ಸದಸ್ಯ:2240751vidya.r/ನನ್ನ ಪ್ರಯೋಗಪುಟ

ಮಾದಕ ವಸ್ತು ಮತ್ತು ಆಲ್ಕೋಹಾಲ್‌ನ ದುರ್ಬಳಕೆ

ಬದಲಾಯಿಸಿ
 
ಮಾದಕ ವಸ್ತುಗಳು

ಮಾದಕ ವಸ್ತು ಮತ್ತು ಆಲ್ಕೋಹಾಲ್‌ನ ಬಳಕೆ ವಿಶೇಷವಾಗಿ ಯುವಕರಲ್ಲಿ ಹೆಚ್ಚುತ್ತಿದೆ ಎಂಬುದನ್ನು ಸಮೀಕ್ಷೆಗಳು ಮತ್ತು ಅಂಕಿ ಅಂಶಗಳು ವ್ಯಕ್ತಪಡಿಸಿವೆ. ನಿಜಕ್ಕೂ ಇದೊಂದು ಚಿಂತಿಸಬೇಕಾದ ಪರಿಸ್ಥಿತಿಯಾಗಿದ್ದು ಹಲವು ಹಾನಿಕಾರಕ ಪರಿಣಾಮಗಳಿಗೆ ಪರ್ಯಾವಸಾನವಾಗಬಹುದು. ಸೂಕ್ತ ಶಿಕ್ಷಣ ಮತ್ತು ಮಾರ್ಗದರ್ಶನಗಳು ಯುವಕರನ್ನು ಈ ಅಪಾಯಕಾರಿ ಪ್ರವೃತ್ತಿಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮತ್ತು ಆರೋಗ್ಯವಂತ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಸಶಕ್ತಗೊಳಿಸುತ್ತವೆ.

ಓಪಿಯಾಯ್ಡ್ ಗಳು, ಕೆನಾಬಿನಾಯ್ಡ್ ಗಳು ಮತ್ತು ಕೋಕಾಆಲ್ಕಲಾಯ್ಡ್ ಗಳು ಸಾಮಾನ್ಯವಾಗಿ ದುರ್ಬಳಕೆಗೊಳ್ಳುವ ಮಾದಕ ವಸ್ತುಗಳಾಗಿವೆ. ಇದರಲ್ಲಿ ಬಹುಪಾಲು ಹೂ ಬಿಡುವ ಸಸ್ಯಗಳಿಂದ ಪ್ರಾಪ್ತಿಯಾದರೆ, ಕೆಲವೊಂದನ್ನು ಶಿಲೀಂಧ್ರಗಳಿಂದ ಪಡೆಯಲಾಗುತ್ತದೆ.

ಓಪಿಯಾಯ್ಡ್ ಗಳಂಥ ಮಾದಕ ವಸ್ತುಗಳನ್ನು ಕೇಂದ್ರೀಯ ನರಮಂಡಲ ಮತ್ತು ಜಟರಾಂತ ರ್ನಾಳದಲ್ಲಿರುವ ಓಪಿಯಾಯ್ಡ್ ಗ್ರಾಹಿಗಳು ಬಂಧಿಸುತ್ತವೆ. ಸಾಮಾನ್ಯವಾಗಿ ಸ್ಮ್ಯಾಕ್ ಎಂದೇ ಪ್ರಸಿದ್ಧಿಯಾಗಿರುವ ಹೆರಾಯಿನ್ ರಾಸಾಯನಿಕವಾಗಿ ಡೈ ಅಸಿಟೈಲ್ ಮಾರ್ಫೀನ್ ಆಗಿದೆ. ಇದು ಬಿಳಿಯ ಬಣ್ಣದ, ಕಹಿಯಾದ , ವಾಸನೆಯಿಲ್ಲದ ಹರಳುರೂಪದ ಸಂಯುಕ್ತವಾಗಿದೆ. ಪಾಪಾವರ್ ಸೋಮ್ನೀ ಫೆರಮ್ ಗಿಡದ ಲೆಟೆಕ್ಸ್ ನ ಸಾರದಿಂದ ಸಂಗ್ರಹಿಸಲಾಗುವ ಮಾರ್ಫೀನ್ ನನ್ನು ಆಸಿಟಲೀಕರಿಸಿ ಹೆರಾಯಿನ್ ಪಡೆಯಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಮೂಗಿನ ಮೂಲಕ ಅಥವಾ ಚುಚ್ಚುಮದ್ದಿನಿಂದ ತೆಗೆದುಕೊಳ್ಳಲಾಗುತ್ತದೆ. ಹೆರಾಯಿನ್ ಖಿನ್ನಕಾರಿ ವಸ್ತುವಾಗಿದ್ದು ದೇಹದ ಕಾರ್ಯಗಳನ್ನು ನಿಧಾನಗೊಳಿಸುತ್ತದೆ.

ಕೆನಾಬಿನಾಯ್ಡ್ ಗಳು ರಾಸಾಯನಿಕಗಳ ಒಂದು ಸಮೂಹವಾಗಿದ್ದು ಅವು ಪ್ರಮುಖವಾಗಿ ಮೆದುಳಿನಲ್ಲಿರುವ ಕೆನಾಬಿನಾಯ್ಡ್ ಗ್ರಾಹಿಗಳೊಂದಿಗೆ ಸಂವಹಿಸುತ್ತದೆ. ನೈಸರ್ಗಿಕ ಕೆನಾಬಿನಾಯ್ಡ್ ಅನ್ನು ಕೆನಾಬಿಸ್ ಸಟೈವಾ ಗಿಡದ ಪುಷ್ಟಮಂಜರಿಯಿಂದ ಪಡೆಯಲಾಗುತ್ತದೆ. ಕೆನಾಬಿನ್‌ನ ಹೂವಿನ ತುದಿ, ಎಲೆಗಳು ಮತ್ತು ರೆಸಿನ್‌ಗಳನ್ನು ವಿಭಿನ್ನ ರೀತಿಯಲ್ಲಿ ಸಂಯೋಜನೆಗೊಳಿಸಿ ಮರಿಜುವಾನ, ಹಶಿಶ್, ಚರಸ್ ಮತ್ತು ಗಾಂಜಾವನ್ನು ಉತ್ಪಾದಿಸಲಾಗುತ್ತದೆ . ಇವುಗಳನ್ನು ಸಾಮಾನ್ಯವಾಗಿ ಉಚ್ಛ್ವಾಸ ಮತ್ತು ಬಾಯಿಯ ಮೂಲಕ ತೆಗೆದುಕೊಳ್ಳಲಾಗುತ್ತದೆ. ಇವು ಶರೀರದ ಹೃದಯ ರಕ್ತನಾಳ ವ್ಯವಸ್ಥೆಯನ್ನು ಪ್ರಭಾವಿತಗೊಳಿಸುವಲ್ಲಿ ಹೆಸರುವಾಸಿಯಾಗಿದೆ.

