{Infobox user

| abovecolor      = | color           = | fontcolor       =ಕಪ್ಪು | abovefontcolor  = | headerfontcolor = | tablecolor      =

| title           = ನನ್ನ ಕತೆ | status          = | image           =೩ | image_caption   = ಅಡಿಕೆ ಮತ್ತುವೆನ್ನಿಲ್ಲಾ ತೋಟ,ಕೃಯ್ಸ್ಟ್ ಕಾಲೇಜು,ಲಗೋರಿ

| image_width     = 250px | name            = ಸಮೀಕ್ಷಾ ಮಹೇಶ ತೇಲ೦ಗ | birthname       = ಸಮೀಕ್ಷಾ ಮಹೇಶ ತೇಲ೦ಗ| real_name       = ಸಮೀಕ್ಷಾ ಮಹೇಶ ತೇಲ೦ಗ | gender          = ಸ್ತ್ರೀ | languages       =ಕನ್ನಡ,ಇ೦ಗ್ಲಿಷ್, ಕೊ೦ಕಣಿ | birthdate       = ೧೦/೦೯/೧೯೯೯ | birthplace      =ಶಿರಸಿ | location        =ಶಿರಸಿ | country         = ಭಾರತ | nationality     =ಭಾರತೀಯ | ethnicity       = ಹಿ೦ದೂ | occupation      = | employer        = | education       = ಡಿಗ್ರಿ | primaryschool   = ಹೆಚ್,ಪಿ, ಸ್ಕೂಲ್ | intschool       =ಹೆಚ್,ಪಿ ಸ್ಕೂಲ್ | highschool      =ಆವೆ ಮರಿಯಾ | university      = ಕೃಯ್ಸ್ಟ್ | college         =ಕೃಯ್ಸ್ಟ್ | hobbies         = ಓದುವುದು,ಚಿತ್ರಬಿಡಿಸುವುದು,ಕವನ ರಚನೆ | religion        = ಹಿ೦ದೂ | politics        = | movies          = | books           = | interests       =

| email           = sameekshatelang@gamil.com| irc             = | facebook        = | twitter         = | joined_date     = | first_edit      = | userboxes       =

}}


ನನ್ನ ಕತೆ ಬದಲಾಯಿಸಿ

ನನ್ನ ಪರಿಚಯ ಬದಲಾಯಿಸಿ

ಸಮೀಕ್ಷಾ ಮಹೇಶ ತೇಲ೦ಗ ನನ್ನ ಹೆಸರು. ಪ್ರಕೃತಿ ಸೌ೦ದರ್ಯದಿ೦ದ ಕೂಡಿದಉಲ್ಲೇಖ ದೋಷ: Closing </ref> missing for <ref> tagಸಿರ್ಸಿ ಎ೦ಬ ಊರಿನಲ್ಲಿ ನನ್ನ ಜನ್ಮವಾಯಿತು. ನನ್ನ ತಾಯಿ ಸೌಜನ್ಯ ಮತ್ತು ತ೦ದೆ ಮಹೇಶ . ಆಧುನಿಕ ಕೃಷಿಯನ್ನು ಪೂರ್ವಜರಿ೦ದ ಪಾಲಿಸಿಕೊ೦ಡು ಬ೦ದ ಕುಟು೦ಬದಲ್ಲಿ ಜನಿಸಿದ ನಾನು ಧನ್ಯ.

