2230985Siddhima.M
ಭಾರತೀಯ ಸಂವಿಧಾನ ಸಭೆಯಲ್ಲಿ ಮಹಿಳೆಯರ ಪಾತ್ರ
ಬದಲಾಯಿಸಿಭಾರತೀಯ ಸಂವಿಧಾನವು ವಿಶ್ವದ ಅತ್ಯಂತ ಸಮಗ್ರವಾದ ಕಾನೂನು ದಾಖಲೆಗಳಲ್ಲಿ ಒಂದು. ಸಂವಿಧಾನ ರಚಿಸುವ ಕಾರ್ಯವನ್ನು ಪೂರ್ಣಗೊಳಿಸಲು ಒಂದು ಸಂವಿಧಾನ ಸಭೆಯನ್ನು ಸ್ಥಾಪಿಸಿದ್ದರು. ಈ ಸಭೆಯಲ್ಲಿ ಸುಮಾರು ಮೂರೂ ವರ್ಷಗಳ ಕಾಲ ಸಂವಿಧಾನ ರಚಿಸುವ ಕಾರ್ಯವನ್ನು ನಿರ್ವಹಿಸಿದ್ದರು. ಸಂವಿಧಾನ ಸಭೆಯು ಒಟ್ಟು ೧೬೫ ದಿನಗಳಲ್ಲಿ ಹನ್ನೊಂದು ಸೆಶನ್ ನಡೆಸಿತು. ಕ್ಯಾಬಿನೆಟ್ ಮಿಶನ್ ಆದೇಶಿಸಿದ ಯೋಜನೆಗಳ ಪ್ರಕಾರ ೨೯೯ ಪ್ರಾಂತೀಯ ಅಸೆಂಬ್ಲಿಗಳ ಸದಸ್ಯರು ಚುನಾವಣೆಯ ಮೂಲಕ ಆಯ್ಕೆಯಾದರು ಮತ್ತು ಸಂವಿಧಾನ ಸಭೆಯಲ್ಲಿ ಒಳಗೊಂಡರು. ಈ ೨೯೯ ಸದಸ್ಯರಲ್ಲಿ, ಎಪ್ಪತ್ತು ಸದಸ್ಯರು ರಾಜಪ್ರಭುತ್ವದ ರಾಜ್ಯಗಳಿಂದ್ದ ಆಯ್ಕೆಯಾದರು. ಇದರಲ್ಲಿ ಹದಿನೈದು ಮಹಿಳಾ ಪ್ರತಿನಿಧಿಗಳೂ ಸೇರಿಕೊಂಡರು. ಸಾಮಾಜಿಕ ಬದಲಾವಣೆಯ ಅಗತ್ಯತೆಯನ್ನು ಅರಿತುಕೊಳ್ಳುವಲ್ಲಿ ಮಹಿಳೆಯರ ಭಾಗವಹಿಸುವಿಕೆ ಮತ್ತು ಕೊಡುಗೆಗಳ್ಳನ್ನು ಹೆಚ್ಚಾಗಿ ಪರಿಶೀಲಿಸುತ್ತಾರೆ, ಆ ಸಮಯದಲ್ಲಿ ಮಹಿಳೆಯರು ಹೆಚ್ಚು ತೊಂದರೆಗಳನ್ನು ಸಹಿಸಿಕೊಂಡಿದ್ದರು ಉದಾಹರಣೆಗೆ ಬಾಲ್ಯವಿವಾಹ, ವಿಧವೆಯತೆ,ಅರಿವಿನ ಕೊರತೆ , ಬಡತನ, ಶಿಕ್ಷಣದ ಕೊರತೆ, ಅವಮಾನ ಇತ್ಯಾದಿ ಆದರೂ ಈ ಮಹಿಳೆಯರು ಸಂವಿಧಾನ ಸಭೆಯಲ್ಲಿ ಚರ್ಚಿಸಲು, ಚರ್ಚೆ ಮಾಡಲು ಮತ್ತು ದೇಶಕ್ಕೆ ಒಂದು ನ್ಯಾಯವಾದ ಮತ್ತು ಸಮಾನವಾದ ಸಂವಿಧಾನವನ್ನು ಒದಗಿಸಲು ಕುಳಿತರು. ಈ ಮಹಿಳೆಯರು ಇತರ ಸದಸ್ಯರಂತೆ ವಿವಿಧ ಹಿನ್ನಲೆಯಿಂದ ಬಂದವರು ಮತ್ತು ವಿವಿಧ ವೃತಿ ಮತ್ತು ಜೀವನ ಶೈಲಿಯನ್ನು ಹೊಂದಿದ್ದವರು. ಇವರು ವಕೀಲರಾಗಿ, ಸ್ವಾತಂತ್ರಿಯ ಹೋರಾಟಗಾರರಾಗಿ ಹಾಗು ಸಮಾಜ ಸುಧಾರಕರಾಗಿ ಪಾತ್ರಗಳ್ಳನ್ನು ನಿರ್ವಹಿಸಿದ್ದರು. ಕೆಲವರು ಹಲವಾರು ಮಹಿಳಾ ಸಂಘಟನೆಗಳಿಗೆ ಸೇರಿದವರು ಮತ್ತು ೧೯೧೭ ರಿಂದ ಸ್ತ್ರೀವಾದಿ ಚಳುವಳಿಗಳಲ್ಲಿ ಭಾಗವಹಿಸಿದವರು.ಅವರು ಆಸಕ್ತಿ ಹೊಂದಿದ್ದ ಹಲವಾರು ಸಾಮಾಜಿಕ-ಆರ್ಥಿಕ ಮತ್ತು ಸಾಮಾಜಿಕ -ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಿದರು.ಸಂವಿಧಾನ ಸಭೆಯ ಈ ಮಹಿಳಾ ಸದಸ್ಯರು - ಅಮ್ಮು ಸ್ವಾಮಿನಾಥನ್, ದಾಕ್ಷಾಯಣಿ ವೇಲಾಯುಧನ್, ಬೇಗಮ್ ಐಝಜ್ ರಸೂಲ್, ದುರ್ಗಾಭಾಯ್ ದೇಶಮುಖ್, ಹಂಸಾ ಮೆಹ್ತಾ, ಕಮಲಾ ಚೌಧರಿ, ಲೀಲಾ ರಾಯ್ , ಮಾಲತಿ ಚೌಧರಿ, ಪೂರ್ಣಿಮಾ ಬಾನೆರ್ಜಿ,ಅಮೃತ್ ಕೌರ್ , ರೇಣುಕಾ ರೇ , ಸರೋಜಿನಿ ನಾಯ್ಡು, ಸುಚೇತಾ ಕೃಪಲಾನಿ, ವಿಜಯ ಲಕ್ಷ್ಮಿ ಪಂಡಿತ್ ಹಾಗು ಅನ್ನಿ ಮಸ್ಕರೇನ್[೧]
ಭಾರತೀಯ ಸಂವಿಧಾನ
ಸದಸ್ಯರ ಪರಿಚಯ
ಬದಲಾಯಿಸಿಈ ಮಹಿಳೆಯರು ವಿವಿಧ ಸಮುದಾಯಗಳು, ಧಾರ್ಮಿಕ ಮತ್ತು ಆರ್ಥಿಕ ಹಿನ್ನೆಲೆಗೆ ಸೇರಿದವರು. ಅವರ ವೈಯಕ್ತಿಕ ಅನುಭವಗಳು ಮತ್ತು ನಿರೂಪಣೆಗಳು ಸಂವಿಧಾನ ಸಭೆಯ ಚರ್ಚೆಗಳನ್ನು ರೂಪಿಸಲು ಸಹಾಯ ಮಾಡಿವೆ. ಈ ಹದಿನೈದು ಮಹಿಳೆಯರಲ್ಲೂ ಹೇಳಲು ಒಂದೊಂದು ವಿಭಿನ್ನ ಕಥೆಗಳಿವೆ. ಅಮ್ಮು ಸ್ವಾಮಿನಾಥನ್ ಅವರು ಕೇರಳದ ಪಾಲ್ಘಾಟ್‌ನಲ್ಲಿ ಒಂದು ಮೇಲ್ಜಾತಿ ಹಿಂದೂ ಕುಟುಂಬಕ್ಕೆ ಸೇರಿದವರು. ಅವರು ಅನ್ನಿ ಬೆಸಂಟ್ ಮತ್ತು ಇತರರೊಂದಿಗೆ ಸೇರಿ ೧೯೧೭ ರಲ್ಲಿ ಮದ್ರಾಸ್‌ನ ಮಹಿಳಾ ಭಾರತ ಸಂಘವನ್ನು ಸ್ಥಾಪಿಸಿದರು. ಮತ್ತು ಮದರಾಸ್ ಕ್ಷೇತ್ರದಿಂದ ಸಂವಿಧಾನ ಸಭೆಗೆ ಸೇರಿಕೊಂಡರು. ದಾಕ್ಷಾಯಣಿ ವೇಲಾಯುಧನ್ ದಲಿತ ಸಮುದಾಯಕ್ಕೆ ಸೇರಿದವರು .೧೯೪೫ ರಲ್ಲಿ, ದಾಕ್ಷಾಯಣಿಯವರನ್ನು ರಾಜ್ಯ ಸರ್ಕಾರವು ಕೊಚ್ಚಿನ್ ಲೆಜಿಸ್ಲೇಟಿವ್ ಕೌನ್ಸಿಲ್‌ಗೆ ಆಯ್ಕೆ ಮಾಡಿಕೊಂಡರು. ಇವರು ಸಂವಿಧಾನ ಸಭೆಗೆ ಆಯ್ಕೆಯಾದ ಮೊದಲ ಮಹಿಳಾ ದಲಿತ ಸದಸ್ಯೆ .