thumb

ಪರಿಚಯ ಬದಲಾಯಿಸಿ

ನನ್ನ ಹೆಸರು ಎಬಿನೇಸರ್.ಎ. ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಪದವಿ ಪೂ‍ವ‍೯ ಶಿಕ್ಷಣದಲ್ಲಿ ತೊಡಗುತ್ತಿದ್ದೇನೆ. ನಾನು ಜನವರಿ ೧೫, ೨೦೦೦ ದಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಜನಿಸಿದೆ. ತಂದೆ ಅಲೆಗ್ಸಾಂಡರ್, ತಾಯಿ ಎಸ್ತರ್. ನಮ್ಮ ಕುಟುಂಬದಲ್ಲಿ ನನ್ನನ್ನು ಸೇರಿಸಿ ಮೂವರು ಮಕ್ಕಳು. ಅಣ್ಣನ ಹೆಸರು ರೂಬನ್ ಮತ್ತು ಅಕ್ಕನ ಹೆಸರು ಎಲಿಸಬೆತ್.

ಬಾಲ್ಯಶಿಕ್ಷಣ ಬದಲಾಯಿಸಿ

ನಾನು ಕೃ.ರಾ.ಮಾರುಕಟ್ಟೆಯಲ್ಲಿರುವ ಸಂತ ಜೋಸೆಫರ ಶಾಲೆಯಲ್ಲಿ ನನ್ನ ಪ್ರೌಢ ಶಿಕ್ಷಣವನ್ನು ಮುಗಿಸಿದೆ. ಓದಿದ್ದು ಕನ್ನಡ ಮಾಧ್ಯಮದಲ್ಲಿ; ಆಂಗ್ಲ ಭಾಷೆಯನ್ನು ಚೆನ್ನಾಗಿ ಓದುತ್ತಿದ್ದ ಕಾರಣದಿಂದ ಶಿಕ್ಷಕರು ನನ್ನನ್ನು ಪ್ರೌಢ ಶಿಕ್ಷಣದ ವೇಳೆಯಲ್ಲಿ ಆಂಗ್ಲ ಮಾಧ್ಯಮಕ್ಕೆ ವಗಾ೯ಂತರಿಸಿದರು. ಎಲ್ಲಾ ವಿಷಯಗಳು ಆಂಗ್ಲ ಭಾಷೆಯಲ್ಲೇ ಇದ್ದುದರಿಂದ ಮೊದಲೆರಡು ವಷ೯ಗಳ ಕಾಲ ಸರಾಸರಿ ವಿದ್ಯಾಥಿ೯ಯಾಗಿ ಉಳಿದುಕೊಂಡೆ. ಶಿಕ್ಷಕರು ಕಲಿಸುವುದೆಲ್ಲವು ಒಂದು ಕಿವಿಗೆ ನುಗ್ಗಿ ಇನ್ನೊಂದು ಕಿವಿಯಿಂದ ಹೊರಹೋಗುವಂತೆ ಭಾವಿಸುತ್ತಿದ್ದೆ. ನಾವು ನಮ್ಮ ಜೀವನವನ್ನು ಹೇಗೆ ರೂಪಿಸಿಕೊಳ್ಳುತ್ತೀವಿ ಅನ್ನುವುದಕ್ಕಿಂತ ಜೀವನದಲ್ಲಿ ಬರುವ ಕಷ್ಟ-ಸಮಸ್ಯೆಗಳನ್ನು ಹೇಗೆ ಸ್ವೀಕರಿಸುತ್ತೀವಿ ಅನ್ನುವುದರ ಆಧಾರದ ಮೇಲೆ ನಮ್ಮ ಭವಿಷ್ಯತ್ ಜೀವನ ನಿಧಾ೯ರವಾಗುತ್ತದೆ.ಆದ್ದರಿಂದ ಅವುಗಳಿಗೆ ಹಿಂಜರಿಯದೆ ಪರಿಶ್ರಮದ ಸಹಾಯದಿಂದ ಅವುಗಳನ್ನು ಎದುರಿಸಿದೆ.