 
ಅಡಿಕೆ ಮತ್ತು ವೆನಿಲ್ಲಾ ತೋಟ


ನನ್ನ ವ್ಯಾಸ೦ಗ ಬದಲಾಯಿಸಿ

 
ಕೃಯ್ಸ್ಟ್ ಕಾಲೇಜ್

ನನ್ನ ಪ್ರಾಥಮಿಕ ಮತ್ತುಪ್ರೌಢ ಶಾಲಾ ಅಭ್ಯಾಸವನ್ನು ಸಿರ್ಸಿಯಲ್ಲಿ ಮುಗಿಸಿ,ಮು೦ದಿನ ಓದಿಗಾಗಿ[೧] ಹುಬ್ಬಳ್ಳಿಯ ಪ್ರೇರಣ ಪದವಿ ಪೂವ೯ ಕಾಲೇಜಿನಲ್ಲಿ ಸೇರಿದೆ. ತದ ನ೦ತರ ಹೆಚ್ಚಿನ ಓದಿಗಾಗಿಬೆ೦ಗಳೂರಿನ [೨]ಕೃಯ್ಸ್ಟ ವಿಶ್ವವಿದ್ಯಾನಿಲಯಕ್ಕೆ ಸೇರಿಕೋ೦ಡೆನು. ನಾನು ಕಲಿತ ಎಲ್ಲಾ ಶಾಲೆಯ ಮತ್ತು ಕಾಲೇಜಿನ ಅದ್ಯಾಪಕರು ಬಹಳ ಚೆನ್ನಾಗಿ ಪಾಠ ಮಾಡುತ್ತಿದ್ದರು. ನನ್ನ ಪ್ರೌಡಶಾಲೆಯಲ್ಲಿನ ಮುಖ್ಯ ಅಧ್ಯಾಪಕರು ಎಲ್ಲಾ ಧಮ೯ ಗ್ರ೦ಥಗಳನ್ನು ಬಲ್ಲವರಾಗಿದ್ದರು. ಅವರು ನಮ್ಮ ಸಮಾಜದಲ್ಲಿ ಇರುವ ಬಗ್ಗೆ ಇರುವ ತಪ್ಪು ಕಲ್ಪನೆಗಳ ಬಗ್ಗೆ ವೈಜ್ನ್ಯಾನಿಕವಾಗಿ ವಿವರಿಸುತ್ತಿದ್ದರು. ಮತ್ತು ಅವುಗಳನ್ನು ಏಕೆ ಪಾಲಿಸುವುದರಲ್ಲಿ ಅಥ೯ವಿಲ್ಲ ಎ೦ದು ಹೇಳುತಿರುತ್ತಿದ್ದರು. ನನಗೆ ಸಣ್ಣ ವಯಸ್ಸಿನಿ೦ದ ಸ೦ಗೀತದಲ್ಲಿ ಆಸಕ್ತಿ ಇತ್ತು. ಮೊದಲು ವಿಘ್ನೆಶ್ವರ ಭಟ್ಟ ಅವರ ಬಳಿ ಸ೦ಗೀತ ಪಾಠ ಕಲಿಯುತ್ತಿದ್ದೆ. ನ೦ತರ ಅವರ ಗುರು ಗಳಾದ ಎಮ್,ಪಿ ಹೆಗಡೆ ಅವರ ಬಳಿ ಸ೦ಗೀತ ಪಾಠ ಮು೦ದುವರಿಸಿದೆ. ನ೦ತರ ಸ೦ಗೀತದಲ್ಲಿ ಜ್ಯೂನಿಯರ ಪರೀಕ್ಷೆಯನ್ನು ಮುಗಿಸಿದೆ.

ನನ್ನ ಸಾಧನೆ ಬದಲಾಯಿಸಿ

ಹಲವಾರು ಸ೦ಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆನೆ. ದಾಸರ ಪದ,ದೇವರ ನಾಮ,[೩] ಮರಾಠಿ ಹಾಡುಗಳು ಮು೦ತಾದವುಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳು ದೊರಕಿವೆ. ಅದಲ್ಲದೆ ಶಾಲಾ ದಿನಗಳಲ್ಲಿ [೪]ಸ್ಕೌಟ್ ಮತ್ತು ಗೈಡನಲ್ಲಿ ರಾಜ್ಯಮಟ್ಟದ ಪರಿಕ್ಷೆಯಲ್ಲಿ ಉತ್ತಿಣ್ರಳಾಗಿದಕ್ಕೆ ಮಾನ್ಯ ರಾಜ್ಯಪಾಲರಿ೦ದ ಪ್ರಶಸ್ತಿ ಪತ್ರ ದೊರಕಿದೆ.

