473SHRUTHI V
Joined ೨೦ ಜೂನ್ ೨೦೧೮
ಪರಿಚಯ
ಬದಲಾಯಿಸಿನನ್ನ ಹೆಸರು ಶೃತಿ.ವಿ. ನನ್ನ ಜನ್ಮದಿನ ೧೩-೨-೨೦೦೦. ನಾನು ಹುಟ್ಟಿದ್ದು ಕೇರಳಾದಲ್ಲಿ, ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲೆ. ನಾನು ಸುದ್ದಗುಂಟೆ ಪಾಳ್ಯಾದಲ್ಲಿ ವಾಸಾಮಾಡುತ್ತಿದ್ದೇನೆ.ನಾನು ಪ್ರಸ್ತುತ ಕ್ರೈಸ್ಟ್ ಕಾಲೇಜಿನಲ್ಲಿ ಬಿ.ಎಸ್.ಸಿ.ಯನ್ನು(ಪಿ.ಸಿ.ಎಂ) ಮಾಡುತ್ತಿದ್ದೇನೆ.
ಬದಲಾಯಿಸಿಕುಟುಂಬ
ಬದಲಾಯಿಸಿನನ್ನ ತಂದೆ ಹೆಸರು ವಾಸು. ನನ್ನ ತಾಯಿಯ ಹೆಸರು ಸತ್ಯಭಾಮ. ನನ್ನ ತಂದೆ ಬಡಗಿ ವೃತ್ತಿಯನ್ನು ಮಾಡುತಿದ್ದಾರೆ.ನನ್ನ ತಾಯಿ ಗೃಹಿಣಿ.ನನ್ನ ತಂದೆ ತಾಯಿಗೆ ನಾನು ಒಬ್ಬಳೆ ಮಗಳು. ಆದ್ದರಿಂದ ನನ್ನನ್ನು ಹೆಚ್ಚು ಮುದ್ದಾಗಿ ಬೆಳೆಸಿದರು. ನನಗೆ ಹೆತ್ತವರೆಂದರೆ ಬಹಳ ಪ್ರೀತಿ ಮತ್ತು ಗೌರವ. ನನ್ನ ತಂದೆ ತಾಯಿಯ ಜನ್ಮಸ‍್ಥಳ ಕೇರಳದ ಪಾಲಕಾಡ್ ಜಿಲ್ಲೆಯಲ್ಲಿ. ನನ್ನ ತಂದೆಯ ಕೆಲಸದ ಕಾರಣದಿಂದ ನಾವು ಬೆಂಗಳೂರಿಗೆ ಬರಬೇಕಾಯಿತು.
ಶಿಕ್ಷಣ
ಬದಲಾಯಿಸಿನಾನು ಎಲ್.ಕೆ.ಜಿ.ಯಿಂದ ಹತ್ತನೇ ತರಗತಿಯವರೆಗೂ ಕ್ರೈಸ್ಟ್ ಶಾಲೆಯಲ್ಲಿ ಓದಿದ್ದೆ.ಶಾಲೆಗೆ ಹೋಗುವುದೆಮದರೆ ನನಗೆ ತೊಂಬಾ ಸಂತೋಷ.ನಾನು ತರಗತಿಯಲ್ಲಿ ಗಣಿತ,ವಿಜ್ಞಾನ ಮತ್ತು ಸಮಾಜ ವಿಷಯಗಳನ್ನು ಹೆಚ್ಚು ಆಸಕ್ತಿಯಂದ ಕೇಳಿಸಿಕೊಳ್ಳುತ್ತಿದ್ದೆ. ನನ್ನ ಗಮನ ಹೆಚ್ಚಾಗಿ ಓದಿನ ಕಡೆಯೇ ಇತ್ತು. ಆದ್ದರಿಂದ ಹತ್ತನೇ ತರಗತಿಯಲ್ಲಿ ನಾನು ೯೪.೦೮% ಶೇಕಡ ಅಂಕಗಳು ಪಡೆದಿದ್ದೆ. ನಂತರ ನಾನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ವಿಜ್ಞಾನದ ವ್ಯಾಸಾಂಗ ಮಾಡಿದ್ದು. ನಾನ್ನ ದ್ವಿತಿಯ ಪಿ.ಯು.ಸಿ.ಯ ಪರೀಕ್ಷೆಯಲ್ಲಿ ೯೨% ಶೇಕಡ ಅಂಕಗಳನ್ನು ಗಳಿಸಿದೆ. ನನಗೆ ಗಣಿತದ ವಿಷಯದಲ್ಲಿ ೯೯ ಅಂಕಗಳನ್ನು ಗಳಿಸಿದೆ.ಈಗ ನಾನು ಕ್ರೈಸ್ಟ್ ಕಾಲೇಜಿನಲ್ಲಿ ಬಿ.ಎಸ್.ಸಿ ಮಾಡುತ್ತಿದ್ದೇನೆ.