 
ಓಪಿಯಾಯ್ಡ್

ಕೋಕಾ ಆಲ್ಕಲಾಯ್ಡ್ ಅಥವಾ ಕೊಕೇನ್ ನನ್ನು ದಕ್ಷಿಣ ಅಮೇರಿಕಾದ ಮೂಲದ ಕೋಕಾ ಗಿಡ ಎರಿತ್ರೋಕ್ಸೈಲಮ್ ಕೋಕದಿಂದ ಪಡೆಯಲಾಗುತ್ತದೆ.ಇದು ಡೋಪಮೈನ್ ಎಂಬ ನರಪ್ರೇಷಕದ ಸಾಗಣೆಯನ್ನು ತಡೆಯೊಡ್ಡುತ್ತದೆ. ಕೋಕ್ ಅಥವಾ ಕ್ರಾಕ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಕೊಕೇನ್ ನನ್ನು ಮೂಗಿನ ಮೂಲಕ ಎಳೆದುಕೊಳ್ಳುವ ವಾಡಿಕೆಯಿದೆ. ಇದು ಕೇಂದ್ರೀಯ ನರಮಂಡಲವನ್ನು ಪ್ರಬಲವಾಗಿ ಉದ್ದೀಪನೆಗೊಳಿಸಿ ಉನ್ಮಾದ ಮತ್ತು ಶಕ್ತಿವರ್ಧನೆಯ ಅನುಭೂತಿಯನ್ನು ನೀಡುತ್ತದೆ. ಹೆಚ್ಚಿನ ಪ್ರಮಾಣದ ಕೋಕೇನ್ ಭ್ರಮೆಯನ್ನುಂಟುಮಾಡುತ್ತದೆ. ಭ್ರಮೆಯನ್ನುಂಟುಮಾಡುವ ಇತರೆ ಪ್ರಸಿದ್ಧ ಗಿಡಗಳೆಂದರೆ , ಆಟ್ರೋಪ ಬೆಲ್ಲಡೋನಾ ಮತ್ತು ದತ್ತೂರಾ.ಇತ್ತಿಚಿನ ದಿನಗಳಲ್ಲಿ ಕೆಲವು ಕ್ರೀಡಾ 'ಪಟುಗಳಿಂದಲೂ ಸಹ ಕೆನಾಬಿನಾಯ್ಡ್ ಗಳು ದುರ್ಬಳಕೆಯಾಗುತ್ತಿವೆ. ಬಾರ್ಬ್ಯುಟರೇಟ್ ಗಳು, ಆಂಫಿಟಮೈನ್ ಗಳು, ಬೆಂಜೋಡೈಅಜಪೈನ್ ಗಳು , ಲೈಸೆರ್ಜಿಕ್ ಆಸಿಡ್ ಡೈಇಥೈಲ್ ಅಮೈಡ್ ಗಳನ್ನು ಮತ್ತು ಇಂತಹುದೇ ರೀತಿಯ ಮಾದಕ ವಸ್ತುಗಳನ್ನು ಖಿನ್ನತೆ ಮತ್ತು ನಿದ್ರಾಹೀನತೆಯಂತಹ ಮಾನಸಿಕ ವ್ಯಾಧಿಯಿರುವ ರೋಗಿಗಳ ಸಹಾಯಕ್ಕಾಗಿ ಸಾಮಾನ್ಯವಾಗಿ ಔಷಧಿ ರೂಪದಲ್ಲಿ ಬಳಸಲಾಗುತ್ತದೆ. ಇದನ್ನು ಕೂಡ ದುರುಪಯೋಗಿಸಿಕೊಳ್ಳಲಾಗುತ್ತಿದೆ. ಮಾರ್ಫೀನ್ ಒಂದು ಬಹಳ ಶಮನಕಾರಿ ಮತ್ತು ನೋವುನಿವಾರಕವಾಗಿದ್ದು ಶಸ್ತ್ರಕ್ರಿಯಿಗೆ ಒಳಗಾಗಿರುವ ರೋಗಿಗಳಿಗೆ ಬಹಳ ಉಪಕಾರಿಯಾಗಿದೆ. ಭ್ರಮೆಯನ್ನುಂಟುಮಾಡುವ ಗುಣವಿರುವ ಹಲವು ಗಿಡ, ಹಣ್ಣು ಮತ್ತು ಬೀಜಗಳನ್ನು ವಿಶ್ವದಾದ್ಯಂತ ಸಾವಿರಾರು ವರ್ಷಗಳಿಂದ ನಾಟಿ ಔಷಧಿ/ಮನೆಮದ್ದು, ಧಾರ್ಮಿಕ ಉತ್ಸವಗಳಲ್ಲಿ ಮತ್ತು ಅನುಷ್ಟಾನ ಗಳಲ್ಲಿ ಉಪಯೋಗಿಸಲಾಗುತ್ತದೆ. ಯಾವಾಗ ವೈದ್ಯಕೀಯ ಉಪಯೋಗಕ್ಕೆ ವ್ಯತಿರಿಕ್ತವಾಗಿ ಇವುಗಳನ್ನು ಬೇರೆ ಉದ್ದೇಶಗಳಿಗೆ ಒಬ್ಬ ವ್ಯಕ್ತಿಯ ಶರೀರಕ್ರಿಯಾ ಅಥವಾ ಮಾನಸಿಕ ಕಾರ್ಯಗಳನ್ನು ದುರ್ಬಲಗೊಳಿಸುವಷ್ಟು ಪ್ರಮಾಣದಲ್ಲಿ ಸೇವಿಸುತ್ತಾನೋ ಆಗ ಅದು ಮಾದಕ ವಸ್ತುವಿನ ದುರ್ಬಳಕೆ ಎನಿಸಿಕೊಳ್ಳುತ್ತದೆ.

