ಪರಿಚಯ ಬದಲಾಯಿಸಿ

ಜಗತ್ತಿನ ಖ್ಯಾತ ವ್ಯಕ್ತಿತ್ವ ವಿಕಸನ ತರಬೇತಿಯ ಸಂಸ್ಥಾಪಕರು,ಲೇಖಕರು ಆದಂತಹ ಡೇಲ್ ಕಾರ್ನೆಗಿಯವರ ಪ್ರಕಾರ "ಒಬ್ಬ ವ್ಯಕ್ತಿಗೆ ಅವನ ಹೆಸರು ಆ ಭಾ7ಷೆಯ ಅತ್ಯಂತ ಮಧುರ ಮತ್ತು ಮಹತ್ವಪೂರ್ಣ ಪದವಾಗಿರುತ್ತದೆ".ನನಗೆ 'ಪೂಜಾ' ಎಂಬುದು ಅಂತಹ ಪದ.ನನ್ನ ಹೆಸರು ಪೂಜಾ.ಆರ್.ಡಿ.ಆದರೆ ನಾನು ಶಾಲೆಯಲ್ಲಿ ಓದುತ್ತಿರುವಾಗ ನನ್ನ ಸ್ನೇಹಿತರು ಈ ಹೆಸರಿನಿಂದ ಕರೆಯುತ್ತಿರಲ್ಲಿ.ನನ್ನ ಮನೆಯಲ್ಲಿ ಸಹ ನನ್ನನ್ನು ಬೇರೆ ಹೆಸರಿನಿಂದ ಕರೆಯುತ್ತಾರೆ. ನನ್ನ ಕಾಲೇಜು ಸ್ನೇಹಿತರು ಮಾತ್ರವೇ ನನ್ನನ್ನು ಪೂಜಾ ಎಂದು ಕರೆಯುತ್ತಾರೆ.

ಕುಟುಂಬ ಬದಲಾಯಿಸಿ

 ನನ್ನ ತಂದೆ ದೇವರಾಜ್ .ಆರ್. ಕೆ. ಮತ್ತು ತಾಯಿ ಪ್ರಮೀಳ.ಹೆಚ್.ವಿ.ನನಗೆ ಮನೋಜ್ ಕುಮಾರ್ ಎಂಬ ಅಣ್ಣನಿದ್ದಾನೆ.ಅವನು ಅಭಿಯಂತ್ರಿಕ ಪದವಿಯನ್ನು ಅಭ್ಯಾಸ ಮಾಡುತ್ತಿದ್ದಾನೆ.ನಮ್ಮ ಊರು ಶಿವಮೊಗ್ಗ ಜಿಲ್ಲೆಯ ಒಂದು ಸಣ್ಣ ಹಳ್ಳಿ. ಆದರೆ ನಾನು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ನಾನು ನನ್ನ ಶಾಲಾ ಶಿಕ್ಷಣವನ್ನು ನಗರದ ಜ್ಞಾನ ಭಾರತಿ ಪ್ರೌಢಶಾಲೆಯಲ್ಲಿ ಪೂರೈಸಿದ್ದೇನೆ.ನಂತರದ ಪದವಿ ಪೂರ್ವ ವಿದ್ಯಾಭ್ಯಾಸವನ್ನು ನಗರದ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಪಡೆದಿದ್ದೇನೆ.ನಾನು ಪ್ರಸ್ತುತ ನಗರದ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಪದವಿಯ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವೆನು.ನಾನು ಭೌತಶಾಸ್ತ್ರ, ಗಣಿತ ಮತ್ತು ವಿದ್ಯುಚ್ಛಾಸ್ತ್ರದಲ್ಲಿ ಪದವಿ ನಡೆಯುತ್ತಿದ್ದೆನೆ.


ಹವ್ಯಾಸ ಬದಲಾಯಿಸಿ

    ನಾನು ನನ್ನನ್ನು ಬಿಡುವಿನ ಸಮಯದಲ್ಲಿ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಲು ಇಷ್ಟ ಪಡುತ್ತೇನೆ.ಪುಸ್ತಕ ಓದುವುದು, ಗೀಚುಕಲೆ,ಸಂಗೀತ ಕೇಳುವುದು, ಕ್ರೋಶದಿಂದ ಕಲಾಕೃತಿಗಳನ್ನು ಮಾಡುವುದು, ರಂಗೋಲಿ, ತ್ಯಾಜ್ಯದಿಂದ ಕಲಾಕೃತಿಗಳನ್ನು ಮಾಡುವುದು ಅವುಗಳಲ್ಲಿ ಕೆಲವು. ಕನ್ನಡ ಸಾಹಿತ್ಯದ ಬಗ್ಗೆ   ಅತೀವ ಆಸಕ್ತಿ ಇರುವ ನನಗೆ ವಸುಧೇಂದ್ರ ನೆಚ್ಚಿನ ಲೇಖಕ.ನನಗೆ ಚಿಕ್ಕಂದಿನಿಂದಲೇ ದಿನ ಪತ್ರಿಕೆಗಳನ್ನು ಓದುವ ಅಭ್ಯಾಸವಿತ್ತು.ಇದೇ ಮುಂದೆ ಸಾಹಿತ್ಯ ಪ್ರೇಮಕ್ಕೂ ಕಾರಣವಾಯಿತು ಎಂಬುದು ನನ್ನ ನಂಬಿಕೆ.