ಬೇಗಂ ಐಜಾಜ್ ರಸೂಲ್ ರಾಜಮನೆತನದಲ್ಲಿ ಜನಿಸಿದವರು. ಅವರು ಸಂವಿಧಾನ ಸಭೆಯ ಏಕೈಕ ಮುಸ್ಲಿಂ ಮಹಿಳಾ ಸದಸ್ಯರಾಗಿದ್ದರು. ೧೯೩೫ರ ಭಾರತ ಸರ್ಕಾರ ಕಾಯ್ದೆ ಜಾರಿಗೆ ಬಂದನಂತರ ಬೇಗಂ ಮತ್ತು ಅವರ ಪತಿ ಮುಸ್ಲಿಂ ಲೀಗನ್ನು ಸೇರಿಕೊಂಡರು. ಅವರು ೧೯೫೨ ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು ಮತ್ತು ೧೯೬೯ ರಿಂದ ೧೯೯೦ ರವರೆಗೆ ಉತ್ತರ ಪ್ರದೇಶ ವಿಧಾನಸಭೆಯ ಸದಸ್ಯರಾಗಿದ್ದರು. ದುರ್ಗಾಭಾಯ್ ದೇಶಮುಖ್ ಕೇವಲ ಹನ್ನೆರಡನೆಯ ವಯಸಿನಲ್ಲಿ ಅಸಹಾಯಕ ಚಳುವಳಿಯಲ್ಲಿ ಭಾಗವಹಿಸಿ ಅನಂತರ ೧೯೩೬ರಲ್ಲಿ ಆಂಧ್ರ ಮಾಹಿಳಾ ಸಭೆಯನ್ನೇ ಸ್ಥಾಪಿಸಿದ್ದರು. ಹಂಸ ಮೆಹ್ತಾ ಅವರು ಇಂಗ್ಲೆಂಡ್‌ನಲ್ಲಿ ಪತ್ರಿಕೋದ್ಯಮ ಮತ್ತು ಮನೋವಿಜ್ಞಾನದ ಕೋರ್ಸ್ ಪೂರ್ಣಗೊಳಿಸಿದರು ಮತ್ತು ಅನಂತರ ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಮಲ ಚೌಧರಿ ಲಕ್ನೋನ ಅದೃಷ್ಟವಂತ ಕುಟುಂಬಕ್ಕೆ ಸೇರಿದವರಾಗಿದ್ದರೂ ಸಹ ಅವರು ತಮ್ಮ ಶಿಕ್ಷಣವನ್ನು ಮುಂದುವರಿಸಲು ಕಷ್ಟಪಟ್ಟರು.ಆದರೆ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ಜೀವನದಲ್ಲಿ ಮುಂದುವರೆದರು.ಲೀಲಾ ರಾಯ್ ಅವರು ಮ್ಯಾಜಿಸ್ಟ್ರೇಟ್ ಆಗಿ ಭಾರತೀಯ ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಿದ್ದರು.ರಾಜಕುಮಾರಿ ಅಮೃತ್ ಕೌರ್ ಪಂಜಾಬ್‌ನ ಕಪುರ್ತಲಾ ರಾಜಮನೆತನಕ್ಕೆ ಸೇರಿದವರು.ಇವರು ದೇಶದ ಮೊದಲ ಆರೋಗ್ಯ ಮಂತ್ರಿಯಾಗಿದ್ದರು ಮತ್ತು ಅನಂತರ ಏಮ್ಸ್ ಹಾಸ್ಪಿಟಲ್ ಗಳ್ಳನ್ನು ಸ್ಥಾಪಿಸಿದರು. ರೇಣುಕಾ ರಾಯ್ ಅವರ ಬಿ.ಎ ಪದವಿಯನ್ನು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಪಡೆದರು.ಅನ್ನಿ ಮಸ್ಕರೇನ್ ತಿರುವನಂತಪುರದ ಲ್ಯಾಟಿನ್ ಕ್ಯಾಥೋಲಿಕ್ ಕುಟುಂಬಕ್ಕೆ ಸೇರಿದವರು. ಇದು ಮಾತ್ರವಲ್ಲದೆ ಸರೋಜಿನಿ ನಾಯ್ಡು ಮತ್ತು ವಿಜಯ್ ಲಕ್ಷ್ಮಿ ಪಂಡಿತ್ ಅವರಂತಹ ಹಲವಾರು ಪ್ರಸಿದ್ಧ ಮತ್ತು ಉತ್ತಮ ಮಹಿಳೆಯರ ಭಾಗವಹಿಸುವಿಕೆಯನ್ನು ಕಾಣಬಹುದು.ಎಲ್ಲಾ ಧಾರ್ಮಿಕ ಹಿನ್ನೆಲೆಗೆ ಸೇರಿದವರು - ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮಹಿಳೆಯರನ್ನು ಇಲ್ಲಿ ಕಾಣಬಹುದು. ಹಲವಾರು ಸಾಮಾಜಿಕ ಹಿನ್ನೆಲೆಗಳ್ಳಿಗೆ ಸೇರಿದ ಮಹಿಳೆಯರು - ದಲಿತರು ಮತ್ತು ಮೇಲ್ಜಾತಿ ಕುಟುಂಬದವರು ಸಹ ಕಂಡುಬರುತ್ತಾರೆ. ಕೆಲವರು ವಿಶ್ವದ ಹಲವಾರು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಿಂದ ಶಿಕ್ಷಣ ಪಡೆದರೆ ಕೆಲವರು ಮೂಲಭೂತ ಶಿಕ್ಷಣವನ್ನು ಪಡೆಯಲು ಸಹ ಕಷ್ಟಪಟ್ಟರು.ಇಂತಹ ವೈವಿಧ್ಯಮಯ ಅನುಭವಗಳು ಸಾಂಸ್ಕೃತಿಕವಾಗಿ ವೈವಿಧ್ಯಮಯವಾಗಿರುವ ಭಾರತದ ಅಗತ್ಯತೆಗಳು, ಆಕಾಂಕ್ಷೆಗಳು ಮತ್ತು ಬೇಡಿಕೆಗಳನ್ನು ಪ್ರತಿನಿಧಿಸುತ್ತವೆ.ಈ ರೀತಿಯಲ್ಲಿ ಉತ್ತಮ ನೀತಿ ರಚನೆಯನ್ನು ಅಳವಡಿಸಿಕೊಳ್ಳಬಹುದು ಮತ್ತು ಮುಖ್ಯವಾಗಿ ಮಹಿಳಾ ಸಬಲೀಕರಣವು ಅತ್ಯಂತ ಪ್ರಮುಖ ಆದ್ಯತೆಯಾಗಿಸಿಕೊಳ್ಳಬಹುದು[೨] |ಭಾರತೀಯ ಸಂವಿಧಾನ ಸಭೆ
ಲಿಂಗ ಮತ್ತು ಜಾತಿಯ ಕುರಿತು ಅಭಿಪ್ರಾಯ
ಬದಲಾಯಿಸಿಲಿಂಗ ಹಾಗು ಜಾತಿ ಸಮಸ್ಯೆಗಳ ಬಗ್ಗೆ ಮಹಿಳಾ ಪ್ರತಿನಿಧಿಗಳು ಬಲವಾದ ಅಭಿಪ್ರಾಯಗಳನ್ನು ಹೊಂದಿದ್ದರು. ಉದಾಹರಣೆಗೆ ಹಂಸ ಮೆಹ್ತಾ, ಅಮೃತ್ ಕೌರ್ , ರೇಣುಕಾ ರೇ, ಐಝಜ್ ರಸೂಲ್, ಅಮ್ಮು ಸ್ವಾಮಿನಾಥನ್, ಪೂರ್ಣಿಮಾ ಬಾನೆರ್ಜಿ ಹಾಗು ಸುಚೇತಾ ಕೃಪಲಾನಿಯವರು ಆಲ್ ಇಂಡಿಯನ್ ವಿಮೆನ್'ಸ್ ಕಾನ್ಫರೆನ್ಸ್ ( ಎ. ಐ. ಡಬ್ಲ್ಯೂ. ಸಿ ) ಸದಸ್ಯರಾಗಿದ್ದರು.