 
ಕೆನಾಬಿಸ್ ಸಟೈವಾ

ಧೂಮಪಾನವೂ ಕೂಡ ಈ ತೀವ್ರವಾದ ಮಾದಕ ವಸ್ತುಗಳ ಸೇವನೆಗೆ ರಹದಾರಿಯಾಗುತ್ತದೆ. ತಂಬಾಕನ್ನು ಮಾನವನು 400ಕ್ಕೂ ಹೆಚ್ಚು ವರ್ಷಗಳಿಂದ ಉಪಯೋಗಿಸುತ್ತಿದ್ದಾನೆ. ತಂಬಾಕನ್ನು ಸೇದಲಾಗುತ್ತದೆ / ಜಗಿಯಲಾಗುತ್ತದೆ ಅಥವಾ ಮೂಗಿನಿಂದ ಹೀರಲಾಗುತ್ತದೆ, ತಂಬಾಕಿನಲ್ಲಿ ಬಹಳ ಸಂಖ್ಯೆಯ ರಾಸಾಯನಿಕ ವಸ್ತುಗಳಿವೆ. ಅದರಲ್ಲಿ ನಿಕೋಟಿನ್ ಎಂಬ ಆಲ್ಕಲಾಯ್ಡ್ ಕೂಡ ಇರುತ್ತದೆ. ನಿಕೋಟಿನ ಅಡ್ರಿನಲ್ ಗ್ರಂಥಿಯು ಅಡ್ರಿನಾಲಿನ್ ಮತ್ತು ನಾರ್ ಅಡ್ರಿನಾಲಿನ್ನ ನನ್ನು ರಕ್ತ ಪರಿಚಲನೆಗೆ ಬಿಡುಗಡೆಗೊಳಿಸುವಂತೆ ಪ್ರಚೋದಿಸುತ್ತದೆ. ಇವೆರಡೂ ಕೂಡ ರಕ್ತದೊತ್ತಡವನ್ನು ಏರಿಸಿ ಎದೆಬಡಿತವನ್ನು ಹೆಚ್ಚಿಸುತ್ತವೆ. ಧೂಮಪಾನವು ಶ್ವಾಸಕೋಶ, ಮೂತ್ರಕೋಶ ಮತ್ತು ಗಂಟಲಿನ ಕ್ಯಾನ್ಸರ್, ಬ್ರಾಂಕೈಟಿಸ್, ಎಂಫೈಸಿಮಾ, ಹೃದಯಬೇನೆ , ಜಠರ ವ್ರಣ, ಇಂತಹವುಗಳ ಸಂಭವನೀಯತೆಯನ್ನು ಹೆಚ್ಚಿಸುತ್ತದೆ. ಧೂಮಪಾನದಿಂದ ರಕ್ತದಲ್ಲಿ ಕಾರ್ಬನ್ ಮೋನಾಕ್ಸೈಡ್ ನ ಪ್ರಮಾಣ ಹೆಚ್ಚುತ್ತದೆ. ಹಿಮೋಗ್ಲೋಬಿನ್ ಜೊತೆಗೆ ಬಂಧಿತವಾದ ಆಮ್ಲಜನಕದ ಸಾಂದ್ರತೆ ಕಡಿತಗೊಳ್ಳುತ್ತದೆ. ಇದರಿಂದಾಗಿ ದೇಹದಲ್ಲಿ ಆಮ್ಲಜನಕದ ಕೊರತೆ ಉಂಟಾಗುತ್ತದೆ.

ಪ್ಯಾಕೆಟುಗಟ್ಟಲೆ ಸಿಗರೇಟನ್ನು ಕೊಂಡುಕೊಳ್ಳುವ ಒಬ್ಬ ವ್ಯಕ್ತಿ, ಸಿಗರೇಟ್ ಸೇವನೆ ಹೇಗೆ ದೇಹಕ್ಕೆ ಹಾನಿಕರ ಎಂದು ಸಾರುವ ಪ್ಯಾಕೆಟಿನ ಮೇಲಿರುವ ಶಾಸನ ವಿಧಿಸಿರುವ ಎಚ್ಚರಿಕೆಯನ್ನು ಗಮನಿಸದೇ ಇರುವುದಿಲ್ಲ ಅದರೂ ಧೂಮಪಾನವು ಸಮಾಜದಲ್ಲಿ ಯುವಕ ವೃದ್ಧರಾದಿಯಾಗಿ ಬಹಳ ಪ್ರಚಲಿತವಾಗಿದೆ. ಧೂಮಪಾನ ಮತ್ತು ತಂಬಾಕು ಜಗಿಯುವುದರ ಆಪಾಯ ಮತ್ತು ಅದರ ಚಟದ ಪ್ರವೃತ್ತಿಯನ್ನು ಅರಿತುಕೊಂಡು ಯುವಕರು ಮತ್ತು ವೃದ್ಧರು ಈ ದುಶ್ಚಟವನ್ನು ದೂರವಿಡುವ ಅವಶ್ಯಕತೆಯಿದೆ. ಯಾವ ದುರ್ವ್ಯಸನಿಗಾದರೂ ಸರಿ, ದುಶ್ಚಟದಿಂದ ಹೊರಬರಲು ಆಪ್ತ ಸಮಾಲೋಚನೆ ಮತ್ತು ವೈದ್ಯಕೀಯ ಸಹಾಯದ ಅಗತ್ಯವಿದೆ.

ಹದಿಹರೆಯ ಮತ್ತು ಮಾದಕ ದ್ರವ್ಯ ಹಾಗೂ ಆಲ್ಕೋಹಾಲ್ ನ ದುರ್ಬಳಕೆ

ಬದಲಾಯಿಸಿ

ಹದಿಹರೆಯ ಎಂಬುದರ ಅರ್ಥ ಒಂದು ಮಗುವು ಸಮಾಜದ ಮುಖ್ಯವಾಹಿನಿಯಲ್ಲಿ ಭಾಗವಹಿಸಲು ಅವನ / ಅವಳ ಸ್ವಭಾವ ಮತ್ತು ನಂಬಿಕೆಗಳಲ್ಲಿ ಪರಿಪಕ್ವಗೊಳ್ಳುವ ಅವಧಿ ಹಾಗೂ ಪ್ರಕ್ರಿಯೆಯಾಗಿದೆ.12 - 18 ವರ್ಷದವರೆಗಿನ ಅವಧಿಯನ್ನು ಹದಿಹರೆಯ ಎಂದು ಅರ್ಥೈಸಲಾಗುತ್ತದೆ. ಇನ್ನೊಂದರ್ಥದಲ್ಲಿ ಹದಿಹರೆಯವು ಬಾಲ್ಯಾವಸ್ಥೆ ಮತ್ತು ಪ್ರೌಢಾವಸ್ಥೆಯನ್ನು ಜೊಡಿಸುವ ಒಂದು ಸೇತುವೆಯಾಗಿದೆ. ಹರೆಯದಲ್ಲಿ ಹಲವು ಜೈವಿಕ ಮತ್ತು ಸ್ವಭಾವಗಳಲ್ಲಿನ ಪರಿವರ್ತನೆಗಳಾಗುತ್ತವೆ. ಈ ರೀತಿಯಲ್ಲಿ ಹದಿಹರೆಯವು ಯಾವುದೇ ವ್ಯಕ್ತಿಯ ಮಾನಸಿಕ ಮತ್ತು ಮನೋವೈಜ್ಞಾನಿಕ ವಿಕಾಸದ ಬಹಳ ಸೂಕ್ಷ್ಮವಾದ ಸಮಯವಾಗಿದೆ.