ಮೆಟ್ಟಿಬಂದ ಸವಾಲುಗಳು ಬದಲಾಯಿಸಿ

ಹತ್ತನೇ ತರಗತಿಯಲ್ಲಿ ಓದುತ್ತಿರುವ ವೇಳೆಗೆ ಆಕಸ್ಮಿಕವಾಗಿ ತಂದೆ ನಿಧನರಾದರು. ಆ ಸಂದಭ೯ ನನ್ನ ಜೀವನ ಮಾಗ೯ವನ್ನೆ ಉರುಳಿಸಿಬಿಟ್ಟಿತು. ಜೊತೆಗಿದ್ದ ಬಂಧುಗಳೆಲ್ಲ ಮೆಲ್ಲಗೆ ದೂರವಾದರು. ಆದರೂ ಎಲ್ಲ ಶಿಕ್ಷಕರು ನನ್ನನ್ನು ಪ್ರೇರೇಪಿಸಿದರು. ಅದರ ಫಲವಾಗಿ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದೆ. ಇಂತಹ ಫಲವನ್ನು ಮತ್ತೆ ಮತ್ತೆ ಅನುಭವಿಸಬೇಕೆಂಬ ಆಸೆ ಮನದೊಳಗೆ ಮನೆ ಮಾಡಿಕೊಂಡಿತು. ನಾನು ಕಠಿಣವೆಂದು ಭಾವಿಸಿದ್ದ ವಿಜ್ಞಾನವನ್ನು ಮುಂದಿನ ಕಲಿಕೆಗಾಗಿ ಆಯ್ದುಕೊಂಡೆ. ಕ್ರೈಸ್ಟ್ ಕಾಲೇಜಿಗೆ ಸೇರಿ ಸವ೯ತೋಮುಖ ಅಭಿವೃದ್ಧಿಯನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.

ಹವ್ಯಾಸ ಬದಲಾಯಿಸಿ

ನನಗೆ ಅಡುಗೆ ಮಾಡುವುದರಲ್ಲಿ ಹೆಚ್ಚು ಆಸಕ್ತಿ ಇರುವುದರಿಂದ ಬಿಡುವಿನ ಸಮಯದಲ್ಲಿ ವಿಧವಿಧವಾದ ತಿಂಡಿಗಳನ್ನು ತಯಾರಿಸುವುದು ನನ್ನ ವಾಡಿಕೆಯಾಗಿರುತ್ತದೆ. ಅದಲ್ಲದೆ ದೂರದರ್ಶನವನ್ನು ವೀಕ್ಙಿಸುವೆ.ಪ್ರತಿದಿನ ಕಾಲೇಜಿಗೆ ಬರುವ ಮುನ್ನ ದಿನಪತ್ರಿಕೆಯನ್ನು ತಪ್ಪದೆ ಓದುವ ರೂಢಿ ನನ್ನದು. ಸಮಯ ದೊರೆತಾಗಲೆಲ್ಲಾ ಹೊಲಿಗೆ ಯಂತ್ರದಲ್ಲಿ ಕುಳಿತು ಬಟ್ಟೆಗಳನ್ನು ಹೊಲಿಯುವುದೂ ಸಹ ನನ್ನ ಹವ್ಯಾಸದಲ್ಲೊಂದು.

ಧ್ಯೇಯ ಬದಲಾಯಿಸಿ

ನನಗೆ ಮಿಮಿಕ್ರಿ, ನಟನೆಯೆಂದರೆ ಎಲ್ಲಿಲ್ಲದ ಉತ್ಸಾಹ. ಅದಕ್ಕಾಗಿಯೇ ಪ್ರತಿವಷ೯ವೂ ಸಾಂಸ್ಕೃತಿಕ ಕಾಯ೯ಕ್ರಮಗಳಿಗಾಗಿ ಕಾಯುತ್ತಿರುತ್ತಿದ್ದೆ. ಎಷ್ಟೇ ಸವಾಲುಗಳು, ಕಷ್ಟಗಳು, ನೋವುಗಳು ಸಂಭವಿಸಿದರೂ ಕುಗ್ಗದೆ ಅವುಗಳನ್ನು ಗೆದ್ದು ಒಳ್ಳೆಯ ಶಿಕ್ಷಕನಾಗಬೇಕೆಂಬುದು ನನ್ನ ಕನಸು. ಇದುವರೆಗೂ ನನಗೆ ಸಹಾಯಹಸ್ತವನ್ನು ನೀಡಿ ನನ್ನನ್ನು ಮೇಲೆತ್ತಿದವರಿಗೆಲ್ಲಾ ನಾನೆಂದೂ ಋಣಿಯಾಗಿದ್ದೇನೆ. ತನ್ನನ್ನು ಸಾಕಿ ಸಲಹಿ ಪೋಷಿಸಿದ ತಂದೆ ತಾಯಿಯನ್ನು ಕೊನೆಯವರೆಗೂ ಸಂತೋಷವಾಗಿಟ್ಟುಕೊಂಡರೆ ಅದೇ ಈ ಜಗತ್ತಿನಲ್ಲೆ ದೊಡ್ಡ ಸಾಧನೆ ಎಂಬುದು ನನ್ನ ಅಭಿಪ್ರಾಯ. ನಾನು ಆ ಸಾಧನೆಯನ್ನು ಖಂಡಿತ ಮಾಡುತ್ತೇನೆ ಎಂಬ ಭರವಸೆ ನನ್ನಲ್ಲಿದೆ.