ದೇಶದ ಭವಿಷ್ಯ ಸಂವಿಧಾನವು ಪರಿಣಾಮಗಳನ್ನು ಪುರುಷ ಮತ್ತು ಮಹಿಳೆ ಇಬ್ಬರ ಮೇಲು ಸಮಾನವಾಗಿ ಬೀರುತ್ತದೆ. ಆದ್ದರಿಂದ ಮಹಿಳೆಯರು, ಪುರುಷರು ಹೊಂದಿರುವಂತೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ, ಮತ್ತು ಹೊಸ ಸಂವಿಧಾನವು ಪ್ರಜಾಪ್ರಭುತ್ವದ ತತ್ವಗಳ ಮೇಲೆ ಆಧರಿಸಿ ಹಾಗೆಯೇ ಮಾನವ ಚಟುವಟಿಕೆಗಳ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳು ಮತ್ತು ಸಮಾನ ಅವಕಾಶಗಳನ್ನು ಒದಗಿಸುವಂತೆ ನೋಡಿಕೊಳುತ್ತಾರೆ" ಎಂದು ಹಂಸ ಮೆಹ್ತಾ ಅಭಿಪ್ರಾಯಪಡುತಿದ್ದರು .ಈ ಸಂಸ್ಥೆಯ ಮೂಲಕ ಮಹಿಳೆಯರ ಅಭಿವ್ರಿದ್ಧಿಯನ್ನು ತರಲು ಪ್ರಯತ್ನಿಸಿದ್ದರು. ದಾಕ್ಷಾಯಣಿ ವೇಲಾಯುಧನ್ ಹಾಗು ಜಿ ದುರ್ಗಾಭಾಯ್ ಅವರು ಸ್ತ್ರೀವಾದಿ ದೃಷ್ಟಿಕೋನಕ್ಕೆ ಹೆಚ್ಚು ಮುಖ್ಯತೆಯನ್ನು ನೀಡುತಿದ್ದರು, ಆದರೆ ಈ ರೀತಿಯ ಚಿಂತನೆಗಳು ಪ್ರಜಾಪ್ರಭುತ್ವವನ್ನು ವಿರೋಧಿಸದಂತೆ ಸಂವಿಧಾನದಲ್ಲಿ ಅಲ್ಲುವಡಿಸಿಕೊಳ್ಳಲು ಪ್ರಯತ್ನಿಸಿದ್ದರು. ಮಹಿಳೆಯರ ಹಕ್ಕುಗಳಿಗೆ ಮಾತ್ರವಲ್ಲದೆ ದಾಕ್ಷಾಯಣಿಯವರು ದಲಿತರ ಹಕ್ಕುಗಳಿಗಾಗಿ ಕೂಡ ಹೋರಾಟ ನಡೆಸುತ್ತಿದ್ದರು. ಅವರ ಆಲೋಚನೆಗಳ್ಳು ಮತ್ತು ವಾದಗಳು ಹಲವಾರು ಬಾರಿ ಜನಸಾಮಾನ್ಯರು ಒಪ್ಪುತಿರಲಿಲ್ಲ. ಉದಾಹರಣೆಗೆ ಮೀಸಲಾತಿ ಮತ್ತು ದಲಿತರಿಗೆ ಪ್ರತ್ಯೇಕ ಚುನಾವಣಾ ವ್ಯವಸ್ಥೆ ಕುರಿತು ಡಾ ಬಿ ಆರ್ ಅಂಬೇಡ್ಕರ್ ಅವರ ಅಭಿಪ್ರಾಯಗಳನ್ನು ದಾಕ್ಷಾಯಣಿಯವರು ಒಪ್ಪುತಿರಲಿಲ್ಲ. ಆದರೆ ದಲಿತರ ಸಾಮರ್ಥ್ಯವನ್ನು ಸುಧಾರಿಸಲು ಅವರು ಹೆಚ್ಚು ಮುಖ್ಯತೆಯನ್ನು ನೀಡುತಿದ್ದರು. ಅದೇರೀತಿ ದಲಿತರಿಗೆ ಮಾತ್ರವಲ್ಲದೆ ಎಲ್ಲಾ ಅಲ್ಪಸಂಖ್ಯಾತರಿಗೂ ಈ ಮಾತುಗಳು ನಿಜವೆಂದು ಬೇಗಂ ರಸುಲ್ರವರು ಕೂಡ ಅಭಿಪ್ರಾಯಿಸಿದರು. ಹಂಸ ಮೆಹ್ತಾ ಮತ್ತು ರಾಜಕುಮಾರಿ ಅಮೃತ್ ಕೌರ್ರವರು ಸಮಾನತೆಯ ಬಗ್ಗೆ ಬೇರೆ ದೃಷ್ಟಿಕೋನಗಳನ್ನು ಹೊಂದಿದ್ದರು. ಏಕರೂಪದ ನಾಗರಿಕ ಸಂಹಿತೆಯು ಮಹಿಳೆಯರ ನಡುವೆ ಉತ್ತಮ ಸಮಾನತೆಯನ್ನು ಪ್ರೋತ್ಸಾಹಿಸಲು ಸಹಾಯ ಮಾಡುತ್ತದೆ ಎಂದು ಅವರು ನಂಬಿದ್ದರು.
ನಾಗರಿಕ ಸ್ವಾತಂತ್ರ್ಯ ಗಳು
ಬದಲಾಯಿಸಿಸಂವಿಧಾನದ ಸಭೆಯಲ್ಲಿ ಪ್ರತಿಯೊಬ್ಬ ಮಹಿಳೆಯು ನಾಗರಿಕ ಸ್ವಾತಂತ್ರ್ಯಗಳ ಕುರಿತು ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದ್ದರು. ಐಝಜ್ ರಸೂಲ್ ಅವರು ಹಕ್ಕುಗಳು ಮತ್ತು ನಿರ್ದೇಶನ ತತ್ವಗಳ ಜನರಿಗೆ ಹೆಚ್ಚು ಲಭಿಸಿದರೆ ಹೆಚ್ಚು ನಾಗರಿಕ ಸ್ವಾತಂತ್ಯ್ರವು ಲಭಿಸುತ್ತವೆಂದು ನಂಬಿದ್ದರು. ಹಾಗೆಯೇ ರಾಜ್ಯದ ಮೂಲಭೂತ ಹಕ್ಕುಗಳು ಮತ್ತು ನಿರ್ದೇಶನ ತತ್ವಗಳು ಯಾವುದೇ ಸಂವಿಧಾನದ ಎರಡು ಪ್ರಮುಖ ಸ್ತಂಭಗಳಾಗಿವೆ ಎಂದು ಅಮ್ಮು ಸ್ವಾಮಿನಾಥನ್ ಕೂಡ ನಂಬಿದ್ದರು.ಮೂಲಭೂತ ಹಕ್ಕುಗಳು ಮತ್ತು ನಿರ್ದೇಶನ ತತ್ವಗಳು,ನಾಗರಿಕ ಸ್ವಾತಂತ್ರ್ಯಗಳ ಕುರಿತು ಬರಿ ಒಂದು ದೃಷ್ಟಿಕೋಣವಾದರೆ ಪೂರ್ಣಿಮಾ ಬಂಜೆರ್ಜಿ ಮತ್ತು ರೇಣುಕಾ ರೇ ಅವರು ಶಿಕ್ಷಣವು ಸ್ವಾತಂತ್ರ್ಯವನ್ನು ಪಡೆಯಲು ಬಲು ಮುಖ್ಯವೆಂದು ನಂಬಿದವರು.ಕೇಂದ್ರೀಯ ಶೈಕ್ಷಣಿಕ ಕಾರ್ಯಕ್ರಮಗಳು ಈ ಸಮಸ್ಯೆಗೆ ಪರಿಹಾರ ಎಂದು ನಂಬಿದ್ದರು. ಅಷ್ಟೇ ಅಲ್ಲದೆ ಅವರು ಜೈಲಿನಲ್ಲಿರುವ ವ್ಯಕ್ತಿಗಳ ಹಕ್ಕುಗಳಿಗಾಗಿ ಕೂಡ ಹೋರಾಟವನ್ನು ನಡೆಸುತ್ತಿದ್ದರು.
ವಿಕೇಂದ್ರೀಕರಣ - ಅಭಿಪ್ರಾಯ
ಬದಲಾಯಿಸಿಈ ಮಹಿಳೆಯರು ತಾವು ಬಂದ ಹಲವಾರು ಪ್ರಾಂತ್ಯಗಳನ್ನು ಪ್ರತಿನಿಧಿಸಿದ್ದರು.ಪ್ರಬಲವಾದ ಅಧಿಕಾರವನ್ನು ಹೊಂದಿರುವ ಕೇಂದ್ರ ಸರ್ಕಾರ ಈ ದೇಶಕ್ಕೆ ಸರಿಬಾರದು ಎಂದು ನಂಬಿದ್ದವರು.ಹೀಗಾಗಿ ಅವರು ಅಧಿಕಾರದ ವಿಕೇಂದ್ರೀಕರಣವನ್ನು ನಂಬಿದ್ದರು. ರೇಣುಕಾ ರೇ ಮತ್ತು ಪೂರ್ಣಿಮಾ ಬ್ಯಾನರ್ಜಿಯವರು ಆರ್ಥಿಕ ವಿಕೇಂದ್ರೀಕರಣವನ್ನು ಸಹ ಆದೇಶಿಸುತ್ತಿದರು.ಈ ರೀತಿಯಲ್ಲಿ ಜಾತ್ಯತೀತತೆ ಮತ್ತು ಬಹುತ್ವತೆ ಎರಡನ್ನೂ ಸುರಕ್ಷಿತಗೊಳಿಸಬಹುದು ಎಂದು ನಂಬಿದರು.ಗಾಂಧೀಜಿಯವರೂ ಇದೇ ರೀತಿಯ ಆಲೋಚನೆಗಳನ್ನು ವಿಕೇಂದ್ರೀಕರಣದ ಕುರಿತು ಹೊಂದಿದ್ದರು ಎಂದು ಇಲ್ಲಿ ಗಮನಿಸುವುದು ಮುಖ್ಯ.
