ಅಗ್ನಾಥ

ಅಗ್ನಾಥ
ಅಗ್ನಾಥ

ಅಗ್ನಾಥ ಎಂಬುವುದು ಜಲವಾಸಿ. ಈ ಗುಂಪಿನಲ್ಲಿ ಇರುವ ವಾಸಿಗಳಿಗೆ ದವಡೆಗಳು ಇರುವುದಿಲ್ಲ. ಅದಕ್ಕಾಗಿ ಅವುಗಳನ್ನು ಅಗ್ನಾಥ ಎಂದು ಕರೆಯಲ್ಪಡುತ್ತದೆ. ಈ ವಾಸಿಗಳ ರೂಪ ಮೀನಿನ ಹಾಗೆ ಕಂಡುಬರುತ್ತದೆ. ಅಗ್ನಾಥ ಬಹು ಪ್ರಾಚೀನ ಕಾಲದ ಕಶೇರುಕಗಳು. ಇವುಗಳ ಪಳೆಯುಳಿಕೆಗಳು, ಇವರು ಅತಿ ಪ್ರಾಚೀನವುಗಳು ಎಂದು ವ್ಯಕ್ತಪಡಿಸುತ್ತವೆ. ಅಗ್ನಾಥ ವರ್ಗವೇ ಮೊದಲು ಕಂಡು ಬಂದ ಕಶೇರುಕಗಳು ಎಂದು ಗುರುತ್ತಿಸಲ್ಪಟ್ಟಿದೆ.<[]

ವಾಸ ಸ್ಥಳ

ಬದಲಾಯಿಸಿ

ಅಗ್ನಾಥ ಗುಂಪಿನಲ್ಲಿ ಕಂಡು ಬರುವ ಅನೇಕ ಜೀವಿಗಳು ಗತಿಸಿವೆ. ಉಳಿದಿರುವ ಜೀವಿಗಳು ಜಲವಾಸಿಗಳು, ಮೀನು, ಈಲ್ ಮತ್ತು ಲಾಮ್ಪ್ ರೇ. ಅವು ಕೆರೆ ಮತ್ತು ಸಾಗರಗಳಲ್ಲಿ ವಾಸವಾಗಿವೆ. ಇವೆರಡು ಪರಾವಲಂಬಿಗಳು.

ಸಾಮಾನ್ಯ ಗುಣಲಕ್ಷಣಗಳು

ಬದಲಾಯಿಸಿ

ಅಗ್ನಾಥದ ದೇಹವು ಉದ್ದವಾಗಿ ಮೀನಿನ ಹಾಗೆ ಕಾಣುತ್ತದೆ. ಚರ್ಮವು ಲೋಳೆಯ ಗ್ರಂಥಿಯಿಂದ ಬಹಳ ಹಗುರವಾಗಿದೆ. ದೇಹದ ಮೇಲೆ ಯಾವ ಮಾಪಕಗಳು ಇಲ್ಲ.ಅಗ್ನಾಥದ ದೇಹವು ತಲೆ,ಕಾಂಡ ಮತ್ತು ಬಾಲವೆಂದು ಭಾಗಗೊಂಡಿದೆ. ತಲೆ ಭಾಗದಲ್ಲಿ ಒಂದು ಜೋಡಿಯ ಕಣ್ಣುಗಳು,ಮೂಗು ಮತ್ತು ದವಡೆಗಳಿಲ್ಲದ ಬಾಯಿಯಿದೆ. ಇದರ ಬಾಯಿಯು ಹೀರುವುದಕ್ಕೆ ಉಪಯೋಗಕರವಾಗಿದೆ, ಇದಕ್ಕಾಗಿ ಇವುಗಳನ್ನು ಸೈಲ್ಕೊಸ್ಟೊನ್ಗಳೆಂದು ಕರೆಯಲ್ಪಡುತ್ತವೆ ಮತ್ತು ಇವುಗಳಿಗೆ ದವಡೆಗಳಿಲ್ಲದ ಕಾರಣ ಅಗ್ನಾಥ ವರ್ಗದಲ್ಲಿ ಗ್ರಹಿಸಲಾಗಿದೆ.ಇದಕ್ಕೆ ಸ್ನಾಯುವಿನ ದೇಹ ಮತ್ತು ಬಾಲವುಳ್ಳವುದ್ದಾಗಿದೆ.ಇದಕ್ಕೆ ಐದರಿಂದ ಹದಿನಾರು ಕಿವಿರುಗಳು ಇರುತ್ತದೆ. ಜೋಡಿಯಾಗದ ರೆಕ್ಕೆಗಳು ದೇಹದ ಮೇಲೆ ಕಂಡುಬರುತ್ತದೆ. ಚರ್ಮದ ಒಳ ಕವಚವು ನಾರಿನದ್ದು.ಬೆನ್ನುಹುರಿಯ ಪೂರ್ವ ರೂಪ ಜೀವನವಿಡಿ ಕಾಣಬಹುದು. ಈ ಜಲವಾಸಿಗಳು ಪರಾವಲಂಬಿಳಾದ ಕಾರಣ ಜೀರ್ಣಾಂಗಗಳದಲ್ಲಿ ಹೊಟ್ಟೆ,ಕರಳು ಅನುಪಸ್ಥಿತಿಯಾಗಿದೆ.ಜೀರ್ಣಾಂಗ ಶಕ್ತಿ ತುಂಬ ಕಡಿಮೆ.ಇವುಗಳ ಆಹಾರ ಸೇವನೆ ಬೇರೆ ಜಲವಾಸಿಗಳಿಗೆ ಹೊಲಿಸಿದರೆ ತುಂಬ ಕಡಿಮೆ. ಇದರ ಹೃದಯದಲ್ಲಿ ಎರಡು ಚೇಂಬರ್ ಇದೆ.ಇವು ಪರಲಾವಂಬಿಗಳಾದ ಕಾರಣ,ಬೇರೆ ಜಲವಾಸಿಗಳ ರಕ್ತ ಅಥವಾ ಮೀನುಗಳ ಹೆಣ್ಣಗಳನ್ನು ಆಹಾರವನ್ನಾಗಿ ಸೇವಿಸುತ್ತವೆ. ಅಗ್ನಾಥ ಗುಂಪಿನಲ್ಲಿ ಇನ್ನು ಬದುಕಿರುವುದು ಎರಡೇ ಜೀವಿಗಳು, ಲಾಂಪ್ ರೇ ಮತ್ತು ಹಾಗ್ ಫ಼ಿಶ್.

