ನನ್ನ ಪರಿಚಯ

ಬದಲಾಯಿಸಿ
 
ಬೆ೦ಗಳೂರು ಅರಮನೆ
      ನನ್ನ ಹೆಸರು ಅಮೋಘ್ ಐ ಪ್ರಕಾಶ್. ನಾನು ೧೯೯೯ನೇ ಇಸವಿ ಫೆಬ್ರವರಿ ೬ ರಂದು ಕೋಲಾರ ಜಿಲ್ಲೆಮಾಲೂರು ತಾಲೂಕಿನಲ್ಲಿ ಜನಿಸಿದೆನು. ನನ್ನ ತಂದೆಯ ಹೆಸರು ನಾಗಪ್ರಕಾಶ್ ಮತ್ತು ತಾಯಿಯ ಹೆಸರು ರಾಧಿಕ. ನನಗೆ ಒಬ್ಬ ಅಕ್ಕ ಇದ್ದಾಳೆ. ಅವಳ ಹೆಸರು ಅಭಿಘ್ನ. ನನ್ನ ತಂದೆ ವ್ಯಾಪಾರಸ್ಥ. ನನ್ನ ತಾಯಿ ವ್ಯಾಪಾರಸ್ಥೆ. ನನ್ನ ಅಕ್ಕ ವೈದ್ಯ ವ್ಯಾಸಂಗ ಮಾಡುತ್ತಿದ್ದಾಳೆ.ನನ್ನ ಅಜ್ಜ,ಅಜ್ಜಿ ನಮ್ಮ ಜೊತೆಯಲ್ಲೇ ವಾಸಮಾಡುತ್ತಾರೆ.ನಮ್ಮ ಊರು ರಾಮನಗರ. ನನಗೆ ಎರಡು ವರ್ಷ ವಯಸ್ಸಾದಾಗ ನನ್ನ ತಂದೆಯವರ ಊರಾದ ರಾಮನಗರದಿಂದ ಬೆಂಗಳೂರಿಗೆ ಬಂದೆವು.  