ಸಾಧನೆಗಳು ಬದಲಾಯಿಸಿ

   ನಾನು ಹತ್ತನೆಯ ತರಗತಿಯಲ್ಲಿ ಶೇಕಡ ತ್ತೊಂಬತ್ತೊಂದು ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದೇನೆ.ಹಾಗೂ ನಾನು ಹತ್ತನೆಯ ತರಗತಿಯಲ್ಲಿ ಕನ್ನಡ, ವಿಜ್ಞಾನ, ಗಣಿತ ಮತ್ತು ಹಿಂದಿ ವಿಷಯಗಳಲ್ಲಿ ತೊಂಬತ್ತಾರಕಿಂತಲೂ ಹೆಚ್ಚಿನ ಅಂಕ ಪಡೆದಿದ್ದೇನೆ.ನಾನು ನನ್ನ ದ್ವಿತೀಯ ಪಿ.ಯು.ಸಿ  ತರಗತಿಯಲ್ಲಿ ಶೇಕಡ ಎಂಬತ್ತೊಂದರಷ್ಟು ಅಂಕ ಪಡೆದಿದ್ದೀನೆ.ನಾನು ಶಾಲಾ-ಕಾಲೇಜಿನಲ್ಲಿ ಹಲವು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ, ಬಹುಮಾನ ಪಡೆದಿದ್ದೇನೆ.ನಾನು ರಂಗೋಲಿ ಮತ್ತಿತರ ಕಲಾಕೃತಿಗಳ ಸ್ಪರ್ಧೆಯಲ್ಲಿಯೂ ಭಾಗವಹಿಸಿ ಬಹುಮಾನ ಪಡೆದಿದ್ದೇನೆ.ನಾನು ನನ್ನ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕವನ ಸ್ಪರ್ಧೆಯಲ್ಲಿ ಇಡೀ ಕಾಲೇಜಿನಲ್ಲಿ ನಾನು  ದ್ವಿತೀಯ ಬಹುಮಾನವನ್ನು ಪಡೆದಿದ್ದೇನೆ.
    ಇಷ್ಟು ನನ್ನ ಬಗೆಗಿನ ಕಿರು ಪರಿಚಯ.ಇನ್ನು ಸ್ವಭಾವದ  ಬಗ್ಗೆ ಹೇಳಬೇಕೆಂದರೆ ನಾನು ಅಪರಿಚಿತರೊಂದಿಗೆ ಹೆಚ್ಚು ಬೇಗ ಸ್ನೇಹ ಬೆಳಸುವುದಿಲ್ಲ.ಆದರೆ ಒಮ್ಮೆ ಸ್ನೇಹಿತರಾದರೆ ಸ್ನೇಹವನ್ನು ಅತ್ಯುತ್ತಮ ರೀತಿಯಲ್ಲಿ ನಿಭಾಯಿಸುತ್ತೇನೆ.
     ನಾನು ನನ್ನ ಜೀವನದಲ್ಲಿ ಗುರು ಮತ್ತು ಗುರಿಗೆ ಅತ್ಯಂತ ಹೆಚ್ಚಿನ ಮಹತ್ವ ನೀಡುತ್ತೇನೆ.

ನನ್ನ ಪ್ರಕಾರ ನಾನು ನನ್ನ ಜೀವನದಲ್ಲಿ ಇದುವರೆಗೂ ಅತ್ಯಂತ ಮಹತ್ವಪೂರ್ಣ ಸಾಧನೆಯನ್ನು ಇನ್ನು ಮಾಡಿಲ್ಲ.ಆದರೆ ನಾನು ಅಂತಹ ಸಾಧನೆಯನ್ನು ಮಾಡುವ ಛಲವನ್ನು ಹೊಂದಿರುವೆ.ನಾನು ಶೀಘ್ರವಾಗಿ ಆ ಕಾರ್ಯದಲ್ಲಿ ಯಶಸ್ವಿಯಾಗುತ್ತೇನೆಂದು ನಂಬಿದ್ದೇನೆ.