ಸಂದೇಶಾ


ನನ್ನ ಹೆಸರು ಸಂದೇಶ ಎಚ್. ಎಮ್. ನಾನು ಮಾರ್ಚ್ ೧೫ರಂದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕು ಹಳೇಬೀಡಿನಲ್ಲಿ ಜನಿಸಿದೆ. ತಂದೆಯ ಹೆಸರು ಎಚ್.ಬಿ.ಮೋಹನ್ ಮತ್ತು ತಾಯಿ ದಿವ್ಯ. ನನಗೊಬ್ಬ ಅಣ್ಣನಿದ್ದಾನೆ ಅವನ ಹೆಸರು ಸಂತೋಷ್ ಎಚ್.ಎಮ್.

ಆಸಕ್ತಿ ಕ್ಷೆತ್ರಗಳು:

ಬದಲಾಯಿಸಿ

ನೃತ್ಯ ವೆಂದರೆ ನನಗೆ ಆಸಕ್ತಿ ಹೆಚ್ಚು. ಪ್ರತಿ ವರುಷದ ಕೊನೆಯಲ್ಲಿ ಬರುವ ಶಾಲಾ ವಾರ್ಷಿಕೋತ್ಸವದಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದೆ. ಪ್ರೌಢ ಶಿಕ್ಷಣ ಪಡೆಯುವ ಅವಧಿಯಲ್ಲಿ ಕ್ರಿಕೇಟ್ ಕ್ರೀಡೆಯ ಮೇಲೆ ಆಸಕ್ತಿ ಹುಟ್ಟಿತು. ನಂತರ ಕ್ರಿಕೇಟ್ ತರಬೇತಿ ಪಡೆಯಲು ಪ್ರಾರಂಭಿಸಿದೆ. ಆಗ ಕೊಂಚ ಓದಿನೆಡೆ ಗಮನ ಕಮ್ಮಿಯಾಯಿತು. ಜಿಲ್ಲಾ ಮತ್ತು ರಾಜ್ಯ ಮಟ್ಟದ ಕ್ರಿಕೇಟ್ ತಂಡಗಳಿಗೆ ಆಯ್ಕೆ ಆಗಿ ಪಂದ್ಯಗಳಲ್ಲಿ ಯಶಸ್ವೀ ಪ್ರದರ್ಶನ ನೀಡಿದೆ. ಈಗ ನಾಟಕದಲ್ಲಿ ಆಸಕ್ತಿ ಮೂಡಿರುವ ಕಾರಣ ಕನ್ನಡ ನಾಟಕ ಸಂಘಕ್ಕೆ ಸೇರಿಕೊಂಡಿದ್ದೇನೆ. ಇಲ್ಲಿಯವರೆಗೆ ಮೂರು ನಾಟಕ ಪ್ರದರ್ಶನ ನಿಡಿದ್ದೇನೆ. ಇದರೊಂದಿಗೆ ಮತ್ತೆರಡು ನಾಟಕಗಳಿಗೆ ತಯಾರಿ ನೆಡೆಸುತ್ತಿದ್ದೇವೆ.

ಶಿಕ್ಷಣ:

ಬದಲಾಯಿಸಿ

ನಾನು ಒಂದನೇ ತರಗತಿ ಓದುವಾಗ ನನ್ನ ವ್ಯಾಸಂಗಕ್ಕಾಗಿ ದಾವಣಗೆರೆ ಜಿಲ್ಲೆಗೆ ಬಂದೆ. ಆಲ್ಲಿ ಪ್ರಾಥಮಿಕ ವ್ಯಾಸಂಗವನ್ನು ಎಸ್.ಬಿ.ಎಮ್.ಎಸ್.ಎಮ್ ಶಾಲೆಯಲ್ಲಿ ಮುಗಿಸಿದೆ.ಆಲ್ಲಿ ಓದಿನಲ್ಲೂ ಮುಂದಿದ್ದು, ಬಹಳ ಲವಲವಿಕೆಯಿಂದ ಕೂಡಿ ಯೆಲ್ಲ ವಿಧದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆ. ಶಾಲೆಗೆ ನಾಯಕನಾಗಿ ಎರಡು ವರುಷ ಕಾರ್ಯ ನಿರ್ವಹಿಸಿದೆ. ನಾನೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ನಾನು ಏಳನೇ ತರಗತಿಯ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾದೆ.