ವಿದ್ಯಾಭ್ಯಾಸ

ಬದಲಾಯಿಸಿ
 
ಬಿಶಪ್ ಕಾಟನ್ ಬಾಯ್ಸ್ ಸ್ಕೂಲ್ನ ಸಂಸ್ಥಾಪಕ
 
ಬಿಷಪ್ ಜಾರ್ಜ್ ಎಡ್ವರ್ಡ್ ಲಿಂಚ್ ಕಾಟನ್ ಆಡಿಟೋರಿಯಂ
 
ಕ್ರೈಸ್ಟ್ ಯೂನಿವರ್ಸಿಟಿ
     ನನಗೆ ಮೂರು ವರ್ಷವಿರುವಾಗಲೇ ನನ್ನನ್ನು ಮನೆಯ ಹತ್ತಿರದ ಶಿಶುವಿಹಾರಕ್ಕೆ ಸೇರಿಸಿದರು. ನನಗೆ ಐದು ವರ್ಷ ವಯಸ್ಸಾದಾಗ ನನ್ನನ್ನು ಬಿಶಪ್ ಕಾಟನ್ ಬಾಯ್ಸ್ ಸ್ಕೂಲ್ಗೆ ಸೇರಿಸಿದರು. ಸ್ವಲ್ಪ ದಿನ ಕಳೆದ ನಂತರ ಅನೇಕ ಹುಡುಗರು ಗೆಳೆಯರಾದರು. ನಾನು ನನ್ನ ಶಾಲೆಯಲ್ಲಿ ಒಬ್ಬ ಒಳ್ಳೆಯ ವಿದ್ಯಾರ್ಥಿ. ಪ್ರತಿ ತರಗತಿಯಲ್ಲೂ ಐದನೇ ಸ್ಥಾನದೊಳಗೆ ಬರುತ್ತಿದ್ದೆನು. ಅನೇಕ ಶಿಕ್ಷಕರಿಗೆ ನಾನು ನೆಚ್ಚಿನ ವಿದ್ಯಾರ್ಥಿಯಾಗಿದ್ದೆ. ಅವರು ಕೊಡುವ ಮನೆಗೆಲಸವನ್ನು ತಪ್ಪದೆ ಮಾಡಿಕೊಂಡು ಹೋಗುತ್ತಿದ್ದೆನು. ಅಂದಿನ ಪಾಠವನ್ನು ಅಂದೇ ಓದಿ ಮುಗಿಸುತ್ತಿದ್ದೆನು.ನಾನು ಹನ್ನೊಂದು ಮತ್ತು ಹನ್ನೆರಡನೆಯ ತರಗತಿಯನ್ನು ಜೈನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದೆನು. ನಾನು ಕಾಲೇಜಿನಲ್ಲಿ ವಾಣಿಜ್ಯ ವೇದಿಕೆಯಲ್ಲಿ ಸದಸ್ಯನಾಗಿದ್ದೆ. ನಾನು ಬೇರೆ ಕಾಲೇಜಿನವರು ನಡೆಸುವ ಫೆಸ್ಟ್ ಗಳಲ್ಲಿ ಭಾಗವಹಿಸುತ್ತಿದ್ದೆನು. ನಾನು ಹನ್ನೊಂದನೆಯ ತರಗತಿಯಲ್ಲಿ ಕ್ರೈಸ್ಟ್ ಕಾಲೇಜಿನ ಫ಼ೆಸ್ಟ್ ಗೆ ಹೋದಾಗ ಕಟ್ಟಡ, ಮೈದಾನ ಮತ್ತು ಮೂಲಸೌಕರ್ಯಗಳನ್ನು ನೋಡಿ ಆಕರ್ಷಣೆಗೊಂಡು ಅಲ್ಲಿ ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ಮಾಡಬೇಕೆಂದು ಹಟ ಹಿಡಿದು ಕಷ್ಟ ಪಟ್ಟು ಓದಿ ಹನ್ನೆರಡನೆ ತರಗತಿಯಲ್ಲಿ ಅಂತಿಮ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿ ಕ್ರೈಸ್ಟ್ ಯೂನಿವರ್ಸಿಟಿ ಸೇರಿದೆನು. ಈ ಕಾಲೇಜು ನನಗೆ ಬಹಳ ಇಷ್ಟವಾಯಿತು. ಇಲ್ಲಿಯ ಶಿಕ್ಷಕರೆಲ್ಲರೂ ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾರೆ. ನನಗೆ ಇಲ್ಲಿ ಒಳ್ಳೆಯ ಸ್ನೇಹಿತರಿದ್ದಾರೆ. ನಮ್ಮ ಕಾಲೇಜಿನಲ್ಲಿ ೪೮ ವಿಭಾಗಗಳಿರುವುದರಿಂದ ನಾನು ವಾಣಿಜ್ಯ ವಿಭಾಗ ಬಿಟ್ಟು ಬೇರೆ ವಿಭಾಗದಲ್ಲಿ ಅನೇಕ ಕೋರ್ಸ್ ಗಳನ್ನು ಮಾಡಬಹುದು. ನಾನು ಹಿಂದಿನ ಸೆಮಿಸ್ಟರ್ ಪೈಥಾನ್ ಸೆಮಿಸ್ಟ್ರರ್ ಮತ್ತು ಈ ಸೆಮಿಸ್ಟ್ರರ್ ನಲ್ಲಿ ಎಕ್ಸೆಲ್ ಬಳಸಿ ದೇಟಾ ವಿಶ್ಳೇಷಣೆಯನ್ನು ಮಾಡುತ್ತಾ ಇದ್ದೀನಿ.