ಲಾಂಪ್ ರೇ

ಬದಲಾಯಿಸಿ
ಲಾಂಪ್ ರೇ
 

ಲಾಂಪ್ ರೇ ಎಂಬ ಜಲವಾಸಿಗಳನ್ನು ಲಾಂಪ್ ಈಲ್ ರೇ ಎಂದೂ ಕರೆಯುತ್ತಾರೆ.ಇದರ ದೇಹವು ಉದ್ದವಾಗಿದ್ದು ತಲೆ,ಕಾಂಡ ಮತ್ತು ಬಾಲವೆಂದು ಭಾಗಗೊಂಡಿದೆ.ಇದರ ದೇಹವನ್ನು ಹಾಗ್ ಫ಼ಿಶ್ ಗೆ ಹೋಲಿಸಿದರೆ ಅಷ್ಟು ಹೇಯವಾಗಿಲ್ಲ. ತಲೆಯ ಭಾಗದಲ್ಲಿ ಇವುಗಳಿಗೆ ಉತ್ತಮವಾದ ಮತ್ತು ದೊಡ್ಡದಾದ ಒಂದು ಜೊತೆಯ ಕಣ್ಣುಗಳು,ಉದ್ದವಾದ ಮೂಗು ಮತ್ತು ಬಾಯಿ ಇದೆ.ಉತ್ತಮವಾದ ಮೆದುಳು ಉಂಟು.ದೇಹದ ಮೇಲೆ ಇಜ್ಜುರೆಕ್ಕೆಗಳುಂಟು. ಇವು ಕೆರೆ ಮತ್ತು ಸಾಗರದಲ್ಲಿಯೂ ವಾಸಿಸುತ್ತದೆ.ಈ ಜಲವಾಸಿ ಬಾಹ್ಯ ಪರಲಾವಂಬಿಗಳಾಗಿದ್ದು ಬೇರೆ ಮೀನಿನ ರಕ್ತವನ್ನು ಆಹಾರವನ್ನಾಗಿ ಸೇವಿಸುತ್ತವೆ ಇದಕ್ಕಾಗಿ ಇವುಗಳಿಗೆ ಕೆನ್ನೆಯ ಕೊಳವೆಯುಂಟು.ಇದು ಈ ವಾಸಿಗೆ ರಕ್ತವನ್ನು ಹೆಪ್ಪುಗಟ್ಟದಂತೆ ಸುಲಭವಾಗಿ ರಕ್ತವನ್ನು ಹೀರಲು ಸಹಾಯ ಮಾಡುತ್ತದೆ. ಏಳು ಜೋಡಿಯ ಕಿವಿರುಗಳನ್ನು ಹೊಂದಿದೆ. ಚಳಿಗಾಲದಲ್ಲಿ ಇವು ಕೆರೆಗಳಿಂದ ಸಮುದ್ರಕ್ಕೆ ಚಲಿಸುತ್ತವೆ.ಇದರ ಮೋಟ್ಟೆ ಚಿಕ್ಕದಾಗಿದೆ.ಇದರ ಮೊಟ್ಟೆಗೆ ಚಿಪ್ಪೆ ಇರುವುದಿಲ್ಲ. ಸಮುದ್ರದಲ್ಲಿ ತಮ್ಮ ಮೋಟ್ಟೆಯನಿಟ್ಟು ನಂತರ ಮರಿಯಾದ ಮೇಲೆ ಪುನಃ ತಮ್ಮ ತಮ್ಮ ಕೆರೆಗಳಿಗೆ ಆ ಮರಿಗಳು ಹಿಂತಿರುಗುತ್ತವೆ.<[]