ಮಹಿಳೆಯರ ಭಾಗವಹಿಸುವಿಕೆಯ ಪ್ರಾಮುಖ್ಯತೆ
ಬದಲಾಯಿಸಿ"ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ವಹಿಸಿದ ಪಾತ್ರವನ್ನು ಚಿನ್ನದ ಅಕ್ಷರಗಳಲ್ಲಿ ಬರೆಯಬೇಕು" ಎಂದು ಮಹಾತ್ಮಾ ಗಾಂಧೀಜಿಯವರು ಹೇಳುತ್ತಿದ್ದರು.ಭಾರತೀಯ ಇತಿಹಾಸವು ಮಹಾತ್ಮರು ಬಯಸಿದಂತೆ ಮಹಿಳೆಯರಿಗೆ ಈ ಗೌರವ ತೋರಲಿಲ್ಲ. ಮತ್ತು "ಚಿನ್ನದ ಅಕ್ಷರಗಳಲ್ಲಿ" ನೆನಪಿಸಿಕೊಳ್ಳುವುದಕ್ಕಿಂತ, ಸಂವಿಧಾನ ಸಭೆಯ ಹೆಚ್ಚಿನ ಮಹಿಳೆಯರನ್ನು ಸಾರ್ವಜನಿಕರು ಕ್ರಮೇಣ ಮರೆತಿದ್ದಾರೆ.ಅವರು ಎದುರಿಸಿದ ಕಠಿಣ ಹೋರಾಟದ ಹೊರತಾಗಿಯೂ ನಾವು ನಮ್ಮದೇ ಆದ ಹೋರಾಟಗಳನ್ನು ಇಂದು ಎದುರಿಸುತ್ತಲೇ ಇದ್ದೇವೆ, ಉದಾಹರಣೆಗೆ ಇಂದಿನ ರಾಜಕೀಯದಲ್ಲಿ ಮಹಿಳೆಯರ ಪಾತ್ರವನ್ನು ವಾಸ್ತವೀಕರಿಸಲು ಮತ್ತು ಸಾಂಸ್ಥಿಕಗೊಳಿಸಲು ನಾವು ಇಂದೂ ಕಷ್ಟಪಡುತ್ತಿದೇವೆ.ಮೊದಲ ಲೋಕಸಭೆ ಚುನಾವಣೆಯಲ್ಲಿ ಐದು ಶೇಕಡ ಪ್ರಾತಿನಿಧ್ಯದಿಂದ, ದೇಶದಲ್ಲಿ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಕೇವಲ ಹದಿನಾಲ್ಕು ಶೇಕಡಕ್ಕೆ ಏರಿದೆ. ೧೯೬೨ ರಿಂದ, ಭಾರತದ ೫೪೩ ಕ್ಷೇತ್ರಗಳಲ್ಲಿ, ಸುಮಾರು ಅರ್ಧದಷ್ಟು ಕ್ಷೇತ್ರಗಳ್ಳು ಒಬ್ಬ ಮಹಿಳಾ ಸಂಸದೇಗು ಮತದಾನ ನೀಡಿಲ್ಲ.ಇದು ಮಹಿಳೆಯರ ಅಸಮಾನ ಪ್ರಾತಿನಿಧ್ಯವನ್ನು ತೋರಿಸುತ್ತದೆ.೧೯೪೯ ರ ಸಂವಿಧಾನ ಸಭೆಯ ಭಾಷಣದಲ್ಲಿ, ಅಮ್ಮು ಸ್ವಾಮಿನಾಥನ್ ಐತಿಹಾಸಿಕ ಲಿಂಗ ಹಕ್ಕುಗಳಿಗೆ ಪ್ರತಿಕ್ರಯಿಸುತ "ಭಾರತೀಯ ಜನರು ಸ್ವತಃ ತಮ್ಮ ಸಂವಿಧಾನವನ್ನು ರಚಿಸಿದ್ದಾರೆ ಮತ್ತು ದೇಶದ ಪ್ರತಿಯೊಬ್ಬ ನಾಗರಿಕನು ಹೊಂದಿರುವ ಹಕ್ಕುಗಳನ್ನು ಸಮಾನವಾಗಿ ಮಹಿಳೆಯರಿಗೂ ನೀಡಿದ್ದಾರೆ" ಎಂದು ಹೇಳುವರು.ಈ ಮಾತುಗಳಿಗೆ ನಾವು ಬದ್ಧರಾಗಿ, ಪುರುಷ ಮತ್ತು ಮಹಿಳೆಯರ ಸಮಾನ ಅವಕಾಶಗಳಿಗೆ ತಾರತಮ್ಯವಿಲ್ಲದ ಸಮಾಜವನ್ನು ಸೃಷ್ಟಿಸಬೇಕು. ಈ ಮಹಿಳೆಯರು ಅಸೆಂಬ್ಲಿಯಲ್ಲಿ ಹೆಚ್ಚು ಸಕ್ರಿಯರಾಗಿಲ್ಲದಿದ್ದರೂ ಸಂವಿಧಾನ ರಚನೆಯಲ್ಲಿ ಸರಿಯಾದ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಅವರ ಕೊಡುಗೆಗಳನ್ನು ಎತ್ತಿ ತೋರಿಸುವುದು ಸೂಕ್ತವಾಗಿದೆ. ಜೀವನದ ಎಲ್ಲಾ ಕ್ಷೇತ್ರಗಳಲ್ಲಿ, ಖಾಸಗಿ ಅಥವಾ ಸಾರ್ವಜನಿಕವಾದರೂ ಸಮಾನತೆಯ ಕಲ್ಪನೆಯನ್ನು ವಿರೋಧಿಸಿದ ಪುರುಷರು ಮಧ್ಯೆ ಈ ಮಹಿಳೆಯರು ತಮ್ಮ ಹಕ್ಕುಗಳನ್ನು ಕೇಳಿದ್ದರು.ಅವರು ಸಮಾಜದ ಅಗತ್ಯತೆಗಳು ಪ್ರತಿನಿಧಿಸುವುದು ಮಾತ್ರವಲ್ಲದೆ ತಮ್ಮ ಕೊಡುಗೆಯ ಮೂಲಕ ಸಂವಿಧಾನದಲ್ಲಿ ಈ ತೊಂದರೆಗಳ್ಳನ್ನು ಪಾರು ಮಾಡುತಾ ಗುರಿಗಳನ್ನು ತಲುಪಲು ಪ್ರಯತ್ನಿಸಿದರು.ಇನ್ನು ಮುಂದೆ, ಸಂವಿಧಾನ ರಚನಾಕಾರರು ಮತ್ತು ಅಸೆಂಬ್ಲಿಯ ವೈವಿಧ್ಯತೆ ನೀಡಿದ ಕೊಡುಗೆಗಳನ್ನು ಗೌರವಿಸುವುಧು ಅವಶ್ಯಕ ಮತ್ತು ಅದೇ ರೀತಿಯಲ್ಲಿ ಸಂವಿಧಾನ ಸಭೆಯ ಯಶಸ್ಸನ್ನು ಕಾಪಾಡಿಕೊಳ್ಳಲು ಸಂವಿಧಾನ ಸಭೆಯ ಮಹಿಳಾ ಪ್ರತಿನಿಧಿಗಳು ಕಲ್ಪಿಸಿಕೊಂಡಂತೆ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಪ್ರಯತ್ನಿಸುವುದು ಬಹಳ ಮುಖ್ಯ[೩]
ಉಲ್ಲೇಖಗಳು
ಬದಲಾಯಿಸಿ- ↑ https://www.livemint.com/Leisure/dLi6ZIdW6CgswZCGdOA9VM/The-women-who-helped-draft-our-constitution.html
- ↑ https://www.indiatoday.in/education-today/gk-current-affairs/story/women-s-day-the-only-15-women-who-contributed-to-making-the-indian-constitution-1653496-2020-03-07
- ↑ https://timesofindia.indiatimes.com/readersblog/third-view/the-15-forgotten-women-leaders-of-the-constituent-assembly-of-india-46951/
ಮಾರ್ಕ್ಸ್ವಾದಿ ಸ್ತ್ರೀವಾದ
ಬದಲಾಯಿಸಿಮಾರ್ಕ್ಸ್ವಾದಿ ಸ್ತ್ರೀವಾದವು, ಸ್ತ್ರೀವಾದದ ಒಂದು ರೂಪಾಂತರವಾಗಿದ್ದು ಅದು ಕಾರ್ಲ್ ಮಾರ್ಕ್ಸ್ ಅವರ ಮಾರ್ಕ್ಸ್ವಾದಿ ಸಿದ್ಧಾಂತವನ್ನು ವಿಸ್ತರಿಸುತ್ತದೆ. ಈ ಸಿದ್ಧಾಂತವು ಕ್ಯಾಪಿಟಲಿಸಂ (ಬಂಡವಾಳಶಾಹಿ) ಮತ್ತು ಖಾಸಗಿ ಆಸ್ತಿಯ ಮೂಲಕ ಮಹಿಳೆಯರಿಗಾಗುವ ತೊಂದರೆಗಳನ್ನು ತೋರುತ್ತದೆ. ಅಷ್ಟೇಯಲ್ಲದೆ ಬಂಡವಾಳಶಾಹಿ ವ್ಯವಸ್ಥೆಗಳಲ್ಲಿ ಮಹಿಳೆಯರ ಹೆಚ್ಚಿನ ಶ್ರಮಕ್ಕೆ ಯಾವುದೇ ರೀತಿಯ ಗುರುತಿಸುವಿಕೆ ನೀಡಲಾಗುವುದಿಲ್ಲ ಎಂದು ನಂಬುತ್ತಾರೆ. ಆದ್ದರಿಂದ ಮಹಿಳೆಯರ ಸ್ವಾತಂತ್ರ್ಯವು ಬಂಡವಾಳಶಾಹಿ ವ್ಯವಸ್ಥೆಗಳನ್ನು ಕಿತ್ತುಹಾಕುವ ಮೂಲಕ ಮಾತ್ರ ಸಾಧಿಸಬಹುದು ಎಂದು ಮಾರ್ಕ್ಸ್ವಾದಿ ಸ್ತ್ರೀವಾದಿಗಳು ವಾದಿಸುತ್ತಾರೆ.
