ಬುದ್ದಿಮಾಂದ್ಯತೆ

ಬುದ್ದಿಮಾಂದ್ಯತೆ ಅಥವ ಬೌದ್ದಿಕ ಬೆಳವಣಿಗೆಯ ಅಸ್ವಸ್ಥತೆ ನರ ಸಂಬಂಧಿ ಕಾಯಿಲೆಯಾಗಿದೆ.'ಡೌನ್ ಸಿಂಡ್ರೋಮ್ ಹಾಗೂ ದುರ್ಬಲವಾದ 'ಎ‍‍ಕ್ಸ್ ಸಿಂಡ್ರೋಮ್'ನಿಂದ ಬಳಲುತ್ತಿರುವವರಲ್ಲಿ ಬುದ್ದಿಮಾಂದ್ಯತೆ ಸಾಮಾನ್ಯವಾಗಿ ಕಂಡು ಬರುತ್ತದೆ[೧].ವಯಸ್ಸಿಗೆ ತಕ್ಕಂತಹ ದೈಹಿಕ/ಮಾನಸಿಕ/ಬೌದ್ದಿಕ/ಸಾಮಾಜಿಕ ಬೆಳವಣಿಗೆ ಇಲ್ಲದಿರುವುದು, ಸಾಮರ್ಥ್ಯ-ಕೌಶಲಗಳಿಲ್ಲದಿರುವುದು ಬುದ್ದಿಮಾಂದ್ಯತೆಯ ಲಕ್ಷಣಗಲಳು.ಜೊತೆಗೆ ಕೆಲವು ಬುದ್ದಿಮಾಂದ್ಯ ಮಕ್ಕಳಲ್ಲಿ ಶಾರೀರಿಕ ನ್ಯೂನತೆ, ನರಸಂಬಂಧಿ ಕೊರತೆಗಳು, ಮೂರ್ಛೆ ಹೋಗುವುದು, ಅತಿಚಂಚಲತೆ/ಚಟುವಟಿಕೆಗಳೂ ಕಾಣಬರುತ್ತದೆ.ಗ್ರಾಮೀಣ ಪ್ರದೇಶಗಳಲ್ಲಿ, ಪಟ್ಟಣಗಳ ಕೆಳವಾರ್ಗದವರಲ್ಲಿ, ಗಿರಿಜನರಲ್ಲಿ ಬುದ್ದಿಮಾಂದ್ಯತೆ ಹೆಚ್ಚಾಗಿ ಕಂಡುಬರುತ್ತದೆ.