ಹಾಗ್ ಫ಼ಿಶ್

ಬದಲಾಯಿಸಿ
ಹಾಗ್ ಫ಼ಿಶ್
 
ಹಾಗ್ ಫ಼ಿಶ್

ಹಾಗ್ ಫ಼ಿಶ್ ಗತಿಸಿ ಹೋಗದ ಜಲವಾಸಿ.ಇದರ ಚರ್ಮ ಲೋಳಯ ಗ್ರಂಥಿಯಿಂದ ಬಹಳ ಹೇಯವಾಗಿ ಕಾಣುತ್ತದೆ.ಇದರ ದೇಹವು ತಲೆ,ಉದ್ದವಾದ ಕಾಂಡ ಮತ್ತು ಬಾಲ ಎಂದು ಭಾಗಗೊಂಡಿದೆ. ದೇಹದಲ್ಲಿ ಯಾವ ಮಾಪಕಗಳು ಕಾಣುವುದಿಲ್ಲ.ಇವುಗಳಿಗೆ ಕಣ್ಣು ಇರುವುದಿಲ್ಲ.ಇದರ ಕಣ್ಣುಗಳು ಚರ್ಮದಿಂದ ಅಡಗಿಹೊಗಿರುತ್ತದೆ ಮತ್ತು ಮೂಗು ತಲೆಯ ಬಾಗದಲ್ಲಿ ಕಾಣಬಹುದು.ಇದಕೆ ಒಳ್ಳೆ ಬೆಳವಣಿಗೆಗೊಳ್ಳದ ಮೆದುಳುಂಟು.ಇವುಗಳಿಗೆ ಯಾವ ರೆಕ್ಕೆಗಳು ಇಲ್ಲ.ಇದಕ್ಕೆ ಸುಮಾರು ಹದಿನಾರು ಕಿವಿರುಗಳು ಉಂಟು.ಹಾಗ್ ಫ಼ಿಶ್ ಸಮುದ್ರದ ನಿವಾಸಿಗಳು. ಇವು ಕೆರೆ,ಭಾವಿ ಅಥವಾ ಬೇರೆ ಯಾವುದರಲ್ಲಿಯು ವಾಸಿಸುವುದಿಲ್ಲ.ಇವು ಬರೀ ಸತ್ತ ಜಲವಾಸಿಗಳನ್ನು ಆಹಾರವನ್ನಾಗಿ ಸೇವಿಸುವ ಕಾರಣ ಯಾವ ಕೆನ್ನೆಯ ಕೊಳವೆಯು ಇರುವುದಿಲ್ಲ.ಚಳಿಗಾಲದಲ್ಲಿ ಇವು ಸಮುದ್ರದಲ್ಲಿಯೇ ಉಳಿದಿರುತ್ತದೆ.ಇದರ ಮೊಟ್ಟೆ ತುಂಬಾ ದೊಡ್ಡದ್ದು ಮತ್ತು ಗಟ್ಟಿಮುಟಾದ ಮೊಟ್ಟೆ ಚಿಪ್ಪೆ ಉಂಟು. ಇವುಗಳ ಚರ್ಮ ಆಧಿಕ ಲೋಳೆಯ ಗ್ರಂಥಿಯಿಂದ ಹಗುರವಾದ ಕಾರಣ,ಈ ಜಲ ವಾಸಿಯನ್ನು ಹಿಡಿಯಲು ಬಹಳ ಕಷ್ಟವಾದ ಕೆಲಸ.ಕೋರಿಯ ಎಂಬ ಜಾಪನ್ ಊರಿನಲ್ಲಿ ಈ ಜಲ ನಿವಾಸಿಯನ್ನು ಬಹುಪ್ರಿಯ ಆಹಾರವನ್ನಾಗಿ ಸೇವಿಸುತ್ತಾರೆ.

ಉಲ್ಲೇಖಗಳು

ಬದಲಾಯಿಸಿ
  1. "agnatha".
  2. "agnatha".

ಹೊರಗಿನ ಸಂಪರ್ಕ

ಬದಲಾಯಿಸಿ
  • www.britannica.com/animal/agnathan
  • fsc.fernbank.edu/STT/VertBio/agnatha.htm
  • www.newworldencyclopedia.org/entry/Agnatha
  • www.encyclopedia.com/topic/Agnathans.aspx
  • petrifiedwoodmuseum.org/SOAgnatha.htm