ಬಾಲ್ಯ ಜೀವನ

ಬದಲಾಯಿಸಿ
       ನಾನು ಚಿಕ್ಕವನಿಂದಲೂ ತುಂಬಾ ತುಂಟ ಹುಡುಗ. ನನ್ನ ತಾಯಿಯವರಿಗೆ ನನನ್ನು ಬಿಶಪ್ ಕಾಟನ್ ಬಾಯ್ಸ್ ಸ್ಕೂಲ್ ಗೆ ಸೇರಿಸಬೇಕೆ೦ಬ ಆಸೆಯಿತ್ತು. ನನಗೆ ನಮ್ಮ ಮನೆಯ ಹತ್ತಿರ ತುಂಬಾ ಗೆಳೆಯರಿದ್ದರು. ನಾನು ಶಿಶುವಿಹಾರದಿಂದ ಬಂದ ತಕ್ಷಣ ಗೆಳೆಯರ ಜೊತೆ ಆಟವಾಡಿಕೊಳ್ಳುತ್ತಿದ್ದೆನು. ವಾರಾಂತ್ಯದ ರಜೆಗಳಲ್ಲಿ ನನ್ನ ತಂದೆ ತಾಯಿ ನಾನು ಮತ್ತು ನನ್ನ ಅಕ್ಕನನ್ನು ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ಗೆ ಕರೆದುಕೊಂಡು ಹೋಗುತ್ತಿದ್ದರು. ಆದ್ದರಿಂದ ನಾನು ಶನಿವಾರ ಮತ್ತು ಭಾನುವಾರಕ್ಕೆ ಕಾಯುತ್ತಿದ್ದೆನು ನಾನು ಐದನೇ ತರಗತಿಯಲ್ಲಿ ಅಬಾಕಸ್ ಗೆ ಸೇರಿದೆನು. ನಾನು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದ್ದೇನೆ. ನಾನು ರಾಜ್ಯ ಮಟ್ಟದ ಸ್ಪರ್ಧೆಯಲ್ಲೂ ಸಹ ಭಾಗವಹಿಸಿ ಬಹುಮಾನ ಗಳಿಸಿದ್ದೇನೆ. ನಾನು ಆರನೇ ತರಗತಿಯಲ್ಲಿ ಇದ್ದಾಗ ಸೈಕಲ್ ಓಡಿಸುವುದನ್ನು ಕಲಿತುಕೊಂಡೆನು.ಪ್ರತಿ ಭಾನುವಾರ ಬೆಳಗ್ಗೆ ಆರು ಘಂಟೆಗೆ ನನ್ನ ಗೆಳೆಯರೊಡನೆ ಸೈಕಲ್ ನಲ್ಲಿ ಲಾಲ್ ಬಾಗ್ ಗೆ ಹೋಗಿ ಕ್ರಿಕೆಟ್ ಆಡಿಕೊಂಡು ಬರುತ್ತಿದ್ದೆವು. ನಮ್ಮ ಮನೆಯಲ್ಲಿ ಅಜ್ಜಿ ತಾತ ಸಹ ಇದ್ದಾರೆ. ನನ್ನ ಅಜ್ಜಿಗೆ ನನ್ನನ್ನು ಕಂಡರೆ ಬಹಳ ಇಷ್ಟ.ಚಿಕ್ಕವನಿರುವಾಗ ಪ್ರತಿ ದಿನ ನನಗೆ ಕಥೆ ಹೇಳುತ್ತಿದ್ದರು. ನಾನು ಚಿಕ್ಕವನಿಂದಲೂ ಮನೆ ಪಾಠಕ್ಕೆ ಹೋಗುತ್ತಿರಲಿಲ್ಲ. ನನ್ನ ತಾಯಿಯೇ ನನ್ನ ಓದಿನಲ್ಲಿ ಸಹಾಯ ಮಾಡುತ್ತಿದ್ದರು. ನನ್ಗೆ ಬರುವ ಸಂಶಯಗಳನ್ನು ನನ್ನ ತಾಯಿ ಅಥವಾ ನನ್ನ ಅಕ್ಕನನ್ನು ಕೇಳಿ ಪರಿಹರಿಸಿಕೊಳ್ಳುತ್ತಿದ್ದನ್ನು. ನನಗೆ ಗಣಿತ ಮೊದಲಿನಿಂದಲೂ ಇಷ್ಟವಾದ ವಿಷಯ.