ತೀವ್ರ ಬುದ್ದಿಮಾಂದ್ಯತೆಯಿಂದ ಬಳಲುತ್ತಿರುವ ಮಗು


ಲಕ್ಷಣಗಳು ಬದಲಾಯಿಸಿ

ನಿಧಾನವಾದ ಬೌದ್ದಿಕ ಬೆಳವಣಿಗೆ ಅಥವ ಅಪೂರ್ಣ ಮಾನಸಿಕ ಬೆಳವಣಿಗೆ ಬದಲಾಯಿಸಿ

ಒಂದು ಮಗುವಿಗೆ ಐದು ವರ್ಷ ತುಂಬಿದರೂ ತಾನೆ ಊಟ ಮಾಡಲು, ಬಟ್ಟೆ ಹಾಕಿಕೊಳ್ಳಲು ಬಾರದ ಸ್ಥಿತಿಯನ್ನು ಅನುಭವಿಸುತ್ತದೆ. ತನ್ನ ಮಲ ಮೂತ್ರ ವಿಸರ್ಜನೆಯ ಮೇಲೆ ಹತೋಟಿ ಇರುವುದಿಲ್ಲ. ಎಲ್ಲೆಂದರಲ್ಲಿ ಹಸಿಗೆ, ಬಟ್ಟೆಯಲ್ಲೆ ಮಲಮೂತ್ರ ಮಾಡಿಕೊಳ್ಳುತ್ತದೆ, ಸಾಮಾನ್ಯ ಅಪಾಯಕಾರಿ ವಸ್ತು, ಪ್ರಾಣಿ, ಸನ್ನಿವೇಷಗಳನ್ನು ಮಗು ಗುರುತಿಸುವುದಿಲ್ಲ. ತನ್ನ ವಯಸ್ಸಿಗನುಗುಣವಾದ ಆಟಗಳನ್ನು ಆಡುವುದಿಲ್ಲ, ವಯಸ್ಸಿಗೆ ತಕ್ಕ ತಿಳುವಳಿಕೆ ಜ್ಞಾನವಿರುವುದಿಲ್ಲ, ಸಾಮಜಿಕ ಕೌಶಲವಿರುವುದಿಲ್ಲ, ತನ್ನ ವಯಸ್ಕರೊಂದಿಗೆ ಹೇಗೆ ಬೆರೆಯಬೇಕು, ದೊಡ್ಡವರು/ಚಿಕ್ಕವರೊಂದಿಗೆ ಹೇಗೆ ವ್ಯವಹರಿಸಬೇಕು, ಸಮಾಜಿಕ ಸನ್ನಿವೇಶಗಳಲ್ಲಿ ಹೇಗೆ ನಡೆದುಕೊಳ್ಳಬೇಕು, ಗಣಿತ ಲೆಕ್ಕಚಾರ ಸ್ವಲ್ಪವೂ ಬಾರದೆ ಇರುವುದು, ಮಂಕುತನ ಇಲ್ಲವೇ ಅತೀ ತುಂಟತನದ ವರ್ತನೆ ತೋರುವುದು, ಆಕ್ರಮಣಶೀಲತೆ, ವಸ್ತುಗಳ ಬೆಲೆ/ಪ್ರಾಮುಖ್ಯತೆಯ ಅರಿವಿಲ್ಲದೆ ಇರುವುದು, ಶಾಲೆಯಲ್ಲಿ ಎಲ್ಲಾ ವಿಷಯದಲ್ಲೂ ಹಿಂದುಳಿಯುವುದು, ಇದೆಲ್ಲಾ ಬುದ್ದಿಮಾಂದ್ಯತೆಯ ಸಾಮಾನ್ಯ ಲಕ್ಷಣಗಳು, ಬಹುತೇಕ ಎಲ್ಲರಿಂದ ಈ ಮಗು 'ದಡ್ಡ', 'ಪೆದ್ದ', 'ಬುದ್ದಿ ಇಲ್ಲದವನು/ಇಲ್ಲದವಳು' ಎನ್ನಿಸಿಕೊಳ್ಳುತ್ತದೆ.

ನಿಧಾನವಾದ ದೈಹಿಕ ಬೆಳವಣಿಗೆ ಬದಲಾಯಿಸಿ

ಮಗುವಿನ ಬೆಳವಣಿಗೆಯಲ್ಲಿ ಸಾಮನ್ಯವಾಗಿ ಮೂರು ತಿಂಗಳಿಗೆ ಕತ್ತು ನಿಲ್ಲುತ್ತದೆ, ಆರು ತಿಂಗಳಿಗೆ ಮಗು ಕೂರುತ್ತದೆ, ಒಂಭತ್ತು ತಿಂಗಳಿಗೆ ನಿಲ್ಲುತ್ತದೆ, ಹನ್ನೆರಡು ತಿಂಗಳಿಗೆ ಓಡಾಡುತ್ತದೆ, ಹದಿನೆಂಟು ತಿಂಗಳಿಗೆ ಮಾತನಾಡುತ್ತದೆ. ಆದರೆ ಬುದ್ದಿಮಾಂದ್ಯತೆಯಿಂದ ಬಳಲುತ್ತಿರುವ ಮಗು ಆರು ತಿಂಗಳದರೂ ಕತ್ತು ನಿಲ್ಲುವುದಿಲ್ಲ , ಎರಡು ವರ್ಷಗಳಾದಾರೂ ಮಾತನಾಡಲು ಬರುವುದಿಲ್ಲ, ಓಡಾಡುವುದಿಲ್ಲ. ಗರ್ಭಧಾರಣೆ