ಕುತೂಹಲ, ಸಾಹಸ ಮತ್ತು ಭಾವೋತ್ತೇಜನೆಯ ಪ್ರವೃತ್ತಿ, ಮತ್ತು ಪ್ರಯೋಗಶೀಲತೆ ಇವೆಲ್ಲಾ ಯುವಕರನ್ನು ಮಾದಕ ದ್ರವ್ಯ ಮತ್ತು ಆಲ್ಕೋಹಾಲ್ ನ ಬಳಕೆಗೆ ಪ್ರೇರೆಪಿಸುವ ಸಾಮಾನ್ಯ ಕಾರಣವಾಗಿವೆ. ಮಗುವಿನ ಸಹಜ ಕುತೂಹಲ ಪ್ರವೃತ್ತಿಯೇ ಅದನ್ನು ಪ್ರಯೋಗಶೀಲತೆಗೆ ಪ್ರೇರೇಪಿಸುತ್ತದೆ. ಮಾದಕವಸ್ತು ಮತ್ತು ಆಲ್ಕೋಹಾಲ್ ನ ಪ್ರಭಾವವನ್ನು ಒಳಿತೆಂಬ ರೀತಿಯಲ್ಲಿ ಗ್ರಹಿಸುವುದರಿಂದ ಸಮಸ್ಯೆ ಇನ್ನೂ ಜಟಿಲಗೊಳ್ಳುತ್ತದೆ . ಆದ್ದರಿಂದ ಮೊದಮೊದಲು ಮಾದಕ ವಸ್ತು ಮತ್ತು ಅಕ್ಕೋಹಾಲನ್ನು ಸೇವಿಸುವುದು ಕುತೂಹಲ ಅಥವಾ ಪ್ರಯೋಗಕ್ಕಾದರೆ ನಂತರ ಮಗುವು ಸಮಸ್ಯೆಗಳನ್ನು ಎದುರಿಸಿ ಪಾರಾಗಲು ಇವುಗಳನ್ನು ಉಪಯೋಗಿಸತೊಡಗುತ್ತದೆ. ಇತ್ತೀಚಿನ ದಿನಗಳಲ್ಲಿ, ಶೈಕ್ಷಣಿಕವಾಗಿ ಅಥವಾ ಪರೀಕ್ಷೆಗಳಲ್ಲಿ ಉತ್ಕೃಷ್ಟವಾಗಿ ಹೊರಹೊಮ್ಮುವ ಪ್ರಭಾವವು, ಯುವಜನರು ಮಾದಕ ವಸ್ತು ಮತ್ತು ಅಲ್ಕೋಹಾಲನ್ನು ಪ್ರಯತ್ನಿಸುವಲ್ಲಿ ವಿಶೇಷವಾದ ಪಾತ್ರ ವಹಿಸುತ್ತಿದೆ. ಯುವಜನರಲ್ಲಿ ಧೂಮಪಾನ, ಮಾದಕ ದ್ರವ್ಯ ಮತ್ತು ಆಲ್ಕೋಹಾಲ್‌ನ ಬಳಕೆ ಶಾಂತವಾದ ಅಥವಾ ಪ್ರಗತಿಪರ ಸಂಕೇತ ಎಂಬ ಗ್ರಹಿಕೆ ಕೂಡ ಇವುಗಳ ಬಳಕೆಯನ್ನು ಪ್ರಾರಂಭಿಸಲು ಮುಖ್ಯ ಕಾರಣವಾಗಿದೆ. ದೂರದರ್ಶನ, ಚಲನಚಿತ್ರಗಳು, ವೃತ್ತ ಪತ್ರಿಕೆಗಳು, ಅಂತರಜಾಲ ಕೂಡ ಈ ಗ್ರಹಿಕೆಯನ್ನು ಉತ್ತೇಜಿಸುತ್ತವೆ. ಯುವಜನರಲ್ಲಿ ಮಾದಕ ವಸ್ತು ಮತ್ತು ಆಲ್ಕೋಹಾಲ್‌ನ ದುರ್ಬಳಕೆಗೆ ಸಂಬಂಧ ಹೊಂದಿರುವ ಇತರೆ ಅಂಶಗಳೆಂದರೆ ಅಭದ್ರ ಅಥವಾ ಅಸ್ಥಿರ ಕೌಟುಂಬಿಕ ಸಂಬಂಧಗಳು ಮತ್ತು ಸ್ನೇಹಿತರ ಪ್ರಭಾವ.

ದುರ್ವ್ಯಸನ ಮತ್ತು ಅವಲಂಬನೆ

ಬದಲಾಯಿಸಿ

ಮಾದಕವಸ್ತುಗಳಿಂದಾಗುವ ಲಾಭವನ್ನು ಗ್ರಹಿಸಿ ಅದನ್ನು ಆಗಿಂದಾಗ್ಗೆ ಪದೇಪದೇ ಬಳಸಲಾಗುತ್ತದೆ. ಅತ್ಯಂತ ಪ್ರಮುಖವಾದ ವಿಷಯವೆನೆಂದರೆ ಮಾದಕವಸ್ತು ಮತ್ತು ಆಲ್ಕೋಹಾಲ್‌ಗಳು ಚಟವಾಗಬಹುದು ಎಂಬುದನ್ನು ಗ್ರಹಿಸಲು ಪ್ರತಿಯೊಬ್ಬರು ವಿಫಲರಾಗುವುದು. ಮಾದಕ ವಸ್ತು ಮತ್ತು ಆಲ್ಕೋಹಾಲ್‌ನ ಸಹವಾಸವು ಉಲ್ಲಾಸದಾಯಕ ಕ್ಷಣಿಕ ಸ್ವಾಸ್ಥಭಾವದಂತಹ ಪರಿಣಾಮವನ್ನುಂಟುಮಾಡುತ್ತದೆ. ಈ ಪರಿಣಾಮಗಳೊಂದಿಗಿನ ಮಾನಸಿಕ ನಂಟನ್ನು ದುರ್ವ್ಯಸನ/ ಚಟ ಎನ್ನುತ್ತಾರೆ. ಮಾದಕವಸ್ತು ಮತ್ತು ಆಕ್ಕೋಹಾಲ್‌ಗಳನ್ನು ತೆಗೆದುಕೊಳ್ಳುವುದು ಅಗತ್ಯವಿಲ್ಲದಿದ್ದರೂ ಮತ್ತು ಅವುಗಳ ಬಳಕೆ ವಿನಾಶಕಾರಿಯಾಗಿದ್ದರೂ ಸಹ, ಅವು ವ್ಯಕ್ತಿಗಳನ್ನು ತನ್ನೆಡೆಗೆ ಸೆಳೆಯುತ್ತವೆ. ಮಾದಕ ವಸ್ತುಗಳನ್ನು ಪುನಃ ಪುನಃ ಬಳಸುವುದರಿಂದ ನಮ್ಮ ದೇಹದಲ್ಲಿರುವ ಗ್ರಾಹಿಗಳ ಸಹನ ಶಕ್ತಿ ವೃದ್ಧಿಯಾಗುತ್ತದೆ. ಆದಕಾರಣ, ಗ್ರಾಹಿಗಳು ಹೆಚ್ಚಿನ ಪ್ರಮಾಣದ ಮಾದಕ ವಸ್ತು ಮತ್ತು ಅಕ್ಕೋಹಾಲ್‌ಗೆ ಸ್ಪಂದಿಸಿ ವ್ಯಕ್ತಿಯನ್ನು ಹೆಚ್ಚು ಮಾದಕವಸ್ತುವನ್ನು ಸೇವಿಸುವ ಚಟಕ್ಕೀಡುಮಾಡುತ್ತವೆ. ಮಾದಕ ವಸ್ತುವನ್ನು ಒಂದು ಬಾರಿ ಬಳಸಿದರೂ ಕೂಡ ಅದು ದುರ್ವ್ಯಸನದ ಮುನ್ಸೂಚನೆಯಾಗುತ್ತದೆ ಎಂಬುದನ್ನು ಮನಸ್ಸಿನಲ್ಲಿ ಸ್ಪಷ್ಟಪಡಿಸಿಕೊಳ್ಳಬೇಕು. ಮಾದಕ ವಸ್ತು ಮತ್ತು ಆಲ್ಕೋಹಾಲ್ ನ ದುರ್ವ್ಯಸನದ ಸಾಮರ್ಥ್ಯ ವ್ಯಸನಿಯನ್ನು ಅದರ ವಿಷಚಕ್ರದೊಳಕ್ಕೆ ಎಳೆದು, ಅದರ ದುರ್ಬಳಕೆ ರೂಢಿಯಾಗುವಂತೆ ಮಾಡಿ, ಅವನು/ಅವಳು ಅದರಿಂದ ಹೊರಬರಲಾರದಂತೆ ಮಾಡುತ್ತವೆ. ಯಾವುದೇ ಮಾರ್ಗದರ್ಶನ ಅಥವಾ ಆಪ್ತ ಸಲಹೆಯಿಲ್ಲದಿದ್ದಲ್ಲಿ ವ್ಯಕ್ತಿಯು ದುರ್ವ್ಯಸನಿಯಾಗಿ ಅದರ ಬಳಕೆಯ ಮೇಲೆ ಅವಲಂಬಿತನಾಗುತ್ತಾನೆ.