ಮಾರ್ಕ್ಸ್ವಾದಿ ಸ್ತ್ರೀವಾದಿಗಳು ಸಾಂಪ್ರದಾಯಿಕ ಮಾರ್ಕ್ಸ್ವಾದಿ ಸಿದ್ಧಾಂತವನ್ನು ಕಾರ್ಮಿಕ ವರ್ಗದ ಅಂತರಗಳಿಗೆ ಮತ್ತು ಲೈಂಗಿಕ ಸಂಬಂಧಗಳಿಗೆ ಹೋಲಿಸುವ ಮೂಲಕ ಮಾರ್ಕ್ಸ್ವಾದಿ ಸ್ತ್ರೀವಾದವನ್ನು ವಿಸ್ತರಿಸುತ್ತಾರೆ. ಈ ಸಿದ್ಧಾಂತವು ಐತಿಹಾಸಿಕ ಭೌತವಾದಕ್ಕೆ ಸಂಬಂಧ ಹೊಂದಿದ್ದು ,ಸಮಾಜವಾದಿ ಮತ್ತು ಭೌತವಾದಿ ಸ್ತ್ರೀವಾದದ ತತ್ವಗಳೊಂದಿಗೆ ಹೆಚ್ಚು ಹೋಲಿಕೆಯನ್ನು ತೋರುತ್ತದೆ . ಮಾರ್ಕ್ಸ್ವಾದಿ ಮತ್ತು ಭೌತವಾದಿ ಸ್ತ್ರೀವಾದದ ಕುರಿತು ಮಾರ್ಥಾ ಇ. ಗಿಮೆನೆಜ್ "ಈ ಎರಡು ನಿಕಟ ಸಂಬಂಧಿತ ಪದಗಳ ನಡುವೆ ವ್ಯತ್ಯಾಸಗಳ್ಳನ್ನು ಸ್ಥಾಪಿಸುವುದು ಸ್ವಲ್ಪ ಕಷ್ಟ"ವೆಂದು ಹೇಳುತ್ತಾರೆ[೧].
ಮಾರ್ಕ್ಸ್ವಾದದ ಹಿನ್ನೆಲೆ
ಬದಲಾಯಿಸಿಮಾರ್ಕ್ಸ್ವಾದವು ಮಾನವ ಸಮಾಜದಲ್ಲಿ ದಬ್ಬಾಳಿಕೆ ಮತ್ತು ವರ್ಗದ ಬೆಳವಣಿಗೆಗಳ್ಳನ್ನು ಪರಿಶೀಲಿಸುತ್ತದೆ. ದಬ್ಬಾಳಿಕೆಯಿಂದ ಕೂಡಿರುವ ಸಾಮಾಜವು ದಬ್ಬಾಳಿಕೆಯಿಂದ ತುಂಬಿರುವ ಕುಟುಂಬ ವ್ಯವಸ್ಥೆಗಳನ್ನು ಪ್ರಾರಂಬಿಸುತ್ತದೆ ಎಂದು ಈ ಸಿದ್ಧಾಂತದ ನಂಬಿಕೆ. ಈ ರೀತಿಯ ಆಲೋಚನೆಗಳ ಕುರಿತು ಹಲವಾರು ಬರವಣಿಗೆಗಳನ್ನು ಪ್ರಕಟಿಸಲಾಗಿದೆ. ಉದಾಹರಣೆಗೆ "ದಿ ಒರಿಜಿನ್ ಆಫ್ ದಿ ಫ್ಯಾಮಿಲಿ, ಪ್ರೈವೇಟ್ ಪ್ರಾಪರ್ಟಿ, ಅಂಡ್ ದಿ ಸ್ಟೇಟ್" (೧೮೮೪) ನಲ್ಲಿ ಫ್ರೆಡ್ರಿಕ್ ಎಂಗೆಲ್ಸ್ ಅವರು ಕುಟುಂಬ ಮತ್ತು ಸಾಮಾಜಿಕ ರಚನೆ, ವರ್ಗಗಳು, ಸಂಪತ್ತು ಮತ್ತು ಶ್ರೀಮಂತಿಕೆಯ ಕುರಿತು ಬರೆಯುತ್ತಾರೆ.[೨] ಮಹಿಳೆಯರು ಮೂಲತಃ ಒಳ್ಳೆಯ ಸಾಮಾಜಿಕ ಸ್ಥಾನವನ್ನು ಹೊಂದಿದ್ದರು ಮತ್ತು ಕಾರ್ಮಿಕ ವರ್ಗದಲ್ಲಿ ಸಮಾನತೆಯನ್ನು ಹೊಂದಿದ್ದರು ಎಂದು ಅವರು ನಂಬುತ್ತಿದ್ದರು.ಎಂಗೆಲ್ಸ್ ಮಹಿಳೆಯರು ಮಾತ್ರ ಕುಟುಂಬದ ಹೆಸರನ್ನು ಹಂಚಿಕೊಳ್ಳುತಿದ್ದರೆಂದು ಬಯಿಸುತ್ತಿದ್ದರು. ಆದ್ದರಿಂದ ಪುರುಷರಿಗೆ ತಮ್ಮ ಮಕ್ಕಳು ಯಾರೆಂದು ಖಚಿತವಾಗಿ ತಿಳಿದಿರಲಿಲ್ಲ ಮತ್ತು ಅವರ ಸಂಪತ್ತು ಯಾವ ಮಕ್ಕಳಿಗೆ ಲಭಿಸುವುದೆಂದು ತಿಳಿಯುತ್ತಿರಲಿಲ್ಲ.ಕೃಷಿಯು ಮೊದಲು ಸಮೃದ್ಧವಾದಾಗ ಈ ಪರಿಸ್ಥಿತಿಯು ಬದಲಾಯಿತು.ಪುರುಷರು ಕೃಷಿ ಭೂಮಿಯಲ್ಲಿ ಹೆಚ್ಚು ಕೆಲಸ ಮಾಡುತ್ತಿದ್ದರಿಂದ್ದ ಅವರು ಹೆಚ್ಚಿನ ಸಂಪತ್ತನ್ನು ಗಳಿಸುತ್ತಿದ್ದರು ಮತ್ತು ಪುರುಷ ಪ್ರಧಾನ ಸಾಮಾಜವನ್ನು ರಚಿಸಬೇಕೆಂದು ಬಯಕೆಗಳನ್ನು ತೋರುತ್ತಿದರು. ಈ ಆಶಯಗಳನ್ನು ಸಾಧಿಸಲು ಮಹಿಳೆಯರ ಮೇಲೆ ಹೆಚ್ಚಿನ ದಬ್ಬಾಳಿಕೆಯನ್ನು ನಡೆಸಲಾರಂಭಿಸಿದರು ಮತ್ತು "ಹಿತರಿಸಮ್"ನಂತಹ ಪದ್ಧತಿಗಳನ್ನೂ ಪಾಲಿಸುತ್ತಿದ್ದರು. ಕಾರ್ಮಿಕ ವರ್ಗದಲ್ಲಿನ ಮೊದಲ ವಿಭಾಗವು ಈ ರೀತಿಯ ಪುರುಷ ಮತ್ತು ಮಹಿಳೆಯರ ನಡುವಿನ ವಿಭಾಗಗಳ ರೀತಿಯಲ್ಲೇ ಹೊರಬರುತ್ತದೆಂದು ಎಂಗೆಲ್ಸ್ ಹೇಳಿದರು. ಸ್ತ್ರೀವಾದವನ್ನು ಮಾರ್ಕ್ಸ್‌ವಾದಿ ಸಂಪ್ರದಾಯಾವಾದ ವರ್ಗದ ಅಂತರಗಳೊಂದಿಗೆ ಈ ರೀತಿ ಜೋಡಿಸಿದರು. ಲಿಂಗ ದಬ್ಬಾಳಿಕೆಯನ್ನು ಸಾಂಸ್ಕೃತಿಕವಾಗಿ ಆರಂಭಿಸಿ ಸಾಂಸ್ಥಿಕ ಅಸಮಾನತೆಯ ಮೂಲಕ ನಿರ್ವಹಿಸಲಾಗುತ್ತದೆ ಎಂದು ಎಂಗೆಲ್ಸ್ ಹೇಳಿದರು. ಈ ರೀತಿಯಾಗಿ ಕಾರ್ಮಿಕ-ವರ್ಗದ ಪುರುಷನು ಕಾರ್ಮಿಕ-ವರ್ಗದ ಮಹಿಳೆಯನ್ನು ಕಡೆಗಣಿಸುತ್ತಾನೆ - ಇದನ್ನೇ ಮಾರ್ಕ್ಸ್ವಾದಿ ಸ್ತ್ರೀವಾದವು ತೋರುತ್ತದೆ.
