1810260nagi
Nagesh | |
---|---|
ಪರಿಚಯ:
ಬದಲಾಯಿಸಿಎಲ್ಲರಿಗೂ ನಮಸ್ಕಾರಗಳು, ೦೨/೦೨/೨೦೦೦ ರಂದು ಭದ್ರಾವತಿ ನಗರದ ವಿ.ಐ.ಎಸ್.ಎಲ್ ಆಸ್ಪತ್ರೆಯಲ್ಲಿ ೧೦:೨೮ ರ ಸಮಯದಲ್ಲಿ ನನ್ನ ಜನನವಾಯಿತು. ನನ್ನ ಬಾಲ್ಯದ ಹೆಸರು ಬೆನಕೇಶ ಡಿ.ಪಿ. ನನ್ನ ಬಾಲ್ಯದ ದಿನಗಳು ಬಹಳ ಚೆನ್ನಗ್ಗಿ ಇತ್ತು . ನಾನು ಒಂದು ವರುಷ ಏರುವಾಗ ನಾನು ಕಾಶ್ಮೀರಿ ಸೇಬಿನಂತೆ ಇದ್ದೆ ಎಂದು ನನ್ನ ಸಂಬಂಧಿಕರು ಹೇಳುತ್ತಿದ್ದರು.
ಬೆನಕೇಶ ಎಂಬ ಹೆಸರನ್ನು ನನ್ನ ತಾತ ಇಟ್ಟಿದ್ದರು . ಆಗ ನಮ್ಮ ಮನೆಯಲ್ಲಿ ಆರು ಮಂದಿ ಇದ್ದರು , ನನ್ನ ತಾತ ಮನೆಯ ಹಿರಿಯ ವ್ಯಕ್ತಿ , ಅಜ್ಜಿ ,ನನ್ನ ತಂದೆ ,ತಾಯಿ ,ಅಕ್ಕ ಮತ್ತು ನಾನು . ನನ್ನ ತಂದೆಯ ಹೆಸರು ಪ್ರಭಾಕರ ಡಿ.ಜಿ. ತಾಯಿಯ ಹೆಸರು ರೇಣುಕಾ ಕೆ.ಏನ್. ನಾನು ಬಹಳ ಪುಣ್ಯ ಮಾಡಿದ್ದೇನೆ ಇಂಥ ಒಳ್ಳೆಯ ತಂದೆ ತಾಯಿ ಪಡೆಯಲು . ಇವರು ಪುತ್ರನಾಗಿ ಜನಿಸಿದ್ದೇನೆ ಎಂದು ನನಗೆ ಬಹಳ ಸಂತೋಷ ಮತ್ತು ಹೆಮ್ಮೆಇದೆ. ನನ್ನ ಮೂರನೇ ವಯಸ್ಸಿನಲ್ಲಿ ನಾನು ಶಾಲೆಗೆ ಹೋಗಲು ಶುರು ಮಾಡಿದೆ,
ಶಿಕ್ಷಣ:
ಬದಲಾಯಿಸಿಎಲ್.ಕೆ.ಜಿ ಮತ್ತು ಯು.ಕೆ.ಜಿ ವಿದ್ಯಾಭ್ಯಾಸವನ್ನು ಹಾಗು ಒಂದನೇ ತರಗತಿ ಇಂದ ಹತ್ತನೇ ತರಗತಿಯವರೆಗೂ ಸಂತ ಚಾರ್ಲ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಗಿಸಿದೇ . ನನ್ನ ಶಾಲೆಯ ದಿನಗಳು ಬಹಳ ಸೊಗಸಾಗಿತ್ತು. ನಾನು ಮೊದಲಿನಿಂದಲೂ ಒಳ್ಳೆಯ ಅಂಕಗಳನು ಗಳಿಸುತ್ತಾ ಬಂದಿದ್ದೇನೆ. ನಾನು ಆರನೇ ತರಗತಿ ಇರುವಾಗ ಖೋಖೋ ಕ್ರೀಡೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಶಸ್ತಿ ಗಳಿಸಿದ್ದೇನೆ. ಕೆಲವು ಕಾರಣದಿಂದ ನಾನು ಖೋಖೋ ಆಡುವುದನ್ನು ಬಿಟ್ಟು ಕ್ರಿಕೆಟ್ ಆಡಲು ಶುರು ಮಾಡಿದೇ ,
ನನ್ನ ಸತತ ಪ್ರಯತ್ನದಿಂದ ಕ್ರಿಕೆಟ್ ಆಟವನು ಬಹಳ ಚೆನ್ನಾಗಿ ಆಡಿ ಜಿಲ್ಲೆ ಹಾಗು ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿದ್ದೇನೆ.