ಒಂದುವೇಳೆ ಮಾದಕವಸ್ತು/ಆಲ್ಕೋಹಾಲ್‌ಗಳ ನಿಯಮಿತವಾದ ಪ್ರಮಾಣವನ್ನು ಥಟ್ಟನೆ ನಿಲ್ಲಿಸಿದರೆ, ಅವಲಂಬನೆ ಎಂಬ ದೇಹದ ಪ್ರವೃತ್ತಿಯು ಆತಂಕ. ನಡುಕ, ವಾಕರಿಕೆ ಮತ್ತು ಬೆವರುವಿಕೆಯಂತಹ ಅಹಿತಕರ ಗುಣಲಕ್ಷಣಗಳೊಂದಿಗಿನ ನಿವರ್ತನ ಚಿಹ್ನೆಗಳಲ್ಲಿ ಸ್ಪಷ್ಟವಾಗುತ್ತದೆ. ಮಾದಕವಸ್ತು ಮತ್ತು ಆಲ್ಕೋಹಾಲ್ ಗಳನ್ನು ಪುನಃ ಬಳಸುವುದರಿಂದ ಈ ಗುಣಲಕ್ಷಣಗಳನ್ನು ನಿವಾರಿಸಿಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ ಈ ವ್ಯಸನ ಕಠೋರವಾಗಬಹುದು ಮತ್ತು ವ್ಯಕ್ತಿಗೆ ವೈದ್ಯಕೀಯ ಮೇಲ್ವಿಚಾರಣೆಯ ಅಗತ್ಯವಿರುವಷ್ಟು ಹಾನಿಯುಂಟಾಗಬಹುದು.

ದುಶ್ಚಟಗಳ ಮೇಲೆ ಅವಲಂಬಿತನಾಗಿರುವ ವ್ಯಕ್ತಿಯು ತನ್ನೆಲ್ಲಾ ಅವಶ್ಯಕತೆಗಳನ್ನು ಪೊರೈಸಿಕೊಳ್ಳಲು ಸಾಕಷ್ಟು ಹಣವಿಲ್ಲದ ಸ್ಥಿತಿ ತಲುಪುತ್ತಾನೆ. ಇದರಿಂದ ಎಲ್ಲಾ ಸಾಮಾಜಿಕ ಕಟ್ಟಳೆಗಳನ್ನು ನಿರ್ಲಕ್ಷಿಸುತ್ತಾನೆ ಹಾಗೂ ಸಾಮಾಜಿಕ ಹೊಂದಾಣಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಾನೆ.

ಮಾದಕವಸ್ತು ಮತ್ತು ಆಲ್ಕೋಹಾಲ್‌ನ ದುರ್ಬಳಕೆಯ ಪರಿಣಾಮಗಳು

ಬದಲಾಯಿಸಿ

ಮಾದಕ ವಸ್ತು ಮತ್ತು ಆಲ್ಕೋಹಾಲ್ ದುರ್ಬಳಕೆಯ ತಕ್ಷಣವೇ ಪ್ರತಿಕೂಲ ಪರಿಣಾಮಗಳು ಅಜಾಗರೂಕ ಸ್ವಭಾವ, ದೌರ್ಜನ್ಯ, ವಿಧ್ವಂಸಕ ಪ್ರವೃತ್ತಿಯ ರೂಪದಲ್ಲಿ ವ್ಯಕ್ತವಾಗುತ್ತವೆ. ಮಾದಕ ವಸ್ತುವಿನ ಮಿತಿಮೀರಿದ ಪ್ರಮಾಣವು ಉಸಿರಾಟದ ವಿಫಲತೆ, ಹೃದಯ ವೈಫಲ್ಯ ಮತ್ತು ಮೆದುಳಿನ ರಕ್ತಸ್ರಾವದಿಂದ ಕೋಮಾಕ್ಕೆ ಕಾರಣವಾಗಿ ಸಾವಿನಲ್ಲಿ ಪರ್ಯಾವಸಾನವಾಗಬಹುದು. ಮಾದಕ ವಸ್ತುಗಳ ಸಮೂಹ ಅಥವಾ ಆದರೊಂದಿಗೆ ಆಲ್ಕೋಹಾಲ್ ನ ಸೇವನೆಯ ಪ್ರಮಾಣ ಮಿತಿಮೀರಿದಲ್ಲಿ ಸಾವಿನಲ್ಲಿ ಪರ್ಯಾವಸಾನಗೊಳ್ಳುತ್ತದೆ. ಮಾದಕ ವಸ್ತು ಮತ್ತು ಆಲ್ಕೋಹಾಲನ್ನು ದುರ್ಬಳಸುವ ಯುವಜನರು ಬಹಳ ಸಾಮಾನ್ಯವಾಗಿ ಅಪಾಯಕಾರಿ ಲಕ್ಷಣಗಳನ್ನೊಳಗೊಂಡಿರುತ್ತಾರೆ. ಶೈಕ್ಷಣಿಕ ಸಾಧನೆಯಲ್ಲಿ ಹಿಂದೆ ಬೀಳುವುದು, ಕಾರಣವಿಲ್ಲದೆ ಶಾಲೆಗೆ ಅಥವಾ ಕಾಲೇಜಿಗೆ ಗೈರುಹಾಜರಾಗುವುದು. ವೈಯಕ್ತಿಕ ಸ್ವಚ್ಛತೆಯೆಡೆಗೆ ನಿರಾಸಕ್ತಿ, ಹಿಂಜರಿಕೆ, ಏಕಾಂಗಿತನ/ಪ್ರತ್ಯೇಕತೆ, ಖಿನ್ನತೆ, ಸುಸ್ತು, ಆಕ್ರಮಣಕಾರಿ ಮತ್ತು ಬಂಡಾಯ ಪ್ರವೃತ್ತಿ, ಕುಟುಂಬ ಮತ್ತು ಸ್ನೇಹಿತರ ಜೊತೆ ಹದಗೆಟ್ಟ ಸಂಬಂಧ, ಹವ್ಯಾಸಗಳಲ್ಲಿ ನಿರಾಸಕ್ತಿ, ನಿದ್ರೆ ಮತ್ತು ಆಹಾರ ಸೇವನೆಯ ಅಭ್ಯಾಸದಲ್ಲಿ ಬದಲಾವಣೆ, ದೇಹದ ತೂಕದಲ್ಲಿನ ಏರಿಳಿತ, ಆಹಾರದ ಅಪೇಕ್ಷೆ ಇಲ್ಲದಿರುವಿಕೆ, ಇತ್ಯಾದಿ.