ಹವ್ಯಾಸಗಳು
ಬದಲಾಯಿಸಿನನಗೆ ಚಿಕ್ಕಂದಿನಲ್ಲಿ ನೃತ್ಯದಲ್ಲಿ ಭಾಗವಹಿಸುವುದೆಂದರೆ ಬಹಳ ಇಷ್ಟ. ನನಗೆ ಹಾಡುಗಳನ್ನು ಕೇಳುವುದೆಂದರೆ ಬಹಳ ಇಷ್ಟ. ನನ್ನ ಶಾಲೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಾನು ನೃತ್ಯದಲ್ಲಿ ಭಾಗವಹಿಸಿದ್ದೆ. ನನ್ನ ಬಿಡುವಿನ ಸಮಯದಲ್ಲಿ ನಾನು ಹೆಚ್ಚಾಗಿ ಹಾಡುಗಳನ್ನು ಕೇಳುತ್ತೇನೆ. ಹಾಡು ಕೇಳುವುದರ ಜೊತೆಗೆ, ನನ್ನ ತಂದೆ-ತಾಯಿಯ ಹತ್ತಿರ ಹೆಚ್ಚಾಗಿ ಸಮಯವನ್ನು ಕಳೆಯುತ್ತೇನೆ. ನನ್ನ ತಂದೆ,ತಾಯಿಯ ಜೊತೆಯಲ್ಲಿ ಆಟವಾಡುವುದೆಂದರೆ ನನಗೆ ಬಹಳ ಇಷ್ಟ. ನಾನು ಚಿತ್ರಗಳು ಮತ್ತು ರಂಗೋಲಿಯನ್ನು ಬಿಡಿಸುತ್ತೇನೆ.ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಓದ್ದುತ್ತೇನೆ.ನನಗೆ ಐತಿಹಾಸಿಕ ಕತೆಗಳನ್ನು ಕೇಳುವುದು ಮತ್ತು ಓದುವುದರಲ್ಲಿ ಹೆಚ್ಚಿನ ಆಸಕ್ತಿ ಇದೆ. ನನಗೆ ಅಡುಗೆ ಮಾಡುವುದರಲ್ಲಿ ಹೆಚ್ಚು ಆಸಕ್ತಿ. ವಾರಕೊಮ್ಮೆ ವಿಭಿನ್ನವಾದ ಏನಾದರು ತಿಂಡಿ ತಿನಿಸನ್ನು ಮಾಡುತ್ತೇನೆ.ನನಗೆ ಪ್ರವಾಸ ಮಾಡುವುದೆಂದರೆ ತುಂಬಾ ಇಷ್ಡ. ನನಗೆ ಅಬ್ಯಾಕಸ್ನಲ್ಲಿ ಹೆಚ್ಚು ಆಸಕ್ತಿ ಇತ್ತು.ನನಗೆ ಅನೇಕ ಭಾಷೆಗಳನ್ನು ಕಲಿಯಬೇಕೆಂಬ ಆಸೆ.
ಗುರಿ
ಬದಲಾಯಿಸಿನನಗೆ ಹೆಚ್ಚು ಗಣಿತದ ವಿಷಯದಲ್ಲಿ ಆಸಕ್ತಿ ಇರುವುದರಿಂದ ನಾನು ಆ ವಿಷಯದಲ್ಲಿ ನನ್ನ ಮುಂದಿನ ವ್ಯಾಸಾಂಗವನ್ನು ಮಾಡಬೇಕೆಂದಿದ್ದೇನೆ. ಗಣಿತ ಶಿಕ್ಷಕಿ ಆಗಬೇಕೆಂಬುವುದೇ ನನ್ನ ಗುರಿ. ಅದಕ್ಕಾಗಿ ನಾನು ಶ್ರದ್ದೆಯಿಂದ ಓದುತ್ತಿದ್ದೇನೆ.ನನ್ನ ಗುರಿಯನ್ನು ಸಾಧಿಸಿತೀರುತ್ತೇನೆಂಬ ಛಲ ನನ್ನಲ್ಲಿದೆ.