ಕ್ರಿಕೆಟ್ ಆಟದ ಜೊತೆಗೆ ಓದಿನ ವಿಷಯಕ್ಕೂ ಕೂಡ ಯಾವುದೇ ರೀತಿಯ ತೊಂದರೆ ಹಾಗದ ಹಾಗೆ ಮಾಡುವುದು ನಿಜವಾಗಿಯೂ ಕಷ್ಟದ ಕೆಲಸವಾಗಿತ್ತು. ಆದರೆ ನನ್ನ ತಂದೆ ಹಾಗು ತಾಯಿಯ ಸಹಾಯದಿಂದ ಎರಡಕ್ಕೂ ಸಮನಾದ ಸಮಯವನ್ನು ಮೀಸಲು ಎಡುವುದು ಸಾದ್ಯವಾಯಿತ್ತು. ಈ ವಿಷಯದಲ್ಲಿ ನನ್ನ ತಂದೆ ತಾಯಿಯವರಿಗೆ ಎಷ್ಟು ಧನ್ಯವಾದಗಳ್ಳನ್ನು ಹೇಳಿದರು ಸಾಲದು .
ಓದಿದನಲ್ಲೂ ಕೂಡ ಯಾರಿಗೂ ಕಡಿಮೆ ಇಲ್ಲ ಎಂಬಂತೆ ಓದಿ ನಾನು ನನ್ನ ಹತ್ತನೇ ತರಗತಿಯಲ್ಲಿ ಶೇಕಡಾ ೯೩ರಷ್ಟು ಅಂಕಗಳ್ಳನು ಗಳಿಸಿದೆ. ೯೩ ರಸ್ತು ಅಂಕ ಗಳಿಸುವುದು ಸುಲಭದ ಮಾತಾಗಿರಲಿಲ್ಲ. ಆದರೂ ನನ್ನ ಸತತ ಪ್ರಯತ್ನದಿಂದ ಮಾತ್ರ ಎದು ಸಾಧ್ಯವಾಯಿತು.
ಹತ್ತನ್ನೆ ತರಗತಿ ನಂತರ ನಾನು ನನ್ನ ಪದವಿ ಪೂರ್ವ ಶಿಕ್ಷಣಕ್ಕೆ ವಾಣಿಜ್ಯ ವಿಷಯವನ್ನು ಆರಿಸಿಕೊಂಡೆ.
ನನ್ನ ಪದವಿ ಪೂರ್ವ ವ್ಯಾಸಂಗವನ್ನು ಆಚಾರ್ಯ ಪದವಿ ಪೂರ್ವ ಶಿಕ್ಷಣ ಸಂಸ್ಥೆಯಲ್ಲಿ ಮಾಡಿದೆ.
ನನ್ನ ಪದವಿ ಶಿಕ್ಷವು ಕ್ರೈಸ್ಟ್ ಅಂತ ಒಳ್ಳೆಯ ಸಮಸ್ತೆ ಅಲ್ಲಿ ಮಾಡಬೇಕು ಎಂಬ ಉದ್ದೇಶವನ್ನು ತಲೆಯಲ್ಲಿ ಸದಾ ಇಟ್ಟುಕೊಂಡಿದ್ದೆ.
ನನ್ನ ಸತತ ಪ್ರಯತ್ನದಿಂದ ಹಾಗು ಒಳ್ಳೆಯ ಮನಸ್ಸಿನಿಂದ ನನ್ನ ಪದವಿ ಪೂರ್ಣ ಶಿಕ್ಷಣವನ್ನು ವ್ಯಾತ್ಯಾಸ ಶೇಣಿಯ ಅಂಕಗಳನ್ನು ಗಳಿಸಿ ಮುಗಿಸಿದೆ.