ಮಾದಕ ವಸ್ತು ಮತ್ತು ಅಲ್ಕೋಹಾಲ್‌ನ ಬಾಹುವಿನ ಹರವು ದೂರಗಾಮೀ ಪರಿಣಾಮವನ್ನುಂಟುಮಾಡಬಹುದು. ಒಂದು ವೇಳೆ ವ್ಯಸನಿಗೆ ಮಾದಕ ವಸ್ತು/ಆಲ್ಕೋಹಾಲನ್ನು ಕೊಂಡುಕೊಳ್ಳಲು ಹಣ ಸಿಗದೇ ಹೋದರೆ, ಅವನು ಕಳ್ಳತನಕ್ಕಿಳಿಯಬಹುದು. ಈ ಪ್ರತಿಕೂಲ ಪರಿಣಾಮಗಳು ಕೇವಲ ಮಾದಕ ವಸ್ತು ಮತ್ತು ಅಲ್ಕೋಹಾಲನ್ನು ಬಳಸುವ ವ್ಯಸನಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಕೆಲವು ಬಾರಿ ದುರ್ವ್ಯಸನಿಯು ಅವನ ಇಡೀ ಕುಟುಂಬದ ಮತ್ತು ಸ್ನೇಹಿತರ ಮಾನಸಿಕ ಮತ್ತು ಆರ್ಥಿಕ ದುರವಸ್ಥೆಗೆ ಕಾರಣನಾಗುತ್ತಾನೆ.

ಯಾರು ಮಾದಕ ವಸ್ತುಗಳನ್ನು ನೇರವಾಗಿ ರಕ್ತನಾಳಗಳಿಗೆ ತೆಗೆದುಕೊಳ್ಳುತ್ತಾರೋ ಅಂತಹವರು ಹೆಚ್ಚಾಗಿ ಹೆಚ್.ಐ.ವಿ. ಮತ್ತು ಹೆಪಟೈಟಿಸ್ ನಂತಹ ಗಂಭೀರ ಸೋಂಕಿಗೊಳಗಾಗಬಹುದು.ಸೋಂಕುಳ್ಳ ಸೂಜಿ ಮತ್ತು ಸಿರಿಂಜ್‌ಗಳನ್ನು ಹಂಚಿಕೊಳ್ಳುವುದರಿಂದ ಈ ರೋಗಗಳಿಗೆ ಕಾರಣವಾಗಿರುವ ವೈರಾಣುಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಹೆಚ್ .ಐ.ವಿ. ಮತ್ತು ಹೆಪಟೈಟಿಸ್ -ಬಿ, ಇವೆರಡೂ ದೀರ್ಘಾವಧಿ ಸೋಂಕುಗಳಾಗಿದ್ದು ಸಾವಿನಲ್ಲಿ ಅಂತ್ಯವಾಗುತ್ತವೆ. ಏಡ್ಸ್ ರೋಗವು ಸೋಂಕಿತ ವ್ಯಕ್ತಿಯೋರ್ವನ ಜೀವನಸಂಗಾತಿಗೆ ಲೈಂಗಿಕ ಸಂಪರ್ಕದಿಂದ ಹರಡಿದರೆ, ಹೆಪಟೈಟಿಸ್- ಬಿ ಸೋಂಕಿತ ರಕ್ತದ ಮೂಲಕ ಹರಡುತ್ತದೆ.

ತಾರುಣ್ಯದಲ್ಲಿ ಆಲ್ಕೋಹಾಲ್ ಬಳಸುವುದರಿಂದ ದೂರಗಾಮಿ ಪರಿಣಾಮವೂ ಕೂಡ ಆಗಬಹುದು. ಇದು ವಯಸ್ಕರನ್ನು ಅತೀಹೆಚ್ಚು ಕುಡಿತಕ್ಕೀಡುಮಾಡಬಹುದು. ಮಾದಕ ವಸ್ತು ಮತ್ತು ಆಲ್ಕೋಹಾಲ್‌ನ ಧೀರ್ಘಾವಧಿ ಬಳಕೆ ನರಮಂಡಲ ಮತ್ತು ಪಿತ್ತಜನಕಾಂಗವನ್ನು ನಾಶಪಡಿಸುತ್ತದೆ. ಗರ್ಭಾವಸ್ಥೆಯಲ್ಲಿ ಮಾದಕ ವಸ್ತು ಮತ್ತು ಆಲ್ಕೋಹಾಲ್ ಸೇವನೆ ಭ್ರೂಣದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುವುದು ಕೂಡ ಖಾತ್ರಿಯಾಗಿದೆ. ಕ್ರೀಡಾಪಟುಗಳು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಮಾದಕ ಪಸ್ತುಗಳನ್ನು ಸೇವಿಸುವುದು, ಅದರ ದುರ್ಬಳಕೆಯ ಇನ್ನೊಂದು ಬಗೆಯಾಗಿದೆ. ಕ್ರೀಡಾಪಟುಗಳು ತಮ್ಮ ಸ್ನಾಯು ಬಲ ಮತ್ತು ಗಾತ್ರವನ್ನು, ಆಕ್ರಮಣಶೀಲತೆಯನ್ನು ಉತ್ತೇಜಿಸಿಕೊಂಡು, ಕ್ರೀಡಾ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಮತ್ತೇರಿಸುವ ನೋವುನಿವಾರಕಗಳನ್ನು, ಉಪಚಯ ಸ್ಟೀರಾಯ್ಡ್ ಗಳನ್ನು ಮೂತ್ರೋತ್ತೇಜಕಗಳನ್ನು ಮತ್ತು ಕೆಲವು ರಸದೂತಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ. ಈ ಉಪಚಯ ಸ್ಟೈ ರಾಡ್ ಗಳ ಅಡ್ಡ ಪರಿಣಾಮಗಳು ಮಹಿಳೆಯರಲ್ಲಿ ಈ ಕೆಳಕಂಡಂತಿವೆ - ಗಂಡಸುತನ, ಆಕ್ರಮಣಶೀಲತೆ, ಚಂಚಲತೆ, ಖಿನ್ನತೆ, ಅಸಹಜ ಋತು ಚಕ್ರ, ದೇಹದ ಮತ್ತು ಮುಖದ ಮೇಲೆ ಅತಿಯಾದ ಕೂದಲಿನ ಬೆಳವಣಿಗೆ, ವಿಸ್ತಾರಗೊಂಡ ಚಂದ್ರನಾಡಿ ಮತ್ತು ಆಳವಾದ ಧ್ವನಿ.ಪುರುಷರಲ್ಲಿನ ಅಡ್ಡ ಪರಿಣಾಮಗಳೆಂದರೆ -ಮೊಡವೆ, ಆಕ್ರಮಣಶೀಲತೆ, ಚಂಚಲತೆ, ಖಿನ್ನತೆ, ವೃಷಣಗಳ ಗಾತ್ರ ಕ್ಷೀಣಿಸುವುದು, ವೀರ್ಯಾಣುಗಳ ಉತ್ಪತ್ತಿಯಲ್ಲಿನ ಕೊರತೆ, ಮೂತ್ರಪಿಂಡ ಮತ್ತು ಪಿತ್ತಕೋಶದ ವೈಫಲ್ಯದ ಸಂಭವನೀಯತೆ, ಸ್ತನದ ಬೆಳವಣಿಗೆ, ಆಕಾಲಿಕ ಬೋಳುತಲೆ, ಪ್ರೋಸ್ಟೇಟ್ ಗ್ರಂಥಿಯ ಹೆಚ್ಚಾದ ಬೆಳವಣಿಗೆ, ಮುಂತಾದುವು. ದುಶ್ಚಟಗಳನ್ನು ಮುಂದುವರೆಸುವುದರಿಂದ ಅದರ ಪರಿಣಾಮಗಳು ಶಾಶ್ವತವಾಗಬಹುದು. ಹದಿಹರೆಯದ ಪುರುಷ ಅಥವಾ ಮಹಿಳೆಯಲ್ಲಿ,ದೇಹದ ಮತ್ತು ಮುಖದ ಮೇಲೆ ಮೊಡವೆಗಳು ಮತ್ತು ಆಕಾಲಿಕವಾಗಿ ಉದ್ದ ಮೂಳೆಗಳ ಬೆಳವಣಿಗೆಯ ಕೇಂದ್ರಗಳು ಆಕಾಲಿಕವಾಗಿ ಮುಚ್ಚಿಕೊಳ್ಳುವುದರಿಂದ ಬೆಳವಣಿಗೆ ಕುಂಠಿತಗೊಳ್ಳುತ್ತದೆ.