ಫ್ರೆಡ್ರಿಕ್ ಎಂಗೆಲ್ಸ್
ಮಾರ್ಕ್ಸ್‌ವಾದಿ ಮತ್ತು ಸಮಾಜವಾದಿ ಸ್ತ್ರೀವಾದಿಗಳು ೧೯೧೦ರ ದಶಕದ ಆರಂಭದಲ್ಲಿ ಕಾರ್ಮಿಕ ಚಳುವಳಿಗಳ ನಡುವೆ ಮಹಿಳಾ ಸಂಘಟನೆಗಳನ್ನು ರಚಿಸಲು ಆರಂಭಿಸಿದ್ದರು. ಇವರಿಗೆ ದುಡಿಯುವ ಮಹಿಳೆಯರು ಅಥಾವ ಕಾರ್ಮಿಕ ವರ್ಗಕ್ಕೆ ಸೇರಿರುವ ಮಹಿಳೆಯರು(ಬೂರ್ಜ್ವಾ ವರ್ಗ) ಮತ್ತು ಮೇಲು ಜಾತಿಯ ಮಹಿಳೆಯರು (ಪ್ರೊಲಿಟೇರಿಯಟ್ ವರ್ಗ) ಬೇರೆ. ಆದ್ದರಿಂದ ಕಾರ್ಮಿಕ ವರ್ಗದ ಸ್ತ್ರೀವಾದ ಚಳುವಳಿಗಳು ಮೇಲು ಜಾತಿಯ ಸ್ತ್ರೀವಾದ ಚಳುವಳಿಗಳಿಂದ ದೂರವಿರಬೇಕೆಂದು ಅಭಿಪ್ರಾಯಪಟ್ಟರು. ಇಂತಹ ಚಳುವಳಿಗಳ ಪರಿಣಾಮವಾಗಿ ಮೇರಿ ಇನ್ಮನ್ ನಂತಹ ಮಾರ್ಕ್ಸ್‌ವಾದಿ ಸ್ತ್ರೀವಾದಿ ಚಿಂತಕರು ಹುಟ್ಟಿಕೊಂಡರು. ೧೯೪೦ರಲ್ಲಿ ಮೇರಿ ಇನ್ಮನ್ ಈ ಚಳುವಳಿಗಳ ನಡುವೆ ಮಹಿಳಾ ಸಂಘಟನೆಗಳನ್ನೂ ತಯಾರಿಸಿ ಉತ್ತಮ ನೀತಿ ರಚನೆಗಾಗಿ ಲಾಬಿ ಮಾಡಲಾರಂಭಿಸಿದರು.
ಮಾರ್ಕ್ಸ್ವಾದವು ಎರಡು ರೀತಿಯ ಕೆಲಸಗಾರಿಕಥೆಯ ಕುರಿತು ಮಾತನಾಡುತ್ತದೆ
ಬದಲಾಯಿಸಿ೧.ಉತ್ಪಾದಕ ಲೇಬರ್ - ಹೆಚ್ಚುವರಿ ಮೌಲ್ಯವನ್ನು ಸೃಷ್ಟಿಸುವ ಕೆಲಸಗಳು. ಉದಾಹರಣೆಗೆ ಹೆಚ್ಚು ಲಾಭವನ್ನು ನೀಡುವ ವಸ್ತುಗಳ ಉತ್ಪಾದನೇ.
೨.ಅನುತ್ಪಾದಕ ಲೇಬರ್ - ಈ ರೀತಿಯ ಕೆಲಸಗಳಲ್ಲಿ ಹೆಚ್ಚು ಮೌಲ್ಯವನ್ನು ಸೃಷ್ಟಿಸಲು ಸಾಧ್ಯವಾಗುವುದಿಲ್ಲ ಮತ್ತು ಈ ರೀತಿಯ ಕೆಲಸಗಳಲ್ಲಿ ಸಬ್ಸಿಡಿಗಳನ್ನೂ ನೀಡಬಹುದು. ಉದಾಹರಣೆಗೆ ಬುಕ್ಕೀಪಿಂಗ್, ಮಾರ್ಕೆಟಿಂಗ್ ಇತ್ಯಾದಿಗಳು.
೧೯೭೦ ರ ದಶಕದ ಮಾರ್ಕ್ಸ್ವಾದಿ ಸ್ತ್ರೀವಾದಿ ಲೇಖಕರಾದ ಮಾರ್ಗರೆಟ್ ಬೆನ್ಸ್ಟನ್ ಮತ್ತು ಪೆಗ್ಗಿ ಮಾರ್ಟನ್ ಉತ್ಪಾದಕ ಮತ್ತು ಅನುತ್ಪಾದಕ ಲೇಬರ್ ಕುರಿತು ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಿದರು.ಅವರು ಗೃಹಿಣಿಯರಿಗೆ ರಾಜ್ಯ ಪಾವತಿಸಿದ ವೇತನ ಲಭಿಸಬೇಕೆಂದು ಹೋರಾಡಿದರು.ಬಂಡವಾಳಶಾಹಿಯಲ್ಲಿ, ಕುಟುಂಬವನ್ನು ನಡೆಸುವ ಕೆಲಸಗಳು ಕಡಿಮೆ ಮೌಲ್ಯವನ್ನು ಹೊಂದಿರುತ್ತದೆ, ಏಕೆಂದರೆ ಅದು ಯಾವುದೇ ಮಾರುಕಟ್ಟೆ ಲಾಭವನ್ನು ಹೊಂದಿರುವುದಿಲ್ಲ. ಆದರೆ ಮಾರ್ಕ್ಸ್ವಾದಿ ಸ್ತ್ರೀವಾದದ ಸಿದ್ಧಾಂತದಲ್ಲಿ ಕುಟುಂಬದ ನಿರ್ವಹಣೆಯ ಕೆಲಸಗಳು ಬಹಳ ಪ್ರಯೋಜನಕಾರಿ. ಏಕೆಂದರೆ ಅದರಲ್ಲಿ ಸೇವಾ ಮೌಲ್ಯವು ಹೆಚ್ಚಿರುತ್ತದೆ ಮತ್ತು ಅದನ್ನು ಸರುಕುಗಳೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಉತ್ಪಾದಕ ಕೆಲಸಗಳನ್ನು ಕಡಿಮೆಯಾಗಿಸಬೇಕೆಂದು ಈ ಸ್ತ್ರೀವಾದಿಗಳು ನೋಡಿದರು. ಇದೇ ಮಾರ್ಗರೆಟ್ ಬೆನ್ಸ್ಟನ್ ಮತ್ತು ಪೆಗ್ಗಿ ಮಾರ್ಟನ್ ಅವರ ವಾದವಾಗಿತ್ತು.
ಮನೆಗೆಲಸಕ್ಕೆ ಕೂಲಿ
ಬದಲಾಯಿಸಿಮಾರ್ಕ್ಸ್ವಾದಿ ಸ್ತ್ರೀವಾದವು ಬಂಡವಾಳಶಾಹಿ ಆರ್ಥಿಕತೆಯೊಳಗೆ ಮನೆಕೆಲಸವನ್ನು ಸೇರಿಸಲು ಪ್ರಯತ್ನಿಸುತ್ತದೆ . ರಿಪ್ರೊಡಕ್ಟಿವ್ ಲೇಬರ್ ಅಥವಾ ಸ್ವಚ್ಛಗೊಳಿಸುವಿಕೆ, ಅಡುಗೆ ಕೆಲಸ ಮತ್ತು ಮಗುವಿನ ಆರೈಕೆ ಈ ರೀತಿಯ ಕೆಲಸಗಳನ್ನು ನಿಜವಾದ ಕೆಲಸಗಳನ್ನಾಗಿ ಪರಿಗಣಿಸಬೇಕು ಎಂಬುದು ಇವರ ನಂಬಿಕೆ. ಮಹಿಳೆಯರನ್ನು ಖಾಸಗಿ ವಲಯಕ್ಕೆ ಬಲವಂತವಾಗಿ ಕಳುಹಿಸುವುದರಿಂದ್ದ ಈ ರೀತಿಯ ದಬ್ಬಾಳಿಕೆಗಳು ಆರಂಭವಾಗುವುದು ಎಂಬ ನಂಬಿಕೆ ಇವರದ್ದು. ಆದ್ದರಿಂದ ಈ ರೀತಿಯ ರಿಪ್ರೊಡಕ್ಟಿವ್ ಲೇಬರ್ ಅಥವಾ ಮನೆ ಕೆಲಸವನ್ನು ಬಂಡವಾಳಶಾಹಿ ಸಂಸ್ಥೆಗಳಲ್ಲಿ ಅಳವಡಿಸಬೇಕಾಗಿದೆ ಎಂದು ಶಾರ್ಲೆಟ್ ಪೆರ್ಕಿನ್ಸ್ ಗಿಲ್ಮಾನ್ ನಂಬುತ್ತಿದ್ದರು. ಮಹಿಳೆಯರು ಮಾಡುವ ಕೆಲಸವನ್ನು ನಾವು ಗುರುತಿಸಿ ಗೌರವಿಸಿದಾಗ ಮಾತ್ರ ಈ ಸಮಸ್ಯೆಗಳಿಗೆ ಪರಿಹಾರ ಬರುತ್ತದೆ ಎಂದು ಗಿಲ್ಮನ್ ಬಲವಾಗಿ ನಂಬಿದ್ದರು.ಈ ರೀತಿಯ ನಂಬಿಕೆಯ ಮೇಲೆ ಇಂಟರ್‌ನ್ಯಾಶನಲ್ ವೀಜೆಸ್ ಫಾರ್ ಹೌಸ್ ವರ್ಕ್ ಕ್ಯಾಂಪೇನ್ ಎಂಬ ಸಂಸ್ಥೆಯು ಉತ್ಪಾದಕ ಲೇಬರ್ ಹಾಗು ರಿಪ್ರೊಡಕ್ಟಿವ್ ಲೇಬರ್ ಎರಡನ್ನು ಸಮವಾಗಿ ಕಾಣುತ್ತಿತ್ತು. ಈ ಸಂಸ್ಥೆಯು ರಿಪ್ರೊಡಕ್ಟಿವ್ ಲೇಬರ್ ಗಳ ಶ್ರಮವನ್ನು ಉತ್ಪಾದಕ ಲೇಬರ್ ಗಳ ಕಾರ್ಮಿಕರ ಶ್ರಮದೊಂದಿಗೆ ಸರಿದೂಗಿಸಲು ಪ್ರಯತ್ನಿಸುತಿತ್ತು. ಫೆಮಿನಿಸ್ಟ್ ಕಲೆಕ್ಟಿವ್‌ನ ಸದಸ್ಯರಿಂದ ಇಟಲಿಯಲ್ಲಿ ಪ್ರಾರಂಭಿಸಲಾದ ಈ ಇಂಟರ್‌ನ್ಯಾಶನಲ್ ಕ್ಯಾಂಪೇನ್ - ಸೆಲ್ಮಾ ಜೇಮ್ಸ್, ಮರಿಯಾರೋಸಾ ಡಲ್ಲಾ ಕೋಸ್ಟಾ, ಬ್ರಿಗಿಟ್ಟೆ ಗಾಲ್ಟಿಯರ್ ಮತ್ತು ಸಿಲ್ವಿಯಾ ಫೆಡೆರಿಸಿನಂತಹ ಹಲವಾರು ಮಹಿಳೆಯರ ಗುಂಪಾಗಿದೆ[೩]. ಸಣ್ಣ ಸಂಸ್ಥೆಯಾದರು ಅಂತರಾಷ್ಟ್ರೀಯ ಗುರುತಿಸುವಿಕೆಯನ್ನು ಪಡೆದುಕೊಂಡು ಮಾರ್ಕ್ಸ್ವಾದಿ ಸ್ತ್ರೀವಾದ ಚಳುವಳಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.