ದೈಹಿಕ ವಿಶೇಷ ಲಕ್ಷಣಗಳು ಬದಲಾಯಿಸಿ

ಚಿಕ್ಕದಾದ ಕಣ್ಣುಗಳು, ಅತಿಸಣ್ಣ ತಲೆ, ಅಗಲವಾದ ಕಿವಿ,ದೊಡ್ಡನಾಲಿಗೆ,ಅತಿಚಿಕ್ಕ ಕತ್ತು, ಬಹಳ ಗಿಡ್ಡ ಕೈಕಾಲುಗಳು, ಮಂಗೋಲಿಯನ್ ಬುಡಕಟ್ಟಿನವರಂತೆ ಮುಖಚರ್ಯೆ ಇತ್ಯಾದಿ.

ಕಾರಣಗಳು ಬದಲಾಯಿಸಿ

ಪ್ರಸವದ ಮುಂಚೆ ಬದಲಾಯಿಸಿ

ಇಪ್ಪತ್ತೊಂದನೆಯ ವರ್ಣತಂತು ಜೋಡಿಯಲ್ಲಿನ ವ್ಯತ್ಯಾಸದಿಂದ 'ಡೌನ್ ಸಿಂಡ್ರೋಮ್' ಅಂದರೆ ಮಗು ಮಂಗೋಲಿಯನ್ನರಂತೆ ಮುಖಚಹರೆ ಹಾಗೂ ಬುದ್ದಿಮಾಂದ್ಯತೆಯನ್ನು ಹೊಂದಿರುತ್ತದೆ. ಸಣ್ಣಮಿದುಳು-ತಲೆಗೆ ಕಾರಣ-ವಂಶವಾಹಿನಿಗಳ ನ್ಯೂನ್ಯತೆ, ಗರ್ಭಧಾರಣೆಯ ಮೊದಲ ಎರಡು ತಿಂಗಳಲ್ಲಿ, ಗರ್ಭಿಣಿಗೆ ವೈರಸ್ ಸೋಂಕು ಉಂಟಾಗುವುದರಿಂದ ಭ್ರೂಣದ ಮಿದುಳಿಗೆ ಹಾನಿಯುಂಟಾಗುತ್ತದೆ.ಗರ್ಭಿಣಿಗೆ ಪೌಷ್ಟಿಕಾಂಶ ಉಳ್ಳ ಆಹಾರ ಸೇವಿಸದೆ ಇರುವುದು, ಗರ್ಭಧಾರಣೆಯ ಸಮಯದಲ್ಲಿ ವೈದ್ಯಕೀಯ ಮಾರ್ಗದರ್ಶನವಿಲ್ಲದೆ ಔಷಧಿಗಳನ್ನು ಉಪಯೋಗಿಸುವುದರಿಂದ ಕೂಡ ಮಿದುಳಿಗೆ ಹಾನಿಯಾಗುತ್ತದೆ,ಅಯೋಡಿನ್ ಕೊರತೆ, ಗರ್ಭಿಣಿ ಗರ್ಭಪಾತಕ್ಕೆ ಪ್ರಯತ್ನ ಮಾಡಿದಾಗ ವಿಫಲವಾಗುವುದು ಇದರಿಂದ ಮಗುವಿಗೆ ಹಾನಿಯಾಗುತ್ತದೆ, ವಂಶವಾಹಿನಿಗಳಲ್ಲಿ ದೋಷಗಳು, ಪದೇ ಪದೇ ‌‌‌ಎಕ್ಸ್-ರೇಗಳಿಗೆ ತನ್ನ ಮೈಯನ್ನು ಒಡ್ಡಿಕೊಳ್ಳುವುದು, ಧೂಮಪಾನ ಮಧ್ಯಪಾನ ಚಟವನ್ನು ಗರ್ಭಧಾರಣೆ ಸಮಯದಲ್ಲಿ ಮುಂದುವರೆಸುವುದುರಿಂದಲೂ ಕೂಡ ಮಗುವಿಗೆ ಬುದ್ದಿಮಾಂದ್ಯತೆಯಿಂದ ಬಳಲುವ ಸಾಧ್ಯತೆ ಹೆಚ್ಚಿರುತ್ತದೆ.