ಪ್ರತಿಬಂಧ ಮತ್ತು ನಿಯಂತ್ರಣ

ಬದಲಾಯಿಸಿ

'ಉಪಶಮನಕ್ಕಿಂತ ತಡೆಯುವುದೇ ಉತ್ತಮ' ಎಂಬ ಹಳೆಯ ನಾಣ್ಣುಡಿ ಇಲ್ಲಿಯೂ ಕೂಡ ಬಹುಪಾಲು ಅನ್ವಯಿಸುತ್ತದೆ. ಚಿಕ್ಕವಯಸ್ಸಿನಲ್ಲಿ, ಯೌವನದಲ್ಲಿ ಪ್ರೌಡ-ಹದಿಹರೆಯದವರಲ್ಲಿ ಧೂಮಪಾನ, ಮಾದಕ ವಸ್ತು ಮತ್ತು ಆಲ್ಕೋಹಾಲ್ ನ ಚಟವನ್ನು ಪ್ರಾರಂಭಿಸುವುದೂ ಕೂಡ ಸಹಜ ಕ್ರಿಯೆ. ಹದಿಹರೆಯದವರನ್ನು ಮಾದಕ ದ್ರವ್ಯ ಮತ್ತು ಅಲ್ಕೋಹಾಲ್ ಬಳಸಲು ಪ್ರೇರೇಪಿಸುವ ಸಂದರ್ಭಗಳನ್ನು ಪತ್ತೆಹಚ್ಚುವುದರಿಂದ ಅದಕ್ಕೆ ಸಕಾಲದಲ್ಲಿ ಪರಿಹಾರ ಮಾರ್ಗೋಪಾಯಗಳನ್ನು ತೆಗೆದುಕೊಳ್ಳಬಹುದು. ಈ ದಿಶೆಯಲ್ಲಿ ಪೋಷಕರಿಗೆ ಮತ್ತು ಶಿಕ್ಷಕರಿಗೆ ವಿಶೇಷ ಹೊಣೆಗಾರಿಕೆಯಿರುತ್ತದೆ. ಯಾವ ಪೋಷಣೆಯಲ್ಲಿ ಗುಣಮಟ್ಟದ ಪಾಲನೆ ಮತ್ತು ಸಮಂಜಸ ಕಟ್ಟುಪಾಡುಗಳು ಸಮ್ಮಿಳಿತವಾಗಿರುತ್ತದೆಯೋ ಅದು ಮಾದಕ ವಸ್ತುಗಳ ದುರ್ಬಳಕೆಯಿಂದಾಗುವ ಹಾನಿಯನ್ನು ಕಡಿಮೆ ಮಾಡುವುದರೊಂದಿಗೆ ಸಂಬಂಧಿಸಿರುತ್ತದೆ. ಇಲ್ಲಿ ನಮೂದಿಸಿರುವ ಕೆಲ ಮಾರ್ಗಗಳು ಹದಿಹರೆಯದವರಲ್ಲಿ ಅಲ್ಕೋಹಾಲ್ ಮತ್ತು ಮಾದಕ ವಸ್ತುಗಳ ದುರ್ಬಳಕೆಯನ್ನು ಪ್ರತಿಬಂಧಿಸುವಲ್ಲಿ ವಿಶೇಷವಾಗಿ ಸಹಕಾರಿಯಾಗಿವೆ:

(1) ದುಷ್ಟ ಗೆಳೆಯರ ಸಹವಾಸದಿಂದ ದೂರವಿರುವುದು: ಪ್ರತಿಯೊಂದು ಮಗುವಿಗೂ ತನ್ನದೇ ಆದ ಅವಳ/ಆವನ ಆಯ್ಕೆಗಳು ಮತ್ತು ವ್ಯಕ್ತಿತ್ವವಿದೆ. ಅದನ್ನು ಗೌರವಿಸಿ ಪೋಷಿಸಬೇಕು. ಒಂದು ಮಗುವನ್ನು ಅದರ ಎಲ್ಲೆ ಮೀರಿ ಸಾಧನೆ ಮಾಡಲು ದೂಡಬಾರದು, ಅದು ಓದಿನಲ್ಲಾಗಬಹುದು, ಆಟೋಟಗಳಲ್ಲಾಗಬಹುದು ಅಥವಾ ಇನ್ನಿತರೆ ಯಾವುದೇ ಚಟುವಟಿಕೆಗಳಾಗಬಹುದು.