ಸಮಾನ ದುಡಿಮೆಗೆ ಸಮಾನ ವೇತನ
ಬದಲಾಯಿಸಿಸಮಾನ ದುಡಿಮೆಗೆ ಸಮಾನ ವೇತನ - ಈ ಕಲ್ಪನೆಯು ಮಾರ್ಕ್ಸ್ವಾದಿ ಸ್ತ್ರೀವಾದದಲ್ಲಿ ಬಹಳ ದೊಡ್ಡ ಪಾತ್ರವನ್ನು ಹೊಂದಿದು ಈ ವಿಷಯದ ಕುರಿತು ಹಲವಾರು ಪ್ರಮುಖ ಬರಹಗಳು ಹೊರಬಂದಿವೆ.ಸಮಾನ ವೇತನದ ಕುರಿತು ೧೯೭೭ ರಲ್ಲಿ ಬ್ರಿಟಿಷ್ ಸ್ತ್ರೀವಾದಿ ಸಮಾಜಶಾಸ್ತ್ರಜ್ಞಾನಿಯಾದ ವೆರೋನಿಕಾ ಬೀಚೆಯ್ ಅವರು "ಸಂ ನೋಟ್ಸ್ ಆನ್ ಫೀಮೇಲ್ ವೇಜ್ ಲೇಬರ್" ಎಂಬ ಬರವಣಿಗೆಯನ್ನು ಪ್ರಕಟಿಸಿದರು . ಫ್ಲೋಯ ಅಂಥೀಯಸ್, ವೆರೋನಿಕಾ ಬೀಚೆಯ್ ಅವರ ಕೆಲಸವನ್ನು "ಮಾರ್ಕ್ಸ್ ಕ್ಯಾಪಿಟಲನ್ನು ಬಳಿಸಿ ಬಂದ ಬರವಣಿಗೆಗಳಲ್ಲಿ ಇದು ಉತ್ತಮವಾದ ರಚನೆ ಎಂದು" ಕರೆದರು.
ಸಾಧನೆಗಳು ಮತ್ತು ಕ್ರಿಯಾವಾದ
ಬದಲಾಯಿಸಿಮಾರ್ಕ್ಸ್ವಾದಿ ಸ್ತ್ರೀವಾದಿ ಕಾರ್ಯಕರ್ತರು ಮಹಿಳೆಯರ ದಬ್ಬಾಳಿಕೆ, ವಿಮೋಚನೆ, ವರ್ಗ ರಾಜಕೀಯ ಸಮಸ್ಯೆಗಳನ್ನು ನಿಲ್ಲಿಸಲು ಹಾಗೆಯೇ ಮಹಿಳೆಯರ ಜೀವನವನ್ನು ಅಭಿವೃದ್ಧಿಪಡಿಸಲು ಹೋರಾಡುತ್ತಿದ್ದಾರೆ .ಅವರು ಸಾಕಷ್ಟು ಟೀಕೆಗಳನ್ನು ಪಡೆದರು ಸಹ ಕಾರ್ಮಿಕ ವರ್ಗದ ಮಹಿಳೆಯರ ಕೆಟ್ಟ ಪರಿಸ್ಥಿತಿಗಳನ್ನು ಹೊರ ಜಗತ್ತಿಗೆ ತೋರಿಸಲೂ ಪ್ರಯತ್ನಿಸುತ್ತಿದ್ದಾರೆ. ಮಾರ್ಕ್ಸ್ವಾದಿ ಸ್ತ್ರೀವಾದದ ಸಿದ್ಧಾಂತವನ್ನು ಅಭಿವೃದ್ಧಿಪಡಿಸಲು ಕೊಡುಗೆಗಳನ್ನು ಸಲ್ಲಿಸಿದ ಕೆಲವು ಮಹಿಳೆಯರು - ಚಿಜುಕೊ ಯುನೊ, ಅನುರಾಧಾ ಗ್ಯಾಂಡಿ , ಕ್ಲೌಡಿಯಾ ಜೋನ್ಸ್ ಮತ್ತು ಏಂಜೆಲಾ ಡೇವಿಸ್.
ಮಾರ್ಕ್ಸ್ವಾದಿ ಸ್ತ್ರೀವಾದವು ಲ್ಯಾಟಿನ್ ಅಮೇರಿಕನ್ ರಾಷ್ಟ್ರಗಳಿಂದ ಬೆಳೆದ ಸ್ತ್ರೀವಾದಿ ಚಳುವಳಿಗಳ ಮೇಲೆ ಹೆಚ್ಚು ಪ್ರಭಾವವನ್ನು ಬೀರಿದೆ.ಅರ್ಜೆಂಟೀನಾದಲ್ಲಿ ೨೦೧೦ರಲ್ಲಿ ನಡೆದ ಸ್ತ್ರೀವಾದಿ ಚಳುವಳಿಯು ಇದರ ಒಂದು ಉದಾಹರಣೆ. ಈ ಚಳುವಳಿಯ ಮೂಲಕ ಮಾರ್ಕ್ಸ್ವಾದಿ ಸ್ತ್ರೀವಾದದ ತತ್ವಗಳನ್ನು ಬಳಸಿ ದೇಶದಲ್ಲಿ ನಡೆಯುತ್ತಿರುವ ಲಿಂಗ ಹಿಂಸಾಚಾರಕ್ಕೆ ಕಾರಣವಾದ ಅನೇಕ ಸಾಮಾಜಿಕ ಮತ್ತು ಆರ್ಥಿಕ ಅಂಶಗಳಿಗೆ ಪರಿಹಾರವನ್ನು ಹುಡುಕಲು ಆರಂಭಿಸಿದರು. ಅರ್ಜೆಂಟೀನಾದ ಸ್ತ್ರೀವಾದಿ ಸಿದ್ಧಾಂತಿ ಮತ್ತು ಚಳುವಳಿಗಾರತಿ ವೆರೊನಿಕಾ ಗಾಗೊ ಅವರು ತಮ್ಮ ಪುಸ್ತಕ, "ಫೆಮಿನಿಸ್ಟ್ ಇಂಟರ್‌ನ್ಯಾಶನಲ್: ಹೌ ಟು ಚೇಂಜ್ ಎವೆರಿಥಿಂಗ್" ನಲ್ಲಿ ಸ್ತ್ರೀಹತ್ಯೆ, ಗರ್ಭಪಾತ ಮತ್ತು ಅರ್ಜೆಂಟೀನಾದ ಲಿಂಗ-ಆಧಾರಿತ ಆರ್ಥಿಕ ಸಂಕಷ್ಟಗಳನ್ನು ನಿವಾರಿಸಲು ಸ್ಟ್ರೈಕ್‌ಗಳನ್ನು ನಡೆಸುವ ಪ್ರಾಮುಖ್ಯತೆಯ ಕುರಿತು ಬರೆದಿದ್ದಾರೆ. "ನೀ ಉಣ ಮಿನೋಸ್" ನಂತಹ ಸ್ತ್ರೀವಾದಿ ಚಳುವಳಿಗಳು ಇದೇ ರೀತಿ ಸ್ಟ್ರೈಕ್ ಗಳನ್ನು ನಡೆಸಿ ಮುನ್ನಡೆಯನ್ನು ತರಲು ಪ್ರಯತ್ನಿಸಿದೆ. ಇದರ ಪ್ರಭಾವವು ಉಕ್ರೇನ್, ರಷ್ಯಾ, ಯುನೈಟೆಡ್ ಸ್ಟೇಟ್ಸ್ ಮತ್ತು ಟ್ರಿನಿಡಾಡ್ ಹಾಗು ಟೊಬಾಗೋದಂತಹ ಇತರ ರಾಷ್ಟ್ರಗಳ ಮೇಲೆಯು ಬೀರಿತ್ತು.
