೧. ಬಾಲ್ಯ

ಸುಷ್ಮಾ ಲಿಖಿತ ಎಲ್
Born೨೮/೧೩/೧೯೯೯
ಸಂತ ಜಾನ್ಸ್ ಆಸ್ಪತ್ರೆ, ಬೆಂಗಳೂರು, ಭಾರತ.
Educationಬಿಕಾಂಮ್ ಕ್ರೈಸ್ಟ್ ಯುನಿವರ್ಸಿಟಿ.
Parent(s)ಲಾಜರ್, ಮೇರಿ

ನನ್ನ ಹೆಸರು ಸುಷ್ಮಾ ಲಿಖಿತ ಎಲ್ ನಾನು ಬೆಂಗಳೂರು ದಕ್ಷಿಣ ಜಿಲ್ಲೆ ಬೆಂಗಳೂರು ತಾಲ್ಲೂಕಿನ ಸಂತ ಜಾನ್ಸ್ ಆಸ್ಪತ್ರೆಯಲ್ಲಿ ಡಿಸೆಂಬರ್ ೨೮ ೧೯೯೯ ರಂದು ಜನಿಸಿದೆ.‌ ತಂದೆ ಲಾಜ಼ರ್ ತಾಯಿ ಮೇರಿ. ತಂದೆ ವೃತ್ತಿಯಲ್ಲಿ ವಾಹನ ಚಾಲಕರು ತಾಯಿ ಶಿಕ್ಷಕಿ .ನನಗೆ ಬಾಲ್ಯದಿಂದಲೂ ಅಪ್ಪ ಎಂದರೆ ಅಚ್ಚುಮೆಚ್ಚು ಅಮ್ಮನೆಂದರೆ ಅಷ್ಟಕ್ಕೇ ಅಷ್ಟೇ ಆದರೆ ನನಗಿಂತ ನಾಲ್ಕು ವರ್ಷ ಕಿರಿಯನಾದ ನನ್ನ ತಮ್ಮನಿಗೆ ಅಮ್ಮನೆಂದರೆ ಪಂಚಪ್ರಾಣ.ನನ್ನ ತಮ್ಮನ ಹೆಸರು ಸ್ಟಾನಿ ಸುಪ್ರೀತ್ .ಅವನು ಈಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ.ನನ್ನ ತಾಯಿಯ ತವರೂರು ಚಿಂತಾಮಣಿ ,ಆ ಹಳ್ಳಿ ಎಂದರೆ ನನಗೆ ಬಹಳ ಇಷ್ಟ. ಅಲ್ಲಿ ಗಿಡಮರಗಳು,ಬೆಟ್ಟಗುಡ್ಡಗಳು ನೋಡಲು ಬಹಳ ಸುಂದರವಾಗಿದೆ. ನನ್ನ ತಂದೆ ಬೆಂಗಳೂರಿನವರು. .ನನಗೆ ನನ್ನ ಗೆಳೆಯರು ಹಾಗೂ ಕುಟುಂಬದವರು ಎಂದರೆ ಬಹಳ ಇಷ್ಟ . ನನ್ನ ಪ್ರೀತಿಯ ಗೆಳೆಯರು ದೇವ್,ಸ್ಮಿತಾ,ಅರುಣ ಮುಂತಾದವರು. ಇವರೊಂದಿಗೆ ನನ್ನ ಬಾಲ್ಯವೂ ಬಹಳ ಸುಂದರವಾಗಿತ್ತು.