ಹವ್ಯಾಸ

ಬದಲಾಯಿಸಿ
        ನನಗೆ ಚಿಕ್ಕವನಿಂದಲೂ ಕ್ರಿಕೆಟ್ ಆಟ ಎಂದರೆ ಬಹಳ ಇಷ್ಟ. ನಾನು ಎಂಟನೆ ವಯ್ಯಸ್ಸಿನಿಂದ ಬೇಸಿಗೆ ರಜೆಯಲ್ಲಿ ನಮ್ಮ ಮನೆಯ ಹತ್ತಿರ ಇರುವ ಕ್ರಿಕೆಟ್ ಅಕಾಡಮಿಗೆ ಹೂಗುತ್ತಿದ್ದೆನು. ಹದಿನಾರನೆ ವಯ್ಯಸ್ಸಿನವರೆಗೆ ಅಲ್ಲಿ ಆಟವಾಡಲು ಹೋಗುತ್ತಿದ್ದರಿಂದ ಬಹಳ ಸ್ನೇಹಿತರನ್ನು ಮಾಡಿಕೊಂಡೆನು. ಪ್ರತಿ ಭಾನುವಾರ ನಾನು ತಪ್ಪದೆ ಇವರ ಜೊತೆ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡುತ್ತಿದ್ದೆನು. ನನ್ನ ಹುಟ್ಟುಹಬ್ಬಕ್ಕೆ ನನ್ನ ತಂದೆಯವರು ಎಸ್.ಜಿ. ಕ್ರಿಕೆಟ್ ಕಿಟ್ಟನ್ನು ನನಗೆ ಉಡುಗೊರೆಯಾಗಿ ಕೊಟ್ಟಿದ್ದರು. ನನ್ನ ತಂದೆ ಸಹ ಕ್ರಿಕೆಟ್ ಆಟಗಾರ. ತಿಂಗಳಿಗೊಮ್ಮೆ ಮನೆಯ ಹತ್ತಿರವಿರುವ ಕ್ರೀಡಾಂಗಣದಲ್ಲಿ ನನ್ನ ತಂದೆ ಮತ್ತು ಚಿಕ್ಕಪ್ಪರೊಡನೆ ಕ್ರಿಕೆಟ್ ಆಟವಾಡುತ್ತಿದ್ದೆನು. ನನಗೆ ಚಿಕ್ಕವನಿಂದಲೂ ಅಂಚೆ ಚೀಟಿ ಸಂಗ್ರಹದ ಹವ್ಯಾಸವಿತ್ತು.ಈ ಹವ್ಯಾಸದಿಂದ ನಾನು ತುಂಬಾ ಜನರ ಜೊತೆ ಸ್ನೇಹ ಬೆಳೆಸಿಕೊಂಡೆನು. ನನ್ನ ಬಳಿ ಇರುವ ಒಂದೇ ರೀತಿಯ ಚೀಟಿಯನ್ನು ಅವರಿಗೆ ಕೊಟ್ಟು ಅವರ ಬಳಿ ಇರುವುದನ್ನು ನಾನು ಪಡೆಯುತ್ತಿದ್ದೆನು. ಹೀಗೆ ನಾನು ಅನೇಕ ವಿದೇಶಿ ಮಿತ್ರರ ಸಖ್ಯ ಬೆಳೆಸಿದೆನು.
         ನಾನು ನನ್ನ ಜೀವನದ ಪ್ರತಿ ಕ್ಷಣವನ್ನು ವ್ಯರ್ಥ ಮಾಡದೆ ಒಳ್ಳೆಯ ರೀತಿಯಲ್ಲಿ ಉಪಯೋಗಿಸಿ ಸಾರ್ಥಕಗೊಳಿಸಿದ್ದೇನೆ.