ಪರಿಚೆಯ

ಬದಲಾಯಿಸಿ

ಅನನ್ಯ ಎಂಬುದು ನನ್ನ ಹೆಸರು. ನಾನು ಕ್ರೈಷ್ಟ್[] ವಿಶ್ವವಿದ್ಯಾಲಯದಲ್ಲಿ ಬಿ.ಎ ಓದುತ್ತಿದ್ದೇನೆ. ನಾನು ಹುಟ್ಟಿದ ದಿನಾಂಕ ೧೫ ಮಾರ್ಚ್, ಬೆಂಗಳೂರು,ಕರ್ನಾಟಕ. ಬಹಳ ಪ್ರಶಾಂತ ವ್ಯಕ್ತಿ ಹಾಗು ಎಲ್ಲಾ ಕೆಲಸಗಳನ್ನು ತಾಳ್ಮೆಯಿಂದ ಮಾಡುತ್ತೇನೆಂದು ಎಲ್ಲರು ಹೇಳುತ್ತಾರೆ. ನನ್ನ ತಂದೆಯ ಹೆಸರು ರವಿಂದ್ರ ಮತ್ತು ತಾಯಿಯ ಹೆಸರು ಸೀಮ, ಸಹೋದರಿಯ ಹೆಸರು ಆದಿತ್ರಿ. ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇವೆ. ನನ್ನ ರೂಪದರ್ಶಿ ಹಾಗು ಮಾರ್ಗದರ್ಶಿ ನನ್ನ ತಂದೆಯವರು.ಕೇಂದ್ರೀಕೃತವಾಗಿರಲು ಮತ್ತು ಕಠಿಣವಾಗಿ ಕೆಲಸ ಮಾಡಲು ಕಲಿತಿದ್ದು ಅವರಿಂದ. ನನ್ನ ಪೋಷಕರು, ಯಾವಾಗಲೂ ನನ್ನ ನಿರ್ಧಾರಗಳಲ್ಲಿ ಬೆಂಬಲವಾಗಿರುತ್ತಾರೆ. ಅದಕ್ಕಾಗಿಯೇ ನಾನು ಜೀವನದಲ್ಲಿ ಬಯಸುವ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಯಿತು. ಶಾಲೆಯಲ್ಲಿ ನಾನು ಬಹಳ ನಾಚಿಕೆ ಸ್ವಭಾವದವಳಾಗಿದ್ದೆ. ಆದರೆ, ೧೦ನೇ ತರಗತಿಯ ನಂತರ ಎಲ್ಲವುದನ್ನೂ ಧೈರ್ಯದಿಂದ ಎದುರಿಸಲು ಪ್ರಾರಂಭಿಸಿದೆ. ಕಾಲೇಜು ಪ್ರವೇಶ ಅಥವಾ ಇತರ ವಿಷಯಗಳಾಗಿರಬಹುದು ಎಲ್ಲವುದನ್ನು ಸ್ವಂತವಾಗಿ ಮಾಡುವುದನ್ನು ಕಲಿತೆ. ನಾನು ಉತ್ತಮ ವ್ಯಕ್ತಿಯಾಗಲು ನಾನು ಭೇಟಿಯಾಗುವ ಪ್ರತಿಯೊಬ್ಬರಿಂದಲೂ ಒಂದು ಸಲಹೆಯ ತುಂಡು ಅಥವಾ ಒಂದು ಪಾತ್ರಗಳ ವೈಶಿಷ್ಟ್ಯವನ್ನು ತೆಗೆದುಕೊಳ್ಳತ್ತೇನೆ. ಪ್ರಸಿದ್ಧ ಮನೋವಿಜ್ಞಾನಿ ಆಗಲು ಮತ್ತು ಪ್ರಪಂಚವನ್ನು ಪ್ರಯಾಣ ಮಾಡುವುದು ನನ್ನ ಕನಸು. ಇದಕ್ಕಾಗಿ ನಾನು ಈಗಿಂದಲೇ ತಯಾರಿ ಮಾಡುತ್ತಿದ್ದೇನೆ ಆದ್ದರಿಂದ ದೀರ್ಘಾವಧಿಯಲ್ಲಿ ನನ್ನ ಕನಸನ್ನು ಸಾಧಿಸಲು ಸಾಧ್ಯವಾಗುತ್ತದೆ.