ಇತರ ವಿಚಾರಗಳು
ಬದಲಾಯಿಸಿನಾನು ನನ್ನ ಸ್ನೇಹಿತರ ಜೊತೆ ಮಾತನಾಡುತ್ತಾ,ಆಟವಾಡುತ್ತಾ ನನ್ನ ಬಾಲ್ಯಕಾಲದ ಅತಿಹೆಚ್ಚು ಸುಂದರ ಸಮಯವನ್ನು ಕಳೆದೆ. ಅವರ ಜೊತೆ ಹೊರಪ್ರವಾಸಕ್ಕೆ ಹೋಗಿದ್ದ ಸಂದರ್ಭ ನನಗೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ಎಲ್ಲಾ ವರ್ಷದ ಓದು ಮುಗಿದ ನಂತರ,ನಾನು ಬೆಸಿಗೆಯ ರಜೆಗೆ ನಾನು ನನ್ನ ಊರಿಗೆ ಹೋಗುತ್ತೇನೆ. ನನ್ನ ಊರಿಗೆ ಹೋಗುವುದೆಂದರೆ ನನಗೆ ತುಂಬಾ ಸಂತೋಷದ ವಿಷಯ ಏಕೆಂದರೆ ಅಲ್ಲೇ ನನ್ನ ಈಡಿ ಕುಟುಂಬ ಇರುವುದು. ನನಗೆ ನನ್ನ ಅಜ್ಜಿ ಎಂದರೆ ಬಹಳ ಪ್ರೀತಿ. ಅವರು ನನಗಾಗಿ ಹಾಡು,ಕತೆಗಳನ್ನು ಹೇಳುತ್ತಾರೆ. ಅವರು ಮಾಡುವ ಅಡುಗೆ ನನಗೆ ತುಂಬಾ ಇಷ್ಡ. ನಾನು ಊರಿಗೆ ಹೋಗಲು ಮುಖ್ಯ ಕಾರಣ ನನ್ನ ಅಕ್ಕ. ಅವಳೆಂದರೆ ನನಗೆ ತುಂಬಾ ಇಷ್ಟ. ಅವಳ ಜೊತೆ ಆಡಿದ ಆಟ, ಮಾಡಿದ ಜಗಳ, ಈಗ ನೆನೆದರೆ ಅದೆಲ್ಲ ನನ್ನ ಮನಸ್ಸಿಗೆ ಹೆಚ್ಚು ಖುಷಿಯನ್ನು ಕೊಡುತ್ತದ್ದೆ. ಹತ್ತನೇ ತರಗತಿಯಲ್ಲಿ ಎಲ್ಲಾ ವಿಷಯದಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದಕ್ಕೆ,ನನಗೆ ಶಾಲೆಯಿಂದ ಬಹುಮಾನವನ್ನು ನೀಡಿದರು. ನಾನು ಒಳ್ಳೆಯ ಅಂಕಗಳು ಗಳಿಸಿದ್ದರಿಂದ ನನ್ನ ತಂದೆ,ತಾಯಿಗೆ ಬಹಳ ಸಂತೋಷವಾಯಿತು. ಅವರು ಇನ್ನೂ ಮುಂದಿನ ವಿದ್ಯಾಭ್ಯಾಸವನ್ನು ಇದೇ ರೀತಿ ಚೆನ್ನಾಗಿ ಮಾಡಬೇಕೆಂದು ಹೇಳಿದರು.