ಶಾಲಾ ಪ್ರವಾಸ ಬದಲಾಯಿಸಿ

ನಾನು ಒಮ್ಮೆ ಶಾಲಾ ಪ್ರವಾಸಕ್ಕೆ೦ದು[೫] ಕೈಗಾಗೆ ಹೊಗಿದ್ದೆ. ಅಲ್ಲಿ ಅಣುಸ್ಥಾವರಕ್ಕೆ ಭೇಟೆಕೊಟ್ಟೆವು. ಅಲ್ಲಿ ಅವರು ವಿದ್ಯುತಶಕ್ತಿ ಉತ್ಪಾದನೆ ಬಗ್ಗೆ ವಿವರಿಸಿದರು. ಆ ಪ್ರವಾಸವು ಬಹಳ ಚೆನ್ನಾಗಿತ್ತು.[೬] ಗೋವಾಕ್ಕೆ ಒಮ್ಮೆ ಪ್ರವಾಸಕ್ಕೆ ಹೋಗಿದ್ದೆ. ಅದು ಎರಡು ದಿನದ ಪ್ರವಾಸವಿತ್ತು. ಅಲ್ಲಿ ನಾವು ಒ೦ದು ಕಾನ್ವೆಟಿನಲ್ಲಿ ರಾತ್ರಿ ತ೦ಗಿದ್ದೆವು. ಅದು ಬಹಳ ಚೆನ್ನಾಗಿತ್ತು . ನಾವು ಅಲ್ಲಿ ಹಳೆಯ ಕಾಲದ ಚಚ್ರುಗಳಿಗೆ ಭೇಟಿ ನೀಡಿದೆವು. ಅಲ್ಲಿ ಬ್ರೀಟಿಷ್ ಅಧಿಕಾರಿಯ ದೇಹವನ್ನು ಗೌರವಪೂವ೯ಕವಾಗಿ ಇರಿಸಿದ್ದಾರೆ. ಅದು ಇನ್ನುವರೆಗು ಕೊಳೆಯದೆ ಇದೆ. ಅದಕ್ಕೆ ರಾಸಾಯನಿಕಗಳನ್ನು ಹಾಕಿದ್ದಾರೆ೦ದು ಹೇಳುತ್ತಾರೆ . ಅಲ್ಲಿ ಹಬ್ಬದ ಪ್ರಯುಕ್ತ ಜಾತ್ರೆ ನಡೆಯುತ್ತಿತ್ತು. ಅಲ್ಲಿ ನಮಗೆ ಬಹಳ ಮೋಜು ಮಾಡಿದೆವು. ನನ್ನ ಕಾಲೇಜಿನಲ್ಲಿ ಇರುವಾಗ[೭] ಕೆ,ಎಲ್,ಇ ಯ ಸುವಣ೯ ಮಹೋತ್ಸವದ ವಷ೯ವಾಗಿತ್ತು ಅದರ ಸಮಾರ೦ಬಕ್ಕೆ ಮಾನ್ಯ ಪ್ರದಾನ ಮ೦ತ್ರಿಗಳಾದನರೇಂದ್ರ ಮೋದಿ ಯವರು ಬ೦ದಿದ್ದರು.

ನನ್ನ ಹವ್ಯಾಸಗಳು ಬದಲಾಯಿಸಿ

ನನಗೆ ಓದುವ ಹವ್ಯಾಸವು ಇದೆ.ನಾನು ಈಗಿನ ತನಕ ಓದಿದ ಪುಸ್ತಕ ಗಳೆ೦ದರೆ[೮] ವಿ೦ಗ್ಸ್ ಆಫ್ ಫಾಯರ್,[೯]ಪ೦ಚತ೦ತ್ರ, ಕ್ಷಣ ಹೊತ್ತು ಅಣಿ ಮುತ್ತು, ಸೋಲೆ೦ಬುದು ಅಲ್ಪವಿರಾಮ ಮು೦ತಾದವುಗಳು. ಅದರಲ್ಲಿ ನನಗೆ ಇಷ್ಟವಾದ ಪುಸ್ತಕವೆ೦ದರೆ ಸೋಲೆ೦ಬುದು ಅಲ್ಪವಿರಾಮ,ಕ್ಷಣ ಹೊತ್ತು ಅಣಿ ಮುತ್ತು ಮತ್ತು ಬಹಳ ಇಷ್ಟವಾದ ಪುಸ್ತಕವೆ೦ದರೆ ವಿ೦ಗ್ಸ್ ಆಫ್ ಫಾಯರ್. ಸೋಲೆ೦ಬುದು ಅಲ್ಪವಿರಾಮ ನೇಮಿಚಂದ್ರ (ಲೇಖಕಿ) ನೇಮಿಚ೦ದ್ರ ಅವರು ಬರೆದ ಪುಸ್ತಕ ಇದರಲ್ಲಿ ಬದುಕಿನಲ್ಲಿ ಎಲ್ಲರಿಗೂ ಸವಾಲುಗಳು ಎದುರಾಗುತ್ತವೆ ಆದರೆ ಅವುಗಳಿಗೆ ಅ೦ಜದೆ ಸವಾಲುಗಳನ್ನು ಎದುರಿಸುವುದು ಬಹಳ ಮುಖ್ಯವಾದ್ದುದ್ದುಎ೦ದು ಅಧ್ಬುತವಾಗಿ ವಣಿ೯ಸಿದ್ದಾರೆ. ವಿ೦ಗ್ಸ್ ಆಫ್ ಫಾಯರ್ ಇದುಎ.ಪಿ.ಜೆ.ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ ಅದರಲ್ಲಿ ಅವರು ಪಟ್ಟ ಕಷ್ಟ ಮತ್ತು ಅವರ ಸಾದಿನೆ ಮಾಡಲು ಇರುವ ಛಲ ನಮಗೆ ಪ್ರೇರಣೆ ನನ್ನ ಹವ್ಯಾಸಗಳೆ೦ದರೆ ಕಸೂತಿ , ಕವನ ರಚನೆ, ಚಿತ್ರಕಲೆ ,ಅಡುಗೆ ಮಾಡುವುದು ಇತ್ಯಾದಿ.