ವಿದ್ಯಾಭ್ಯಾಸ

ಬದಲಾಯಿಸಿ

ನನ್ನ ಶಾಲೆಯ ದಿನಗಳನ್ನು ಶ್ರೀ ಕುಮಾರನ್ಸ್[] ಶಾಲೆಯಲ್ಲಿ ೧೦ನೇ ತರಗತಿಯವರೆಗು ಮುಗಿಸಿದೆ. ನಂತರ ಪಿಯುಸಿಯನ್ನು ಕ್ರೈಷ್ಟ್ ಜುನಿಯರ್ ಕಾಲೇಜಿನಲ್ಲಿ ಮಾಡಿ, ಮುಂದೆ ಬಿ.ಎ ಮನೋವಿಜ್ಞಾನ ಕೂಡ ಆ ಸಂಸ್ತೆಯಲ್ಲಿಯೇ ಮಾಡುತ್ತಿದ್ದೇನೆ. ಶಾಲೆಯಿಂದಲೂ ಕೂಡ ನನಗೆ ವಿಜ್ಞಾನದ ಬಗ್ಗೆ ಆಸಕ್ತಿ ಇರಲಿಲ್ಲ. ಆದ್ದರಿಂದ ಸಮಾಜ ವಿಜ್ಞಾನವನ್ನು ನನ್ನ ಮುಂದಿನ ಓದುವಿಕೆಗಾಗಿ ಆರಿಸಿಕೊಂಡೆ. ಈಗ ನಾನು ಬಿ.ಎ ಯಲ್ಲಿ ಮನೋವಿಜ್ಞಾನವನ್ನು ಓದುತ್ತಿದ್ದೇನೆ. ಅದರಲ್ಲೇ ಪ್ರಾಮುಖ್ಯತೆ ಪಡೆಯಬೇಕೆಂಬುದು ನನ್ನ ಆಸೆ. ನನಗೆ ಜನರಿಗೆ ಯಾವುದೇರೀತಿಯಲ್ಲಾದರೂ ಸೇವೆ ಮಾಡಬೇಕೆಂಬ ಆಸೆಯಿತ್ತು. ಆದ್ದರಿಂದ ಮನೋವಿಜ್ಞಾನವನ್ನು ಆಯ್ಕೆಮಾಡಿ ಓದುತ್ತಿದ್ದೇನೆ. ಈರೀತಿಯಲ್ಲಿ ಮಾನಸಿಕ ಸಮಸ್ಯೆಗಳನ್ನು ಪರಿಹಾರಿಸಬಹುದೆಂಬ ನನ್ನ ಭಾವನೆ. ವಿಶ್ವವಿದ್ಯಾಲಯದಲ್ಲಿ, ಹರೆಯದವರ ಬಗ್ಗೆ ಒಂದು ಕೋರ್ಸ್ ಮಾಡಿದೆ. ಅದರಲ್ಲಿ, ಈ ವಯಸ್ಸಿನ ಮಕ್ಕಳಲ್ಲಿ ಕಂಡು ಬರುವ ಬದಲಾವನೆಗಳ ಬಗ್ಗೆ ತಿಳಿದೆ. ಈ ವಿಷಯಗಳು ಮುಂದೆ ಮನೋವಿಜ್ಞಾನದ ಅಭ್ಯಾಸದಲ್ಲಿ ಉಪಯೋಗಿಸಬಹುದು.

 
ಹಿಮಾಲಯ
 
ಸ್ವಿಡನ್ ಭಾವುಟ

ಹವ್ಯಾಸಗಳು

ಬದಲಾಯಿಸಿ

ನನಗೆ ನೃತ್ಯ ಹಾಗು ನಾಟಕದಲ್ಲಿ ಬಹಳ ಆಸಕ್ತಿ ಇದೆ. ನನ್ನ ನೃತ್ಯ ಪ್ರದರ್ಶನಗಳನ್ನು ಶಾಲೆಯಲ್ಲಿ ಹಾಗು ಬೇರೆ ಜಾಗಗಳಲ್ಲಿ ಮಾಡಿದ್ದೇನೆ. ನನ್ನ ನೃತ್ಯ ಪ್ರದರ್ಶನಗಳಿಗಾಗಿ ನಾನು ಅನೇಕ ಬಹುಮಾನಗಳನ್ನು ಸ್ವೀಕರಿಸಿದ್ದೇನೆ. ಶಾಲೆಯ ನಾಟಕಗಳಲ್ಲಿ ಭಾಗವಹಿಸುತ್ತಿದ್ದೆ. ನನಗೆ ಟ್ರೆಕ್ಕಿಂಗ್ ಮತ್ತು ಸಾಹಸ ಕ್ರೀಡೆಗಳು ಬಹಳ ಇಷ್ಟ, ಹಾಗಾಗಿ ೧೬ ವರ್ಷ ವಯಸ್ಸಿನವಳಿದ್ದಾಗ ಹಿಮಾಲಯ ಟ್ರೆಕ್ಕಿಂಗ್ ತಂಡದಲ್ಲಿ ಭಾಗವಾಗಿದ್ದೆ. ಅದು ನನ್ನ ಜೀವನದ ಅತ್ಯುತ್ತಮ ನಿರ್ಧಾರವೆನ್ನಬಹುದು. ಸ್ಕೂಬಾ ಡೈವಿಂಗ್, ಸೀ ವಾಕಿಂಗ್, ಜೆಟ್ ಸ್ಕೀ ಎಂಬ ಹಲವಾರು ಸಾಹಸ ಕ್ರೀಡೆಗಳನ್ನು ಮಾಡಿದ್ದೇನೆ. ನಾನು ಪ್ರಯಾಣಿಸಲು ಇಷ್ಟಪಡುತ್ತೇನೆ ಅದು ಭಾರತ ಅಥವಾ ವಿದೇಶಗಳಲ್ಲಿ ಇರಬಹುದು. ಆದ್ದರಿಂದ ನನಗೆ ಸಿಕ್ಕುವ ಯಾವುದೇ ಅವಕಾಶವನ್ನು ಬಿಟ್ಟುಬಿಡುವುದಿಲ್ಲ. ಪಿ.ಯು.ಸಿ ಯಲ್ಲಿ, ಶಾಲೆಯ ಮುಕಾಂತರ ಸ್ವೀಡನ್ ದೇಶಕ್ಕೆ ಭೇಟಿನೀಡಿದೆ. ಅಲ್ಲಿಯ ವಾತಾವರನ ಬಹಳ ಸುಂದರವಾಗಿತ್ತು. ಬರೊ ವರುಷ ಅಮೆರಿಕ ಗೆ ಕೂಡ ಭೇಟಿನೀಡಲು ಆಶಯಿಸುತ್ತೇನೆ. ನನಗೆ ಪ್ರಾಣಿಗಳು ಮತ್ತು ವನ್ಯಜೀವಿ ಛಾಯಾಗ್ರಹಣವನ್ನು ಮಾಡಲು ಬಹಳಯಿಷ್ಟ. ನಾನು ಕೆಲವು ಅರಣ್ಯ ನಿಕ್ಷೇಪಗಳಿಗೆ ಭೇಟಿನೀಡಿದ್ದೇನೆ.

