ಸದಸ್ಯ:Amrutha Patali/ನನ್ನ ಪ್ರಯೋಗಪುಟ
ಕೇರ್ಪಳ ಸ್ಥಳ ಪುರಾಣ
ಬದಲಾಯಿಸಿಈ ಕುರಿತಾದ ಐತಿಹ್ಯಗಳು ಭಿನ್ನರೂಪಗಳು ಸಿಗುತ್ತದೆ.ಅವುಗಳ ಆಶಯ ಮಾತ್ರ ಒಂದೇ ಆಗಿವೆ. ಅದನ್ನು ಹೀಗೆ ಸಂಗ್ರಹವಾಗಿ ಹೇಳಬಹುದು. ಅದನ್ನು ಬೇರೆ ಬೇರೆ ಕಡೆ ನೆಲೆಗೊಳಿಸಿ ಪೂಜಿಸಿದನಂತೆ, ಕಾಲಾಂತರದಲ್ಲಿ ಅವನಿಗೆ ಕಷ್ಟ ನಷ್ಟಗಳು ಸಂಭವಿಸಿದಂತೆ ಅದರ ಪ್ರಾಯಶ್ಚಿತವಾಗಿ ಈ ಪ್ರತಿಮೆಯನ್ನು ಯೋಗ್ಯಸ್ಥಾನದಲ್ಲಿ ಪ್ರತಿಷ್ಠಾಪಿಸಲು ಆರೈಸುತ್ತಿದ್ದನಂತೆ. ಪನ್ನೆ ಬೀಡಿನ ಬಲ್ಲಾಳ ತಾನು ತಂದ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಯೋಗ್ಯ ಸ್ಥಳವನ್ನು ಅರಸುತ್ತಿರುವಾಗ ಘಟನೆಯೊಂದು ಜರಗಿತು. ಎತ್ತರವಾದ ವೃಕ್ಷಗಳಿಂದಲೂ ಲತೆಗಳಿಂದಲೂ ಕೂಡಿ ಸೂರ್ಯ ರಶ್ಮಿ ಕೂಡ ಬೀಳದ ದಟ್ಟಾರಣ್ಯದಿಂದಾವೃತವಾದ ಪ್ರಾಣಿ-ಪಕ್ಷಿ ಜೀವ ಸಂಕುಲದಿಂದ ರಮಣೀಯವಾದ ಪ್ರದೇಶದಲ್ಲಿ ಗುಣಲಕ್ಷದ ದನವೊಂದು ಮತ್ತು ಅನತಿ ದೂರದಲ್ಲಿ ಹುಲಿಯೊಂದು ಮಲಗಿತ್ತು. . ಅಪರೂಪವಾದುದು ದೈವ ಸಾನಿಧ್ಯಕ್ಕೆ ಯೋಗ್ಯವೆಂದು ತೀರ್ಮಾನಿಸಿ ಬಲ್ಲಾಳ ಚೆನ್ನಿಗರಾಯ ಅಲ್ಲಿ ದೇವಸ್ಥಾನ ನಿರ್ಮಿಸಿ ತಾನು ತಂದಿದ್ದ ಮತ್ತು ತನ್ನ ಕಷ್ಟಗಳಿಂದ ಕಾರಣವಾದ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿದಂತೆ. ದನ ನಿಂತಿದ್ದ ಸ್ಥಳದಿಂದಲ್ಲಿಯೇ ಗರ್ಭಗುಡಿಯನ್ನು ಕಟ್ಟಾಲಾಯಿತಂತೆ. ಹುಲಿ ಮಲಗಿದ್ದ ಜಾಗ ಗರ್ಭಗುಡಿಯ ಹಿಂಬಾಗ. ಅದರ ಕುರುಹಾಗಿ ಕೆಂಪು ಕಲ್ಲೊಂದನ್ನು ನೆಡಲಾಯಿತು ಮತ್ತು ಇತ್ತೀಚಿನವರೆಗೆ ಅದು ಇತ್ತಂತೆ. ಬಲ್ಲಾಳಚೆನ್ನಿಗರಾಯ ಕಟ್ಟಿಸಿದ ದೇಗುಲವಾದುದ್ದುರಿಂದ ಇದು ಮುಂದೆ ಶ್ರೀ ಚೆನ್ನೇಕೇಶವ ದೇವಸ್ಥಾನವೆಂದು ಪ್ರಸಿದ್ದಿ ಪಡೆಯಿತು.[೧]
ಹಿನ್ನಲೆಗಳು
