ಲಿಕಿತ್.ಎ೦
christite
ಜನನ೧೮.೦೯.೨೦೧೯
ಮದುಗಿರಿ

ನಮಸ್ತೆ ನನ್ನ ಹೆಸರು ಲಿಕಿತ್.ಎ೦ .ನನ್ನ ತ೦ದೆ ತಿಮ್ಮೇ ಗೌಡ ಮತ್ತು ನನ್ನ ತಾಯಿ ಭಾಗ್ಯ  .ನಾನು ೧೮ ಸೆಪ್ಟೆಂಬರ್ ೨೦೦೦ ರಂದು ತುಮಕೂರು ಜಿಲ್ಲೆ ಮಧುಗಿರಿ ಜನಿಸಿದ್ದೆನೆ.ನಾನು ೭ ವರ್ಷದವನಾಗಿದ್ದಾಗ ನಾವು ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದೇವೆ.

                        

ಶಿಕ್ಷಣ

ಬದಲಾಯಿಸಿ

ನಾನು ಮಯುರಾ ಸಾರ್ವಜನಿಕ ಶಾಲೆಯಲ್ಲಿ(ಕನ್ನಡ ಮಾಧ್ಯಮ) ೪ನೇ ವಯಸ್ಸಿನಲ್ಲಿ ಅಧ್ಯಯನ ಮಾಡಲು ಪ್ರಾರಂಭಿಸಿದೆ. ನಂತರ ನಾನು ಬೆಂಗಳೂರಿಗೆ ಸ್ಥಳಾಂತರಗೊ೦ಡೆ.ನಂತರ ನಾನು ಮಾರುತಿ ನಗರದಲ್ಲಿನ ಪದ್ಮಾವತಿ ಸಾರ್ವಜನಿಕ ಶಾಲೆಯಲ್ಲಿ(ಇಂಗ್ಲೀಷ್ ಮಧ್ಯಮ) ೨ ನೇ ತರಗತಿಗೆ ಸೇರಿಕೊಂಡೆ. ಆರಂಭದಲ್ಲಿ ನನಗೆ ಕಷ್ಟವಾಯಿತು ತದ ನ೦ತರ ಹೊಂದುಕೊ೦ಡೆ.ಕೆಲವು ಸಮಸ್ಯೆಗಳಿಂದಾಗಿ ನನ್ನ ಶಾಲೆಯನ್ನು ಬದಲಿಸಲು ಒತ್ತಾಯಿಸಲಾಯಿತು. ಆದ್ದರಿಂದ ನಾನು ಕಾರ್ಮೆಲ್ ಗಾರ್ಡನ್ ಪಬ್ಲಿಕ್ ಶಾಲೆಯಲ್ಲಿ ನನ್ನ ಅಧ್ಯಯನವನ್ನು ಮುಂದುವರಿಸಿದೆ. ನಾನು ಆ ಶಾಲೆಯಲ್ಲಿ ಅಧ್ಯಯನ ಮಾಡಿದ್ದೇನೆ ಎಂದು ಹೇಳುಲು ಹೆಮ್ಮೆಪಡುತ್ತೆನೆ.ಅಲ್ಲದೆ 10 ನೇ ತರಗತಿಯಲ್ಲಿ ನಾನು ಉತ್ತಮ ಶೇಕಡಾವಾರು ಪ್ರಮಾಣವನ್ನು ಹೊಂದಿದ್ದೇನೆ. ನನ್ನ ನ೦ತರದ ವಿದ್ಯಾಭ್ಯಾಸವನ್ನುನಾನು ಸೆ೦ಟ್ ಫ್ರಾನ್ಸಿಸ್ ಪಿಯು ಕಾಲೇಜಿನಲ್ಲಿ ವಿಜ್ಞಾನ ಪ್ರಾಮುಖ್ಯತೆಯಲ್ಲಿ ನನ್ನ ಈಗಿನ ಪ್ರಸ್ತುತ ವಿದ್ಯಾಭ್ಯಾಸವನ್ನು ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ .ಬಿ.ಎಸ್.ಸಿ ಮಾಡುತ್ತಿದ್ದೇನೆ.


ನನಗೆ ಚಿಕ್ಕಂದಿನಿಂದಲೂ ಕ್ರೀಡೆ ಮೇಲೆ ಬಹಳಷ್ಟು ಆಸಕ್ತಿ. ಶಾಲಾ ಕಾಲೇಜುಗಳಲ್ಲಿ ನಡೆಯುತ್ತಿದ್ದ ಎಲ್ಲ ರೀತಿಯ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಅಲ್ಲದೆ ನಾನು ವಾಲಿಬಾಲ್ , ಕಬ್ಬಡ್ಡಿ ನಂತಹ ಸ್ಪರ್ಧೆಗಳಲ್ಲಿ ಪರಿಣತಿ ಪಡೆದಿದ್ದೇನೆ. ನನಗೆ ಶಾಲೆ ಕಡೆಯಿಂದ ಉತ್ತಮ ಕ್ರೀಡಾಪಟು ಎಂಬ ಪ್ರಶಸ್ತಿ ಕೊಟ್ಟು ಸನ್ಮಾನಿಸಿದ್ದಾರೆ.ಮತ್ತು ನಾನು ವಾಲಿಬಾಲ್ ಎಂಬ ಕ್ರೀಡೆಯಲ್ಲಿ ಒಂದು ಬಾರಿ ವಲಯ ಮಟ್ಟದಲ್ಲಿಮತ್ತು ಎರಡು ಬಾರಿ ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ್ದೇನೆ. ಅದರಲ್ಲಿ ನಾನು ಒಂದು ಬಾರಿ ಜಿಲ್ಲಾ ಮಟ್ಟದ ವಾಲಿಬಾಲ್ ಕ್ರೀಡೆ ಸ್ಪರ್ಧೆಯಲ್ಲಿ ಗೆಲುವು ಪಡೆದಿದ್ದೇನೆ.ಈ ಕ್ರೀಡಾ ವಿಭಾಗದಲ್ಲಿ ನನಗೆ ಬಹಳಷ್ಟು ಪದಕಗಳು ಮತ್ತು ಪ್ರಶಸ್ತಿಗಳು ದೊರೆತಿವೆ.ಅಲ್ಲದೆ ನಾನು ಬಹಳಷ್ಟು ಅಥ್ಲೆಟಿಕ್ಸ್ ಪಂದ್ಯಗಳಲ್ಲಿ ಭಾಗವಹಿಸಿದ್ದೇನೆ..ಮತ್ತು ನನ್ನ ಹೆಚ್ಚು ಸಮಯವನ್ನು ನಾನು ಬೈಕ್ ಮತ್ತು ಕಾರ್ ರೈಡಿಂಗ್ ನಲ್ಲಿ ಕಳೆಯುತ್ತೇನೆ ಇದರಲ್ಲಿ ನನಗೆ  ಸ್ವರ್ಗ ಸುಖ ದೊರೆಯುತ್ತದೆ.