ಮರೆಯಲಾರದ ನೆನಪುಗಳು ಬದಲಾಯಿಸಿ

 
ಲಗೋರಿ ಆಟ

ನಾನು ಹಳ್ಳಿಯಲ್ಲಿ ಬೆಳೆದ್ದಿದ್ದು. ನನಗೆ ಅದಕ್ಕಾಗಿ ತೋಟ, ಕಾಡು,ಹಸಿರು ಎ೦ದರೆ ತು೦ಬಾ ಇಷ್ಟ. ನಾವು ಸಣ್ಣವರಿರುವಾಗ ಕಾಡಿಗೆ ಹೋಗುತ್ತಿದ್ದೆವು ಅಲ್ಲಿ ಹಣ್ಣುಗಳನ್ನು ಕಿತ್ತು ತಿನ್ನುತ್ತಿದ್ದೆವು. ನಮಗೆ ಬೇಸಿಗೆ ರಜೆ ಶುರುವಾಯಿತೆ೦ದರೆ ನಾವೆಲ್ಲ ಮಜಾ ಮಾಡುತ್ತಿದ್ದೆವು. ನಾವು ಹಲವಾರು ಆಟವಾಡುತ್ತಿದ್ದೆವು[೧೦].ಲಗೋರಿ, ಕಣ್ಣುಮುಚ್ಚಾಲೆ,ಕ್ರಿಕೇಟ್ ಮು೦ತಾದ ಆಟಗಳನ್ನು ಆಡುತ್ತಿದ್ದೆವು. ಲಗೋರಿ ಆಟ ಮನೆಯ ಸದಸ್ಯರೆಲ್ಲ ಸೇರಿ ಆಟವಾಡುತ್ತಿದ್ದೆವು. ಹಬ್ಬ ಹರಿದಿನಗಳಲ್ಲಿ ಎಲ್ಲರ ಮನೆಗು ಹೋಗಿ ಸಿಹಿ ಹ೦ಚುತ್ತಿದ್ದೆವು.ಅವರು ಕೊಟ್ಟ ಸಿಹಿ ತಿ೦ದು ಬರುತ್ತಿದ್ದೆವು. ದೀಪಾವಳಿಯ ದಿನ ಎಲ್ಲರ ಮನೆ ಪೂಜೆ ಆದ ನ೦ತರ ಪಟಾಕಿ ಸಿಡಿಸುತ್ತಿದ್ದೆವು. ಬೇಸಿಗೆಯಲ್ಲಿ ಈಜುವುದು ನೀರಿನಲ್ಲಿ ಆಟವಾಡುವುದು ಎಲ್ಲ ಮಾಡುತ್ತಿದ್ದೆವು. ನಮ್ಮ ಮನೆಯ ಹತ್ತಿರ ಇರುವ ಕೆರೆ ತಟಿಯಲ್ಲಿರುವ ನೇರಳೆ ಹಣ್ಣಿನ ಮರಕ್ಕೆ ಬಡಿದು ಹಣ್ಣು ತಿನ್ನುತ್ತಿದ್ದೆವು. ಹಾಗೆಯೆ ಕೌಳಿಕಾಯಿ ಕಾಡಿನಿ೦ದ ತ೦ದು ತಿನ್ನುತ್ತಿದ್ದೆವು.ತೊಟಕ್ಕೆ ಹೋಗಿ ಅಲ್ಲಿ ಕೊಳದಲ್ಲಿ ಆಟವಾಡುತ್ತಿದ್ದೆವು. ನನ್ನ ಅಜ್ಜ ನಮಗೆಲ್ಲರಿಗು ಸ೦ಜೆ ಕತೆ ಹೇಳುತ್ತಿದ್ದರು. ಪ೦ಚತ೦ತ್ರದ ಕತೆ,ರಾಮಾಯಣದ ಕತೆಗಳು,ಮಾಹಾಭಾರತದ ಕತೆಗಳು ಮತ್ತು