ಆ ದೇವರ ಆಶಯ ಹಾಗು ನನ್ನ ಸತತ ಪ್ರಯತ್ನದ ಅಂಕಗಳಿಂದ ಈಗ ನಾನು ನನ್ನ ಇಚ್ಚೆಯಂತೆ ಕ್ರೈಸ್ಟ್ ಪದವಿ ಶಿಕ್ಷಣದಪ್ಪಗಿನ ಅಕ್ಷರ ಸಂಸ್ಥೆಯಲ್ಲಿ ವಾಣಿಜ್ಯ ವಿಷ್ಯದಲ್ಲಿ ಪದವಿಯನ್ನು ಪಡೆಯುತ್ತಿದ್ದೇನೆ.
ನನಗೆ ಶಾಲೆಯಲ್ಲಿ ಬಹಳ ಮೆಚ್ಚುಗೆಯಾದ ವಿಷಯವೇನೆಂದರೆ ಗಣಿತ, ಆದರೆ ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ಪಡೆಯುತ್ತಿರುವಾಗ ಅರ್ಥಶಾಸ್ತ್ರ ವಿಷಯದಲ್ಲಿ ಬಹಳ ಆಸಕ್ತಿ ಮೂಡಿತು. ನನ್ನ ನೆಚ್ಚಿನ ತಿನಿಸು ರಾಗಿ ಮುದ್ದೆ ಹಾಗು ನುಗ್ಗೆಕಾಯಿ ಸಾರು. ನನ್ನ ನೆಚ್ಚಿನ ಸಿನಿಮಾ ನಾಯಕ ಪುನೀತ್ ರಾಜಕುಮಾರ್ ಹಾಗು ನನ್ನ ನೆಚ್ಚಿನ ನಾಯಕಿ ಸಮಂತಾ.
ಹವ್ಯಾಸಗಳು:
ಬದಲಾಯಿಸಿನನ್ನ ನೆಚ್ಚಿನ ಕ್ರೀಡೆ ಕ್ರಿಕೆಟ್. ನನ್ನ ನೆಚ್ಚಿನ ಜಾಗ ಕರ್ನಾಟಕದಲ್ಲಿನ ಪ್ರೇಕ್ಷಣೀಯ ಸ್ಥಳಗಳು. ನನ್ನ ಮೇಲೆ ಪ್ರಭಾವ ಬೀರಿದ ವ್ಯಕ್ತಿ ಕರ್ನಾಟಕದ ಬಹಳ ಪ್ರಾಮಾಣಿಕ ಪೊಲೀಸ್ ಅಧಿಕಾರಿ ರವಿ ಚನ್ನಣ್ಣವರ್ . ನನ್ನ ನೆಚ್ಚಿನ ಬೈಕ್ ಡ್ಯೂಕಟ್ಟಿ ಪಣಗಿಲೆ ೧೧೯೯ ಹಾಗು ನನ್ನ ನೆಚ್ಚಿನ ಕಾರ್ ಆಡಿ ಅ೭. ನನ್ನ ನೆಚ್ಚಿನ ಚಲನಚಿತ್ರ ರಾಜಕುಮಾರ ಹಾಗು ರಾಕಿಂಗ್ ಸ್ಟಾರ್ ಯಶ್ ಅಭಿನಯಧ ಕೆ.ಜಿ.ಎಫ್. ನನ್ನ ಮೆಚ್ಚಿನ ಕಂಪನಿ ಆಪಲ್.
ನನ್ನ ಜೀವನದಲ್ಲಿ ನಾನು ಬಹಳ ದೊಡ್ಡ ವ್ಯಕ್ತಿಯಾಗಿ ನನ್ನ ತಂದೆ ತಾಯಿಯನು ಚೆನ್ನಾಗಿ ನೋಡಿಕೊಂಡು ಅವರ ಜೊತೇನೆ ಇದ್ದುಕೊಂಡು ಅವರಿಗೆ ಗೌರವ ಮತ್ತು ಒಳ್ಳೆಯ ಹೆಸರು ತರುತೇನೆ ಎಂದು ನನಲ್ಲಿ ಬಹಳ ವಿಶ್ವಾಸ ಇದ್ಹೆ .