ನಡ | |
1979 | ಆಕ್ರಮಣ | ಕನ್ನಡ | |
1979 | ದಂಗೆ ಎದ್ದ ಮಕ್ಕಳು | ಕನ್ನಡ | |
1979 | ನಮ್ಮಮ್ಮನ ಸೊಸೆ | ಕನ್ನಡ | |
1980 | ಬಂಗಾರದ ಜಿಂಕೆ | ಕನ್ನಡ | |
1980 | ವಾತ್ಸಲ್ಯ ಪಥ | ಕನ್ನಡ | |
1980 | ಸಂಗೀತಾ | ಕನ್ನಡ | |
1981 | ಜಾಲ | ಕನ್ನಡ | |
1981 | ಚದುರಿದ ಚಿತ್ರಗಳು | ಕನ್ನಡ | |
1983 | ಬ್ಯಾಂಕರ್ ಮಾರ್ಗಯ್ಯ | ಕನ್ನಡ | |
1983 | ಅನ್ವೇಷಣೆ | ಕನ್ನಡ | |
1983 | ಗಂಧರ್ವಗಿರಿ | ಕನ್ನಡ | |
1983 | ಮುದುಡಿದ ತಾವರೆ ಅರಳಿತು | ಕನ್ನಡ | |
1983 | ನ್ಯಾಯ ಗೆದ್ದಿತು | ಕನ್ನಡ | |
1983 | ಪ್ರೇಮಯುದ್ಧ | ಕನ್ನಡ | |
1983 | ಸಿಂಹಾಸನ | ಕನ್ನಡ | |
1984 | ಒಲವೆ ಬದುಕು | ಕನ್ನಡ | |
1986 | ಪ್ರೇಮ ಜಾಲ | ಕನ್ನಡ | |
1987 | ಹುಲಿ ಹೆಬ್ಬುಲಿ | ಕನ್ನಡ | |
1987 | ಅವಸ್ಥೆ | ಕನ್ನಡ | |
1987 | ನ್ಯಾಯ ಶಿಕ್ಷೆ | ಕನ್ನಡ | |
1987 | ರೋಮಾಂಚನ | ಕನ್ನಡ | |
1987 | ಸಂಪ್ರದಾಯ | ಕನ್ನಡ | |
1988 | ಭುಜಂಗಯ್ಯನ ದಶಾವತಾರ | ಕನ್ನಡ | |
1988 | ಆಸ್ಪೋಟ | ಕನ್ನಡ | |
1988 | ಮಾತೃದೇವೋಭವ | ಕನ್ನಡ | |
1989 | ಹಾಂಕಾಂಗಿನಲ್ಲಿ ಏಜಂಟ್ ಅಮರ್ | ಕನ್ನಡ | |
1989 | ಸಿಂಗಾರಿ ಬಂಗಾರಿ | ಕನ್ನಡ | |
1990 | ಸಂತ ಶಿಶುನಾಳ ಶರೀಫ | ಕನ್ನಡ | |
1991 | ಮನೆ | ಕನ್ನಡ | ವಿಜೇತರು : ಕರ್ನಾಟಕ ರಾಜ್ಯ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ |
1991 | ಎಕ್ ಘರ್ | ಹಿಂದಿ | |
1992 | ಉಂಡು ಹೋದ ಕೊಂಡು ಹೋದ | ಕನ್ನಡ | |
1993 | ಕಾದಂಬರಿ | ಕನ್ನಡ | |
1994 | ಯಾರಿಗು ಹೇಳ್ಬೇಡಿ | ಕನ್ನಡ | |
1995 | ನಿಲುಕದ ನಕ್ಷತ್ರ | ಕನ್ನಡ | |
1996 | ಜನನಿ | ಕನ್ನಡ | |
1996 | ಪೂಜ | ಕನ್ನಡ | |
1999 | ದೇವೀರಿ | ಕನ್ನಡ | |
1999 | ಕಾನೂರು ಹೆಗ್ಗಡತಿ | ಕನ್ನಡ | |
2003 | ಅರ್ಥ | ಕನ್ನಡ | |
2004 | ಹಸೀನಾ | ಕನ್ನಡ | |
2004 | ಬೇರು | ಕನ್ನಡ | |
2004 | ಪ್ರವಾಹ | ಕನ್ನಡ | |
2005 | ನಾಯಿ ನೆರಳು | ಕನ್ನಡ | |
2005 | ಮುಖಾಮುಖಿ | ಕನ್ನಡ | |
2006 | ಬನದ ನೆರಳು | ಕನ್ನಡ | |
2007 | ಗುಲಾಬಿ ಟಾಕೀಸು | ಕನ್ನಡ | |
2008 | ವಿಮುಕ್ತಿ | ಕನ್ನಡ | |
2008 | ಮೊಗ್ಗಿನ ಜಡೆ | ಕನ್ನಡ | |
2008 | ಹಾರು ಹಕ್ಕಿಯನೇರಿ | ಕನ್ನಡ | |
2009 | ದಾಟು | ಕನ್ನಡ | |
2009 | ಮುಖಪುಟ | ಕನ್ನಡ | |
2010 | ಗಾಂಧಿ ಸ್ಮೈಲ್ಸ್ | ಕನ್ನಡ | |
2010 | ಬೇಲಿ ಮತ್ತು ಹೊಲ | ಕನ್ನಡ | |
2010 | ಹೆಜ್ಜೆಗಳು | ಕನ್ನಡ | |
2010 | ಪ್ರಾರ್ಥನೆ | ಕನ್ನಡ |
ಟಿವಿ ಚಿತ್ರ
ಬದಲಾಯಿಸಿವರ್ಷ | ಚಿತ್ರ | ಭಾಷೆ | ಇತರ ಸಂಗತಿ |
---|---|---|---|
1987 | ಮಾಲ್ಗುಡಿ ಡೇಸ್ (ಟಿವಿ ಸರಣಿ) | ಹಿಂದಿ | ಛಾಯಾಗ್ರಹಣ |
1988 | ಸ್ಟೋನ್ ಬಾಯ್ (ಟಿವಿ ಸರಣಿ) | ಹಿಂದಿ | ಛಾಯಾಗ್ರಹಣ |
2002 | ಒಂದು ಸಾವಿನ ಸುತ್ತ (ಟೆಲಿ ಚಿತ್ರ) | ಕನ್ನಡ | ಛಾಯಾಗ್ರಹಣ |
2002 | ಸಾಕ್ಷಿ (ಟೆಲಿ ಚಿತ್ರ) | ಕನ್ನಡ | ಚಿತ್ರಕತೆ, ನಿರ್ದೇಶನ, ಛಾಯಾಗ್ರಹಣ |
2003 | ಗೃಹಭಂಗ (ಟಿವಿ ಸರಣಿ) | ಕನ್ನಡ | ಛಾಯಾಗ್ರಹಣ |