ಇತರ ಸ್ತ್ರೀವಾದಿ ಸಿದ್ಧಾಂತಗಳ ಮೇಲೆ ಮಾರ್ಕ್ಸ್ವಾದಿ ಸ್ತ್ರೀವಾದದ ವಿಮರ್ಶೆಗಳು ಹಾಗು ಆಲೋಚನೆಗಳು
ಬದಲಾಯಿಸಿಬೂರ್ಜ್ವಾ ಸ್ತ್ರೀವಾದ (ಮೇಲು ವರ್ಗದ ಮಹಿಳೆಯರ ಸ್ತ್ರೀವಾದ)
ಕ್ಲಾರಾ ಜೆಟ್ಕಿನ್ ಮತ್ತು ಅಲೆಕ್ಸಾಂಡ್ರಾ ಕೊಲ್ಲೊಂಟೈ ನಂತಹ ಮಾರ್ಕ್ಸ್ವಾದಿಗಳು ದಬ್ಬಾಳಿಕೆಯನ್ನು ಹೆಚ್ಚಿಸುವ ಯಾವುದೇ ಸ್ಥಾನಮಾನವನ್ನು ಮತ್ತು ಈ ಸ್ಥಾನಗಳನ್ನು ಬಲಪಡಿಸುವ ಯಾವುದೇ ರೀತಿಯ ಸ್ತ್ರೀವಾದವನ್ನು ನಂಬುತ್ತಿರಲಿಲ್ಲ. ಮೇಲ್ವರ್ಗದ ಮಹಿಳೆಯರು ದುಡಿಯುವ ವರ್ಗದವರ ಹೋರಾಟಗಳನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳುವುದು ಕಷ್ಟ ಎಂದು ಅವರು ಹೇಳುತ್ತಿದರು. ಹೇಳಬೇಕಾದರೆ ಕೊಲ್ಲೊಂಟೈ "ಸ್ತ್ರೀವಾದ" ಎಂಬ ಪದದೊಂದಿಗೆ ತನ್ನನ್ನು ತಾನು ದೂರವಿಟ್ಟಳು , ಏಕೆಂದರೆ ಈ ಪದವು ಬೂರ್ಜ್ವಾ ಸ್ತ್ರೀವಾದದೊಂದಿಗೆ ಹೆಚ್ಚು ಸಂಬಂಧ ಹೊಂದಿದೆ ಎಂಬುದು ಆಕೆಯ ನಂಬಿಕೆ. ಕೊಲೊಂಟೈ ರಷ್ಯಾದ ಬೊಲ್ಶೆವಿಕ್ ಪಕ್ಷದಲ್ಲಿ ಪ್ರಮುಖ ನಾಯಕಿಯಾಗಿದರು .ಬಂಡವಾಳಶಾಹಿಯು ತನ್ನ ವ್ಯವಸ್ಥೆಯಲ್ಲಿ ಭಾಗವಾಹಿಸುವ ಮಹಿಳೆಯರನ್ನು ವಂಚಿಸುತ್ತದೆ ಎಂದು ಆಕೆ ನಂಬಿದಳು .ಆದ್ದರಿಂದ ಪ್ರೊಲಿಟೇರೇಟ್ (ಕೆಳ ಅಥವ ಕಾರ್ಮಿಕ ವರ್ಗ) ಮತ್ತು ಬೂರ್ಜ್ವಾ ಮಹಿಳೆಯರ ನಡುವಿನ ವ್ಯತ್ಯಾಸಗಳನ್ನು ಗುರುತಿಸಿ ಸ್ಪಷ್ಟಮಾಡುತ್ತಿದ್ದರು .ಕಾರ್ಮಿಕ ವರ್ಗದ ಮಹಿಳೆಯರು ಪುರುಷರಿಗಿಂತ ಕಡಿಮೆ ವೇತನವನ್ನು ಪಡೆಯುತ್ತಾರೆ ಆದರೂ ಮೇಲ್ವರ್ಗದವರಿಂದ್ದ ಅವಮಾನವನ್ನು ಸಹಿಸಿಕೊಳ್ಳುತ್ತಾರೆ.ಈ ರೀತಿಯ ಕಷ್ಟಗಳನ್ನು ಅಲೆಕ್ಸಾಂಡ್ರಾ ಕೊಲ್ಲೊಂಟೈ ವೈಯಕ್ತಿಕವಾಗಿ ಅನುಭವಿಸಿದ್ದರು. ಪುರುಷ ಪ್ರಧಾನವಾದ ರಾಜಕೀಯ ವ್ಯವಸ್ಥೆಯಲ್ಲಿ ಬೋಲ್ಶೆವಿಕ್ ಚಳವಳಿಯ ಮಹಿಳಾ ನಾಯಕಿಯಾಗಿ ಅವರು ಹಲವಾರು ಸಮಸ್ಯೆಗಳನ್ನು ಎದುರಿಸಿದ್ದರು. ಸಮಾಜವಾದವು ಬಂಡವಾಳಶಾಹಿಯನ್ನು ಬೇರುಸಹಿತ ಕಿತ್ತುಹಾಕಲು ಸಹಾಯ ಮಾಡುವ ಹೆಚ್ಚು "ಆಧುನಿಕ" ಸಮಾಜದ ಕಡೆಗೆ ಚಲಿಸುಲು ಇಷ್ಟಪಡುತ್ತಿದ್ದರು. ಈ ಆಧುನಿಕ ಸಮಾಜದ ಕುರಿತು ತನ್ನ ಯೋಜನೆಗಳನ್ನು ಮತ್ತು ಆಲೋಚನೆಗಳನ್ನು ಆಕೆಯ ಡೈರಿಯಲ್ಲಿ ಬರೆಯುತ್ತಿದ್ದಳು .ಆದರೂ ಆಕೆ ಮಹಿಳೆ ಎಂಬ ಕಾರಣಕ್ಕೆ ಜನರು ಕೊಲ್ಲೊಂಟೈ ಅವರನ್ನು ರಾಜಕೀಯದಲ್ಲಿ ಗುರುತಿಸಲಿಲ್ಲ.
ಲಿಬರಲಿಸಂ ಸಿದ್ಧಾಂತದ ಸ್ತ್ರೀವಾದ
ಹಲವಾರು ಮಾರ್ಕ್ಸ್ವಾದಿ ಸ್ತ್ರೀವಾದಿಯರು ಲಿಬರಲ್ ಸಿದ್ಧಾಂತದ ಸ್ತ್ರೀವಾದವು ಕಾರ್ಮಿಕ ವರ್ಗದ ಪರಿಸ್ಥಿತಿಗಳನ್ನು ಸುಧಾರಿಸಲು ಮಾರ್ಕ್ಸ್ವಾದದ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತದೆ ಎಂದು ನಂಬುತ್ತಿದರು . ಲಿಬರಲ್ ಸಿದ್ಧಾಂತವನ್ನು ಬಿಟ್ಟು ಸಮಾಜವಾದಿ ಕ್ರಾಂತಿಯ ಮೂಲಕ ಮಹಿಳೆಯರನ್ನು ಮೇಲೆ ತರಲು ಪ್ರಯತ್ನಿಸುತ್ತಿದ್ದರು. ಉದಾಹರಣೆಗೆ ಮಾರಿಯಾ ಮೈಸ್ ಅವರ "ಯುಟೋಪಿಯನ್ ಡಿಮಾಂಡ್ಸ್" ನಂತಹ ಕ್ರಾಂತಿಕಾರಿ ವಿಧಾನಗಳನ್ನು ಉಪಯೋಗಿಸುವಂತ್ತೆ ಸೂಚಿಸುತ್ತದರು[೪].
ಆದ್ದರಿಂದ ಮಾರ್ಕ್ಸ್ವಾದಿ ಸ್ತ್ರೀವಾದವು ಸ್ತ್ರೀವಾದ ಮತ್ತು ಮಾರ್ಕ್ಸ್ವಾದ, ಎರಡರ ತತ್ವಗಳನ್ನು ಹೊಂದಿದೆ. ಮಾರ್ಕ್ಸ್ವಾದಿ ಸ್ತ್ರೀವಾದವು ಕಡಿಮೆ ಸಂಬಳವನ್ನು ನೀಡುವ ಬಂಡವಾಳಶಾಹಿ ವ್ಯವಸ್ಥೆಗಳನ್ನು ಹಾಗೆಯೇ ಅವಮಾನಕೆ ಒಳಗಾಗಿಸುವ ಬೂರ್ಜ್ವಾ ಮಹಿಳೆಯರಿಂದ ಕೆಳ ವರ್ಗಕ್ಕೆ ಸೇರಿದ ಮಹಿಳೆಯರನ್ನು ರಕ್ಷಿಸಲು ಪ್ರಯತ್ನಿಸುತ್ತದೆ ಮತ್ತು ಅವರ ತೊಂದರೆಗಳ ಕುರಿತು ಇಡೀ ಜಗತ್ತಿಗೆ ಅರಿವನ್ನು ಮೂಡಿಸಲು ಪ್ರಯತ್ನಿಸುತ್ತದೆ