ನನಗೆ ಬಹಳ ಇಷ್ಟವಾದ ಒಂದು ಪುಸ್ತಕವೆಂದರೆ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ನಮ್ಮೂರಿನ ರಸಿಕರು ಪುಸ್ತಕ. ನಾನು ಈ ಪುಸ್ತಕವನ್ನು ಇಷ್ಟಪಡುತ್ತೇನೆ ಏಕೆಂದರೆ ಇದು ಸರಳವಾದ ರೀತಿಯಲ್ಲಿ ಜೀವನ ಹೇಗೆ ದಾರಿ ಮಾಡುತ್ತದೆ ಮತ್ತು ಸಂತೋಷಕ್ಕೆ ವಸ್ತುಗಳ ಅಗತ್ಯವಿಲ್ಲ ಎಂಬುದನ್ನು ತೋರಿಸುತ್ತದೆ.

ಮೆಚ್ಚುಗೆಗಳು

ಬದಲಾಯಿಸಿ

ನನ್ನ ಶಾಲೆಯಲ್ಲಿ ಸಂಪಾದಕೀಯದ ಭಾಗವಾಗಿದ್ದೆ. ಅಂದಿನಿಂದ ನನಗೆ ಬರೆಯುವುದರಲ್ಲಿ ಆಸಕ್ತಿ ಹುಟ್ಟಿತು. ನಾನು ಯಾವುದರಲ್ಲಾದರೂ, ಬೇರೆಯವರ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳಲು, ವಿವಿಧ ರೀತಿಯ ಜನರೊಂದಿಗೆ ಮಾತನಾಡಲು ಇಷ್ಟಪಡುತ್ತೇನೆ. ಅವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ ನಂತರ ಒಂದು ತೀರ್ಮಾನಕ್ಕೆ ಬರುತ್ತೇನೆ. ಪ್ರತಿಯೊಬ್ಬರೂ, ನಾನು ಬಹಳ ತಿಳುವಳಿಕೆ ಮತ್ತು ಬೆಂಬಲಿತ ವ್ಯಕ್ತಿ ಎಂದು ಹೇಳುತ್ತಾರೆ ಹಾಗಾಗಿ ಅದನ್ನು ಮುಂದುವರಿಸಲು ಪ್ರಯತ್ನಿಸುತ್ತೇನೆ.

ಮಾಡಲ್ ಯುನೈಟೆಡ್ ನೆಶನ್ಸ್ ಎಂಬ ಸ್ಪರ್ದೆಯಲ್ಲಿ ಗೌರವಾನ್ವಿತ ಪ್ರತಿನಿಧಿಯ ಬಹುಮಾನವನ್ನು ಸ್ವೀಕರಿಸಿದ್ದೇನೆ. ಉತ್ತಮ ಸಮರಿಟನ್ ಎಂಬ ಮೆಚ್ಚುಗೆ ಕೂಡ ನನಗೆ ಬಂದಿದೆ.

ಏನು ಮುಕ್ತವಾಗಿಲ್ಲ ಮತ್ತು ಎಲ್ಲವೂ ವೆಚ್ಚದೊಂದಿಗೆ ಬರುತ್ತದೆ ಎಂಬ ಮಾತಿನಿಂದ ನಾನು ಬದುಕುತ್ತೇನೆ. ಎಲ್ಲಾ ನಡೆಯುವುದು ಒಂದು ಕಾರಣಕ್ಕಾಗಿ ಎನ್ನುವುದು ನಾನು ಪಾಲಿಸುವ ಸತ್ಯ.

ಉಲ್ಲೇಖನಗಳು

ಬದಲಾಯಿಸಿ
  1. https://christuniversity.in/
  2. http://kumarans.org/