ನಾನು ದಾವಣಗೆರೆಯ ಬಾಪೂಜಿ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪಡೆದೆ. ದಿನಗಳು ಉರುಳಿದಂತೆ ೧೦ ನೇ (ಸಿ. ಬಿ.ಎಸ್.ಸಿ) ತರಗತಿಯ ಪರೀಕ್ಷೆ ಹತ್ತಿರ ಬಂದಂತೆ ಓದಿನ ಕಡೆಗೆ ಹೆಚ್ಚು ಸಮಯ ಕೊಡಲು ಆರಂಭಿಸಿದೆ. ಪರೀಕ್ಷೆಯಲ್ಲಿ ಶೇಖಡ ೭೯ ರಷ್ಟು ಅಂಕಗಳನ್ನು ಪಡೆದೆ.

ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ಅಥಣಿ ಪದವಿ ಪೂರ್ವ ಕಾಲೇಜಿನಲ್ಲಿ, ವಾಣಿಜ್ಯ ಶಾಸ್ತ್ರದಲ್ಲಿ ಪಡೆದೆ.ಮೊದಲನೇ ವರುಷದಲ್ಲಿ ಕಾಲೇಜಿಗೆ ಹೆಚ್ಚು ಹೋಗುತ್ತಿರಲಿಲ್ಲ. ಅಪರೂಪಕ್ಕೆ ಹೋದರೂ ಎಲ್ಲ ಬೋಧಕರಿಗೂ ನಾನು ಅಚ್ಚುಮೆಚ್ಚು. ಯಾವುದೇ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಕೊನೆಗೆ ಪರೀಕ್ಷೆ ಹತ್ತಿರ ಬಂದಾಗ ಸ್ವಾಧ್ಯಾಯದಿಂದ ಶೇಖಡ ೮೮ ರಷ್ಟು ಅಂಕಗಳನ್ನು ಪಡೆದೆ. ನಂತರ ದ್ವಿತೀಯ ಪಿ.ಯು.ವಿ ನಲ್ಲಿ ನಮ್ಮ ಕಾಲೇಜಿನ ಬೊಧಕ ವರ್ಗದವರು ಉತ್ತಮ ಮಾರ್ಗದರ್ಶನ ನೀಡಿದರು. ಹಿಂದಿನ ವರುಷಗಳ ಪ್ರಶ್ನೆಪತ್ರಿಕೆಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಸಹಾಯಕವಾದವು. ಕೊನೆಗೆ ಪರೀಕ್ಷೆಯಲ್ಲಿ ಶೇಖಡ ೯೫ ಅಂಕಗಳನ್ನು ಪಡೆದೆ. ಅದರಲ್ಲೂ ಲೆಕ್ಕಶಾಸ್ತ್ರ ಮತ್ತು ವ್ಯಾಪಾರ ವಿಷಯಗಳಲ್ಲಿ ನೂರಕ್ಕೆ ನೂರು ಪಡೆದೆ.ನನ್ನ ಉತ್ತಮ ಸಾಧನೆಗಳನ್ನು ಗುರುತಿಸಿ ಅನೇಕ ಪ್ರತಿಭಾ ಪುರಸ್ಕಾರಗಳು ಸಂದವು.

ಪದವಿ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದು ಪ್ರಸಿದ್ಧವಾದ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ದೊರಕಿತು. ವಿಶ್ವವಿದ್ಯಾಲಯದ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯ ಹಿಡಿಯಿತು. ಒಳ್ಳೆಯ ಸ್ನೇಹಿತರು ದೊರಕಿದರು. ಕನ್ನಡವ ನ್ನು ಬಹಳ ಪ್ರೀತಿಸುವ ನಾನು, ದೈನಂದಿನ ಬಳಕೆಯಲ್ಲಿ ಕನ್ನಡವನ್ನು ಪ್ರಚಾರಿಸಲು, ಕನ್ನಡ ನಾಟಕ ಸಂಘಕ್ಕೆ ಸೇರಿಕೊಂಡೆ. ದಿನ ಕಳೆದಂತೆ ಬೆಂಗಳೂರಿನ ಸದ್ದು ಗದ್ದಲ, ಆಟ ಓಟ ಗಳಿಗೆ ಹೊಂದಿಕೊಳ್ಳುತಾ, ಜೇವನ ಸಾಗಿಸುತ್ತಿದ್ದೇನೆ.