ಪ್ರಸವದ ಸಮಯ ಬದಲಾಯಿಸಿ

ಹೆರೆಗೆಯಾಗುವ ಸಂದರ್ಭದಲ್ಲಿ ಮಗು ಜನನದ ಹಾದಿಯಲ್ಲಿ ಸಿಕ್ಕಿಹಾಕಿಕೊಂಡು ಅದರ ತಲೆಗೆ ಪೆಟ್ಟಾಗಿ ರಕ್ತಸ್ರಾವವಾಗುವುದು, ಮಗು ಸುಸ್ತಾಗಿ ಹೊರಬಂದಮೇಲೆ ಅದು ಉಸಿರಾಟದ ತೊಂದರೆ ಅನುಭವಿಸಿವುದು, ಆಮ್ಲಜನಕದ ಕೊರತೆ ಉಂಟಾಗುವುದು ಬುದ್ದಿಮಾಂದ್ಯತೆಗೆ ಅತಿಸಾಮಾನ್ಯ ಕಾರಣ.ಇದಕ್ಕೆ ಮೂಲ ಕಾರಣ ಮನೆಯಲ್ಲೇ ಹೆರೆಗೆಮಾಡುವುದು ಹಾಗೂ ಹೆರೆಗೆ ಕಷ್ಟವಾದಾಗ ಆ ಕ್ಷಣದಲ್ಲಿ ತಜ್ಞವೈದ್ಯಕೀಯ ನೆರವು ಸಿಗದೆ ಇರುವುದು.

ಪ್ರಸವದ ನಂತರ ಬದಲಾಯಿಸಿ

ಮಗು ಹುಟ್ಟಿದ ಮೇಲೆ ಮೊದಲ ಐದು ವರ್ಷಗಳು ಮಿದುಳಿನ ಉಳಿದ-ಬೆಳವಣಿಗೆ ದೃಷ್ಟಿಯಿಂದ ಪ್ರಮುಖವಾದವು. ಈ ಅವಧಿಯಲ್ಲಿ ಅಪೌಷ್ಟಿಕತೆ, ಪದೆಪದೇ ಫಿಟ್ಸ್ ಬರುವುದು, ಮಿದುಳುಜ್ವರ, ಅನೇಮಿಯ, ಅಯೋಡಿನ್ ಕೊರತೆ,ತಲೆಗೆ ಪೆಟ್ಟು, ಪ್ರಛೋದನೆಗಳಿಲ್ಲದ ಬರಡು ವಾತಾವರಣದಿಂದಾಗಿ ಬುದ್ದಿಮಾಂದ್ಯತೆ ಬರಬಹುದು.