೨. ವಿದ್ಯಾಬ್ಯಾಸ

ನನ್ನ ಪ್ರಾಥಮಿಕ ಶಿಕ್ಷಣವನ್ನು ನಮ್ಮ ಊರಿನಲ್ಲಿರುವ ಸಂತ ಫ್ರಾನ್ಸಿಸ್ ಕ್ಸೇವಿಯರ್ ಶಾಲೆಯಲ್ಲಿ ಪ್ರಾರಂಭಿಸಿದೆ.ನನಗೆ ಚಿಕ್ಕಂದಿನಿಂದಲೂ ಕನ್ನಡ ಪ್ರೇಮ ಅದು ಬರಬರುತ್ತಾ ಹೆಚ್ಚಾಗ ತೊಡಗಿತ್ತು. ನಾನು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮುಗಿಸಿದೆ ಹಾಗೂ ಹತ್ತನೇ ತರಗತಿಯಲ್ಲಿ ಉತ್ತಮ ಅಂಕವನ್ನು ಪಡೆದು ಶಾಲೆಗೆ ಮೊದಲು ಬಂದೆ.ನನ್ನನ್ನು ನಮ್ಮ ಪ್ರಿನ್ಸಿಪಲ್ ರವರು ಕ್ರೀಡಾ ದಿನಾಚರಣೆಯಂದು ಸನ್ಮಾನಿಸಿದರು ಇದು ನನಗೆ ಬಹಳ ಸಂತೋಷದ ವಿಷಯ .ನಂತರ ಪದವಿ ಪೂರ್ಣ ಶಿಕ್ಷಣಕ್ಕಾಗಿ ಹಾಸನ ಜಿಲ್ಲೆಯ ಪ್ರತಿಷ್ಠಿತ ಕಾಲೇಜು ಸಂತ ಫಿಲೋಮಿನಾ ಮೆಟ್ಟಿಲೇರಿದೆ.ಕನ್ನಡ ಮಾಧ್ಯಮದಲ್ಲಿ ಓದಿದ ನನಗೆ ಇಂಗ್ಲಿಷ್ ಮಾಧ್ಯಮ‌ ತುಸು ಕಷ್ಟವೆನಿಸಿತ್ತು,ದ್ವಿತೀಯ ಪಿ‌.ಯು.ಸಿ ಯಲ್ಲಿ ಕಾಲೆಜು ಹತ್ತಿರವಿದ್ದ ಹಾಗೂ ಅದಕ್ಕೆ ಸಂಬಂಧಿಸಿದ ಸ್ನೇಹ ಸದನ ವಸತಿ ನಿಲಯವನ್ನು ಸೇರಿದೆ .ಮೊದ ಮೊದಲು ಅಪ್ಪ ಅಮ್ಮನನ್ನು ಬಿಟ್ಟು ಇರುವುದು ಬಹಳ ಕಷ್ಟವೆನಿಸಿತ್ತು ನಂತರ ಹೊಂದಿಕೊಂಡು ಹೋಗುತ್ತಿದೆ.ಆ ನಿಲಯದಲ್ಲಿ ಸುಖದುಃಖ ಹಾಗು ಜೀವನದ ಮಹತ್ವವನ್ನು ಕಲಿತೆ.ನನಗೆ ಪ್ರಸಾದ್ ಸರ್ ಹಾಗು ಉಮ ಮಿಸ್,ಡೆವಿಡ್ ಸರ್ ಎಂದರೆ ಇಷ್ಟ.ನಂತರ ಪದವಿ ಪೂರ್ವ ಶಿಕ್ಷಣವನ್ನು ಉತ್ತಮ ಅಂಕಗಳೊಂದಿಗೆ ಮುಗಿಸಿದ ನಾನು ಮುಂದಿನ ಹಂತದ ಶಿಕ್ಷಣಕ್ಕಾಗಿ ರಾಜಧಾನಿಯಾದ ಬೆಂಗಳೂರಿಗೆ ಅಂದರೆ ‌ನನ್ನ ಹುಟ್ಟೂರಿಗೆ ಬಂದೆ.ಅಲ್ಲಿ ಹೆಸರಾಂತ ಕಾಲೇಜು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ನೊಂದಣಿಯು ಆಯಿತು, ಆದರೆ ಹೊಸ ಪದ್ಧತಿಗೆ ಹೊಂದಿಕೊಳ್ಳಲು ಬಹಳ ಕಷ್ಟವಾಯಿತು.ಆದರೆ ಈಗ ಕಾಲೇಜ್‌ನಲ್ಲಿ ಗೆಳೆಯರು ಆದ ಕಾರಣ ಹೊಂದಿಕೊಂಡು ಹೋಗುತ್ತಿದೆನೆ.


೩.ಆಸಕ್ತಿ

ನನಗೆ ಶಾಲಾ ದಿನಗಳಲ್ಲಿ ಓದು ಹಾಗೂ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇದ್ದ ಕಾರಣ ಶಾಲಾ ಮಟ್ಟ, ತಾಲೂಕು ಮಟ್ಟ ,ಜಿಲ್ಲಾ ಮಟ್ಟದಲ್ಲಿ ಬಹುಮಾನ ಪಡೆದಿದ್ದೇನೆ. ಹಾಗು ೨೦೧೬ ರಂದು ರಾಷ್ಟ್ರ ಮಟ್ಟದಲ್ಲಿ ಎರಡನೆಯ ಬಹುಮಾನವನ್ನು ಖೋಖೋ ಆಟದಲ್ಲಿಗಳಿ‍ಸಿದೆವು. ನನಗೆ ಚಿತ್ರಕಲೆ, ನೃತ್ಯ, ಸಂಗೀತ ಇದರಲು ಬಹಳ ಹೆಚ್ಚಿನ ಆಸಕ್ತಿ ಇದೆ.ಈ ಕ್ಷೇತ್ರದಲ್ಲಿ ನಾನು ಏನಾದರೂ ಸಾಧಿಸುವುದೆ ನನ್ನ ಗುರಿ. ನನ್ನ ವಿದ್ಯಾಬ್ಯಾಸ ಮುಗಿದ ನಂತರ ,ಬ್ಯಾಂಕ್ ಮ್ಯಾನೇಜರ್ ಆಗಬೇಕೆಂಬ ಆಸೆ ಇದೆ. ಹಾಗೂ ನನ್ನ ಕುಟುಂಬದವರನ್ನು ಸಂತೋಷದಿಂದ ನೋಡಿಕೊಳ್ಳಬೇಕು.