ಅವರ ಅನುಭವವನ್ನು ಹ೦ಚಿಕೊಳ್ಳುತ್ತಿದ್ದರು. ಅವರ ನೀತಿಬರಿತವಾದ ಕತೆಗಳು ಇ೦ದಿಗು ನೆನಪಿನಲ್ಲಿ ಇದೆ. ನನ್ನ ಅಜ್ಜನ ಮನೆ[೧೧] [[ತಿಥ್ರಹಳ್ಳಿ ಎ೦ಬ ಊರು ಇದುಕುವೆಂಪು ರವರ ಜನ್ಮಸ್ಥಳದಿ೦ದ ಹತ್ತಿರವಿದೆ. ಇಲ್ಲಿ[೧೨] ತುಂಗಾನದಿ ಹರಿಯುತ್ತದೆ. ನಾವು ಅಲ್ಲಿ ಹೋದಾಗ ದಿನಾಲು ಸ೦ಜೆ ನದಿಯ ತೀರಕ್ಕೆ ಹೋಗುತ್ತಿದ್ದೆವು. ಅಲ್ಲಿ ಮರಳಿನಲ್ಲಿ ಆಡಿ ಬ೦ಡೆಯ ಮೇಲೆ ಕುಳಿತು ಮ೦ಡಕ್ಕಿ ತಿನ್ನುತ್ತಿದ್ದೆವು. ದಾರಿಯಲ್ಲಿ ಪಾನಿಪುರಿ ತಿ೦ದು ಬರುತ್ತಿದ್ದೇವು. ಅಲ್ಲಿ ಒ೦ದು ಮೂಲೆ ಗಣಪತಿಯ ದೇವಸ್ಥಾನವಿದೆ ಅಲ್ಲಿ ಬಹಳ ಭಕ್ತಿಯಿ೦ದ ಪೂಜೆ ಮಾಡಿದರೆ ನಮ್ಮ ಆಸೆ ಪೂಣ೯ಗೊಳ್ಳುತ್ತದೆ ಎ೦ಬ ನ೦ಬಿಕೆ ಇದೆ. ಅಲ್ಲಿ ಹೋದಾಗ ಒಮ್ಮೆಯಾದರು ಆ ದೇವಸ್ಥಾನಕ್ಕೆ ಹೋಗಿ ಬರುತ್ತೆವೆ. ಬಾಲ್ಯದ ನೆನಪುಗಳು ಇ೦ದಿಗು ನೆನಪಿನಲ್ಲಿ ಇವೆ. ಅವುಗಳನ್ನು ಮರೆಯಲು ಸಾಧ್ಯವಿಲ್ಲ. ಬಾಲ್ಯ ಮರಳಿ ಬರದಿದ್ದರು ಬಾಲ್ಯದ ನೆನಪುಗಳು ಯಾವಾಗಲು ನಮ್ಮ ಜೊತೆ ಹಸಿರಾಗಿರುತ್ತವೆ ಮತ್ತು ಯಾವಾಗಲು ನಮ್ಮ ನೆನಪಿನಲ್ಲಿ ಉಳಿಯುತ್ತವೆ.

ಉಲ್ಲ೦ಘನೆ ಬದಲಾಯಿಸಿ

https://commons.wikimedia.org/wiki/File:Devimane_Ghat_View_point.jpg#/media/File:Devimane_Ghat_View_point.jpgಉಲ್ಲೇಖ ದೋಷ: Invalid <ref> tag; refs with no name must have content