ಬದಲಾಯಿಸಿಶ್ರೀ ಚೆನ್ನಕೇಶವ ದೇವಳ ಇರುವ ಸ್ಥಳದ ಈಶಾನ್ಯ ದಿಕ್ಕಿನಲ್ಲಿ ಹಿಂದೆ ಸೂರ್ತಿಲಾ ಎಂಬಲ್ಲಿ ಬ್ರಾಹ್ಮಣ ಕುಟುಂಬವೊಂದಿತ್ತು. ಈ ಸ್ಥಳ ದೇವಸ್ಥಾನದಿಂದ ಒಂದು ಮೈಲು ದೂರದಲ್ಲಿದೆ. ಆ ಬ್ರಾಹ್ಮಣ ಕುಟುಂಬಕ್ಕೆ ಅಗಸ್ತ್ಯ ಋಷಿಯ ಶಿಷ್ಯ ಪರಂಪರೆಯ ಅವಧೂತರೊಬ್ಬರು ತಮ್ಮ ಪಯಣ ಕಾಲದಲ್ಲಿ ಪ್ರತಿಮೆಯನ್ನು ಕೊಟ್ಟುಹೋದರಂತೆ[೨]. ಆ ಬ್ರಾಹ್ಮಣ ಕುಟುಂಬ ಕಾಲಾನುಕ್ರಮದಲ್ಲಿ ಆ ಪ್ರತಿಮೆಯನ್ನು ಕೊಟ್ಟು ಹೋದರಂತೆ. ಆ ಬ್ರಾಹ್ಮಣ ಮಠಕಟ್ಟ ನಿಷ್ಠೆ ಭಕ್ತಿ ಭಾವದಿಂದ ತಮ್ಮ ಮನೆಯ ಆವರಣದಲ್ಲಿ ನಿತ್ಯ ಪೂಜಿಸುತ್ತ ಬರುತ್ತಿದ್ದರಂತೆ. ಹೀಗೆ ಬರುತ್ತಿರುವಾಗ ಯೊವುದೋ ಒಂದು ಸಂದರ್ಭದಲ್ಲಿ ಈ ಪ್ರತಿಮೆ ಅಲ್ಲಿರುವುದನ್ನು ತಿಳಿದ ಪನ್ನೆ ಬೀಡಿನ ಬಲ್ಲಾಳ ಚೆನ್ನಿಗರಾಯ ಕಾರಣವಿಲ್ಲದೆ ಬಲತ್ಕಾರವಾಗಿ ಅದನ್ನು ಬೀಡಿಗೆ ತಂದನಂತೆ[೩]
ವೈಶಿಷ್ಟ್ಯಗಳು
ಬದಲಾಯಿಸಿಕೇರ್ಪು[೪] ಇಟ್ಟು ಎತ್ತರದಿಂದ ಇದನ್ನೂ ನೋಡಿದ ಪೆನ್ನೆಬೀಡಿನ ನಿಷ್ಠಾವಂತ ಗೌಡನೊಬ್ಬ ಬಲ್ಲಾಳನಿಗೆ ವಿಷಯ ಮುಟ್ಸಿಸಿದನಂತೆ. (ಕೇಪು ಎಂದರೆ ಗೆಣೆಗಳಿಂದಾದ ಒಂಟಿ ಬಿದಿರಿನಿಂದಾದ ಏಣಿ, ಎತ್ತರವನ್ನೇರಲು ಉಪಯೋಗಿಸಿದ ಸಾಧನ. ಕೇಪು ಹತ್ತಿ ನೋಡಿದ ವ್ಯಕ್ತಿಯಿಂದಾಗಿಯೇ ಈ ಊರಿಗೆ ಕೇರ್ಪಳ[೫]ವೆಂಬ ಹೆಸರಾಯಿತಂತೆ. ಪರಸ್ಪರ ವಿರುದ್ಧ ಗುಣ ಸ್ವಬಾವದ ಪ್ರಾಣಿಗಳೆರದಡು ಒಟ್ಟಾಗಿ ಅನ್ಯೋನ್ಯವಾಗಿರುವುದು ಅಪರೂಪದ ಸಂಗತಿ.
ಸ್ಥಳಗಳು
ಬದಲಾಯಿಸಿಸುಳ್ಯದ ಹತ್ತಿರದ ಬೊಳಿಯಮಜಲು[೬], ಬಳ್ಳಕ್ಕ[೭], ಕಾರ್ಯರ್ತೋಡಿ[೮] ಬೈಲಿನ ಆಸುಪಾಸಿನಲ್ಲಿದೆ.
ಉಲ್ಲೇಖಗಳು
ಬದಲಾಯಿಸಿ- ↑ ಮೌಖಕ ಸಂಕಥನ,ಪೂವಪ್ಪ ಕಣಿಯೂರು,ಪುಟ ಸಂಖ್ಯೆ ೧೧೦-೧೧೧
- ↑ ಮೌಖಕ ಸಂಕಥನ,ಪೂವಪ್ಪ ಕಣಿಯೂರು,೨೦೦೯,ತರಂಗಿಣಿ ಪ್ರಕಾಶನ ಸುಳ್ಯ,ದಕ್ಷಿಣ ಕನ್ನಡ ಪುಟ ಸಂಖ್ಯೆ ೧೧೦-೧೧೧.
- ↑ ಚೆನ್ನಕಲಶ. ಶ್ರಿ ಚೆನ್ನಕೇಶವ ದೇವಸ್ಥಾನ ಜೀರ್ಣೋದ್ಧಾರ ಸಮಿತಿ,ಸುಳ್ಯ;೨೦೦೪
- ↑ http://kanaja.in/?p=113507
- ↑ http://sullia.suddinews.com/archives/374507
- ↑ http://sullia.suddinews.com/archives/348044
- ↑ http://sullia.suddinews.com/archives/363941
- ↑ http://sullia.suddinews.com/archives/374123