ಬುದ್ದಿಮಾಂದ್ಯರಿಗೆ ಚಿಕಿತ್ಸೆ ಬದಲಾಯಿಸಿ

ಗರ್ಭಿಣಿ ಸ್ತ್ರೀಯರಿಗೆ, ಮಕ್ಕಳಿಗೆ ಸಕಾಲದ ವೈದ್ಯಕೀಯ ನೆರವವಿನಿಂದ, ಬಹುತೇಕ ಬುದ್ದಿಮಾಂದ್ಯತೆ ಪ್ರಕರಣಗಳನ್ನು ನಿವಾರಿಸಬಹುದು. ಮಿದುಳಿನ ಬೆಳವಣಿಗೆಯನ್ನು ಹೆಚ್ಚಿಸಬಲ್ಲ, ಬುದ್ದಿಯನ್ನು ಹೆಚ್ಚಿಸಬಲ್ಲ,ಅಥವ ಮಿದುಳಿನ ಹಾನಿಯನ್ನು ತಗ್ಗಿಸಬಲ್ಲ ಔಷಧಿಗಳು ಲಭ್ಯವಿಲ್ಲದಿರುವ ಕಾರಣ ಬುದ್ದಿಮಾಂದ್ಯತೆಗೆ ಚಿಕಿತ್ಸೆಯಿಲ್ಲ.ಶಕ್ತಿವರ್ಧಕಗಳಿಂದ, ಮಾತ್ರೆ,ಔಷಧಿಗಳಿಂದ ಪ್ರಯೋಜನವಿಲ್ಲ,ಇತರೆ ಆರೋಗ್ಯ ಸಮಸ್ಯೆಗಳಿದ್ದರೆ ಮಾತ್ರ ಔಷಧಿಗಳನ್ನು ಕೊಡಲಾಗುತ್ತದೆ.ಫಿಟ್ಸ್ ಇದ್ದರೆ ಅದಕ್ಕೆ ಮಾತ್ರೆ, ಅತಿ ಚ್ಟುವಟಿಕೆ ಇದ್ದರೆ ಮಾತ್ರೆಯನ್ನು ಪ್ರತ್ಯೇಕವಾಗಿ ಕೊಡಲಾಗುತ್ತದೆ.

ಪ್ರಚೋದನೆ ಬದಲಾಯಿಸಿ

ಬುದ್ದಿಮಾಂದ್ಯರ ಮಿದುಳಿನ ನರಕೋಷಗಳಿಗೆ ಹೆಚ್ಚು ಪ್ರಚೋದನೆ ನೀಡಬೇಕು.ಆಗ ನರಕೋಷಗಳು ಹೆಚ್ಚು ಸಕ್ರಿಯವಾಗುತ್ತದೆ.ದೇಹದ ಪಂಚೇಂದ್ರಿಯಗಳಿಗೆ ಹೆಚ್ಚು ಪ್ರಚೋದನೆ ನೀಡಬೇಕು.

ತರಬೇತಿ ಬದಲಾಯಿಸಿ

ಮಗುವನ್ನು ಎತ್ತಿಕೊಂಡು ಆಡಿಸುವುದು, ವಿವಿಧ ವಸ್ತು ವಿಶೇಷಗಳನ್ನು ತೋರಿಸುವುದು, ವಿವಿಧ ಶಬ್ದ, ವಾಸನೆ, ಸ್ಪರ್ಷದ ಪರಿಚಯ ಮಾಡಿಸುವುದು, ಮಗುವಿಗೆ ಕೂರಲು, ನಡೆಯಲು, ಓಡಲು, ಕೈಕಾಲುಗಳನ್ನು ಉಪಯೋಗಿಸಲು ತರಬೇತಿ ನೀಡಬೇಕು. ಅಂಗಮರ್ಧನವನ್ನು ಮಾಡಬೇಕು. ತೀವ್ರ ಬುದ್ದಿಮಾಂದ್ಯತೆ ಇದ್ದರೆ, ಮಗು ಕಲಿಯಲು ತುಂಬಾ ನಿಧನವಾಗುತ್ತದೆ. ಅಲ್ಪಮಟ್ಟದ ಬುದ್ದಿಮಾಂದ್ಯತೆ ಇದ್ದರೆ, ಮಗು ನಿಧಾನವಾಗಿ ಕೌಶಲಗಳನ್ನು ಕಲಿಯುತ್ತದೆ, ಪ್ರೋತ್ಸಾಹ,ಶ್ಲಾಘನೆಗಳು ಕಲಿಯಲು ಬೇಕಾದ ಸ್ವ ಇಚ್ಛೆಯನ್ನು ಮಗುವಿಗೆ ನೀಡುತ್ತವೆ. ಅಲ್ಪಮಟ್ಟದ ಬುದ್ದಿಮಾಂದ್ಯ ಮಕ್ಕಳು ಸಾಮಾನ್ಯ ಶಾಲೆಗೇ ಹೋಗಿ ನಿಧಾನವಾಗಿ ಓದುಬರಹ, ಲೆಕ್ಕಚಾರವನ್ನು ಕಲಿಯಬಲ್ಲವು. ತೇವ್ರ ಬುದ್ದಿಮಾಂದ್ಯ ಮಕ್ಕಳಿಗೆ ಇದು ಅಸಾಧ್ಯ. ಅವರಿಗೆ ದಿನನಿತ್ಯದ ದೈನಂದಿನ ಕೆಲಸ ಕಾರ್ಯಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಕಲಿಸಬೇಕು. ತಾವೆ ಯಾರ ಸಹಾಯ ಇಲ್ಲದೆ ಊಟಮಾಡುವುದು, ಬಟ್ಟೆ ತೊಟ್ಟುಕೊಳ್ಳುವುದು, ಸಾಮಾನ್ಯ ಅಪಾಯಗಳನ್ನು ನಿವಾರಿಸಿಕೊಳ್ಳುವುದು, ಇತರರೊಂದಿಗೆ ಸಂಪರ್ಕ ಮಾಡುವುದು, ಇತರರ ಕನಿಷ್ಟ ನೆರವಿನಿಂದ ತಮ್ಮ ಕೆಲಸ ತಾವೇ ಮಾಡುವುದನ್ನು ಹೇಳಿಕೊಡಬೇಕು. ಬುದ್ದಿಮಾಂದ್ಯ ಮಕ್ಕಳು ಹರೆಯಕ್ಕೆ ಕಾಲಿಟ್ಟ ಮೇಲೆ, ಏನಾದರು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ, ಉಪಯುಕ್ತವಾಗಿ ಬದುಕುವುದಕ್ಕೆ ತರಬೇತಿ ಮತ್ತು ಅವಕಾಶಗಳನ್ನು ಕಲ್ಪಿಸಿಕೊಡಬೇಕು