(11) ಶಿಕ್ಷಣ ಮತ್ತು ಆಪ್ತಸಮಾಲೋಚನೆ: ಸಂಕಷ್ಟಗಳನ್ನು ಮತ್ತು ಒತ್ತಡಗಳನ್ನು ಎದುರಿಸಲು ಹಾಗು ನಿರಾಸೆ ಮತ್ತು ಸೋಲುಗಳನ್ನು ಜೀವನದ ಒಂದು ಸವಾಲಾಗಿ ಸ್ವೀಕರಿಸಲು ಅವನಿಗೆ/ಅವಳಿಗೆ ಆಪ್ತಸಲಹೆಗಳನ್ನು ನೀಡುವುದು. ಒಂದು ಮಗುವಿನ ಶಕ್ತಿ, ಸಾಮರ್ಥ್ಯಗಳನ್ನು ಆಟ, ಪಾಠ, ಸಂಗೀತ, ಯೋಗದಂತಹ ಆರೋಗ್ಯಕರ ಪವೃತ್ತಿಗಳೆಡೆಗೆ ಹಾಗು ಇನ್ನಿತರ ಪಠ್ಯೇತರ ಚಟುವಟಿಕೆಗಳೆಡೆಗೆ ಪ್ರೇರೇಪಿಸುವುದು ಕೂಡ ತುಂಬಾ ಯೋಗ್ಯಕರ .

(111) ಪೋಷಕರ ಮತ್ತು ಗೆಳೆಯರ ಸಹಕಾರ ಕೋರುವುದು: ಪೋಷಕರು ಮತ್ತು ಗೆಳೆಯರನ್ನು ತಕ್ಷಣ ಸಂಪರ್ಕಿಸುವುದರಿಂದ ಸೂಕ್ತ ಮಾರ್ಗದರ್ಶನ ಮತ್ತು ಸಹಕಾರ ಪಡೆಯಬಹುದು. ಸಮಸ್ಯೆಗಳನ್ನು ಆತ್ಮೀಯ ಮತ್ತು ನಂಬಿಕಸ್ತ ಗೆಳೆಯರೊಂದಿಗೆ ಹಂಚಿಕೊಂಡು ಸಹ ಸಹಕಾರ ಪಡೆಯಬಹುದು. ಸಮಸ್ಯೆಗಳ ನಿವಾರಣೆಗೆ ಸೂಕ್ತ ಸಲಹೆಗಳನ್ನು ಪಡೆಯುವುದರ ಹೊರತಾಗಿ ಹರೆಯದವರ ಆತಂಕಕಾರಿ ಮತ್ತು ತಪ್ಪಿತಸ್ಥ ಭಾವನೆಗಳನ್ನು ಹೊರಹಾಕಲೂ ಕೂಡ ಇದು ಸಹಕಾರಿಯಾಗುತ್ತದೆ.

(iv) ಅಪಾಯಕಾರಿ ಲಕ್ಷಣಗಳನ್ನು ಹುಡುಕುವುದು: ಪೋಷಕರನ್ನು ಮತ್ತು ಶಿಕ್ಷಕರನ್ನು ಮೇಲ್ಕಂಡ ಅಪಾಯಕಾರಿ ಲಕ್ಷಣಗಳನ್ನು ಹುಡುಕಿ ಪತ್ತೆಮಾಡುವ ಅನಿವಾರ್ಯತೆಯ ಬಗ್ಗೆ ಎಚ್ಚರಿಸುವುದು. ಸ್ನೇಹಿತರೂ ಕೂಡ ಯಾರಾದರು ಮಾದಕ ಮಸ್ತು ಅಥವಾ ಆಲ್ಕೋಹಾಲನ್ನು ಬಳಸುವುದನ್ನು ಕಂಡರೆ, ಆ ಸಂಬಂಧಪಟ್ಟ ವ್ಯಕ್ತಿಯ ಹಿತಾಸಕ್ತಿಯನ್ನಿಟ್ಟುಕೊಂಡು, ಅವರ ಪೋಷಕರ ಅಥವಾ ಶಿಕ್ಷಕರ ಗಮನಕ್ಕೆ ತರಲು ಹಿಂಜರಿಯಬಾರದು. ತದ ನಂತರ, ಈ ವ್ಯಾಧಿಯ ಹಿಂದಿರುವ ಕಾರಣಗಳನ್ನು ಪರೀವೀಕ್ಷಿಸಲು ಸೂಕ್ತ ಮಾರ್ಗೋಪಾಯಗಳ ಅಗತ್ಯತೆಯನ್ನು ಮನಗಾಣಬೇಕು. ಇದು ಯೋಗ್ಯ ಪರಿಹಾರ ಮತ್ತು ಉಪಶಮನವನ್ನು ಆರಂಭಿಸಲು ಸಹಕಾರಿಯಾಗಿದೆ.

(V)ವೃತ್ತಿಪರರ ಮತ್ತು ವೈದ್ಯಕೀಯ ಸಹಕಾರವನ್ನು ಕೋರುವುದು: ಯಾವ ವ್ಯಕ್ತಿಯು ದುರಾದೃಷ್ಟದಿಂದ ಮಾದಕ ವಸ್ತು ಮತ್ತು ಆಲ್ಕೋಹಾಲ್‌ನ ದುರ್ಬಳಕೆ ಎಂಬ ಉಸುಕಿನೊಳಗೆ ಸಿಲುಕಿಕೋಂಡಿರುತ್ತಾನೋ ಅವನಿಗೆ ವ್ಯಸನ ಮುಕ್ತಿಗಾಗಿ ಮತ್ತು ಪುನರ್ವಸತಿ ಕಾರ್ಯಕ್ರಮಗಳಿಗೆ ಅತ್ಯುತ್ತಮ ಅರ್ಹತೆಯುಳ್ಳ ಮನಃಶಾಸ್ತ್ರಜ್ಞರ, ಮನೋವೈದ್ಯರ ರೂಪದಲ್ಲಿ ಸಹಾಯ ದೊರಕುತ್ತದೆ. ಈ ರೀತಿಯ ಸಹಾಯದಿಂದ ಮತ್ತು ವ್ಯಸನಿಯ ಸಾಕಷ್ಟು ಪ್ರಯತ್ನ ಮತ್ತು ಮನೋಬಲದಿಂದ ತನ್ನೆಲ್ಲಾ ಸಂಕಷ್ಟಗಳನ್ನು ಸಂಪೂರ್ಣವಾಗಿ ನಿವಾರಿಸಿಕೊಳ್ಳಬಹುದು ಮತ್ತು ಉತ್ತಮವಾದ ಸಹಜ ಆರೋಗ್ಯವಂತ ಜೀವನವನ್ನು ಆರಂಭಿಸಬಹುದು.

[] []

  1. Biology. 2006. [Online]. Available: http://books.google.ie/books?id=MSPsjgEACAAJ&dq=Ncert+biology+text+book+for+class+12&hl=&cd=8&source=gbs_api
  2. https://www.selfstudys.com/books/karnataka/state-books/class-12th/biology/24429