ಹವ್ಯಾಸಗಳು

ಬದಲಾಯಿಸಿ

ನನಗೆ ಕಥೆ ಪುಸ್ತಕಗಳನ್ನು ಓದುವುದು ಚಿತ್ರ ಬಿಡಿಸುವುದು ಮತ್ತು ನನ್ನ ಬಿಡುವಿನ ಸಮಯದಲ್ಲಿ ಆಟವಾಡುವುದು ನನ್ನ ಹವ್ಯಾಸವಾಗಿತ್ತು ಹವ್ಯಾಸಗಳನ್ನು ನಾನು ಬಹಳ ಇಷ್ಟಪಟ್ಟು ಮನಸ್ ಪೂರ್ತಿ ಯಿಂದ ಮಾಡುತ್ತೇನೆ. ನನಗೆ ಕನ್ನಡದ ಮಹಾ ಕವಿಗಳಲ್ಲಿ ಒಬ್ಬರಾದ ಅಂತಹ ದಾರ ಬೇಂದ್ರೆಯವರು ಬಹಳ ಅಚ್ಚುಮೆಚ್ಚು ಮತ್ತು ಅವರ ಪುಸ್ತಕಗಳನ್ನು ಓದಲು  ಇಚ್ಚಿಸುತ್ತೇನೆ.. ಮತ್ತು ನನಗೆ ಹಾಡುಗಾರಿಕೆಯಲ್ಲಿ ಬಹಳ ಆಸಕ್ತಿ ಇದೆ. ಅದರಲ್ಲೂ ಜಾನಪದ ಗೀತೆಗಳನ್ನು ಕೇಳಲು ಬಹಳಷ್ಟು ಇಚ್ಚಿಸುತ್ತೇನೆ....‌‌ನನಗೆ ಜೀವನದಲ್ಲಿ ಎ.ಪಿ.ಜೆ ಅಬ್ದುಲ್ ಕಲಾಂ ರವರು ಆದರ್ಶ ವ್ಯಕ್ತಿ ಯಾಗಿದ್ದು ಅವರಂತೆ ದೊಡ್ಡ ಮನುಷ್ಯನಾಗಬೇಕು ಎಂಬುದು ನನ್ನ ಆಸೆ.... ಅವರ ತತ್ವಗಳನ್ನು ನಾನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಇಚ್ಛಿಸುತ್ತೇನೆ. ನಾನು ಅವರನ್ನು ಒಂದು ಬಾರಿ ಮುಖ ಮುಖಿ ಭೇಟಿಯಾಗಿದ್ದೇನೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ...


ನಾನು ನನ್ನ ಮತ್ತು ಮನೆಯ ಸಣ್ಣಪುಟ್ಟ ಖರ್ಚುಗಳನ್ನು ನೋಡಿಕೊಳ್ಳಲು ಅಲ್ಪಾವಧಿಯ ಕೆಲಸ ಮಾಡುತ್ತೇನೆ. ನಾನು ಜೀವನದಲ್ಲಿ ಜವಾಬ್ದಾರಿಯುತ ಕೆಲಸವನ್ನು ನಿರ್ವಹಿಸುತ್ತಿದೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ.


ಈಗ ನನ್ನ ಪ್ರಸ್ತುತ ವಿದ್ಯಾಭ್ಯಾಸವನ್ನು ಒಳ್ಳೆಯ ಅಂಕಗಳ ಮೂಲಕ ಸಂಪೂರ್ಣಗೊಳಿಸಿ ಯಾವುದಾದರೂ ಒಳ್ಳೆಯ ಸರ್ಕಾರಿ ಕೆಲಸಕ್ಕೆ ಆಯ್ಕೆಗೊಂಡು ಸಮಾಜಸೇವೆ ಮಾಡಬೇಕೆಂಬುದು ನನ್ನ ಆಸೆ ಯಾಗಿದ್ದು. ಜೀವನದಲ್ಲಿ ಒಳ್ಳೆಯ ಆದರ್ಶಗಳನ್ನು ರೂಢಿಸಿಕೊಂಡು ಆದರ್ಶ ವ್ಯಕ್ತಿಯಾಗಿ ಬಾಳಬೇಕೆಂಬುದು ನನ್ನ ಜೀವನದ ಗುರಿಯಾಗಿದೆ.