ಬುದ್ದಿಮಾಂದ್ಯರಿಗೆ ಸರ್ಕಾರ ಸಂಘ-ಸಂಸ್ಥೆಗಳಿಂದ ನೆರವು ಬದಲಾಯಿಸಿ

ಶೇಕಡ ನಲವತ್ತಕ್ಕಿಂತ ಹೆಚ್ಚಿನ ಅಂಗವೈಕಲ್ಯವಿರುವ ಮಗುವಿನ ಅಂಗವೈಕಲ್ಯ ಅಧಿನಿಯಮದ ಪ್ರಕಾರ ಸರ್ಕಾರದಿಂದ ಅರ್ಥಿಕ ನೆರವು,ತರಬೇತಿ, ಸ್ವಾವಲಂಬಿಯಾಗಿ ಬದುಕಲು ಬೇಕಾದ ಸರಳ ಉದ್ಯೋಗ ಮೀಸಲಾತಿ ಇತ್ಯಾದಿ ಅನುಕೂಲಗಳಿವೆ. ಜಿಲ್ಲ ಅಂಗವಿಕಲ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಲೂಬಹುದು. ಸೇವಾಸಂಸ್ಥೆಗಳು ಹಾಗೂ ಇತರೆ ಬುದ್ದಿಮಾಂದ್ಯರ ಅನುಕೂಲ, ಒಳಿತಿಗಾಗಿ ಕೆಲಸಮಾಡುವ ಅಗತ್ಯವಿದೆ. ತಂದೆ ತಾಯಿಗಳಿಗೆ ಆಸರೆ-ಮಾರ್ಗದರ್ಶನವನ್ನು ನೀಡವುದು ಎಲ್ಲರ ಕರ್ತವ್ಯವಾಗಿದೆ.[೨]

ಉಲ್ಲೇಖ ಬದಲಾಯಿಸಿ

  1. http://www.mayoclinic.org/diseases-conditions/down-syndrome/basics/definition/con-20020948
  2. MANASIKA KHAYILEGALA PARICHAYA NIMAGIRALI- a book on MENTAL DISORDERS by Dr.C.R.Chandrashekar,Professor deputy Medical Superintendent,Dept. of Psychiatry,NIMHANS