ತುಂಬ ಸಂತೋಷ ಮತ್ತು ಭಯದಿಂದ ನಾನು ಪ್ರಥಮ ಪಿ.ಯು.ಸಿ. ತರಗತಿಯಲ್ಲಿ ಕಾಲಿಟ್ಟೆ. ನನ್ನ ತರಗತಿಯಲ್ಲಿ ನನಗೆ ತಿಳಿದವರು ಯಾರೂ ಇಲ್ಲವೆಂದು ಬೇಸರಗೊಂಡಿದ್ದೆ.ಹೊಸಾ ಗೆಳತಿಯರನ್ನು ಪರಿಚಯಮಾಡಿಕೊಂಡೆ. ದಿನಗಳು ಕಳೆದಂತೆ ಅವರು ನನಗೆ ಹೆಚ್ಚಿನ ಆಪ್ತರಾದರು. ನನ್ನ ತರಗತಿಯ ಎಲ್ಲಾ ವಿಧ್ಯಾರ್ಥಿಗಳು ಸೇರಿ ನೃತ್ಯಯ ಮಾಡಬೇಕೆಂಬ ಒಂದು ಸ್ಪರ್ಧೆ ಇತ್ತು. ಆ ಸ್ಪರ್ಧೆಯಲ್ಲಿ ಗೆಲ್ಲಬೇಕೆಂದು ನಾವು ಎಲ್ಲರು ಪ್ರತಿದಿನ ನೃತ್ಯಮಾಡುವ ಅಭ್ಯಾಸ ಮಾಡುತ್ತಿದ್ದೇವು. ನನ್ನ ಗೆಳತಿಯರು ನನಗೆ ನೃತ್ಯ ಹೇಳಿಕೊಟ್ಟು ಸಹಾಯ ಮಾಡಿದರು. ಕೊನೆಗೂ ನಾವು ಆ ಸ್ಪರ್ಧೆಯಲ್ಲಿ ಗೆದ್ವಿ. ಈ ಎಲ್ಲಾ ಕಾರ್ಯಕ್ರಮದಲ್ಲಿ ಒಳಗಾಗಿದರಿಂದ ಓದಿನ ಕಡೆ ಹೆಚ್ಚು ಗಮನವಿಡಲಿಲ್ಲ. ಪರೀಕ್ಷೆಯ ಸಮಯದಲ್ಲಿ ನಾನು ನನ್ನ ಸ್ನೇಹಿತರು ಸೇರಿ ಒಟ್ಟಾಗಿ ಕುಳಿತು ಓದುತ್ತಿದೇವು. ಒಂದು ವರ್ಷ ಹೇಗೆ ಕಳೆದು ಹೋಯಿತೆಂದು ತಿಳಿಯಲಿಲ್ಲ.ನಮ್ಮ ಕ್ಲಾಸ್ ಟೀಚರ್ ನಮಗೆ ಒಳ್ಳೆಯ ಸ್ನೇಹಿತರಾಗಿ,ತಾಯಿಯಾಗಿ ನಮ್ಮನ್ನು ಪ್ರೀತಿಯಿಂದ ನೋಡಿಕೊಂಡರು.ನಮಗೆ ಅವರು ಗಣಿತ ವಿಷಯವನ್ನು ಕಲಿಸುತ್ತಿದ್ದರು. ಗಣಿತ ವಿಷಯದ ಮೇಲೆ ನನಗೆ ಹಚ್ಚಿನ ಪ್ರೀತಿ ಮತ್ತು ಆಸಕ್ತಿ ಬರಲು ಕಾರಣ ಇವರಾಗ್ಗಿದ್ದರು. ನಂತರ ದ್ವೀತಿಯ ಪಿ.ಯು.ಸಿ. ನಮ್ಮ ಜೀವನದ ಮುಖ್ಯವಾದ ಘಟ್ಟವಾಗ್ಗಿದ್ದರಿಂದ ನಾನು ಚೆನ್ನಾಗಿ ಓದಿದೆ. ದಿನಗಳು ಬೇಗನೆ ಹೋದವು. ನನ್ನ ಜೀವನದ ಅತಿಹೆಚ್ಚು ಸಂತೋಷದ ದಿನಗಳು ಹೇಗೆ ಕಳೆದವೆಂದು ತಿಳಿಯಲಿಲ್ಲ. ಪಿ.ಯು.ಸಿ.ಯ ಕೊನೆಯ ದಿನದಲ್ಲಿ ನಾವು ವಿದ್ಯಾರ್ಥಿಗಳೆಲ್ಲರು ಸೇರಿ ಫೊಟೋ ತೆಗೆದ್ವಿ. ಎಲ್ಲರಿಗೂ ಶುಭಕೋರಿದೆವು. ನನ್ನ ಕಾಲೇಜಿನಲ್ಲಿ ಕಳೆದ ಕಾಲವನ್ನು,ನಾನು ಎಂದೂ ಮರೆಯಲಾಗದ ಒಂದು ಸವಿನೆನಪಾಗಿದೆ. ಪರೀಕ್ಷೆಯನ್ನು ಚೆನ್ನಾಗಿ ಬರೆದೆ. ಈಗ ಎಲ್ಲರು ಅವರವರ ಇಷ್ಟದಂತೆ ಮುಂದಿನ ವ್ಯಾಸಾಂಗವನ್ನು ಮಾಡುತ್ತಿದ್ದಾರೆ. ಮುಂದೊಂಮ್ಮೆ ಏ ನನ್ನ ಸ್ನೇಹಿತರನ್ನು ಮತ್ತು ನನ್ನ ಸಹಪಾಟಿಯರನ್ನು ನೋಡಲು ಖಾತುರದಿಂದ ಕಾಯುತ್ತಿದ್ದೇನೆ.